ETV Bharat / entertainment

ಸಲ್ಮಾನ್​ ಖಾನ್​ಗೆ ಬೆದರಿಕೆ ಇ-ಮೇಲ್​: ಆರೋಪಿ 7 ದಿನ ಪೊಲೀಸ್​ ಕಸ್ಟಡಿಗೆ​ - ಈಟಿವಿ ಭಾರತ ಕನ್ನಡ

ನಟ ಸಲ್ಮಾನ್​ ಖಾನ್​ಗೆ ಬೆದರಿಕೆ ಇ-ಮೇಲ್ ಕಳುಹಿಸಿದ್ದ ಆರೋಪಿಯನ್ನು ಮುಂಬೈ ನ್ಯಾಯಾಲಯವು ಏಪ್ರಿಲ್​ 3ರವರೆಗೆ ಪೊಲೀಸ್​ ಕಸ್ಟಡಿಗೆ ವಹಿಸಿದೆ.

Salman Khan
ಸಲ್ಮಾನ್​ ಖಾನ್
author img

By

Published : Mar 27, 2023, 5:41 PM IST

ಮುಂಬೈ (ಮಹಾರಾಷ್ಟ್ರ): ನಟ ಸಲ್ಮಾನ್​ ಖಾನ್​ಗೆ ಬೆದರಿಕೆ ಮೇಲ್​ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಸೋಮವಾರ ಮುಂಬೈ ನ್ಯಾಯಾಲಯವು ಏಪ್ರಿಲ್​ 3 ರವರೆಗೆ ಪೊಲೀಸ್​ ಕಸ್ಟಡಿಗೆ ವಹಿಸಿದೆ. ರಾಜಸ್ಥಾನದ ಜೋಧ್‌ಪುರ ಜಿಲ್ಲೆಯ ಲುನಿ ನಿವಾಸಿಯಾಗಿರುವ ಆರೋಪಿ ಧಕಡ್​ ರಾಮ್‌ನನ್ನು ನಿನ್ನೆ ಬಂಧಿಸಿ ಮುಂಬೈ ಪೊಲೀಸರಿಗೆ ಹಸ್ತಾಂತರಿಸಲಾಗಿದೆ. ಬಾಂದ್ರಾ ಪೊಲೀಸರು ಮತ್ತು ರಾಜಸ್ಥಾನ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಭಾನುವಾರ ಧಕಡ್​ನನ್ನು ಬಂಧಿಸಿದ್ದು, ಬಾಂದ್ರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘ಸಿಧು ಮೂಸೆ ವಾಲಾ ಅವರಂತೆಯೇ ನಿಮ್ಮನ್ನು ಕೊನೆಗೊಳಿಸುತ್ತೇನೆ’ ಎಂದು ಆರೋಪಿ ಧಕಡ್​ ಸಲ್ಮಾನ್ ಖಾನ್‌ಗೆ ಬೆದರಿಕೆ ಮೇಲ್ ಕಳುಹಿಸಿದ್ದರು ಎಂಬುದಾಗಿ ಪೊಲೀಸರು ತಿಳಿಸಿದ್ದಾರೆ. ಕಳೆದ ವಾರ, ಇದೇ ರೀತಿ ಸಲ್ಮಾನ್ ಖಾನ್ ಕಚೇರಿಗೆ ಬೆದರಿಕೆ ಮೇಲ್ ಕಳುಹಿಸಿದ್ದಕ್ಕಾಗಿ ಜೈಲಿನಲ್ಲಿದ್ದ ಲಾರೆನ್ಸ್ ಬಿಷ್ಣೋಯ್, ಗೋಲ್ಡಿ ಬ್ರಾರ್ ಮತ್ತು ರೋಹಿತ್ ಗಾರ್ಗ್ ವಿರುದ್ಧ ಬಾಂದ್ರಾ ಪೊಲೀಸರು ಐಪಿಸಿ ಸೆಕ್ಷನ್ 506(2),120(ಬಿ) ಮತ್ತು 34 ಅಡಿಯಲ್ಲಿ ಪ್ರಕರಣ ದಾಖಲಿಸಿದ್ದರು.

