ಹೈದರಾಬಾದ್: ಕಾಲಿವುಡ್ನ ಬಹುನಿರೀಕ್ಷಿತ ಚಿತ್ರ 'ಬೀಸ್ಟ್' ನಿನ್ನೆ ದೇಶಾದ್ಯಂತ ರಿಲೀಸ್ ಆಗಿದೆ. ಆದ್ರೆ ಸಿನಿ ಪ್ರೇಕ್ಷಕರ ಹೃದಯ ಗೆಲ್ಲುವಲ್ಲಿ ಚಿತ್ರ ಸಂಪೂರ್ಣವಾಗಿ ವಿಫಲವಾಗಿದೆ. ಬಾಕ್ಸ್ ಆಫೀಸ್ನಲ್ಲೂ ಸಿನಿಮಾ ಬಹುತೇಕ ನೆಲಕಚ್ಚಿದೆ ಎನ್ನಲಾಗ್ತಿದೆ.
ಬಾಕ್ಸ್ ಆಫೀಸ್ನಲ್ಲಿನ ಅನೇಕ ದಾಖಲೆ ಮುರಿಯಬಹುದೆಂಬ ಊಹೆ ಇದೀಗ ಸಂಪೂರ್ಣವಾಗಿ ಸುಳ್ಳಾಗಿದ್ದು, ನೆಲ್ಸನ್ ದಿಲೀಪ್ ಕುಮಾರ್ ನಿರ್ದೇಶನ ಮಾಡಿರುವ ವಿಜಯ್ ದಳಪತಿ ನಟನೆಯ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ಸಿಕ್ಕಿಲ್ಲ. ಚಿತ್ರದ ಮೊದಲಾರ್ಧದಲ್ಲಿ ಕೇವಲ ಒಂದು ಹಾಡು ಸಂಯೋಜನೆ ಮಾಡಲಾಗಿದ್ದು, ನಟಿ ಪೂಜಾ ಹೆಗ್ಡೆ ಅವರನ್ನು ಕೇವಲ ಗೆಸ್ಟ್ ರೂಲ್ನಲ್ಲಿ ಬಳಕೆ ಮಾಡಿಕೊಳ್ಳಲಾಗಿದೆ. ಇದರ ಜೊತೆಗೆ ಅನೇಕ ಹಂತಗಳಲ್ಲಿ ಸಿನಿಮಾ ಪ್ರೇಕ್ಷಕರಲ್ಲಿ ನಿರಾಸೆ ಮೂಡಿಸಿದೆ.
ಈ ಸಿನಿಮಾ ಭಯೋತ್ಪಾದನೆಗೆ ಸಂಬಂಧಿಸಿರುವ ಕಥೆ ಹೊಂದಿದ್ದು, ಒಂದು ನಿರ್ದಿಷ್ಟ ಸಮುದಾಯದ ಕುರಿತು ಸುತ್ತುತ್ತದೆ. ಇದೇ ಕಾರಣಕ್ಕಾಗಿ ಅನೇಕ ದೇಶಗಳಲ್ಲಿ ಇದರ ಮೇಲೆ ನಿಷೇಧ ಹೇರಲಾಗಿದೆ. ಇಡೀ ಚಿತ್ರದಲ್ಲಿ ನಟ ವಿಜಯ್ ಅವರ ಅಭಿನಯವೇ ಹೆಚ್ಚು ಎದ್ದು ಕಾಣುತ್ತದೆ. ದೇಶಾದ್ಯಂತ 850 ಚಿತ್ರಮಂದಿರಗಳಲ್ಲಿ ತೆರೆ ಕಂಡಿರುವ ಈ ಚಿತ್ರ ಮೊದಲ ದಿನ 38 ಕೋಟಿ ರೂ. ಗಳಿಕೆ ಮಾಡಿದೆ.
ಇದನ್ನೂ ಓದಿ: ಥ್ರಿಲ್ಲಿಂಗ್ ಆ್ಯಕ್ಷನ್ ಜೊತೆಗೆ ತಾಯಿಕಂಡ ಆಸೆಯಂತೆ ಬದುಕಿದ 'ಕೆಜಿಎಫ್ ಸುಲ್ತಾನ'!
ಇಂದು ಪ್ರಪಂಚದಾದ್ಯಂತ ತೆರೆ ಕಂಡಿರುವ ಕೆಜಿಎಫ್ ಚಾಪ್ಟರ್-2 ಸಿನಿಮಾ ಅಬ್ಬರ ಜೋರಾಗಿದ್ದು, ರಾಕಿ ಬಾಯ್ ಎದುರು ಬೀಸ್ಟ್ ಕೂಡ ಬಹುತೇಕ ನೆಲಕಚ್ಚಿದೆ.