ETV Bharat / entertainment

ನಿರ್ದೇಶಕ ವೆಂಕಟ್​ ಪ್ರಭು ಹುಟ್ಟುಹಬ್ಬಕ್ಕೆ 'ದಳಪತಿ 68' ಚಿತ್ರತಂಡದಿಂದ ಹೊಸ ಅಪ್​ಡೇಟ್​ - ಈಟಿವಿ ಭಾರತ ಕನ್ನಡ

Thalapthy 68: ನಿರ್ದೇಶಕ ವೆಂಕಟ್​ ಪ್ರಭು ಹುಟ್ಟುಹಬ್ಬದ ಸಲುವಾಗಿ 'ದಳಪತಿ 68' ಚಿತ್ರತಂಡದಿಂದ ಹೊಸ ಅಪ್​ಡೇಟ್​ ಹೊರಬಿದ್ದಿದೆ.

Thalapthy 68: Makers reveal team's warm gesture for director Venkat Prabhu on his birthday
ನಿರ್ದೇಶಕ ವೆಂಕಟ್​ ಪ್ರಭು ಹುಟ್ಟುಹಬ್ಬದ ಸಲುವಾಗಿ 'ದಳಪತಿ 68' ಚಿತ್ರತಂಡದಿಂದ ಹೊಸ ಅಪ್​ಡೇಟ್​
author img

By ETV Bharat Karnataka Team

Published : Nov 7, 2023, 5:39 PM IST

'ಲಿಯೋ' ಸಿನಿಮಾ ಬಳಿಕ ದಳಪತಿ ವಿಜಯ್​ ನಟನೆಯ ಮುಂಬರುವ ಸಿನಿಮಾಗಳ ಬಗ್ಗೆ ಅವರ ಅಭಿಮಾನಿಗಳಲ್ಲಿ ಕುತೂಹಲವಿದೆ. ಈಗಾಗಲೇ 'ದಳಪತಿ 68' ಅನೌನ್ಸ್​ ಆಗಿದೆ. ವೆಂಕಟ್​ ಪ್ರಭು ನಿರ್ದೇಶನದಲ್ಲಿ ಚಿತ್ರವು ಮೂಡಿಬರಲಿದೆ. ಅಕ್ಟೋಬರ್​ನಿಂದ ಚಿತ್ರತಂಡ ಶೂಟಿಂಗ್​ನಲ್ಲಿ ತೊಡಗಿಸಿಕೊಂಡಿದೆ. ಸಿನಿಮಾ ನಿರ್ಮಾಪಕರು ಇತ್ತೀಚೆಗೆ ಹೊಸ ಅಪ್​ಡೇಟ್​ ಅನ್ನು ಹಂಚಿಕೊಂಡಿದ್ದಾರೆ. ವೆಂಕಟ್​ ಪ್ರಭು ಹುಟ್ಟುಹಬ್ಬದ ಸಲುವಾಗಿ ಚಿತ್ರದ ಮಾಹಿತಿಯನ್ನು ಶೇರ್ ಮಾಡಲಾಗಿದೆ.

ಇಂದು ಕಾಲಿವುಡ್​ ಖ್ಯಾತ ನಿರ್ದೇಶಕ ವೆಂಕಟ್​ ಪ್ರಭು ಅವರ ಜನ್ಮದಿನ. ದಳಪತಿ ವಿಜಯ್​ ಅವರ 68ನೇ ಚಿತ್ರಕ್ಕೆ ಇವರೇ ಆ್ಯಕ್ಷನ್​ ಕಟ್​ ಹೇಳುತ್ತಿದ್ದಾರೆ. ಈ ಸಿನಿಮಾಗೆ ಅರ್ಚನಾ ಕಲ್ಪಾತಿ ಬಂಡವಾಳ ಹೂಡಿದ್ದಾರೆ. ನಿರ್ದೇಶಕರು ತಮ್ಮ ವಿಶೇಷ ದಿನದಂದು ಸ್ವಲ್ಪ ವಿಶ್ರಾಂತಿ ಪಡೆಯಲು ತಂಡವು ರಾತ್ರಿಯಿಡೀ ಅವರೊಂದಿಗೆ ಕೆಲಸ ಮಾಡಿದೆ ಎಂದು ನಿರ್ಮಾಪಕಿ ಹಂಚಿಕೊಂಡಿದ್ದಾರೆ. ಜೊತೆಗೆ ವೆಂಕಟ್​ ಪ್ರಭು ಅವರೊಂದಿಗಿನ ಫೋಟೋ ಶೇರ್​ ಮಾಡಿ, ವಿಶ್​ ಮಾಡಿದ್ದಾರೆ.

