ETV Bharat / entertainment

ವಿಜಯ್​ 10 ನಿಮಿಷದ ವಿಂಟೇಜ್​ ಲುಕ್​ಗಾಗಿ 6 ಕೋಟಿ ಖರ್ಚು; ಕುತೂಹಲ ಹೆಚ್ಚಿಸಿದ 'ದಳಪತಿ ​68' - ಈಟಿವಿ ಭಾರತ ಕನ್ನಡ

Thalapathy 68: ದಳಪತಿ ವಿಜಯ್​ ನಟನೆಯ 68ನೇ ಸಿನಿಮಾದಲ್ಲಿ ಚಿತ್ರತಂಡ ಡಿ-ಏಜಿಂಗ್​ ತಂತ್ರಜ್ಞಾನವನ್ನು ಬಳಸುತ್ತಿದೆ. ಇದರಿಂದಾಗಿ 'ಲಿಯೋ' ಸ್ಟಾರ್​ ವಿಂಟೇಜ್​ ಲುಕ್​ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.

Thalapathy Vijay 68 movie update
ವಿಜಯ್​ 10 ನಿಮಿಷದ ವಿಂಟೇಜ್​ ಲುಕ್​ಗಾಗಿ 6 ಕೋಟಿ ಖರ್ಚು; ಕುತೂಹಲ ಹೆಚ್ಚಿಸಿದ 'ದಳಪತಿ ​68'
author img

By ETV Bharat Karnataka Team

Published : Dec 10, 2023, 11:07 PM IST

ತಮಿಳು ಚಿತ್ರರಂಗದ ಸೂಪರ್​ಸ್ಟಾರ್​ ದಳಪತಿ ವಿಜಯ್​ ಸಾಲು ಸಾಲು ಸಿನಿಮಾಗಳ ಮೂಲಕ ಪ್ರೇಕ್ಷಕರನ್ನು ರಂಜಿಸುತ್ತಿದ್ದಾರೆ. ಇತ್ತೀಚೆಗಷ್ಟೇ 'ಲಿಯೋ' ಚಿತ್ರದ ಮೂಲಕ ವಿಶ್ವದಾದ್ಯಂತ ಧೂಳೆಬ್ಬಿಸಿದ್ದ ಹೀರೋ ಸದ್ಯ 'ದಳಪತಿ 68' ವರ್ಕಿಂಗ್​ ಟೈಟಲ್​ನಲ್ಲಿ ತಯಾರಾಗುತ್ತಿರುವ ಸಿನಿಮಾ ವಿಚಾರವಾಗಿ ಬ್ಯುಸಿಯಾಗಿದ್ದಾರೆ. ಈ ಚಿತ್ರವನ್ನು ವೆಂಕಟ್​ ಪ್ರಭು ನಿರ್ದೇಶಿಸುತ್ತಿದ್ದಾರೆ. ಹೈ ಬಜೆಟ್​ನಲ್ಲಿ ಸಿದ್ಧಗೊಳ್ಳುತ್ತಿರುವ ಈ ಬಹುನಿರೀಕ್ಷಿತ ಸಿನಿಮಾದಲ್ಲಿ ಅತ್ಯಾಧುನಿಕ ತಂತ್ರಜ್ಞಾನವನ್ನು ಬಳಸಲಾಗಿದೆಯಂತೆ. ಈಗಾಗಲೇ ಚಿತ್ರದ ಶೂಟಿಂಗ್​ ಕೂಡ ಪ್ರಾರಂಭವಾಗಿದೆ. ಅದರ ಭಾಗವಾಗಿ ವಿಜಯ್​ 3D VFX ಸ್ಕ್ಯಾನ್​ ಅನ್ನು ಯುಎಸ್​ನಲ್ಲಿ ತೆಗೆದುಕೊಂಡಿದ್ದಾರೆ.

ಇತ್ತೀಚೆಗಿನ ಮಾಹಿತಿ ಪ್ರಕಾರ, ವಿಜಯ್​ ಅವರು ಕಥೆಯ ಭಾಗವಾಗಿ ಸುಮಾರು 10 ನಿಮಿಷಗಳ ಕಾಲ ವಿಂಟೇಜ್​ ಲುಕ್​ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ನಟನ ವಯಸ್ಸನ್ನು ಕಡಿಮೆ ಮಾಡಲು ಚಿತ್ರತಂಡ ಡಿ-ಏಜಿಂಗ್​ ತಂತ್ರಜ್ಞಾನವನ್ನು ಬಳಸುತ್ತಿದೆ. ವಿದೇಶಿ ತಜ್ಞರ ನೆರವಿನಿಂದ ಸುಮಾರು 6 ಕೋಟಿ ರೂಪಾಯಿ ಖರ್ಚು ಮಾಡಿ ವಿಜಯ್​ ತಮ್ಮ ವಯಸ್ಸನ್ನು ಕಡಿಮೆ ಮಾಡಿಕೊಳ್ಳಲಿದ್ದಾರಂತೆ. ದಳಪತಿ ವಿಜಯ್​ ಇದುವರೆಗೆ ಮಾಡಿದ ಸಾಮಾನ್ಯ ಕಮರ್ಷಿಯಲ್​ ಸಿನಿಮಾಗಳಿಗಿಂತ ಭಿನ್ನವಾಗಿ ಈ ಚಿತ್ರವು ಮೂಡಿಬರಲಿದೆ. ವಿಜಯ್​ ಯಂಗ್​ ಲುಕ್​ನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ತಿಳಿದು ಅವರ ಅಭಿಮಾನಿಗಳು ಖುಷಿಯಾಗಿದ್ದಾರೆ.

