ETV Bharat / entertainment

ಪಿಎಂ ಮೋದಿಗೆ ಧನ್ಯವಾದ ಅರ್ಪಿಸಿದ 'ದಿ ಕೇರಳ ಸ್ಟೋರಿ' ನಟಿ: ವಿರೋಧಿಗಳಿಗೆ ಅದಾ ಶರ್ಮಾ ಹೀಗಂದ್ರು!

author img

By

Published : May 7, 2023, 7:09 PM IST

ರಾಜ್ಯದಲ್ಲಿ ಪ್ರಚಾರದ ವೇಳೆ 'ದಿ ಕೇರಳ ಸ್ಟೋರಿ' ಸಿನಿಮಾ ಬಗ್ಗೆ ಪ್ರಧಾನಿ ಮಾತನಾಡಿದ್ದರು. ನಟಿ ಅದಾ ಶರ್ಮಾ ಪಿಎಂ ಮೋದಿ ಅವರಿಗೆ ಧನ್ಯವಾದ ಅರ್ಪಿಸಿದ್ದಾರೆ.

Adah Sharma thanks to PM Modi
ಪಿಎಂ ಮೋದಿಗೆ ಧನ್ಯವಾದ ಅರ್ಪಿಸಿದ ಅದಾ ಶರ್ಮಾ

ವಿವಾದಗಳ ನಡುವೆ ಶುಕ್ರವಾರ ತೆರೆಕಂಡಿರುವ 'ದಿ ಕೇರಳ ಸ್ಟೋರಿ' ಬಾಕ್ಸ್ ಆಫೀಸ್‌ನಲ್ಲಿ ಉತ್ತಮ ಪ್ರದರ್ಶನವನ್ನು ಮುಂದುವರೆಸಿದೆ. ವಿವಾದ, ಪ್ರತಿಭಟನೆ, ಆಕ್ರೋಶಗಳನ್ನು ಎದುರಿಸಿ ಈ ಚಿತ್ರ ದೇಶಾದ್ಯಂತ ಬಿಡುಗಡೆಯಾಗಿದೆ. ಹಲವೆಡೆ ಚಿತ್ರಮಂದಿರಗಳು ಹೌಸ್​ ಫುಲ್​​ ಆಗಿವೆ. ಸಿನಿಮಾ ಬಗ್ಗೆ ರಾಜ್ಯದಲ್ಲಿ ಪ್ರಚಾರ, ಭಾಷಣ ಮಾಡಿದ್ದ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರು ಹೊಗಳಿದ್ದರು. ಈ ಬಗ್ಗೆ ಚಿತ್ರದ ನಟಿ ಅದಾ ಶರ್ಮಾ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಶೇರ್ ಮಾಡುವ ಮೂಲಕ ಸಂತಸ ವ್ಯಕ್ತಪಡಿಸಿದ್ದಾರೆ.

ಸುದಿಪ್ತೋ ಸೇನ್ ನಿರ್ದೇಶನದ 'ದಿ ಕೇರಳ ಸ್ಟೋರಿ' ಚಿತ್ರದ ನಟಿ ಅದಾ ಶರ್ಮಾ ಇನ್‌ಸ್ಟಾಗ್ರಾಮ್‌ನಲ್ಲಿ ಚಿತ್ರಕ್ಕೆ ಸಂಬಂಧಿಸಿದ ಕೆಲ ಚಿತ್ರಗಳನ್ನು ಹಂಚಿಕೊಂಡಿದ್ದಾರೆ. 'ಸಿನಿಮಾ ಹಾಲ್‌ಗಳಲ್ಲಿ ಸ್ಟ್ಯಾಂಡಿಂಗ್ ಒವೇಶನ್, ಗೌರವಾನ್ವಿತ ಪಿಎಂ ಅವರು ನಮ್ಮ ಚಿತ್ರ 'ದಿ ಕೇರಳ ಸ್ಟೋರಿ' ಬಗ್ಗೆ ಮಾತನಾಡಿದ್ದಾರೆ. ವಿಮರ್ಶಕರು ಮತ್ತು ಪ್ರೇಕ್ಷಕರು ನನ್ನ ಅಭಿನಯವನ್ನು ಮೆಚ್ಚಿದ್ದಾರೆ. ನಿಮ್ಮಲ್ಲಿ ಹಲವರು ಹೌಸ್‌ಫುಲ್ ಸಂದೇಶಗಳನ್ನು ನನಗೆ ನೀಡಿದ್ದೀರಿ. ಬಂಪರ್ ಓಪನಿಂಗ್, ನಾನು ಇಷ್ಟು ದೊಡ್ಡ ಕನಸು ಕಾಣಲು ಸಾಧ್ಯವೇ ಇಲ್ಲ. ನನ್ನ ಕನಸುಗಳೆಲ್ಲ ನನಸಾಗುತ್ತಿವೆ ಎಂದು ಪೋಸ್ಟ್ ಮಾಡಿದ್ದಾರೆ.

