ಹೈದರಾಬಾದ್: ಖ್ಯಾತ ನಟ ಚಂದ್ರಮೋಹನ್ (80) ನಿಧನರಾಗಿದ್ದಾರೆ. ಹೈದರಾಬಾದ್‌ನ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಇಂದು ಕೊನೆಯುಸಿರೆಳೆದಿದ್ದಾರೆ. ಇದು ಟಾಲಿವುಡ್ ಚಿತ್ರರಂಗದಲ್ಲಿ ದುಃಖದ ಛಾಯೆ ಆವರಿಸಿದೆ. ಅವರ ನಿಧನಕ್ಕೆ ಹಲವು ಚಿತ್ರರಂಗದ ಗಣ್ಯರು ಸಂತಾಪ ಸೂಚಿಸಿದ್ದಾರೆ. ಅವರ ಅಂತ್ಯಕ್ರಿಯೆ ಸೋಮವಾರ ಹೈದರಾಬಾದ್‌ನಲ್ಲಿ ನಡೆಯಲಿದೆ.
ಮೇ 23, 1943 ರಂದು ಕೃಷ್ಣಾ ಜಿಲ್ಲೆಯ ಪಮಿಡಿಮುಕ್ಕದಲ್ಲಿ ಜನಿಸಿದ್ದ ಚಂದ್ರಮೋಹನ್ ಅವರ ಮೂಲ ಹೆಸರು ಮಲ್ಲಂಪಲ್ಲಿ ಚಂದ್ರಶೇಖರ್ ರಾವ್. ಪದವಿಯನ್ನು ಬಾಪಟ್ಲ ಕೃಷಿ ಕಾಲೇಜಿನಲ್ಲಿ ಮುಗಿಸಿದ್ದರು. ಅವರು 1966 ರಲ್ಲಿ ತೆಲುಗು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದರು. ಅವರು ಅನೇಕ ತಮಿಳು ಮತ್ತು ತೆಲುಗು ಚಲನಚಿತ್ರಗಳಲ್ಲಿ ನಟಿಸಿದ್ದಾರೆ. ವೃತ್ತಿಬದುಕಿನ ಆರಂಭದಲ್ಲಿ ಹೀರೋ ಕ್ಯಾರೆಕ್ಟರ್ ಮಾಡಿ, ನಂತರ ಹಾಸ್ಯನಟನಾಗಿ, ಕ್ಯಾರೆಕ್ಟರ್ ಆರ್ಟಿಸ್ಟ್ ಆಗಿ ತಮ್ಮ ವಿಶಿಷ್ಟ ಅಭಿನಯದಿಂದ ಎಲ್ಲರ ಗಮನ ಸೆಳೆದಿದ್ದರು.
'ಬಂಗಾರು ಪಿಚ್ಚುಕ', 'ಆತ್ಮೆಯುಲು', 'ತಲ್ಲಿದಂಡ್ರುಲು', 'ಬೊಮ್ಮಬೊರುಸು', 'ಸೀತಾಮಾಲಕ್ಷ್ಮಿ', 'ಶಂಕರಾಭರಣಂ', 'ತಾಯರಮ್ಮ ಬಂಗಾರಾಯ', 'ಇಂಟಿಂಟಿ ರಾಮಾಯಣ', 'ಕೋರಿಕಲೆ ಗುರ್ರಲೈತೆ', 'ಮಂಗಳ ತೋರಣಲು', 'ಕೊತ್ತನೀರು', ' ಸಂತೋಷಿಮಾತಾ ವ್ರತಂ', 'ಮೂಡು ಮುಳ್ಳು', 'ಚಂಟಬ್ಬಾಯ್', 'ಶ್ರೀ ಶಿರಿಡಿ ಸಾಯಿಬಾಬಾ ಮಹಾತ್ಯಂ', 'ವಿವಾಹ ಬೋಜನಂಬು', 'ತ್ರಿನೇತ್ರುಡು', 'ಯೋಗಿ ವೇಮನ', 'ಆದಿತ್ಯ 369', 'ಪೆದ್ದರಿಕಂ', 'ಗುಲಾಬಿ', 'ರಾಮುಡೊಚ್ಚಾಡು', 'ನಿನ್ನೆ ಪೆಳ್ಳಾಡತ', 'ಪ್ರೇಮಿಂಚುಕುಂದಾಂ ರಾ ', 'ಚಂದ್ರಲೇಖ', 'ಅಂದರೂ ಹೀರೋಲೆ' ಸಿನಿಮಾಗಳಲ್ಲಿ ನಟಿಸಿದ್ದಾರೆ. 