ETV Bharat / entertainment

ಜಿಎಸ್​ಟಿ ವಿರುದ್ಧ ಎ ಆರ್​ ರೆಹಮಾನ್​ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ ಮದ್ರಾಸ್​ ಹೈಕೋರ್ಟ್​​ - ಮದ್ರಾಸ್​ ಹೈಕೋರ್ಟ್​ ವಜಾ

ಸೇವಾ ತೆರಿಗೆ ಪಾವತಿ ಸಂಬಂಧ ನೋಟಿಸ್​ ಜಾರಿ ಮಾಡಿದ್ದ ಜಿಎಸ್​ಟಿ ಆಯುಕ್ತರು - ಈ ನೋಟಿಸ್​ ವಿರುದ್ಧ ಅರ್ಜಿ ಸಲ್ಲಿಸಿದ್ದ ಎಆರ್​ ರೆಹಮಾನ್​ - ಈ ಅರ್ಜಿ ವಿಚಾರಣೆಗೆ ಸೂಕ್ತವಲ್ಲ ಎಂದ ನ್ಯಾಯಾಲಯ

ಜಿಎಸ್​ಟಿ ವಿರುದ್ಧ ಎಆರ್​ ರೆಹಮಾನ್​ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ ಮದ್ರಾಸ್​ ಹೈ ಕೋರ್ಟ್​​
http://10.10.50.85:6060/reg-lowres/03-February-2023/gst_0302newsroom_1675396638_893.png
author img

By

Published : Feb 3, 2023, 11:08 AM IST

ಚೆನ್ನೈ: ಜಿಎಸ್​ಟಿ ಪಾವತಿ ಸಂಬಂಧ ಖ್ಯಾತ ಸಂಗೀತ ಸಂಯೋಜಕರಾಗಿರುವ ಎಆರ್​ ರೆಹಮಾನ್​ ಮತ್ತು ಜಿವಿ ಪ್ರಕಾಶ್​ ಕುಮಾರ್ ಮತ್ತು ಸಿಆರ್​​ ಸಂತೋಷ್​ ನಾರಾಯಣನ್​​ ಸಲ್ಲಿಸಿದ್ದ ಅರ್ಜಿಯನ್ನು ಮದ್ರಾಸ್​ ಹೈಕೋರ್ಟ್​ ವಜಾಮಾಡಿದೆ. 2013 ರಿಂದ 2017ರವರೆಗೆ ಎ ಆರ್​ ರೆಹಮಾಸ್​ ಜಿಎಸ್​ಟಿ ತೆರಿಗೆ ಪಾವತಿ ಮಾಡಿಲ್ಲ ಎಂದು ಆರೋಪಿಸಿ ಜಿಎಸ್​ಟಿ ಆಯುಕ್ತರು, ಸಂಗೀತ ಮಾಂತ್ರಿಕನಿಗೆ ನೋಟಿಸ್​ ಜಾರಿ ಮಾಡಿದ್ದರು. ಇದಕ್ಕೆ ಪ್ರತಿಯಾಗಿ ಎಆರ್​ ರಹಮಾನ್​ ಸೇರಿದಂತೆ ಇತರರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ ವಜಾಗೊಳಿಸಿದೆ.

ನ್ಯಾಯಮೂರ್ತಿ ಅನಿತಾ ಸುಮಂತ್ ಅವರು, ದಂಡದೊಂದಿಗೆ ತೆರಿಗೆಯ ಬೇಡಿಕೆಯನ್ನು ಪ್ರಶ್ನಿಸಿ ನಾಲ್ಕು ವಾರಗಳಲ್ಲಿ ಸ್ಟಟ್ಯೂಟರಿ ಮನವಿಯನ್ನು ಸಲ್ಲಿಸಬಹುದು ಎಂಬ ಅವಕಾಶವನ್ನು ನೀಡಲಾಗಿದೆ ಎಂದಿದ್ದಾರೆ.

ಏನಿದು ಪ್ರಕರಣ: ಸಂಗೀತ ಸಂಯೋಜಕರಾಗಿರುವ ಎಆರ್​ ರೆಹಮಾನ್​ ಅವರು 2013ರಿಂದ 2017ರವರೆಗೆ ತಮ್ಮ ಸಂಗೀತ ಕಾರ್ಯಕ್ಕೆ ಮೂರು ಕಂಪನಿಗಳೊಂದಿಗೆ ಸಹಿ ಹಾಕಿದ್ದು, ಈ ಸಂಬಂಧ ಸೇವಾ ತೆರಿಗೆಯನ್ನು ಪಾವತಿಸಿಲ್ಲ ಎಂದು ಜಿಎಸ್​ಟಿ ಆಯುಕ್ತರು ನೋಟಿಸ್​ ಜಾರಿ ಮಾಡಿದ್ದರು. ಈ ಸಂಬಂಧ ಮದ್ರಾಸ್​ ಹೈ ಕೋರ್ಟ್​​ಗೆ ಜಿಎಸ್​ಟಿ ಆಯುಕ್ತರು ಮನವಿ ಅರ್ಜಿಯನ್ನು ಸಲ್ಲಿಸಿದ್ದರು. ಅಲ್ಲದೇ, ಈ ವೇಳೆ ತೆರಿಗೆ ವಂಚನೆ ಮಾಡಿರುವ ಪುರಾವೆಗಳ ಆಧಾರದ ಮೇಲೆ ಎಆರ್ ರೆಹಮಾನ್ ಅವರಿಗೆ ನೋಟಿಸ್ ನೀಡಲಾಗಿದ್ದು, ಮಾನಹಾನಿ ಮಾಡುವ ಉದ್ದೇಶ ಇಲ್ಲ ಎಂದು ತಿಳಿಸಿದ್ದರು. ಇನ್ನು ಇದೇ ವೇಳೆ, ಸಂಗೀತ ನಿರ್ದೇಶಕ ಜಿವಿ ಪ್ರಕಾಶ್​ ಕುಮಾರ್​ ಕೂಡ 1 ಕೋಟಿ 84 ಲಕ್ಷ ಸೇವಾ ತೆರಿಗೆ ಕಟ್ಟುವ ಸಂಬಂಧ ಜಿಎಸ್​ಟಿ ಆಯುಕ್ತರು ನೀಡಿದ್ದ ನೋಟಿಸ್​ ವಿರುದ್ಧ ಅರ್ಜಿಯನ್ನು ಸಲ್ಲಿಸಿದ್ದರು.