ಕೆಲವರು ನಮ್ಮ 'ದಿ ಕೇರಳ ಸ್ಟೋರಿ' ಅನ್ನು ಪ್ರಚಾರದ ಚಲನಚಿತ್ರ ಎಂದು ಕರೆಯುತ್ತಾರೆ. ಹಲವಾರು ಭಾರತೀಯ ಸಂತ್ರಸ್ತರ ಕ್ಷಣಗಳನ್ನು ವೀಕ್ಷಿಸಿದ ನಂತರವೂ ಈ ಘಟನೆಗಳು ನಡೆದೇ ಇಲ್ಲ ಎಂದು ಹೇಳುತ್ತಿದ್ದಾರೆ. ನಿಮ್ಮಲ್ಲಿ ನನ್ನದೊಂದು ವಿನಮ್ರ ವಿನಂತಿ, ಗೂಗಲ್​ನಲ್ಲಿ ISIS ಮತ್ತು Brides ಪದಗಳನ್ನು ಸರ್ಚ್​ ಮಾಡಿ, ಬಿಳಿ ಹುಡುಗಿಯರು ಮಾತನಾಡಿರುವ ವಿಡಿಯೋ, ಆರ್ಟಿಕಲ್​ ಸಿಗಬಹುದು, ಅದನ್ನು ನೋಡಿದ್ರೆ ನಮ್ಮ ಭಾರತೀಯ ಚಲನಚಿತ್ರ ನಿಜ ಎಂದು ನಿಮಗೆ ಅನಿಸಬಹುದು ಎಂದು ತಿಳಿಸಿದ್ದಾರೆ.

ಮತ್ತೊಂದು ಪೋಸ್ಟ್​​ನಲ್ಲಿ ನೀವು 'ದಿ ಕೇರಳ ಸ್ಟೋರಿ' ನೋಡುವಷ್ಟು ಧೈರ್ಯಶಾಲಿಯೇ? ಎಂದು ಬರೆದಿದ್ದಾರೆ. ಅವರು ಶೇರ್ ಮಾಡಿರುವ ಪೋಸ್ಟರ್​ನಲ್ಲಿ, ಹಿತವೆನಿಸದಿದ್ದರೂ ಕೆಲ ಕಥೆಗಳನ್ನು ಹೇಳಲೇಬೇಕಾಗುತ್ತದೆ ಎಂದು ಬರೆದಿದೆ.

