ETV Bharat / entertainment

ಸೆಟ್ಟೇರಿತು ರಜನಿಕಾಂತ್​ ಮುಖ್ಯಭೂಮಿಕೆಯ 'ತಲೈವರ್​​ 170'...ಅಭಿಮಾನಿಗಳಲ್ಲಿ ಕುತೂಹಲ - ರಜನಿಕಾಂತ್ ತಲೈವರ್​​ 170

Thalaivar 170: ಜನಪ್ರಿಯ ನಟ ರಜನಿಕಾಂತ್​ ಮುಖ್ಯಭೂಮಿಕೆಯ 'ತಲೈವರ್​​ 170' ಸಿನಿಮಾ ಶೂಟಿಂಗ್​​ ಇಂದಿನಿಂದ ಆರಂಭಗೊಂಡಿದೆ.

Thalaivar 170
ತಲೈವರ್​​ 170
author img

By ETV Bharat Karnataka Team

Published : Oct 4, 2023, 1:11 PM IST

Updated : Oct 4, 2023, 1:21 PM IST

ಜೈಲರ್​ ಯಶಸ್ಸಿನಲೆಯಲ್ಲಿರುವ ಭಾರತೀಯ ಚಿತ್ರರಂಗದ ಪ್ರಸಿದ್ಧ ನಟ ರಜನಿಕಾಂತ್​​ ಮುಖ್ಯಭೂಮಿಕೆಯ ಮುಂದಿನ ಬಹುನಿರೀಕ್ಷಿತ ಸಿನಿಮಾ 'ತಲೈವರ್​ 170'. ಚಿತ್ರ ನಿರ್ಮಾಪಕರು ಕಳೆದ ಮೂರ್ನಾಲ್ಕು ದಿನಗಳಲ್ಲಿ ಚಿತ್ರದ ಪಾತ್ರವರ್ಗ ಮತ್ತು ಸಿಬ್ಬಂದಿ ಹೆಸರನ್ನು ಘೋಷಿಸಿದ್ದಾರೆ. ಟಿ.ಜೆ ಜ್ಞಾನವೆಲ್ ಆ್ಯಕ್ಷನ್​ ಕಟ್​​ ಹೇಳಲಿರುವ ತಲೈವರ್​​ 170ಯ ಚಿತ್ರೀಕರಣ ಶುರುವಾಗಿದೆ. ಈ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿಂದು ಚಿತ್ರತಂಡ ಘೋಷಿಸಿದೆ. ಕೇರಳದ ತಿರುವನಂತಪುರಂನಲ್ಲಿಂದು ಬಹುನಿರೀಕ್ಷಿತ ಸಿನಿಮಾ ಸೆಟ್ಟೇರಿದೆ.

ಲೈಕಾ ಪ್ರೊಡಕ್ಷನ್ಸ್ ಪೋಸ್ಟ್: ಬಹುನಿರೀಕ್ಷಿತ ಚಿತ್ರಕ್ಕೆ ಬಂಡವಾಳ ಹೂಡುತ್ತಿರುವ ದಕ್ಷಿಣ ಚಿತ್ರರಂಗದ ಖ್ಯಾತ ಚಲನಚಿತ್ರ ನಿರ್ಮಾಣ ಸಂಸ್ಥೆ ಲೈಕಾ ಪ್ರೊಡಕ್ಷನ್ಸ್ ಸಾಮಾಜಿಕ ಜಾಲತಾಣಗಳಲ್ಲಿ ಹಿರಿಯ ನಟ ರಜನಿಕಾಂತ್​ ಅವರ ನೋಟವನ್ನು ಹಂಚಿಕೊಂಡಿದೆ. ಪೋಸ್ಟ್ ಶೇರ್ ಮಾಡಿರುವ ಲೈಕಾ ಪ್ರೊಡಕ್ಷನ್ಸ್​​, "ನಮ್ಮ ಸೂಪರ್‌ ಸ್ಟಾರ್ ರಜನಿಕಾಂತ್ ಮತ್ತು ತಲೈವರ್​ 170 ಚಿತ್ರತಂಡದೊಂದಿಗೆ​ - ಲೈಟ್ಸ್, ಕ್ಯಾಮರಾ, ಕ್ಲ್ಯಾಪ್​ ಆ್ಯಂಡ್​ ಆ್ಯಕ್ಷನ್​​. ಚಿತ್ರೀಕರಣಕ್ಕೆ ಸಂಪೂರ್ಣ ತಂಡ ಸಜ್ಜಾಗಿದೆ. ತಲೈವರ್​ 170 ರಸದೌತಣ ಸವಿಯಲು ನೀವೆಲ್ಲರೂ ಸಜ್ಜಾಗಿದ್ದೀರಿ ಎಂದು ಭಾವಿಸಿದ್ದೇವೆ. ಆ್ಯಕ್ಷನ್​ಗೆ ಇದು ಸಮಯ. ಚಿತ್ರೀಕರಣ ಮುಂದುವರೆದಂತೆ ನಾವು ಹೆಚ್ಚಿನ ಅಪ್​ಡೇಟ್ಸ್​ಗಳೊಂದಿಗೆ ನಿಮ್ಮ ಬಳಿ ಬರಲಿದ್ದೇವೆ'' ಎಂದು ಬರೆದುಕೊಂಡಿದೆ.

