ಕಲಬುರಗಿ: ಕಾಂತಾರ ಸಿನಿಮಾ ನಟ, ನಿರ್ದೇಶಕ ರಿಷಬ್ ಶೆಟ್ಟಿ ಅವರಿಗೆ ಪ್ರತಿಷ್ಠಿತ ಸಿದ್ಧಶ್ರೀ ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ. ಜಿಲ್ಲೆಯ ಆಳಂದ ತಾಲೂಕಿನಲ್ಲಿರುವ ಜೀಡಗಾ ಮಠದಲ್ಲಿ ಶ್ರೀ ಮುರುಘ ರಾಜೇಂದ್ರ ಶ್ರೀಗಳ 38ನೇ ಗುರುವಂದನಾ ಸಮಾರಂಭ ಇಂದು ಸಂಜೆ 6 ಗಂಟೆ ಸುಮಾರಿಗೆ ನಡೆಯಲಿದೆ. ನಟ ರಿಷಬ್ ಶೆಟ್ಟಿ ಅವರಿಗೆ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ.
ಇಲ್ಲಿವರೆಗೆ ಸಾಧಕರಾದ ಅಣ್ಣಾ ಹಜಾರೆ, ಪುಟ್ಟರಾಜ ಗವಾಯಿ, ನಟ ಉಮೇಶ ಪುರಾಣಿಕ, ಮಹೇಶ ಜೋಶಿ, ಮೋಹನ್ ಆಳ್ವ, ಮಧುಶ್ರೀ ಭಟ್ಟಾಚಾರ್ಯ ಅವರು ಸಿದ್ಧಶ್ರೀ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಇನ್ನು ಪ್ರಶಸ್ತಿಯು ₹25 ಸಾವಿರ ನಗದು, ಪ್ರಶಸ್ತಿ ಪತ್ರವನ್ನು ಒಳಗೊಂಡಿದೆ.
ಮಠದಲ್ಲಿ ನಡೆಯುವ ಸಮಾರಂಭದಲ್ಲಿ ಖ್ಯಾತ ಗಾಯಕ ವಿಜಯಪ್ರಕಾಶ್, ನಟ ರಿಷಬ್ ಶೆಟ್ಟಿ, ಅನುರಾಧ ಭಟ್ ಸಂಗೀತ ಸಂಜೆ ನಡೆಸಿಕೊಡಲಿದ್ದಾರೆ.
ಇದನ್ನೂ ಓದಿ:ಇಂದಿನಿಂದ ತುಳುಭಾಷೆಯಲ್ಲಿ 'ಕಾಂತಾರ' ಪ್ರದರ್ಶನ: ರಿಷಬ್ ಶೆಟ್ಟಿ ಹೇಳಿದ್ದೇನು?