  • Happiest bday to our mad genius @vp_offl. Here is wishing you the best of everything . To many more crazy shoot days and schedules for #Thalapathy68 ( Update : Major Action Block being shot in Thailand and yesterday was a night shoot so @vp_offl gets a holiday on his bday 😂) pic.twitter.com/fBVgUv5zo0

    — Archana Kalpathi (@archanakalpathi) November 7, 2023 " class="align-text-top noRightClick twitterSection" data=" ">

48ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ನಿರ್ದೇಶಕ ವೆಂಕಟ್​ ಪ್ರಭು ಅವರಿಗೆ ನಿರ್ಮಾಪಕಿ ಅರ್ಚನಾ ಕಲ್ಪಾತಿ ಎಕ್ಸ್​ನಲ್ಲಿ ಶುಭಾಶಯಗಳನ್ನು ತಿಳಿಸಿದ್ದಾರೆ. ಜೊತೆಗೆ ಚಿತ್ರದ ಕುತೂಹಲಕಾರಿ ಅಪ್​ಡೇಟ್​ ನೀಡಿದ್ದಾರೆ. "ನಮ್ಮ ಹುಚ್ಚು ಪ್ರತಿಭೆ ವೆಂಕಟ್​ ಪ್ರಭು ಅವರಿಗೆ ಜನ್ಮದಿನದ ಶುಭಾಶಯಗಳು. ಜೀವನದಲ್ಲಿ ನೀವು ಬಯಸಿದ್ದೆಲ್ಲವೂ ಸಿಗುವಂತಾಗಲಿ. ದಳಪತಿ 68ಗಾಗಿ ಇನ್ನೂ ಹಲವು ಕ್ರೇಜಿ ಶೂಟಿಂಗ್​ ದಿನಗಳು ಮತ್ತು ವೇಳಪಟ್ಟಿಗಾಗಿ ಶುಭಹಾರೈಕೆ. (ಅಪ್​ಡೇಟ್​: ಮೇಜರ್ ಆ್ಯಕ್ಷನ್ ಬ್ಲಾಕ್ ಅನ್ನು ಥೈಲ್ಯಾಂಡ್‌ನಲ್ಲಿ ಚಿತ್ರೀಕರಿಸಲಾಗಿದೆ. ನಿನ್ನೆ ರಾತ್ರಿಯೂ ಚಿತ್ರೀಕರಣ ಮಾಡಲಾಗಿದೆ. ಆದ್ದರಿಂದ ವೆಂಕಟ್​ ಪ್ರಭು ಅವರು ಹುಟ್ಟುಹಬ್ಬದಂದು ರಜೆ ಪಡೆಯುತ್ತಾರೆ)" ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ಕಮಲ್ ಹಾಸನ್ ಜನ್ಮದಿನ: ಇಂಡಿಯನ್ 2 ಪೋಸ್ಟರ್ ರಿಲೀಸ್

