ಕಿರುತೆರೆ ನಟಿ ತೇಜಸ್ವಿ ಪ್ರಕಾಶ್ ಶುಕ್ರವಾರ ತಮ್ಮ 30ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ತಮ್ಮ ಕುಟುಂಬ ಮತ್ತು ಗೆಳೆಯ ಕರಣ್ ಕುಂದ್ರಾ ಜೊತೆ ಕೇಕ್ ಕತ್ತರಿಸಿ ಬರ್ತ್ಡೇ ಸೆಲೆಬ್ರೇಟ್ ಮಾಡಿದ್ದಾರೆ. ತನ್ನ ವಿಶೇಷ ದಿನಕ್ಕಾಗಿ ನಟಿ ಕೆಂಪು ಬಣ್ಣದ ಗೌನ್ ಆರಿಸಿಕೊಂಡರು ಮತ್ತು ಅದನ್ನು ಧರಿಸಿ ಎಲ್ಲರನ್ನೂ ಬೆರಗುಗೊಳಿಸಿದರು.
ಕರಣ್ ಅವರು ಕ್ಯಾಶುಯಲ್ ನೀಲಿ ಶರ್ಟ್ ಅನ್ನು ಆಯ್ಕೆ ಮಾಡಿಕೊಂಡರು. ಅದಕ್ಕೆ ಹೊಂದುವಂತೆ ಕಪ್ಪು ಟೀ ಶರ್ಟ್ ಅನ್ನು ಧರಿಸಿದ್ದರು. ಜೊತೆಗೆ ಕಪ್ಪು ಪ್ಯಾಂಟ್ ಮತ್ತು ಶೂಗಳೊಂದಿಗೆ ತಮ್ಮ ನೋಟವನ್ನು ಪೂರ್ಣಗೊಳಿಸಿದರು. ಇನ್ಸ್ಟಾಗ್ರಾಮ್ನಲ್ಲಿ ಪಾಪರಾಜಿಗಳು ಹಂಚಿಕೊಂಡಿರುವ ವಿಡಿಯೋದಲ್ಲಿ ತೇಜಸ್ವಿ ಮತ್ತು ಕರಣ್ ಜೊತೆಯಾಗಿ ಕೇಕ್ ಕತ್ತರಿಸುತ್ತಿರುವುದನ್ನು ಕಾಣಬಹುದು. ಅವರು ಕೇಕ್ ಕತ್ತರಿಸುವಾಗ ಸಂಭ್ರಮಿಸಿದರು. ನಂತರ ಕೇಕ್ ಪೀಸ್ ಅನ್ನು ನಟಿ ತಮ್ಮ ಗೆಳೆಯನಿಗೆ ತಿನ್ನಿಸಿದರು. ನಂತರ ಪಾಪ್ಗಳಿಗೂ ಹಂಚಿದರು.
ಇದನ್ನೂ ಓದಿ: HBD Balakrishna: 'ಭಗವಂತ ಕೇಸರಿ' ಟೀಸರ್ ರಿಲೀಸ್, ಬಾಲಯ್ಯ ರಗಡ್ ಲುಕ್ಗೆ ಫ್ಯಾನ್ಸ್ ಫಿದಾ
ಕಿರುತೆರೆ ಕಲಾವಿದರಾದ ಕರಣ್ ಕುಂದ್ರಾ ಮತ್ತು ತೇಜಸ್ವಿ ಪ್ರಕಾಶ್ ಸದಾ ಸುದ್ದಿಯಲ್ಲಿರುವ ಜೋಡಿ. ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ನಿರೂಪಣೆಯ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ 15ನಲ್ಲಿ ಕಾಣಿಸಿಕೊಂಡಿದ್ದರು. ರಿಯಾಲಿಟಿ ಶೋ ಬಿಗ್ ಬಾಸ್ 15ರಲ್ಲಿ ಈ ಜೋಡಿ ಪರಸ್ಪರ ಹತ್ತಿರವಾದರು. ಇವರಿಬ್ಬರ ಕೆಮಿಸ್ಟ್ರಿ ಸಖತ್ ವರ್ಕ್ ಔಟ್ ಆಗಿತ್ತು. ಪರಿಣಾಮವಾಗಿ ಅಪಾರ ಅಭಿಮಾನಿಗಳನ್ನು ಆಕರ್ಷಿಸಿದ್ದರು. ಪ್ರೇಮಿಗಳಾಗಿ ಬಹುತೇಕರ ಮನ ಸೆಳೆದಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಾ ಬಂದಿದ್ದಾರೆ.