ಇದನ್ನೂ ಓದಿ: ಲಯ ಕೋಕಿಲ ಚೊಚ್ಚಲ ನಿರ್ದೇಶನದ 'ತಾಯ್ತ' ಟೀಸರ್​ ಬಿಡುಗಡೆ

ಈ ಹಿಂದೆಯೂ ಸಲ್ಮಾನ್​ಗೆ ಬೆದರಿಕೆ: ಇದಲ್ಲದೇ 2022ರ ಮೇ 29ರಂದು ಪಂಜಾಬ್​ನ ಮಾನ್ಸಾದಲ್ಲಿ ಪಂಜಾಬಿ ಗಾಯಕ ಸಿಧು ಮುಸೆವಾಲಾ ಅವರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು. ಆಗಲೂ ಕೂಡ ಸಲ್ಮಾನ್ ಖಾನ್ ಮತ್ತು ಅವರ ತಂದೆ ಸಲೀಂ ಖಾನ್ ಅವರಿಗೆ ಬೆದರಿಕೆ ಪತ್ರ ಬಂದಿತ್ತು. ಅಲ್ಲದೇ, ಈ ಬಗ್ಗೆ ಪಂಜಾಬ್​ ಪೊಲೀಸರು ಮಾಹಿತಿ ನೀಡಿದ್ದರು. ನಟ ಸಲ್ಮಾನ್ ಖಾನ್ ಅವರನ್ನು ಟಾರ್ಗೆಟ್​ ಮಾಡಿದ್ದ ಗ್ಯಾಂಗ್​ನವರು ಮುಂಬೈನಲ್ಲಿ ಸಾಕಷ್ಟು ಸಮಯವನ್ನು ಕಳೆದಿದ್ದರಂತೆ.

ಇದನ್ನೂ ಓದಿ: 39ನೇ ವರ್ಷಕ್ಕೆ ಕಾಲಿಟ್ಟ 'ಆಸ್ಕರ್‌' ವಿಜೇತ ಗ್ಲೋಬಲ್‌ ಸ್ಟಾರ್ ರಾಮ್ ಚರಣ್

ಈ ಸಂಬಂಧ ಜೈಲಿನಲ್ಲಿದ್ದ ಲಾರೆನ್ಸ್ ಬಿಷ್ಣೋಯ್​ನನ್ನು ಪೊಲೀಸರು ವಿಚಾರಣೆ ನಡೆಸಿದ್ದರು. ಆದರೆ ಈ ವಿಷಯಕ್ಕೂ ತನಗೂ ಸಂಬಂಧವಿಲ್ಲ ಮತ್ತು ಆ ಪತ್ರವನ್ನು ಯಾರು ಕಳುಹಿಸಿದ್ದಾರೆ ಎಂದು ನನಗೆ ಗೊತ್ತಿಲ್ಲ ಎಂಬುವುದಾಗಿ ಬಿಷ್ಣೋಯಿ ಹೇಳಿಕೊಂಡಿದ್ದನಂತೆ. ನಟನಿಗೆ ಈ ರೀತಿಯ ಬೆದರಿಕೆಗಳು ಬರುತ್ತಿರುವ ಸಲುವಾಗಿ ಮುಂಬೈ ಪೊಲೀಸರು ಅವರಿಗೆ Y+ ಕೆಟಗರಿ (ವರ್ಗದ) ಭದ್ರತೆಯನ್ನು ಒದಗಿಸಿದ್ದಾರೆ. ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ನಿಂದ ನಟನಿಗೆ ಬೆದರಿಕೆಗಳು ಬಂದ ನಂತರ ಮಹಾರಾಷ್ಟ್ರ ರಾಜ್ಯ ಸರ್ಕಾರ ಈ ಕ್ರಮ ಕೈಗೊಂಡಿದೆ. ಇನ್ನು, ಕೃಷ್ಣಮೃಗ ಕೊಲೆ ಮಾಡಿದ ಆರೋಪ ಸಲ್ಮಾನ್ ಖಾನ್ ಮೇಲಿದ್ದು, ಇದರ ಸಂಬಂಧ ಈ ಬೆದರಿಕೆ ಹಾಕಲಾಗುತ್ತಿದೆ ಎನ್ನಲಾಗಿದೆ.

ಇದನ್ನೂ ಓದಿ: ಬಾಲಿವುಡ್​ ಲೈಫ್​ ಅವಾರ್ಡ್ಸ್: 'ಕಾಂತಾರ' ಅತ್ಯುತ್ತಮ ಚಿತ್ರ, ರಿಷಬ್​ ಶೆಟ್ಟಿ ಅತ್ಯುತ್ತಮ ನಟ

ಇನ್ನೂ ಸಲ್ಮಾನ್ ಖಾನ್​​ ಅವರ ಮುಂಬರುವ ಚಿತ್ರ "ಟೈಗರ್ 3". ಇದರಲ್ಲಿ ಕತ್ರಿನಾ ಕೈಫ್ ಮತ್ತು ಇಮ್ರಾನ್ ಹಶ್ಮಿ ಸಹ ಮುಖ್ಯ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಅಲ್ಲದೇ ಪಠಾಣ್​ ನಟ ಶಾರುಖ್ ಖಾನ್ ಟೈಗರ್ 3ನಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇತ್ತೀಚೆಗೆ ತೆರೆಕಂಡು ಧೂಳೆಬ್ಬಿಸಿರುವ ಪಠಾಣ್ ಸಿನಿಮಾದಲ್ಲಿ ಸಲ್ಮಾನ್ ಖಾನ್ ಅತಿಥಿ ಪಾತ್ರ ನಿರ್ವಹಿಸಿದ್ದರು. ಟೈಗರ್ 3 ಇದೇ ನವೆಂಬರ್​ನಲ್ಲಿ ಬಿಡುಗಡೆಯಾಗಲು ಸಿದ್ಧತೆ ನಡೆಸುತ್ತಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.