ಈ ಕುರಿತು ನ್ಯಾಯಾಲಯಕ್ಕೆ ಅಫಿಡೇವಿಟ್​ ಸಲ್ಲಿಸಿದ್ದ ಎಆರ್​​ ರೆಹಮಾನ್​, ಜಿಎಸ್​ಟಿ ಆಯುಕ್ತರು ಮತ್ತು ಕೇಂದ್ರ ಅಬಕಾರಿ ತಮ್ಮ ವಿರುದ್ಧ ತಪ್ಪಾಗಿ ವಿಚಾರಣೆ ಆರಂಭಿಸಿದ್ದಾರೆ. ತಮ್ಮ ಸಂಗೀತ ಕಾರ್ಯದ ಹಕ್ಕು ಸ್ವಾಮ್ಯ ಹೊಂದಿರುವ ಏಕೈಕ ಮಾಲೀಕರು ತಾನು ಆಗಿದ್ದೇನೆ. ತಮ್ಮ ಈ ಹಕ್ಕುಸ್ವಾಮ್ಯದ ವರ್ಗಾವಣೆ ಸೇವಾ ತೆರಿಗೆ ಹೊಣೆಗಾರರು ಎಂದು ಪರಿಗಣಿಸಲಾಗುವುದಿಲ್ಲ ಎಂದು ಅರ್ಜಿಯಲ್ಲಿ ತಿಳಿಸಿದ್ದರು. ಇದಕ್ಕೆ ಪ್ರತಿಯಾಗಿ ವಾದ ಮಂಡಿಸಿರುವ ಆಯುಕ್ತರು, ರೆಹಮಾನ್​ ಅವರು ತಮ್ಮ ಕೆಲಸದ ಸಂಪೂರ್ಣ ಹಕ್ಕು ಸ್ವಾಮ್ಯವನ್ನು ವರ್ಗಾವಣೆ ಮಾಡಿಲ್ಲ. ಆದರೆ, ಕೆಲವು ಹಕ್ಕುಗಳನ್ನು ಉಳಿಸಿಕೊಂಡಿದ್ದಾರೆ. ಇದು ಕೇವಲ ತಾತ್ಕಾಲಿಕ ವರ್ಗಾವಣೆ ಎಂದಿತ್ತು

ಅರ್ಜಿ ವಜಾಗೊಳಿಸಿದ ನ್ಯಾಯಾಲಯ: ಈ ಅರ್ಜಿಗಳ ವಿಚಾರಣೆ ಆಲಿಸಿದ ನ್ಯಾ. ಅನಿತಾ ಸುಮಂತ್​, ಎಆರ್​ ರೆಹಮಾನ್​ ಅವರ ಅರ್ಜಿ ವಿಚಾರಣೆಗೆ ಸೂಕ್ತವಲ್ಲ ಎಂದಿದ್ದಾರೆ. 2013 ಮತ್ತು 2017 ರ ನಡುವೆ ಕಂಪನಿಗಳೊಂದಿಗೆೆ ಮಾಡಲಾದ ಸಹಿ ಒಪ್ಪಂದಗಳು ಸೇರಿದಂತೆ ಬೃಹತ್ ದಾಖಲೆಗಳ ಪರಿಶೀಲನೆ ಅಗತ್ಯವಿದೆ. ಇದನ್ನು ರಿಟ್ ಪ್ರಕ್ರಿಯೆಯಲ್ಲಿ ಪರಿಹರಿಸಲಾಗುವುದಿಲ್ಲ ಎಂದು ಕೋರ್ಟ್​ ತಿಳಿಸಿದೆ. ಇದೇ ವೇಳೆ, ತೆರಿಗೆ ವಿಧಿಸಿರುವ ಕುರಿತು ವಿವರಣೆ ಕೇಳಿರುವ ಆಯುಕ್ತರ ನೋಟಿಸ್ ವಿರುದ್ಧ ಸಂಗೀತ ಸಂಯೋಜಕ ಜಿವಿ ಪ್ರಕಾಶ್ ಕುಮಾರ್ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದೆ.

ಇದನ್ನೂ ಓದಿ: 74ನೇ ವಯಸ್ಸಿನಲ್ಲೂ ಯುವಕರನ್ನೂ ನಾಚಿಸುವ ಸಾಧನೆ.. ಇಲ್ಲಿದೆ ವಾಹ್ಲಾಂಗ್​ ಯಶಸ್ಸಿನ ಗುಟ್ಟು!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.