ETV Bharat / entertainment

ಕೋವಿಡ್​ಗೆ ಲಸಿಕೆ ಸಂಶೋಧಿಸಿದ ವಿಜ್ಞಾನಿಗಳ ಕಥೆಯ "ದಿ ವ್ಯಾಕ್ಸಿನ್ ವಾರ್"ನ ಟ್ರೈಲರ್ ಬಿಡುಗಡೆ.. ಇದೇ 28ಕ್ಕೆ ಚಿತ್ರ ತೆರೆಗೆ - ETV Bharath Kannada news

The Vaccine War trailer: ವಿವೇಕ್ ರಂಜನ್ ಅಗ್ನಿಹೋತ್ರಿ ನಿರ್ದೇಶನದ "ದಿ ವ್ಯಾಕ್ಸಿನ್ ವಾರ್" ಚಿತ್ರದ ಟ್ರೈಲರ್ ಬಿಡುಗಡೆ ಆಗಿದೆ.

The Vaccine War trailer:
The Vaccine War trailer:
author img

By ETV Bharat Karnataka Team

Published : Sep 12, 2023, 8:51 PM IST

ಹೈದರಾಬಾದ್: ದಿ ತಾಷ್ಕೆಂಟ್​ ಫೈಲ್ಸ್​, ದಿ ಕಾಶ್ಮೀರ್ ಫೈಲ್ಸ್ ಚಲನಚಿತ್ರ ನಿರ್ಮಾಪಕ ವಿವೇಕ್ ರಂಜನ್ ಅಗ್ನಿಹೋತ್ರಿ ಅವರು ಬಹು ನಿರೀಕ್ಷಿತ ಚಿತ್ರ "ದಿ ವ್ಯಾಕ್ಸಿನ್ ವಾರ್"ನ ಟ್ರೈಲರ್ ಬಿಡುಗಡೆಯಾಗಿದೆ. ಇದೇ ತಿಂಗಳಾಂತ್ಯಕ್ಕೆ ಚಿತ್ರ ತೆರೆಕಾಣಲಿದೆ. ಕೋವಿಡ್​ ವೈರಾಣುವಿನ ಕುರಿತಾದ ವಿಷಯವನ್ನಾಧರಿಸಿ ಅಗ್ನಿಹೋತ್ರಿ ಸಿನಿಮಾ ಮಾಡಿದ್ದಾರೆ. ಕೋವಿಡ್​ 19 ಜಗತ್ತನ್ನೇ ಆವರಿಸಿದ್ದಾಗ ಶೌರ್ಯದಿಂದ ಸ್ವದೇಶಿ ಲಸಿಕೆಯನ್ನು ತಯಾರಿಸಿದ ಭಾರತೀಯ ಜೈವಿಕ ವಿಜ್ಞಾನಿಗಳ ಅಸಾಧಾರಣ ಸಾಧನೆ ಮತ್ತು ಜಾಣ್ಮೆಯ ಈ ಸಿನಿಮಾ ಬೆಳಕು ಚೆಲ್ಲಲಿದೆ.

ದಿ ವ್ಯಾಕ್ಸಿನ್ ವಾರ್ ಟ್ರೇಲರ್​​ನಲ್ಲಿ ವಿಜ್ಞಾನಿಗಳು ಮತ್ತು ದೇಶದ ಜನರು ಕೋವಿಡ್​ ಕಾಲದಲ್ಲಿ ಅಭೂತಪೂರ್ವ ಸವಾಲುಗಳನ್ನು ಎದುರಿಸಲು ಒಗ್ಗಟ್ಟಿನಲ್ಲಿ ಒಂದಾಗಿರುವುದನ್ನು ತೋರಿಸಿದ್ದಾರೆ. ನಾನಾ ಪಾಟೇಕರ್, ಅನುಪಮ್ ಖೇರ್, ಪಲ್ಲವಿ ಜೋಶಿ, ರೈಮಾ ಸೇನ್, ಸಪ್ತಮಿ ಗೌಡ, ಗಿರಿಜಾ ಓಕ್ ಗೋಡ್ಬೋಲೆ, ನಿವೇದಿತಾ ಭಟ್ಟಾಚಾರ್ಯ ಮತ್ತು ಮೋಹನ್ ಕಪೂರ್ ಅವರನ್ನೊಳಗೊಂಡ ಸ್ಟಾರ್​ಗಳ ಸಮೂಹ ಸಿನಿಮಾದಲ್ಲಿದೆ.