ಹಿಂದಿ ಬಿಗ್ ಬಾಸ್ ಸೀಸನ್ 15ರ ವಿಜೇತೆಯಾಗಿ ಹೊರ ಹೊಮ್ಮಿದ ತೇಜಸ್ವಿ ಪ್ರಕಾಶ್ ಸದ್ಯ ಕಿರುತೆರೆ ಲೋಕದಲ್ಲಿ ಬಹು ಬೇಡಿಕೆ ನಟಿ. ನಾಗಿನ್ ಧಾರಾವಾಹಿ ಮೂಲಕ ಹೆಚ್ಚು ಜನಪ್ರಿಯತೆ ಗಳಿಸಿರುವ ಇವರು ತಾವು ತೆಗೆದುಕೊಳ್ಳುವ ಸಂಭಾವನೆಯಲ್ಲಿಯೂ ಗಮನ ಸೆಳೆಯುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲೂ ಹೆಚ್ಚು ಸುದ್ದಿಯಾಗುತ್ತಿರುತ್ತಾರೆ. ಸ್ವರಗಿಣಿ - ಜೋಡೆನ್ ರಿಶ್ಟನ್ ಕೆ ಸುರ್, ರಿಶ್ತಾ ಲಿಖೇಂಗೆ ಹಮ್ ನಯಾ, ಪೆಹ್ರೆದಾರ್ ಪಿಯಾ ಕಿ, ಮತ್ತು ಸಂಸ್ಕರ್ ಧರೋಹರ್ ಅಪ್ನೋ ಕಿ 2 ನಲ್ಲಿ ಕಾಣಿಸಿಕೊಂಡಿದ್ದಕ್ಕಾಗಿ ಅವರು ಹೆಚ್ಚು ಹೆಸರುವಾಸಿಯಾಗಿದ್ದಾಳೆ. ಅವರು ಖತ್ರೋನ್ ಕೆ ಖಿಲಾಡಿ 10 ರಲ್ಲಿ ಭಾಗವಹಿಸಿದ್ದರು.
ಕಿತ್ನಿ ಮೊಹಬ್ಬತ್ ಹೈ ಮೂಲಕ ಕರಣ್ ಕುಂದ್ರಾ 2009 ರಲ್ಲಿ ನಟನೆಗೆ ಪಾದಾರ್ಪಣೆ ಮಾಡಿದರು. ಅವರು ಬೇತಾಬ್ ದಿಲ್ ಕಿ ತಮನ್ನಾ ಹೈ, ಕಿತ್ನಿ ಮೊಹಬ್ಬತ್ ಹೈ 2, ಮತ್ತು ದಿಲ್ ಹಿ ತೋ ಹೈ ಸೇರಿದಂತೆ ಹಲವಾರು ಧಾರಾವಾಹಿಗಳಲ್ಲಿ ಕಾಣಿಸಿಕೊಂಡಿದ್ದಾರೆ. ಅವರು ಸದ್ಯ ತೇರೆ ಇಷ್ಕ್ ಮೇ ಘಾಯಲ್, ದಿ ವ್ಯಾಂಪೈರ್ ಡೈರೀಸ್‌ನ ಹಿಂದಿ ರೂಪಾಂತರದಲ್ಲಿ ನಟಿಸುತ್ತಿದ್ದಾರೆ.
ಇದನ್ನೂ ಓದಿ: Charlie 777: 'ಚಾರ್ಲಿ'ಯನ್ನು ಅಪ್ಪಿ ಒಪ್ಪಿಕೊಂಡ ದಿನ.. ಒಂದು ವರ್ಷ ಪೂರೈಸಿದ ರಕ್ಷಿತ್ ಶೆಟ್ಟಿ ಸಿನಿಮಾ