ಈ ಮೂಲಕ ಸದ್ಯ ದಳಪತಿ 68 ಶೂಟಿಂಗ್​ ಚಾಲ್ತಿಯಲ್ಲಿದೆ ಎಂಬ ಮಾಹಿತಿ ದೊರಕಿದೆ. ಪ್ರಸ್ತುತ ಚಿತ್ರತಂಡ ಥೈಲ್ಯಾಂಡ್​ನಲ್ಲಿ ಚಿತ್ರೀಕರಣ ನಡೆಸುತ್ತಿದೆ. ಇದು ಸಿನಿಮಾದ ಬೆಳವಣಿಗೆಯನ್ನು ಗುರುತಿಸುತ್ತಿದೆ. ದಳಪತಿ ವಿಜಯ್​ ಅವರ 'ಮಾಸ್ಟರ್'​ ಬಿಡುಗಡೆಗೂ ಮುನ್ನವೇ ಅವರ 68ನೇ ಸಿನಿಮಾ ಅನೌನ್ಸ್​ ಆಗಿತ್ತು. ನಿರ್ದೇಶಕ ವೆಂಕಟ್​ ಪ್ರಭು ಜೊತೆಗಿನ ಈ ಚಿತ್ರದ ಅಧಿಕೃತ ಪ್ರಕಟಣೆ ಈ ಹಿಂದೆಯೇ ಹೊರಬಿದ್ದಿತ್ತು. ಇದೀಗ ಚಿತ್ರತಂಡ ಶೂಟಿಂಗ್​ನಲ್ಲಿ ಬ್ಯುಸಿಯಾಗಿದೆ. ಈ ಸಿನಮಾ ಮೇಲೆ ಅಪಾರ ನಿರೀಕ್ಷೆಯಿದೆ. ​

ಇದಕ್ಕೂ ಮುನ್ನ, ಚಿತ್ರ ಸೆಟ್ಟೇರಿದ ದಿನದಂದು ಹೊಸ ವಿಡಿಯೋವನ್ನು ಚಿತ್ರತಂಡ ಹಂಚಿಕೊಂಡಿತ್ತು. ಮುಹೂರ್ತ ಕಾರ್ಯಕ್ರಮದ ಸೆಟ್​ನಿಂದ ಶೇರ್​ ಮಾಡಲಾದ ವಿಡಿಯೋದಲ್ಲಿ ಚಿತ್ರದ ಪಾತ್ರವರ್ಗಗಳ ಮಾಹಿತಿಯನ್ನು ನೀಡಲಾಗಿತ್ತು. ಸಿನಿಮಾದಲ್ಲಿ ದಳಪತಿ ವಿಜಯ್​ ಜೊತೆಗೆ ಪ್ರಶಾಂತ್​, ಪ್ರಭುದೇವ, ಮೈಕ್​ ಮೋಹನ್​, ಸ್ನೇಹಾ, ಲೈಲಾ, ಮೀನಾಕ್ಷಿ ಚೌಧರಿ, ಜಯರಾಮ್​, ಅಜ್ಮಲ್​ ಅಮೀರ್​,ಯೋಗಿ ಬಾಬು, ವಿಟಿವಿ ಗಣೇಶ್​, ವೈಭವ್​, ಪ್ರೇಮ್ಗಿ ಅಮರೇನ್​, ಅರವಿಂದ್​ ಆಕಾಶ್​ ಮತ್ತು ಅಜಯ್​ ರಾಜ್​ ಮುಂತಾದವರು ಇದ್ದಾರೆ.

ದಳಪತಿ 68ಗೆ ಯುವನ್​ ಶಂಕರ್​ ರಾಜಾ ಅವರು ಸಂಗೀತ ಸಂಯೋಜಿಸಲಿದ್ದಾರೆ. ಇದು ಸಿನಿಮಾದ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿದೆ. ಮುಂದಿನ ವರ್ಷ ಚಿತ್ರ ತೆರೆ ಕಾಣುವ ನಿರೀಕ್ಷೆಯಿದೆ. ಇದಲ್ಲದೇ, ವಿಜಯ್​ ಅವರು ಹೆಸರಾಂತ ನಿರ್ದೇಶಕ ಎಸ್​.ಶಂಕರ್​ ಅವರ ಜೊತೆಗೆ ಸಿನಿಮಾ ಮಾಡಲಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ.

ಇದನ್ನೂ ಓದಿ: 500 ಕೋಟಿಯತ್ತ ದಳಪತಿ ವಿಜಯ್ ನಟನೆಯ 'ಲಿಯೋ'

ETV Bharat Logo

Copyright © 2025 Ushodaya Enterprises Pvt. Ltd., All Rights Reserved.