ETV Bharat / entertainment

ಟೆಲಿವಿಷನ್​ ಪ್ರೀಮಿಯರ್​ ಲೀಗ್ (TPL) ಸೀಸನ್ 3ರ ಟೀಂ ಲೋಗೋ ಬಿಡುಗಡೆ: ​ರಾಗಿಣಿ ದ್ವಿವೇದಿ ಬ್ರ್ಯಾಂಡ್​ ಅಂಬಾಸಿಡರ್​ - etv bharat kannada

ಜನವರಿಯಲ್ಲಿ ಟೆಲಿವಿಷನ್​ ಪ್ರೀಮಿಯರ್​ ಲೀಗ್​ 3 ನಡೆಯಲಿದ್ದು, ಅದಕ್ಕೂ ಮುನ್ನ ಶುಕ್ರವಾರ ಟೀಂ ಲೋಗೋ ಬಿಡುಗಡೆ ಮಾಡಲಾಯಿತು.

Television premier league cricket match
TPL ಸೀಸನ್ 3ರ ಟೀಂ ಲೋಗೋ ಬಿಡುಗಡೆ:​ ಬ್ರ್ಯಾಂಡ್​ ಅಂಬಾಸಿಡರ್​ ಆಗಿ ರಾಗಿಣಿ ದ್ವಿವೇದಿ​
author img

By ETV Bharat Karnataka Team

Published : Oct 20, 2023, 7:48 PM IST

ಕ್ರಿಕೆಟ್​ ಹಾಗೂ ಚಿತ್ರರಂಗಕ್ಕೂ ಒಂದೊಳ್ಳೆ ನಂಟಿದೆ. ಕಲಾವಿದರು ಕೂಡ ಮೈದಾನದಲ್ಲಿ ಬ್ಯಾಟ್​, ಬಾಲ್​ ಹಿಡಿದು ಆಡಲು ಇಷ್ಟಪಡುತ್ತಾರೆ. ಜನವರಿಯಲ್ಲಿ ಟೆಲಿವಿಷನ್​ ಪ್ರೀಮಿಯರ್​ ಲೀಗ್​ 3 ನಡೆಯಲಿದೆ. ಕಲಾವಿದರು ಮತ್ತು ತಂತ್ರಜ್ಞರ ಬದುಕಿಗೆ ಆಸರೆಯಾಗುವ ಉದ್ದೇಶದಿಂದ ಎನ್ 1 ಕ್ರಿಕೆಟ್ ಅಕಾಡೆಮಿಯ ಬಿ.ಆರ್.ಸುನೀಲ್ ಕುಮಾರ್ ನೇತೃತ್ವದಲ್ಲಿ ಟೆಲಿವಿಷನ್ ಪ್ರೀಮಿಯರ್ ಲೀಗ್ ನಡೆಯುತ್ತಿದೆ.

Television premier league cricket match
TPL ಸೀಸನ್ 3ರ ಟೀಂ ಲೋಗೋ ಬಿಡುಗಡೆ:​ ಬ್ರ್ಯಾಂಡ್​ ಅಂಬಾಸಿಡರ್​ ಆಗಿ ರಾಗಿಣಿ ದ್ವಿವೇದಿ​

ಈಗಾಗಲೇ ಯಶಸ್ವಿಯಾಗಿ ಎರಡು ಸೀಸನ್ ಮುಗಿದಿದ್ದು, ಮೂರನೇ ಸೀಸನ್ ಜನವರಿ ತಿಂಗಳಲ್ಲಿ ಆರಂಭವಾಗಲಿದೆ. ಅದಕ್ಕೂ ಮುನ್ನ ಬೆಂಗಳೂರಿನ ಎಂಎಂ ಲೆಗಸಿಯಲ್ಲಿ ಟಿಪಿಎಲ್ ಸೀಸನ್ 3 ಟೀಂ ಲೋಗೋ ಬಿಡುಗಡೆ ಮಾಡಲಾಯಿತು. ಈ ಕಾರ್ಯಕ್ರಮದಲ್ಲಿ ಜಯಂತ್ ಕುಮಾರ್ ವೀರಶೈವ ವೇದಿಕೆ ರಾಷ್ಟ್ರೀಯ ಅಧ್ಯಕ್ಷರು ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.