1966 ರಲ್ಲಿ 'ರಂಗುಲ ರಾಟ್ನಂ' ಚಿತ್ರದ ಮೂಲಕ ಪಾದಾರ್ಪಣೆ ಮಾಡಿದ ಚಂದ್ರಮೋಹನ್ ಅವರು ತಮ್ಮ 6 ದಶಕಗಳ ಸುದೀರ್ಘ ವೃತ್ತಿಜೀವನದಲ್ಲಿ 600ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ಅನೇಕ ಅದ್ಭುತ ಪಾತ್ರಗಳನ್ನು ನಿರ್ವಹಿಸಿದ್ದರು.
ಹಲವು ತಮಿಳು ಸಿನಿಮಾಗಳಲ್ಲಿ ನಟಿಸಿದ್ದಾರೆ. ಅವರ ಅಭಿನಯಕ್ಕಾಗಿ ಅವರು ಫಿಲ್ಮ್‌ಫೇರ್ ಮತ್ತು ನಂದಿ ಪ್ರಶಸ್ತಿಗಳನ್ನು ಪಡೆದರು. 'ಪದಹರೆಲ್ಲಾ ಅವಧ್' ಮತ್ತು 'ಸಿರಿ ಸಿರಿ ಮುವ್ವ' ಚಿತ್ರಗಳಲ್ಲಿನ ಅವರ ಅಭಿನಯಕ್ಕಾಗಿ ಅವರು ಅತ್ಯುತ್ತಮ ನಟನಿಗಾಗಿ ಫಿಲ್ಮ್‌ಫೇರ್ ಪ್ರಶಸ್ತಿಗಳನ್ನು ಪಡೆದಿದ್ದರು.
ಚಂದ್ರಮೋಹನ್ ಅವರು ಹಿರಿಯ ನಟರೊಂದಿಗೆ ಮಾತ್ರವಲ್ಲದೆ ಯುವ ತಾರೆಯರೊಂದಿಗೂ ತೆರೆ ಹಂಚಿಕೊಂಡಿದ್ದಾರೆ. ಅವರು ತಮ್ಮ ವೃತ್ತಿಜೀವನದಲ್ಲಿ ಎರಡು ಫಿಲ್ಮ್‌ಫೇರ್ ಮತ್ತು ಆರು ನಂದಿ ಪ್ರಶಸ್ತಿಗಳನ್ನು ಪಡೆದಿದ್ದಾರೆ. 'ಪದಹರೆಲ್ಲ ಅವಧ್' ಮತ್ತು 'ಸಿರಿ ಸಿರಿ ಮುವ್ವ' ಚಿತ್ರಗಳಲ್ಲಿನ ಅಭಿನಯಕ್ಕಾಗಿ ಅವರು ಅತ್ಯುತ್ತಮ ನಟನಿಗಾಗಿ ಫಿಲ್ಮ್‌ಫೇರ್ ಪ್ರಶಸ್ತಿಗಳನ್ನು ಪಡೆದರು. 2005 ರಲ್ಲಿ ಅವರು 'ಅತನೊಕ್ಕಡೆ' ಚಿತ್ರಕ್ಕಾಗಿ ಅತ್ಯುತ್ತಮ ಪೋಷಕ ನಟನ ನಂದಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದರು. 1987ರಲ್ಲಿ ‘ಚಂದಮಾಮ ರಾವೆ’ ಚಿತ್ರಕ್ಕೆ ಅತ್ಯುತ್ತಮ ಹಾಸ್ಯನಟನಾಗಿ ನಂದಿ ಪ್ರಶಸ್ತಿ ಸ್ವೀಕರಿಸಿದ್ದರು. ಅಂತಿಮವಾಗಿ 2017ರಲ್ಲಿ ‘ಆಕ್ಸಿಜನ್’ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ಚಂದ್ರಮೋಹನ್ ಅವರು ದಿವಂಗತ ನಿರ್ದೇಶಕ ಕೆ. ವಿಶ್ವನಾಥ್ ಅವರ ಹತ್ತಿರದ ಸಂಬಂಧಿ.
