ರಾಷ್ಟ್ರ ಪ್ರಶಸ್ತಿ ವಿಜೇತ ನಟಿ ಕಂಗನಾ ರಣಾವತ್ ಮುಖ್ಯಭೂಮಿಕೆಯ ಬಹುನಿರೀಕ್ಷಿತ ಸಿನಿಮಾ 'ತೇಜಸ್' ನಿನ್ನೆ ಚಿತ್ರಮಂದಿರಗಳಲ್ಲಿ ತೆರೆಕಂಡು ಮಿಶ್ರ ಪ್ರತಿಕ್ರಿಯೆ ಸ್ವೀಕರಿಸಿದೆ. ಸರ್ವೇಶ್ ಮೇವಾರಾ ಅವರು ಕಥೆ ಬರೆಯೋ ಜೊತೆಗೆ ಆ್ಯಕ್ಷನ್ ಕಟ್ ಹೇಳಿರುವ ಈ ಸಿನಿಮಾ ಪ್ರೇಕ್ಷಕರು - ವಿಮರ್ಶಕರಿಂದ ಮಿಶ್ರ ವಿಮರ್ಶೆಗಳನ್ನು ಪಡೆದುಕೊಂಡಿದೆ. ಆರಂಭಿಕ ಪ್ರದರ್ಶನದಲ್ಲೇ ಪ್ರೇಕ್ಷಕರನ್ನು ಸೆಳೆಯಲು ಸಿನಿಮಾ ಹೆಣಗಾಡಿದೆ. ಕಡಿಮೆ ಅಂಕಿ ಅಂಶದೊಂದಿಗೆ ಬಾಕ್ಸ್ ಆಫೀಸ್ ಪ್ರಯಾಣ ಆರಂಭಿಸಿರುವ 'ತೇಜಸ್' ಎರಡನೇ ದಿನವೂ ಹೇಳಿಕೊಳ್ಳುವಷ್ಟು ಸಂಪಾದನೆಯನ್ನೇನು ಮಾಡಲ್ಲ ಎಂದು ಸಿನಿ ಪಂಡಿತರು ಅಭಿಪ್ರಾಯ ಪಟ್ಟಿದ್ದಾರೆ.
- " class="align-text-top noRightClick twitterSection" data="">
ಸಿನಿಮಾ ಇಂಡಸ್ಟ್ರಿ ಟ್ರ್ಯಾಕರ್ ಸ್ಯಾಕ್ನಿಲ್ಕ್ ಪ್ರಕಾರ, 'ತೇಜಸ್' ಸಿನಿಮಾ ಬಿಡುಗಡೆ ಆದ ಮೊದಲ ದಿನ ಭಾರತದಲ್ಲಿ 1.25 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಎರಡನೇ ದಿನ ದೇಶೀಯ ಗಲ್ಲಾಪೆಟ್ಟಿಗೆಯಲ್ಲಿ ಸರಿಸುಮಾರು 1.50 ಕೋಟಿ ರೂ. ಗಳಿಸುವ ನಿರೀಕ್ಷೆಯಿದೆ. ಈ ಮೂಲಕ ಭಾರತೀಯ ಬಾಕ್ಸ್ ಆಫೀಸ್ನಲ್ಲಿ ಎರಡು ದಿನಗಳ ಒಟ್ಟು ಕಲೆಕ್ಷನ್ 2.75 ಕೋಟಿ ರೂಪಾಯಿ ಆಗಲಿದೆ. ಇತ್ತೀಚಿನ ದಿನಗಳಲ್ಲಿ ಬಹುನಿರೀಕ್ಷಿತ ಸಿನಿಮಾಗಳು ಬಹುಕೋಟಿ ರೂಪಾಯಿಗಳನ್ನು ಸಂಗ್ರಹ ಮಾಡುತ್ತಿದೆ. ಆದರೆ ಸಖತ್ ಸದ್ದು ಮಾಡಿದ್ದ ತೇಜಸ್ ಕೇವಲ 1.25 ಕೋಟಿ ರೂಪಾಯಿ ಕಲೆಕ್ಷನ್ ಮಾಡಿರೋದು ಉತ್ತಮ ಬೆಳವಣಿಗೆ ಅಲ್ಲ. ಕೆಲ ದಿನಗಳ ಕಾಲ ಈ ಸಿನಿಮಾ ಸದ್ದು ಮಾಡಬೇಕೆಂದರೆ ಇಂದಿನ ಕಲೆಕ್ಷನ್ ಸಂಖ್ಯೆ ಏರಿಕೆ ಕಾಣಲೇಬೇಕಿದೆ. ವಾರಾಂತ್ಯದಲ್ಲಿ ಸಿನಿಮಾ ಗಳಿಕೆ ಏರಿಕೆ ಆಗಲಿ ಎಂದು ಅಭಿಮಾನಿಗಳು ಆಶಿಸಿದ್ದಾರೆ.
