ತಮಿಳು ಚಿತ್ರರಂಗದ ಸೂಪರ್ಸ್ಟಾರ್ ನಟ ಚಿಯಾನ್ ವಿಕ್ರಮ್ ಅಭಿನಯದ ಮುಂಬರುವ ಬಹುನಿರೀಕ್ಷಿತ ಚಿತ್ರ 'ತಂಗಲಾನ್'. 'ಪೊನ್ನಿಯನ್ ಸೆಲ್ವನ್ 2' ಹಿಟ್ ಆದ ನಂತರ ಅವರು ನಟಿಸುತ್ತಿರುವ ಚಿತ್ರವಿದು. ಪಾ ರಂಜಿತ್ ನಿರ್ದೇಶನದ 'ತಂಗಲಾನ್' ಸಿನಿಮಾದ ಟೀಸರ್ ಅನ್ನು ಚಿತ್ರತಂಡ ಇಂದು ಬಿಡುಗಡೆಗೊಳಿಸಿದೆ. ಮಾಸ್ ಲುಕ್ನಲ್ಲಿ ಚಿಯಾನ್ ವಿಕ್ರಮ್ ಎಂಟ್ರಿಯಾಗಿದ್ದಾರೆ. ವೀಕ್ಷಕರಿಗೆ ನೀಡಿದ ಆ್ಯಕ್ಷನ್ ಪ್ಯಾಕ್ಡ್ ಚಿತ್ರದ ಒಂದು ತುಣುಕು ಸದ್ಯ ವೈರಲ್ ಆಗುತ್ತಿದೆ.
- " class="align-text-top noRightClick twitterSection" data="">
ಟೀಸರ್ ಹೀಗಿದೆ.. ದಶಕಗಳ ಹಿಂದೆ ಕೋಲಾರ ಚಿನ್ನದ ಗಣಿಗಳಲ್ಲಿ (ಕೆಜಿಎಫ್) ನಡೆದ ನೈಜ ಘಟನೆಗಳನ್ನು ಆಧರಿಸಿದ ಕಥೆಯೇ 'ತಂಗಲಾನ್'. ವಿಕ್ರಮ್ ಸ್ಥಳೀಯ ಬುಡಕಟ್ಟು ಜನಾಂಗದ ಮುಖ್ಯಸ್ಥನ ಪಾತ್ರ ನಿರ್ವಹಿಸಿದ್ದಾರೆ. ಇಂದು ಬಿಡುಗಡೆಯಾಗಿರುವ ಟೀಸರ್ನಲ್ಲಿ ಚಿನ್ನದ ಗಣಿ ಬಳಿಯ ಹಳ್ಳಿಯಲ್ಲಿನ ಜನರು ಮತ್ತು ಆಂಗ್ಲರ (ಬ್ರಿಟಿಷರ) ನಡುವಿನ ಯುದ್ಧದ ದೃಶ್ಯಗಳನ್ನು ಅತ್ಯಂತ ಭೀಕರವಾಗಿ ಚಿತ್ರಿಸಲಾಗಿದೆ. ಹಳ್ಳದ ನೀರಿನಲ್ಲಿ ಹರಿಯುವ ರಕ್ತ, ವಿಕ್ರಮ್ ಕಾಳಿಂಗ ಸರ್ಪವನ್ನು ಕೈಯಿಂದಲೇ ಎರಡು ಭಾಗ ಮಾಡುವ ದೃಶ್ಯಗಳು ನವಿರೇಳಿಸುವಂತಿದೆ.
ಚಿಯಾನ್ ವಿಕ್ರಮ್ ಅವರ ನೋಟ, ಟೀಸರ್ನ ದೃಶ್ಯಗಳು, ಹಿನ್ನೆಲೆ ಸಂಗೀತ ಎಲ್ಲವೂ ಅದ್ಭುತ. ಟೀಸರ್ನಲ್ಲಿ ಕೊನೆಯಲ್ಲಿ, 'ಪುರಾಣವು ಇತಿಹಾಸಕ್ಕೆ ಕಾರಣವಾಗುವಂತೆ, ದುರಾಸೆಯು ವಿನಾಶಕ್ಕೆ ಕಾರಣವಾಗುವಂತೆ, ರಕ್ತಸಿಕ್ತ ಯುದ್ಧಗಳು ಸ್ವಾತಂತ್ರ್ಯಕ್ಕೆ ಕಾರಣವಾಗುವಂತೆ, ಚಿನ್ನದ ಮಗ ಉದಯಿಸುತ್ತಾನೆ' ಎಂದು ಬರೆಯಲಾಗಿದೆ. ಒಂದೇ ಒಂದು ಡೈಲಾಗ್ ಇಲ್ಲದ ಈ ಟೀಸರ್ ಚಿತ್ರದ ಮೇಲಿನ ನಿರೀಕ್ಷೆಯನ್ನು ದುಪ್ಪಟ್ಟಾಗಿಸಿದೆ. ಸಿನಿ ಪ್ರೇಮಿಗಳು ಸಿನಿಮಾ ಬಿಡುಗಡೆಗಾಗಿ ಕಾತರದಿಂದ ಕಾಯುತ್ತಿದ್ದಾರೆ.