ವಿವೇಕ್ ರಂಜನ್ ಅಗ್ನಿಹೋತ್ರಿ ಅವರು ಕಥೆ ಹುಟ್ಟಿದ ಕ್ಷಣದ ಬಗ್ಗೆ ಇತ್ತೀಚಿನ ಮಾತನಾಡುತ್ತಾ ತಿಳಿಸಿದ್ದರು. ದಿ ಕಾಶ್ಮೀರ್ ಫೈಲ್ಸ್ ಸಿನಿಮಾದ ಶೂಟಿಂಗ್ ವೇಳೆ ಲಾಕ್​ಡೌನ್​ ಆದಾಗ ದಿ ವ್ಯಾಕ್ಸಿನ್ ವಾರ್‌ನ ಕಥೆ ಹುಟ್ಟಿತು ಎಂದಿದ್ದರು. ಚಿತ್ರದ ಪ್ರೀ-ಪ್ರೊಡಕ್ಷನ್ ಹಂತದಲ್ಲಿ, ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ICMR) ಮತ್ತು ರಾಷ್ಟ್ರೀಯ ವೈರಾಲಜಿ ಸಂಸ್ಥೆ (NIV) ಯ ವಿಜ್ಞಾನಿಗಳನ್ನು ಭೇಟಿಮಾಡಿದ್ದರು. ಅಲ್ಲದೇ ವ್ಯಾಕ್ಸಿನ್​​​ ಸಂಶೋಧನೆಯ ಸಂದರ್ಭದಲ್ಲಿ ಅವರಲ್ಲಿದ್ದ ಮನಸ್ಥಿತಿಯ ಬಗ್ಗೆ ಅವರಲ್ಲೇ ಕೇಳಿ ನೈಜ ವಿಚಾರಗಳನ್ನು ಆಧರಿಸಿ ಸಿನಿಮಾ ಮಾಡಿದ್ದಾರೆ.

ದೇಶ ಕೋವಿಡ್​ ಲಾಕ್​ಡೌನ್​ನಲ್ಲಿದ್ದಾಗ ವಿಜ್ಞಾನಿಗಳು ಲಸಿಕೆ ಕಂಡು ಹಿಡಿಯಲು ಮಾಡಿದ ಶ್ರಮದ ಜೊತೆಗೆ ಅವರ ಸಮರ್ಪಣಾ ಭಾವವನ್ನು ಸಿನಿಮಾದಲ್ಲಿ ಆಳವಾಗಿ ಚಿತ್ರಿಸಲಾಗಿದೆ. ನಮ್ಮ ಸಂಶೋಧನೆಯ ಮೂಲಕ, ಅವರು ಎದುರಿಸಿದ ಅಸಾಧಾರಣ ಸವಾಲುಗಳನ್ನು ನಿರ್ದೇಶಕರು ತೆರೆಯ ಮೇಲೆ ಕಟ್ಟಿಕೊಡುವ ಪ್ರಯತ್ನ ಮಾಡಿದ್ದಾರೆ. ಈ ಲಸಿಕೆಯ ವಿಚಾರದಲ್ಲಿ ವಿದೇಶಿ ವಿರೋಧಿಗಳ ಜೊತೆಗೆ ದೇಶದಲ್ಲೇ ಇದ್ದು ಮಸಲತ್ತು ಮಾಡುವ ಕುತಂತ್ರದ ಬಗ್ಗೆಯೂ ಈ ಚಿತ್ರ ಬೆಳಕು ಚೆಲ್ಲಲಿದೆ. ಈ ಎಲ್ಲ ಅಡೆತಡೆಗಳ ಹೊರತಾಗಿಯೂ ಭಾರತ ಜಗತ್ತಿನಲ್ಲೇ ಮೊದಲ ಬಾರಿಗೆ ಕೋವಿಡ್​ ಲಸಿಕೆ ಸಂಶೋಧಿಸಿದ ವಿಜ್ಞಾನಿಗಳ ವಿಜಯದ ಕಥೆ ಇದರಲ್ಲಿದೆ ಎಂದು ವಿವೇಕ್​ ಹೇಳಿಕೊಂಡಿದ್ದಾರೆ. ಸೆಪ್ಟೆಂಬರ್ 28 ರಂದು "ದಿ ವ್ಯಾಕ್ಸಿನ್ ವಾರ್" ವಿಶ್ವಾದ್ಯಂತ ತೆರೆಗೆ ಬರಲಿದೆ.

ಇದನ್ನೂ ಓದಿ: ಒಂದು ಸಿನಿಮಾಗೆ ನಟ ದರ್ಶನ್ ಎಷ್ಟು ದಿನ ಕಾಲ್ ಶೀಟ್ ಕೊಡ್ತಾರೆ?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.