'ದಿ ಗೋಟ್ ಲೈಫ್' (ಆಡುಜೀವಿತಂ) ಮಲಯಾಳಂ ಚಿತ್ರರಂಗದ ಬಹುಬೇಡಿಕೆ ನಟ ಪೃಥ್ವಿರಾಜ್ ಸುಕುಮಾರನ್ ಅಭಿನಯದ ಹೈವೋಲ್ಟೆಜ್ ಸಿನಿಮಾ. ನೈಜ ಘಟನೆ ಕಥೆ ಆಧರಿಸಿರೋ 'ಆಡುಜೀವಿತಂ' ಒಂದಲ್ಲ ಒಂದು ವಿಶೇಷತೆಗಳಿಂದ ಸೌತ್ ಸಿನಿಮಾ ಇಂಡಸ್ಟ್ರಿಯಲ್ಲಿ ಸಖತ್ ಟಾಕ್ ಆಗುತ್ತಿದೆ. ದಿನೇದಿನೆ ಸಿನಿಪ್ರಿಯರ ಕುತೂಹಲ ಹೆಚ್ಚಿಸುತ್ತಿದೆ. ಈ ಸಿನಿಮಾಗೀಗ ಬಾಲಿವುಡ್ ನಟ ರಣ್ವೀರ್ ಸಿಂಗ್ ಸಾಥ್ ಸಿಕ್ಕಿದೆ.
ರಣ್ವೀರ್ ಸಿಂಗ್ ಪೋಸ್ಟ್: ಹೌದು, ಬಾಲಿವುಡ್ ಸ್ಟಾರ್ ಹೀರೋ ರಣ್ವೀರ್ ಸಿಂಗ್ "ದಿ ಗೋಟ್ ಲೈಫ್" ಚಿತ್ರದ ಎರಡನೇ ಪೋಸ್ಟರ್ ಅನ್ನು ಸೋಷಿಯಲ್ ಮೀಡಿಯಾಗಳಲ್ಲಿ ಅನಾವರಣಗೊಳಿಸಿದ್ದಾರೆ. ತಮ್ಮ ಅಧಿಕೃತ ಸಾಮಾಜಿಕ ಜಾಲತಾಣ ವೇದಿಕೆಗಳಲ್ಲಿ ಪೋಸ್ಟರ್ ಶೇರ್ ಮಾಡಿದ ಬಾಲಿವುಡ್ ಬಹುಬೇಡಿಕೆ ನಟ, 'ಇದು ನೋಡಲೇಬೇಕಾದ ಸಿನಿಮಾ' ಎಂದು ಬರೆದುಕೊಂಡಿದ್ದಾರೆ. ಈ ಸೆಕೆಂಡ್ ಲುಕ್ ಪೋಸ್ಟರ್ ಭಾವನಾತ್ಮಕವಾಗಿದೆ. ಆಶಾಭಾವನೆಯೊಂದಿಗೆ ದೀರ್ಘ ಪ್ರಯಾಣಕ್ಕೆ ಹೊರಟಿರುವ ನಾಯಕನ ಭಾವನೆಗಳು ಅವನ ಮುಖದಲ್ಲಿ ಗೋಚರಿಸುವಂತಿದೆ. ಪೃಥ್ವಿರಾಜ್ ಸುಕುಮಾರನ್ ನಜೀರ್ ಪಾತ್ರಕ್ಕಾಗಿ ಎಷ್ಟು ಮಾರ್ಪಾಡು ಮಾಡಿದ್ದಾರೆ ಎಂಬುದನ್ನು ಈ ಪೋಸ್ಟರ್ ತೋರಿಸುತ್ತದೆ ಎಂದು ರಣ್ವೀರ್ ಸಿಂಗ್ ಹೇಳಿದ್ದಾರೆ.