ಬಳಿಕ ಮಾತನಾಡಿದ ಜಯಂತ್​, "TPL ಸೀಸನ್ 3ರ ಕಾರ್ಯಕ್ರಮ ಹುಬ್ಬಳ್ಳಿಯಲ್ಲಿ ಜನವರಿ 24 ರಿಂದ 28 ರವರೆಗೆ 5 ದಿನ ಜರುಗಲಿದೆ. ಸುನಿಲ್​ ಅವರೇ, ಈ TPL ಸೀಸನ್​ಗೆ ನಮ್ಮ ಸಂಪೂರ್ಣ ಬೆಂಬಲವಿದೆ ಹಾಗೂ ಯಾವುದೇ ಸಹಾಯ ಮಾಡಲು ನಾನು ಸಿದ್ಧ. ಮುಂದಿನ ಕಾರ್ಯಕ್ರಮದಲ್ಲಿ ಕೇಂದ್ರ ಹಾಗೂ ರಾಜ್ಯ ಸಚಿವರು ಭಾಗವಹಿಸಲಿದ್ದಾರೆ" ಎಂದು ತಿಳಿಸಿದರು.

ಟಿಪಿಎಲ್ ಆಯೋಜಕ ಸುನಿಲ್ ಕುಮಾರ್ ಮಾತನಾಡಿ, "ಒಟ್ಟಾರೆ 10 ತಂಡಗಳು ಭಾಗಿಯಾಗಲಿದ್ದು, 150 ಪ್ಲೇಯರ್ಸ್​ ಇರಲಿದ್ದಾರೆ. ಒಂದು ಟೀಂನಲ್ಲಿ 15 ಜನ ಇರ್ತಾರೆ. ಒಂದು ಗ್ರೂಪ್​ಗೆ 4 ಲೀಗ್ ಮ್ಯಾಚ್ ಇರುತ್ತದೆ. ಲೀಗ್ ಮ್ಯಾಚ್ ಬಳಿಕ ಸೆಮಿಫೈನಲ್, ಫೈನಲ್ ಇರುತ್ತದೆ. ಒಟ್ಟು 23 ಪಂದ್ಯಾವಳಿ ಇರಲಿದೆ. ಹುಬ್ಬಳ್ಳಿಯಲ್ಲಿ ಈ ಬಾರಿ ಕ್ರಿಕೆಟ್ ಪಂದ್ಯಾವಳಿ ನಡೆಯಲಿದ್ದು, ಜನವರಿ 24 ರಿಂದ 28ರವರೆಗೆ ಪಂದ್ಯ ನಡೆಯಲಿದೆ" ಎಂದರು.

Television premier league cricket match
TPL ಸೀಸನ್ 3

10 ತಂಡಗಳು: ಅಶ್ವಸೂರ್ಯ ರೈಡರ್ಸ್, ಗೋಲ್ಡನ್ ಈಗಲ್, KKR ಮೀಡಿಯಾ ಹೌಸ್, ಖುಷಿ 11, AVR ಟಸ್ಕರ್ಸ್​, ರಾಸು ವಾರಿಯರ್ಸ್​, ಭಜರಂಗಿ ಬಾಯ್ಸ್, ದಿ ಬುಲ್​ squad, Insane ಕ್ರಿಕೆಟ್​ ಟೀಮ್​, GLR ವಾರಿಯರ್ಸ್ ಎಂಬ 10 ತಂಡಗಳು ಭಾಗಿಯಾಗಲಿದ್ದು, ಒಟ್ಟು 102 ಸೆಲೆಬ್ರಿಟಿಗಳು ಈ ಕಾರ್ಯಕ್ರಮಕ್ಕೆ ಸಾಥ್ ಕೊಡಲಿದ್ದಾರೆ. ಈ 10 ತಂಡಗಳಿಗೂ ಅಂಬಾಸಿಡರ್ ಹಾಗೂ ಓನರ್​ಗಳಿರಲಿದ್ದಾರೆ. ಎ.ವಿ.ಆರ್ ಗ್ರೂಪ್ಸ್​ನ ಹೆಚ್.ವೆಂಕಟೇಶ್ ರೆಡ್ಡಿ ಹಾಗೂ ಅರವಿಂದ್ ವೆಂಕಟೇಶ್ ರೆಡ್ಡಿ ಟೈಟಲ್ ಪ್ರಾಯೋಜಕರಾಗಿದ್ದಾರೆ.