ಇದನ್ನೂ ಓದಿ: ಬಿ.ಸಿ ಪಾಟೀಲ್ 'ಗರಡಿ' ಚಿತ್ರಕ್ಕೆ ಚಾಲೆಂಜಿಂಗ್ ಸ್ಟಾರ್ ಸಾಥ್ - ಟ್ರೇಲರ್ ಅನಾವರಣಗೊಳಿಸಲಿದ್ದಾರೆ ದರ್ಶನ್
ವಿಧು ವಿನೋದ್ ಚೋಪ್ರಾ ನಿರ್ದೇಶನದ '12th ಫೇಲ್' ಸಿನಿಮಾವನ್ನು ಹೊರತುಪಡಿಸಿ ನಿನ್ನೆ ಬೇರೆ ಯಾವುದೇ ದೊಡ್ಡ ಮಟ್ಟಿನ ಸಿನಿಮಾ ತೆರೆಕಂಡಿಲ್ಲ. ಬಾಕ್ಸ್ ಆಫೀಸ್ ಪೈಪೋಟಿ ಇಲ್ಲದಿದ್ದರೂ, ತೇಜಸ್ ಅಂಕಿ - ಅಂಶ ಹೇಳುವಷ್ಟೇನು ಉತ್ತಮವಾಗಿಲ್ಲ. ನಟಿ ಕಂಗನಾ ರಣಾವತ್ ಅವರ ಕೊನೆಯ ಚಿತ್ರ ಚಂದ್ರಮುಖಿ 2 ಕೂಡ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿಲ್ಲ. ಹಾಗಾಗಿ ನಟಿಯ ಭವಿಷ್ಯದ ಬಗ್ಗೆ ಅಭಿಮಾನಿಗಳು ಆತಂಕ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಪತ್ರಕರ್ತೆಯೊಂದಿಗೆ ಅನುಚಿತ ವರ್ತನೆ ಆರೋಪ: ಕ್ಷಮೆಯಾಚಿಸಿದ ಬಿಜೆಪಿ ಮುಖಂಡ ಸುರೇಶ್ ಗೋಪಿ
ಧಾಕಡ್ (2022), ತಲೈವಿ (2021), ಪಂಗಾ (2020), ಜಡ್ಜ್‌ಮೆಂಟಲ್ ಹೈ ಕ್ಯಾ (2019) ನಂತರ 'ತೇಜಸ್' ಕಂಗನಾ ಅವರ ಹಿನ್ನೆಡೆ ಕಂಡಿರುವ ಸಿನಿಮಾಗಳಾಗಿವೆ. 2019ರಲ್ಲಿ ಮಣಿಕರ್ಣಿಕಾ ಸೂಪರ್ ಹಿಟ್ ಆಗಿತ್ತು. ಬಳಿಕ ಯಾವುದೇ ಸಿನಿಮಾ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿಲ್ಲ. ಇತ್ತೀಚೆಗೆ ಚಂದ್ರಮುಖಿ 2ನಲ್ಲಿ ಕಾಣಿಸಿಕೊಂಡಿದ್ದು, ಅದು ಕೂಡ ಸಾಧಾರಣವಾಗಿ ಪ್ರದರ್ಶನ ಕಂಡಿದೆ.