ಇನ್ನು, ಪೃಥ್ವಿರಾಜ್ ಸುಕುಮಾರನ್ ಅಲ್ಲದೇ ಹಾಲಿವುಡ್ ನಟ ಜಿಮ್ಮಿ ಜೀನ್ ಲೂಯಿಸ್, ಅಮಲಾ ಪೌಲ್, ಕೆಆರ್ ಗೋಕುಲ್, ಅರಬ್ ಖ್ಯಾತ ನಟರಾದ ತಾಲಿಬ್ ಅಲ್ ಬಲೂಶಿ, ರಿಕ್ ಔಬೆ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾ ಬೆಂಜಮಿನ್ ಅವರ ಪ್ರಶಸ್ತಿ ವಿಜೇತ ಕಾದಂಬರಿ 'ಗೋಟ್ ಡೇಸ್' ಅನ್ನು ಆಧರಿಸಿದೆ. ಜನಪ್ರಿಯ, ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕ ಬ್ಲೆಸ್ಸಿ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ.
ಇದನ್ನೂ ಓದಿ : ಎನ್ಟಿಆರ್ ಪುಣ್ಯಸ್ಮರಣೆ: ಅಜ್ಜನ ಸಮಾಧಿಗೆ ಜೂ.ಎನ್ಟಿಆರ್, ಕಲ್ಯಾಣ್ರಾಮ್ ನಮನ
ಮರುಭೂಮಿಯಲ್ಲಿ ನಿರ್ಮಾಣಗೊಂಡ ಸಿನಿಮಾ: 90ರ ದಶಕದಲ್ಲಿ ಕೇರಳವನ್ನು ತೊರೆದು ಜೀವನೋಪಾಯ ಅರಸಿ ವಿದೇಶಕ್ಕೆ ವಲಸೆ ಬಂದ ನಜೀಬ್ ಎಂಬ ಯುವಕನ ಬದುಕಿನ ಕಥೆಯನ್ನು ಈ ಸಿನಿಮಾ ತೋರಿಸಲು ಹೊರಟಿದೆ. ಇದು ಸಂಪೂರ್ಣವಾಗಿ ಮರುಭೂಮಿಯಲ್ಲಿ ನಿರ್ಮಾಣಗೊಂಡ ಮೊದಲ ಭಾರತೀಯ ಚಿತ್ರ ಎಂಬುದು ಗಮನಾರ್ಹ.
ಇದನ್ನೂ ಓದಿ : ಸಲಾರ್ ಸ್ಪೆಷಲ್: ಪ್ರಭಾಸ್, ಪೃಥ್ವಿರಾಜ್ ಸುಕುಮಾರನ್, ಶ್ರುತಿ ಹಾಸನ್ ಚಿಟ್ ಚಾಟ್ ನೋಡಿ
'ವಿಷುಯಲ್ ರೊಮ್ಯಾನ್ಸ್ ಬ್ಯಾನರ್' ಮಲಯಾಳಂ ಚಲನಚಿತ್ರೋದ್ಯಮದಲ್ಲಿ ಪ್ರತಿಷ್ಠಿತ ಯೋಜನೆಯಾಗಿ, ಬೃಹತ್ ಬಜೆಟ್‌ನೊಂದಿಗೆ "ದಿ ಗೋಟ್ ಲೈಫ್" (ಆಡುಜೀವಿತಂ) ಚಲನಚಿತ್ರವನ್ನು ನಿರ್ಮಿಸಿದೆ. ಬರುವ ಏಪ್ರಿಲ್ 10ರಂದು ಈ ಸಿನಿಮಾ ಮಲಯಾಳಂ ಜೊತೆಗೆ ಹಿಂದಿ, ತೆಲುಗು, ತಮಿಳು ಮತ್ತು ಕನ್ನಡ ಸೇರಿ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಚಿತ್ರಮಂದಿರ ಪ್ರವೇಶಿಸಲಿದೆ. 2024ರ ಬಹುನಿರೀಕ್ಷಿತ ಚಿತ್ರಗಳಲ್ಲಿ ಇದು ಒಂದಾಗಿದ್ದು, ಸಿನಿಪ್ರಿಯರು ಚಿತ್ರದ ಬಿಡುಗಡೆಯನ್ನು ಎದುರು ನೋಡುತ್ತಿದ್ದಾರೆ.