ETV Bharat / entertainment

'ಟೈಗರ್​ 3' ಅಡ್ವಾನ್ಸ್​ ಬುಕ್ಕಿಂಗ್​ಗೆ ಉತ್ತಮ​ ರೆಸ್ಪಾನ್ಸ್​; ವಿದೇಶದಲ್ಲಿ ಸಲ್ಲು-ಕತ್ರಿನಾ ಕ್ರೇಜ್​ - ಈಟಿವಿ ಭಾರತ ಕನ್ನಡ

ಸಲ್ಮಾನ್​ ಖಾನ್​ ಮತ್ತು ಕತ್ರಿನಾ ಕೈಫ್​ ನಟನೆಯ 'ಟೈಗರ್​ 3' ಸಿನಿಮಾದ ಅಡ್ವಾನ್ಸ್​ ಬುಕ್ಕಿಂಗ್​ಗೆ ಉತ್ತಮ ರೆಸ್ಪಾನ್ಸ್​ ಸಿಗುತ್ತಿದೆ.

Tiger 3 advance booking: Salman Khan, Katrina Kaif starrer to open big overseas, takes excellent start thirteen days prior to release
'ಟೈಗರ್​ 3' ಅಡ್ವಾನ್ಸ್​ ಬುಕ್ಕಿಂಗ್​ಗೆ ಅದ್ಭುತ​ ರೆಸ್ಪಾನ್ಸ್​; ಅಬ್ಬಬ್ಬಾ! ವಿದೇಶದಲ್ಲಿ ಸಲ್ಲು ಸಿನಿಮಾಗಿದೆ ಸಖತ್​ ಕ್ರೇಜ್​
author img

By ETV Bharat Karnataka Team

Published : Oct 30, 2023, 5:56 PM IST

ಬಾಲಿವುಡ್​ ನಟ​ ಸಲ್ಮಾನ್​ ಖಾನ್​ ಅವರ ಮುಂಬರುವ ಚಿತ್ರ 'ಟೈಗರ್​ 3'. ಸಿನಿರಸಿಕರಲ್ಲಿ ನಿರೀಕ್ಷೆ ಮೂಡಿಸಿರುವ ಸಿನಿಮಾದ ಅಡ್ವಾನ್ಸ್​ ಬುಕ್ಕಿಂಗ್​ಗೆ ಉತ್ತಮ ರೆಸ್ಪಾನ್ಸ್​ ಸಿಗುತ್ತಿದೆ. ಬಿಡುಗಡೆಗೂ ಮುನ್ನ ಟಿಕೆಟ್​ಗಳು ಶರವೇಗದಲ್ಲಿ ಮಾರಾಟವಾಗುತ್ತಿವೆ. ಈಗಾಗಲೇ ಸಿನಿಮಾ 150,000 ಡಾಲರ್ ಮೊತ್ತ ಗಳಿಸಿದೆ ಎಂದು ವರದಿಯಾಗಿದೆ. ಈ ಮೂಲಕ ಪ್ರಸ್ತುತ ವರ್ಷದ ಸೂಪರ್​ ಹಿಟ್​ ಸಿನಿಮಾಗಳಾದ 'ಜವಾನ್'​ ಮತ್ತು 'ಪಠಾಣ್' ಹಿಂದಿಕ್ಕಿದೆ.

  • " class="align-text-top noRightClick twitterSection" data="">

ವಿಶೇಷವಾಗಿ, ಇಂಗ್ಲೆಂಡ್​ ಮತ್ತು ಅರಬ್​ ರಾಷ್ಟ್ರಗಳು 'ಟೈಗರ್​ 3' ಸಿನಿಮಾಗೆ ಬಲವಾದ ಬೆಂಬಲ ನೀಡಿವೆ. ಎಂದಿನಂತೆ ಅಮೆರಿಕ ಟಿಕೆಟ್​ ಮಾರಾಟದ ಸಂಖ್ಯೆಯಲ್ಲಿ ಮುಂಚೂಣಿಯಲ್ಲಿದೆ. ಇಲ್ಲಿ ಮೊದಲ ದಿನವೇ ಹೆಚ್ಚು ಸಂಖ್ಯೆಯಲ್ಲಿ ಟಿಕೆಟ್​ ಸೇಲ್​ ಆಗಿದ್ದು, ಸುಮಾರು 50,000 ಡಾಲರ್ ಸಂಗ್ರಹಿಸಿದೆ. ಇಂಗ್ಲೆಂಡ್​ನಲ್ಲಿ 3 ಸಾವಿರಕ್ಕೂ ಹೆಚ್ಚು ಟಿಕೆಟ್​ಗಳು ಸೋಲ್ಡ್​ ಔಟ್​ ಆಗಿದ್ದು, 25,000 ಪೌಂಡ್ ಆದಾಯ ಗಳಿಸಿದೆ. ಅರಬ್​ ರಾಷ್ಟ್ರಗಳಲ್ಲಿ 1,600 ಟಿಕೆಟ್​ಗಳು ಮಾರಾಟವಾಗಿದ್ದು, 22,000 ಡಾಲರ್ ತಲುಪಿದೆ. 'ಜವಾನ್'​ ಮತ್ತು 'ಪಠಾಣ್'​ಗಿಂತ ವೇಗವಾಗಿ 'ಟೈಗರ್​ 3' ಟಿಕೆಟ್​ಗಳು ಸೋಲ್ಡೌಟ್​ ಆಗಿವೆ.