ಇದನ್ನೂ ಓದಿ: ರಿವೀಲ್ ಆಯ್ತು ಚಿಯಾನ್ ವಿಕ್ರಮ್ ಹೊಸ ಸಿನಿಮಾದ ಫಸ್ಟ್ ಲುಕ್
ಚಿತ್ರತಂಡ: ಈ ಚಿತ್ರಕ್ಕೆ ಪಾ ರಂಜಿತ್ ಆ್ಯಕ್ಷನ್ ಕಟ್ ಹೇಳಿದ್ದಾರೆ. ಸ್ಟುಡಿಯೋ ಗ್ರೀನ್ ಮತ್ತು ನೀಲಂ ಪ್ರೊಡಕ್ಷನ್ಸ್ ಜಂಟಿಯಾಗಿ 'ತಂಗಲಾನ್' ನಿರ್ಮಿಸಿದೆ. ಚಿಯಾನ್ ವಿಕ್ರಮ್ ಜೊತೆಗೆ, ಪಶುಪತಿ, ಪಾರ್ವತಿ ತಿರುವೋತು, ಮಾಳವಿಕಾ ಮೋಹನನ್, ಹರಿಕೃಷ್ಣನ್ ಅನ್ಬುದುರೈ ಮತ್ತು ಡೇನಿಯಲ್ ಕ್ಯಾಲ್ಟಗಿರೋನ್ ಕೂಡ ನಟಿಸಿದ್ದಾರೆ. ದೊಡ್ಡ ಮಟ್ಟದ ಬಜೆಟ್ನಲ್ಲಿ ಸಿನಿಮಾ ಮೂಡಿ ಬಂದಿದೆ.
-
The son of Gold rises🔥⚔️
— Vikram (@chiyaan) November 1, 2023 " class="align-text-top noRightClick twitterSection" data="
Unveiling the spine-chilling #ThangalaanTeaser✨
▶️https://t.co/Comqkxth5M#Thangalaan #ThangalaanFromJan26@Thangalaan @chiyaan @beemji @kegvraja @StudioGreen2 @officialneelam @parvatweets @MalavikaM_ @PasupathyMasi @DanCaltagirone @thehari___…
">The son of Gold rises🔥⚔️
— Vikram (@chiyaan) November 1, 2023
Unveiling the spine-chilling #ThangalaanTeaser✨
▶️https://t.co/Comqkxth5M#Thangalaan #ThangalaanFromJan26@Thangalaan @chiyaan @beemji @kegvraja @StudioGreen2 @officialneelam @parvatweets @MalavikaM_ @PasupathyMasi @DanCaltagirone @thehari___…The son of Gold rises🔥⚔️
— Vikram (@chiyaan) November 1, 2023
Unveiling the spine-chilling #ThangalaanTeaser✨
▶️https://t.co/Comqkxth5M#Thangalaan #ThangalaanFromJan26@Thangalaan @chiyaan @beemji @kegvraja @StudioGreen2 @officialneelam @parvatweets @MalavikaM_ @PasupathyMasi @DanCaltagirone @thehari___…
ಚಿತ್ರಕ್ಕೆ ಜಿವಿ ಪ್ರಕಾಶ್ ಕುಮಾರ್ ಸಂಗೀತ ಸಂಯೋಜನೆ, ಎ ಕಿಶೋರ್ ಕುಮಾರ್ ಛಾಯಾಗ್ರಹಣ, ಎಸ್.ಎಸ್. ಮೂರ್ತಿ ಕಲಾನಿರ್ದೇಶನ, ಸೆಲ್ವ ಆರ್ಕೆ ಸಂಕಲನವಿದೆ. ನಿರ್ದೇಶಕ ರಂಜಿತ್ ಅವರು ತಮಿಳಿನ ಪ್ರಭಾ ಅವರೊಂದಿಗೆ ಚಿತ್ರಕಥೆ ಬರೆದಿದ್ದಾರೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಮೂಡಿಬಂದ ಸಿನಿಮಾವನ್ನು ಮುಂದಿನ ವರ್ಷ ಜನವರಿ 26ರಂದು ಬಿಡುಗಡೆಗೆ ದಿನಾಂಕ ನಿಗದಿಪಡಿಸಲಾಗಿದೆ. ಚಿತ್ರವು ತಮಿಳು, ತೆಲುಗು, ಹಿಂದಿ, ಕನ್ನಡ ಮತ್ತು ಮಲಯಾಳಂ ಭಾಷೆಗಳಲ್ಲಿ ತೆರೆ ಕಾಣಲಿದೆ.
ಇದನ್ನೂ ಓದಿ: ಶೂಟಿಂಗ್ ಸೆಟ್ನಿಂದ ಅಂದದ ಫೋಟೋ ಹಂಚಿಕೊಂಡ ನಟಿ ಮಾಳವಿಕಾ ಮೋಹನನ್: ಸುಂದರ ಲೋಕದ ಸುಂದರಿ ಎಂದ ನೆಟಿಜನ್