ರಜನಿಕಾಂತ್ ಹೇಳಿಕೆ... ಮಂಗಳವಾರದಂದು ನಟ ರಜನಿಕಾಂತ್ ಅವರು ತಮ್ಮ 170ನೇ ಸಿನಿಮಾದ ಶೂಟಿಂಗ್​​ ಅನ್ನು ಪ್ರಾರಂಭಿಸುವ ಬಗ್ಗೆ ಉತ್ಸಾಹ ವ್ಯಕ್ತಪಡಿಸಿದರು. ಲೈಕಾ ಪ್ರೊಡಕ್ಷನ್ಸ್ ಮತ್ತು ಜ್ಞಾನವೆಲ್ ಕಾಂಬಿನೇಶನ್​ನ ಈ ಪ್ರಾಜೆಕ್ಟ್​​ ಎಂಟರ್​​ಟೈನ್​ಮೆಂಟ್​ ಮತ್ತು ಸಾಮಾಜಿಕ ಸಂದೇಶದ ಮಿಶ್ರಣವಾಗಿ ಮೂಡಿ ಬರಲಿದೆ ಎಂದು ನಿರೀಕ್ಷಿಸಲಾಗಿದೆ. ಚಿತ್ರದ ಸುತ್ತ ಸಾಕಷ್ಟು ನಿರೀಕ್ಷೆಗಳಿದ್ದು , ಶೀರ್ಷಿಕೆ ಇನ್ನಷ್ಟೇ ಫೈನಲ್​ ಆಗಬೇಕಿದೆ.

ಇದನ್ನೂ ಓದಿ: Thalaivar 170: ರಜನಿಕಾಂತ್​ ಜೊತೆ ರಾಣಾ ದಗ್ಗುಬಾಟಿ ಸ್ಕ್ರೀನ್​ ಶೇರ್ - 'ತಲೈವರ್ 170' ಮೇಲೆ ಹೆಚ್ಚಿದ ಕುತೂಹಲ

72ರ ಹರೆಯದ ರಜನಿಕಾಂತ್​​ ತಿರುವನಂತಪುರಕ್ಕೆ ಪ್ರಯಾಣ ಬೆಳೆಸುವ ಮುನ್ನ ಚೆನ್ನೈ ಏರ್​ಪೋರ್ಟ್​​ನಲ್ಲಿ ಮಾಧ್ಯಮದ ಎದುರು ತಮ್ಮ ಉತ್ಸಾಹ ಹಾಗೂ ಸಂತಸ ಹಂಚಿಕೊಂಡರು. "ನಾನು ನನ್ನ 170ನೇ ಸಿನಿಮಾವನ್ನು ನಿರ್ದೇಶಕ ಜ್ಞಾನವೆಲ್ ಹಾಗೂ ಲೈಕಾ ಪ್ರೊಡಕ್ಷನ್ಸ್​​​ ಜೊತೆ ಮಾಡುತ್ತಿದ್ದೇನೆ. ಇದು ಸಾಮಾಜಿಕ ಸಂದೇಶದೊಂದಿಗೆ, ಸಾಕಷ್ಟು ಮನರಂಜನೆ ನೀಡಲಿದೆ'' ಎಂದು ನಟ ತಮ್ಮ ವಿಶ್ವಾಸ ವ್ಯಕ್ತಪಡಿಸಿದರು. ನಟನ ಈ ಹೇಳಿಕೆ, ಉತ್ಸಾಹವು ಅಭಿಮಾನಿಗಳ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿದೆ. ಚಿತ್ರದ ಬಗ್ಗೆ ಹೆಚ್ಚಿನ ಅಪ್​ಡೇಟ್ಸ್ ಗಾಗಿ ಅಭಿಮಾನಿಗಳು ಕುತೂಹಲದಿಂದ ಕಾಯುತ್ತಿದ್ದಾರೆ.

ಇದನ್ನೂ ಓದಿ: 'Thalaivar 170' ಶೂಟಿಂಗ್​ಗಾಗಿ ಕೊಚ್ಚಿಗೆ ತೆರಳಿದ ರಜನಿ​; ಚಿತ್ರತಂಡಕ್ಕೆ ಅಮಿತಾಭ್​ ಬಚ್ಚನ್​, ಫಹಾದ್​ ಫಾಸಿಲ್​ ಎಂಟ್ರಿ

ಚಿತ್ರತಂಡ ಹೀಗಿದೆ.... ಈ ತಮಿಳು ಚಿತ್ರಕ್ಕೆ ಅನಿರುಧ್​ ರವಿಚಂದರ್ ಸಂಗೀತ ಸಂಯೋಜಿಸಲಿದ್ದಾರೆ. ಸುಬಾಸ್ಕರನ್ ಚಿತ್ರದ ನಿರ್ಮಾಣ ನೋಡಿಕೊಳ್ಳಲಿದ್ದಾರೆ. ಬಾಲಿವುಡ್​ ಸೂಪರ್​ ಸ್ಟಾರ್ ಅಮಿತಾಭ್​ ಬಚ್ಚನ್, ಫಹಾದ್ ಫಾಸಿಲ್, ರಾಣಾ ದಗ್ಗುಬಾಟಿ ಅವರಂತಹ ಸ್ಟಾರ್​ ನಟರು ರಜನಿಕಾಂತ್​ ಜೊತೆ ಕಾಣಿಸಿಕೊಳ್ಳಲಿದ್ದಾರೆ. ರಿತಿಕಾ ಸಿಂಗ್, ಮಂಜು ವಾರಿಯರ್, ದುಶಾರಾ ವಿಜಯನ್ ಕೂಡ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

Last Updated : Oct 4, 2023, 1:21 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.