ಇದನ್ನೂ ಓದಿ: ಮೇ ಅಟಲ್​ ಹೂ: ವಾಜಪೇಯಿ ಜೀವನಾಧಾರಿತ ಸಿನಿಮಾ ಶೂಟಿಂಗ್​ ಆರಂಭಿಸಿದ ಪಂಕಜ್ ತ್ರಿಪಾಠಿ

ಪ್ರಧಾನಿ ಮೋದಿ ಹೇಳಿದ್ದೇನು? ಶುಕ್ರವಾರ ಬಳ್ಳಾರಿಯಲ್ಲಿ ನಡೆದ ಚುನಾವಣಾ ಪ್ರಚಾರ ರ್ಯಾಲಿಯನ್ನುದ್ದೇಶಿಸಿ ಮಾತನಾಡುವ ವೇಳೆ, ಪ್ರಧಾನಿ ನರೇಂದ್ರ ಮೋದಿ ಅವರು 'ದಿ ಕೇರಳ ಸ್ಟೋರಿ' ಕಥೆ ಬಗ್ಗೆ ಉಲ್ಲೇಖಿಸಿದ್ದರು. ನಿಜವಾಗಿಯೂ ಏನಾಗುತ್ತಿದೆ ಎಂಬುದನ್ನು ದಿ ಕೇರಳ ಸ್ಟೋರಿ ಆಧರಿಸಿದೆ. ಆದರೆ ಕಾಂಗ್ರೆಸ್​ ಅನ್ನು ನೋಡಿ, ಭಯೋತ್ಪಾದಕರ ಜೊತೆ ನಿಂತು ಸಿನಿಮಾ ನಿಷೇಧ ಮಾಡುವಂತೆ ಆಗ್ರಹಿಸುತ್ತಿದ್ದಾರೆ. ಆದರೆ ಚಿತ್ರದಲ್ಲಿ ಕೇರಳದಂತಹ ಸುಂದರ ರಾಜ್ಯದಲ್ಲಿ ನಡೆಯುತ್ತಿರುವ ಭಯೋತ್ಪಾದಕರ ಸಂಚು ಬಯಲಿಗೆಳೆಯುವ ಪ್ರಯತ್ನ ಮಾಡಲಾಗಿದೆ. ದೇಶದ ದೌರ್ಭಾಗ್ಯವನ್ನು ನೋಡಿ, ಕಾಂಗ್ರೆಸ್ ಈ ಭಯೋತ್ಪಾದನೆಯ ಪ್ರವೃತ್ತಿಯೊಂದಿಗೆ ನಿಂತಿದೆ ಎಂದು ಪ್ರಧಾನಿ ತಿಳಿಸಿದದ್ದರು.

ಇದನ್ನೂ ಓದಿ: ಸೀರೆ ಸವಿನೆನಪಲ್ಲಿ ಪ್ರಗತಿ ಶೆಟ್ಟಿ.. ಫ್ಯಾಮಿಲಿ ಫೋಟೋ ಹಂಚಿಕೊಂಡ 'ಕಾಂತಾರ' ಸ್ಟಾರ್ ದಂಪತಿ

ಸಂದರ್ಶನವೊಂದರಲ್ಲಿ ಬಾಲಿವುಡ್ ನಟಿ ಕಂಗನಾ ರಣಾವತ್ ಕೂಡ 'ದಿ ಕೇರಳ ಸ್ಟೋರಿ' ಬಗ್ಗೆ ಮಾತನಾಡಿದ್ದರು. ಈ ಸಿನಿಮಾವನ್ನು ನೋಡಿಲ್ಲ. ಆದ್ರೆ ಚಿತ್ರ ನಿಷೇಧಕ್ಕೆ ಪ್ರಯತ್ನಗಳು ನಡೆದಿವೆ ಎಂಬುದನ್ನು ತಿಳಿದುಕೊಂಡೆ. ಯಾರಾದರು ಈ ಚಿತ್ರ ತಮ್ಮ ಮೇಲೆ ದಾಳಿ ಮಾಡುತ್ತಿದೆ ಅಥವಾ ತಮ್ಮನ್ನು ಗುರಿಯಾಗಿಸಿಕೊಂಡಿದೆ ಎಂದು ಭಾವಿಸಿದರೆ ಅವರು ಭಯೋತ್ಪಾದಕರು ಎಂದು ತಿಳಿಸಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.