ಇದನ್ನೂ ಓದಿ: ಟೈಗರ್ 3: ಕತ್ರಿನಾ ಕೈಫ್ ಸ್ಟೈಲಿಶ್ ಫೋಟೋ ಹಂಚಿಕೊಂಡ ಸಲ್ಮಾನ್​ ಖಾನ್

ಮನೀಶ್ ಶರ್ಮಾ ನಿರ್ದೇಶನದ 'ಟೈಗರ್ 3' ಅನ್ನು ಯಶ್ ರಾಜ್ ಫಿಲ್ಮ್ಸ್ ಮೂಲಕ ಆದಿತ್ಯ ಚೋಪ್ರಾ ನಿರ್ಮಾಣ ಮಾಡಿದ್ದಾರೆ. ಏಕ್ ಥಾ ಟೈಗರ್, ಟೈಗರ್ ಜಿಂದಾ ಹೈ, ವಾರ್ ಮತ್ತು ಪಠಾಣ್​​ ಬಳಿಕ ಬಿಡುಗಡೆ ಆಗುತ್ತಿರುವ ಯಶ್​ ರಾಜ್​ ಫಿಲ್ಮ್ಸ್​ ನಿರ್ಮಾಣದ ಸ್ಪೈ ಯೂನಿವರ್ಸ್‌ನಲ್ಲಿ 5ನೇ ಚಿತ್ರ ಇದು. 'ಪಠಾಣ್​' ಸಿನಿಮಾದಲ್ಲಿ ಶಾರುಖ್​ ಖಾನ್​ ಜೊತೆ ಸಲ್ಮಾನ್​ ಖಾನ್​ ಅತಿಥಿ ಪಾತ್ರ ಮಾಡಿದ್ದರು. ಇದೀಗ ಟೈಗರ್​ 3ನಲ್ಲಿ ಕಿಂಗ್​ ಖಾನ್​ ಎಂಟ್ರಿಯೂ ಇರಲಿದೆ. ಚಿತ್ರದಲ್ಲಿ ಇಮ್ರಾನ್​ ಹಶ್ಮಿ ವಿಲನ್​ ಆಗಿ ಕಾಣಿಸಿಕೊಂಡಿದ್ದಾರೆ.

5ನೇ ಬಾರಿ ಸ್ಕ್ರೀನ್​ ಶೇರ್ ಮಾಡಿದ ಸಲ್ಮಾನ್-ಕತ್ರಿನಾ: ಮನೀಶ್ ಶರ್ಮಾ ನಿರ್ದೇಶನದ ಸಿನಿಮಾ ಯಶ್​ ರಾಜ್​ ಫಿಲ್ಮ್ಸ್​​ನ ಟೈಗರ್ ಫ್ರಾಂಚೈಸಿಯ ಮೂರನೇ ಭಾಗ. ಐದನೇ ಬಾರಿ ಸಲ್ಮಾನ್ ಮತ್ತು ಕತ್ರಿನಾ ತೆರೆ ಮೇಲೆ ಒಂದಾಗಿದ್ದಾರೆ. ಸಲ್ಮಾನ್​, ಕತ್ರಿನಾ ಕೊನೆಯದಾಗಿ 2019ರಲ್ಲಿ ಬಂದ ಭಾರತ್ ಚಿತ್ರದಲ್ಲಿ ಒಟ್ಟಿಗೆ ಕಾಣಿಸಿಕೊಂಡರು. ಅದಕ್ಕೂ ಮೊದಲು, ಏಕ್ ಥಾ ಟೈಗರ್, ಟೈಗರ್ ಜಿಂದಾ ಹೈ, ಮೈನೆ ಪ್ಯಾರ್ ಕ್ಯೂನ್ ಕಿಯಾ ಮತ್ತು ಪಾರ್ಟ್‌ನರ್‌ನಂತಹ ಹಿಟ್‌ ಚಿತ್ರಗಳನ್ನು ಈ ಜೋಡಿ ನೀಡಿದೆ. ಟೈಗರ್​ 3 ನವೆಂಬರ್​ 12ರಂದು ಮೂರು ಭಾಷೆಗಳಲ್ಲಿ ತೆರೆಗಪ್ಪಳಿಸಲಿದೆ.

ಇದನ್ನೂ ಓದಿ: 'ಟೈಗರ್​ 3' ಸಿನಿಮಾದ ಪಾರ್ಟಿ ಸಾಂಗ್​ ಔಟ್​; ಗ್ಲಾಮರಸ್ ಲುಕ್‌ನಲ್ಲಿ ಸಲ್ಮಾನ್-ಕತ್ರಿನಾ ಮೋಡಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.