ಈ ಹಿಂದೆ ಕೆಲವು ಸಿನಿಮಾಗಳಲ್ಲಿ ಡಿ-ಏಜಿಂಗ್​ ತಂತ್ರಜ್ಞಾನವನ್ನು ಬಳಸಲಾಗಿದೆ. ಬಾಲಿವುಡ್​ನಲ್ಲಿ ಶಾರುಖ್​ ಖಾನ್​ ಅವರ ಸಿನಿಮಾದಲ್ಲಿ ಯೂಸ್​ ಮಾಡಲಾಗಿತ್ತು. 'ಫ್ಯಾನ್​' ಚಿತ್ರದಲ್ಲಿ ಕಿಂಗ್​ ಖಾನ್​ ವಯಸ್ಸನ್ನು ಕಡಿಮೆ ಮಾಡಿ ತೋರಿಸಲಾಗಿತ್ತು. ಈ ಸಿನಿಮಾದಲ್ಲಿ ಶಾರುಖ್​ ತರಾನೇ ಇರುವ ಗೌರವ್ ಪಾತ್ರಕ್ಕೆ​ ಡಿ-ಏಜಿಂಗ್​ ತಂತ್ರಜ್ಞಾನವನ್ನು ಬಳಸಲಾಗಿದೆ. ಹಾಲಿವುಡ್​ನಲ್ಲಿ ಗಾರ್ಡಿಯನ್ಸ್​ ಆಫ್​ ದಿ ಗ್ಯಾಲಕ್ಸಿ, ಸಿವಿಲ್​ ವಾರ್​, ಡೆಡ್​ ಮೆನ್​ ಟೆಲ್​ ನೋ ಟೇಲ್ಸ್​, ಆಂಟ್​ ಮ್ಯಾನ್​ ಸೇರಿದಂತೆ ಇತರೆ ಸುಮಾರು ಚಿತ್ರಗಳಲ್ಲಿ ಬಳಸಲಾಗಿದೆ. ಇದೀಗ ದಳಪತಿ ವಿಜಯ್​ ಅವರ ಸಿನಿಮಾದಲ್ಲೂ ಡಿ-ಏಜಿಂಗ್​ ತಂತ್ರಜ್ಞಾನದ ಪ್ರಯೋಗ ನಡೆಯಲಿದೆ.

'ದಳಪತಿ 68' ಚಿತ್ರತಂಡ: ದಳಪತಿ ವಿಜಯ್​ ಅವರ ವೃತ್ತಿ ಜೀವನದ 68ನೇ ಸಿನಿಮಾದ ಮೇಲೆ ಮುಗಿಲೆತ್ತರದ ನಿರೀಕ್ಷೆಯಿದೆ. ವೆಂಕಟ್​ ಪ್ರಭು ನಿರ್ದೇಶನದ ಈ ಚಿತ್ರಕ್ಕೆ ಸದ್ಯ 'ದಳಪತಿ 68' ಎಂದು ವರ್ಕಿಂಗ್​ ಟೈಟಲ್ ಇಡಲಾಗಿದೆ. ಈ ಸಿನಿಮಾಗೆ ಅರ್ಚನಾ ಕಲ್ಪಾತಿ ಬಂಡವಾಳ ಹೂಡಿದ್ದಾರೆ. ಈಗಾಗಲೇ ಚಿತ್ರದ ಶೂಟಿಂಗ್​ ಹೈದರಾಬಾದ್​ನಲ್ಲಿ ನಡೆಯುತ್ತಿದೆ. ಇನ್ನೊಂದು ಶೆಡ್ಯೂಲ್​ಗಾಗಿ ಚಿತ್ರತಂಡ ಶೀಘ್ರದಲ್ಲೇ ಇಸ್ತಾಂಬುಲ್​ಗೆ ತೆರಳಲಿದೆ.

ಸಿನಿಮಾದಲ್ಲಿ ದಳಪತಿ ವಿಜಯ್​ ಜೊತೆಗೆ ಪ್ರಶಾಂತ್​, ಪ್ರಭುದೇವ, ಮೈಕ್​ ಮೋಹನ್​, ಸ್ನೇಹಾ, ಲೈಲಾ, ಮೀನಾಕ್ಷಿ ಚೌಧರಿ, ಜಯರಾಮ್​, ಅಜ್ಮಲ್​ ಅಮೀರ್​,ಯೋಗಿ ಬಾಬು, ವಿಟಿವಿ ಗಣೇಶ್​, ವೈಭವ್​, ಪ್ರೇಮ್ಗಿ ಅಮರೇನ್​, ಅರವಿಂದ್​ ಆಕಾಶ್​ ಮತ್ತು ಅಜಯ್​ ರಾಜ್​ ಮುಂತಾದವರು ಇದ್ದಾರೆ. ಚಿತ್ರಕ್ಕೆ ಯುವನ್​ ಶಂಕರ್​ ರಾಜಾ ಸಂಗೀತ ಸಂಯೋಜನೆ ಇರಲಿದೆ. ​ಇದು ಸಿನಿಮಾದ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿದೆ. ಮುಂದಿನ ವರ್ಷ ಚಿತ್ರ ತೆರೆ ಕಾಣುವ ನಿರೀಕ್ಷೆಯಿದೆ.

ಇದನ್ನೂ ಓದಿ: ನಿರ್ದೇಶಕ ವೆಂಕಟ್​ ಪ್ರಭು ಹುಟ್ಟುಹಬ್ಬಕ್ಕೆ 'ದಳಪತಿ 68' ಚಿತ್ರತಂಡದಿಂದ ಹೊಸ ಅಪ್​ಡೇಟ್​

ETV Bharat Logo

Copyright © 2025 Ushodaya Enterprises Pvt. Ltd., All Rights Reserved.