ಗಣ್ಯರ ಸಂತಾಪ..
" class="align-text-top noRightClick twitterSection" data=""ತೆಲುಗಿನ ಖ್ಯಾತ ನಟ ಚಂದ್ರಮೋಹನ್ ಅವರು ನಿಧನರಾಗಿದ್ದಾರೆಂದು ತಿಳಿದು ನನಗೆ ಅತೀವ ದುಃಖವಾಗಿದೆ. ಹಿಂದಿನ ಕಾಲದ ಚಿತ್ರಗಳಿಂದ ಆರಂಭವಾಗಿ ಇಂದಿನ ಕಾಲದ ಚಿತ್ರಗಳವರೆಗೆ, ನಟನಾಗಿ ಅವರ ಪ್ರಾಮುಖ್ಯತೆಯು ಅಳೆಯಲಾಗದು. ಅವರ ಆತ್ಮಕ್ಕೆ ಶಾಂತಿ ಸಿಗಲೆಂದು ಪ್ರಾರ್ಥಿಸುತ್ತೇನೆ" - ಮಾಜಿ ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು
ప్రముఖ తెలుగు సినీనటులు శ్రీ చంద్రమోహన్ పరమపదించారని తెలిసి ఎంతో విచారించాను. నాటి చిత్రాలు మొదలుకొని నిన్న మొన్నటి చిత్రాల వరకు నటుడిగా వారి ప్రాధాన్యత ఎనలేనిది. ఆయన ఆత్మకు శాంతి కలగాలని ప్రార్థిస్తూ, వారి కుటుంబ సభ్యులకు సానుభూతి తెలియజేస్తున్నాను. pic.twitter.com/UrH5WGIE7L
— M Venkaiah Naidu (@MVenkaiahNaidu) November 11, 2023
">ప్రముఖ తెలుగు సినీనటులు శ్రీ చంద్రమోహన్ పరమపదించారని తెలిసి ఎంతో విచారించాను. నాటి చిత్రాలు మొదలుకొని నిన్న మొన్నటి చిత్రాల వరకు నటుడిగా వారి ప్రాధాన్యత ఎనలేనిది. ఆయన ఆత్మకు శాంతి కలగాలని ప్రార్థిస్తూ, వారి కుటుంబ సభ్యులకు సానుభూతి తెలియజేస్తున్నాను. pic.twitter.com/UrH5WGIE7L
— M Venkaiah Naidu (@MVenkaiahNaidu) November 11, 2023
ప్రముఖ తెలుగు సినీనటులు శ్రీ చంద్రమోహన్ పరమపదించారని తెలిసి ఎంతో విచారించాను. నాటి చిత్రాలు మొదలుకొని నిన్న మొన్నటి చిత్రాల వరకు నటుడిగా వారి ప్రాధాన్యత ఎనలేనిది. ఆయన ఆత్మకు శాంతి కలగాలని ప్రార్థిస్తూ, వారి కుటుంబ సభ్యులకు సానుభూతి తెలియజేస్తున్నాను. pic.twitter.com/UrH5WGIE7L
— M Venkaiah Naidu (@MVenkaiahNaidu) November 11, 2023