  • ಅಶ್ವಸೂರ್ಯ ರೈಡರ್ಸ್- ಹರ್ಷ.ಸಿ.ಎಂ. ಗೌಡ ನಾಯಕ - ರಂಜಿತ್ ಕುಮಾರ್.ಎಸ್ ಓನರ್
  • GLR ವಾರಿಯರ್ಸ್ - ಲೂಸ್ ಮಾದ ಯೋಗಿ ನಾಯಕ - ರಾಜೇಶ್ ಎಲ್ ಓನರ್
  • Insane ಕ್ರಿಕೆಟ್​ ಟೀಮ್​ - ರವಿಶಂಕರ್ ಗೌಡ ನಾಯಕ - ಫೈಜಾನ್ ಖಾನ್ ಓನರ್
  • The bull squad - ಶರತ್ ಪದ್ಮಾನಾಭ್ ನಾಯಕ - ಮೋನಿಶ್ ಓನರ್
  • ಭಜರಂಗಿ ಬಾಯ್ಸ್ - ಸಾಗರ್ ಬಿಳಿಗೌಡ ನಾಯಕ - ಸ್ವಸ್ತಿಕ್ ಆರ್ಯ ಓನರ್
  • ರಾಸು ವಾರಿಯರ್ಸ್ - ದೀಕ್ಷಿತ್ ಶೆಟ್ಟಿ ನಾಯಕ - ರಘು ಭಟ್ ಹಾಗೂ ಸುಗುಣ ಓನರ್
  • AVR tuskers - ಚೇತನ್ ಸೂರ್ಯ ನಾಯಕ - ಅರವಿಂದ್ ವೆಂಕಟ್ ರೆಡ್ಡಿ ಓನರ್
  • ಖುಷಿ 11 - ಅಲಕ್ ನಂದ ಶ್ರೀನಿವಾಸ್ ನಾಯಕ - ಅನಿಲ್.ಬಿ.ಆರ್. ಓನರ್
  • KKR ಮೀಡಿಯಾ ಹೌಸ್ - ಅರುಣ್ ರಾಮ್ ಗೌಡ ನಾಯಕ - ಲಕ್ಷ್ಮೀ ಕಾಂತ್ ರೆಡ್ಡಿ ಓನರ್
  • ಗೋಲ್ಡನ್ ಈಗಲ್ - ವಿಹಾನ್ ನಾಯಕ-ಕುಶಾಲ್ ಗೌಡ ಓನರ್​

ಟಿಪಿಎಲ್​ನ ಬ್ರ್ಯಾಂಡ್ ಅಂಬಾಸಿಡರ್ ಆಗಿ ರಾಗಿಣಿ ದ್ವಿವೇದಿ ಕಾಣಿಸಿಕೊಳ್ಳಲಿದ್ದಾರೆ. ಈ ಬಾರಿಯ ಟೆಲಿವಿಷನ್ ಪ್ರೀಮಿಯರ್ ಲೀಗ್ ಸೀಸನ್ 3 ವಿಶೇಷ ಏನಪ್ಪಾ ಅಂದ್ರೆ, ಎನ್ 1 ಕ್ರಿಕೆಟ್ ಅಕಾಡೆಮಿಯಿಂದ ಮ್ಯಾನ್ ಆಫ್ ದಿ ಸೀರಿಸ್ ಪಟ್ಟ ಪಡೆದವರಿಗೆ ಕಾರು, ಆರೆಂಜ್ ಕ್ಯಾಪ್ ಹೋಲ್ಡರ್ (batsman), ಪರ್ಪಲ್ ಕ್ಯಾಪ್ ಹೋಲ್ಡರ್ (bowler) ಪಡೆದವರಿಗೆ ಬೈಕ್ ಕೊಡಲಾಗುತ್ತದೆ.

ಇದನ್ನೂ ಓದಿ: ಮುಂದಿನ ಒಲಿಂಪಿಕ್ಸ್‌ನಲ್ಲಿ ಟಿ20 ಕ್ರಿಕೆಟ್‌! 128 ವರ್ಷಗಳ ನಂತರ ಅವಕಾಶ: ಐಒಸಿ ಒಪ್ಪಿಗೆ ನೀಡಿದ 5 ಕ್ರೀಡೆಗಳು ಯಾವುವು ಗೊತ್ತೇ?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.