ಟಾಲಿವುಡ್ ಯುವ ನಟ ತೇಜ ಸಜ್ಜ ಹಾಗೂ ನಿರ್ದೇಶಕ ಪ್ರಶಾಂತ್ ವರ್ಮಾ ಕಾಂಬೋದಲ್ಲಿ 'ಹನುಮಾನ್' ಸಿನಿಮಾ ತಯಾರಾಗುತ್ತಿದೆ. ಸಂಪೂರ್ಣವಾಗಿ ವಿಭಿನ್ನವಾದ ಪೌರಾಣಿಕ ಪರಿಕಲ್ಪನೆಯೊಂದಿಗೆ ಈ ಚಿತ್ರ ಸಿದ್ಧಗೊಳ್ಳುತ್ತಿದೆ. ಈಗಾಗಲೇ ಬಿಡುಗಡೆಯಾಗಿರುವ ಟೀಸರ್ ಪ್ರೇಕ್ಷಕರ ನಿರೀಕ್ಷೆಯನ್ನು ಹೆಚ್ಚಿಸುವಲ್ಲಿ ಯಶಸ್ವಿಯಾಗಿದೆ. ಹಾಲಿವುಡ್ ರೀತಿಯ ವಿಎಫ್ಎಕ್ಸ್ ಮತ್ತು ಗ್ರ್ಯಾಂಡ್ ಸ್ಕ್ರೀನ್ ವರ್ಕ್ನೊಂದಿಗೆ ಬಂದ ಟೀಸರ್‌ಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಪ್ರೇಕ್ಷಕರ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಲು ಇಂದು ಚಿತ್ರತಂಡ ಟ್ರೇಲರ್ ಬಿಡುಗಡೆಗೊಳಿಸಿದೆ.
- " class="align-text-top noRightClick twitterSection" data="">
ಪ್ರೇಕ್ಷಕರ ಉತ್ಸಾಹದ ಮಟ್ಟವನ್ನು ಹೆಚ್ಚಿಸಲು ಟ್ರೇಲರ್ ಬಿಡುಗಡೆ ಕಾರ್ಯಕ್ರಮವನ್ನು 'ಹನುಮಾನ್' ಚಿತ್ರತಂಡ ಅದ್ಧೂರಿಯಾಗಿ ಆಯೋಜಿಸಿದೆ. ಯೂಟ್ಯೂಬ್ಗಿಂತ ಒಂದು ಗಂಟೆ ಮುಂಚಿತವಾಗಿ ಆಯ್ದ ಕೆಲವು ಥಿಯೇಟರ್ಗಳನ್ನು ಟ್ರೇಲರ್ ಅನ್ನು ಪ್ರದರ್ಶಿಸಲಾಗಿದೆ. ಚಿತ್ರತಂಡದ ಈ ಪ್ಲಾನ್ ಸಕ್ಸಸ್ ಆಗಿದ್ದು, ಜನರಿಂದ ಉತ್ತಮ ರೆಸ್ಪಾನ್ಸ್ ಸಿಕ್ಕಿದೆ. ಎರಡು ತೆಲುಗು ರಾಜ್ಯಗಳಲ್ಲಿ 26 ಕಡೆಗಳ ಥಿಯೇಟರ್ಗಳಲ್ಲಿ ಟ್ರೇಲರ್ ಅನ್ನು ಅನಾವರಣಗೊಳಿಸಲಾಯಿತು.
'ಹನುಮಾನ್' ಚಿತ್ರ ಈಗಾಗಲೇ ಬಿಡುಗಡೆಯಾಗಬೇಕಿತ್ತು. ಆದರೆ, ಕಳೆದ ವರ್ಷ ಬಿಡುಗಡೆಯಾದ ಟೀಸರ್‌ಗೆ ಎಲ್ಲ ವರ್ಗದ ಪ್ರೇಕ್ಷಕರಿಂದ ಭಾರಿ ಪ್ರತಿಕ್ರಿಯೆ ಸಿಕ್ಕಿತ್ತು. ನಿರ್ದೇಶಕರ ತಂಡದ ಶ್ರಮ ಪ್ರತಿ ಫ್ರೇಮ್ ನಲ್ಲೂ ಕಾಣುತ್ತಿತ್ತು. ಇದರೊಂದಿಗೆ ನಿರ್ದೇಶಕ ಪ್ರಶಾಂತ್ ವರ್ಮಾ ಸಿನಿಮಾದ ಔಟ್ ಪುಟ್ ಮೇಲೆ ಹೆಚ್ಚು ಗಮನ ಹರಿಸಿದ್ದಾರೆ. ಸಾಮಾನ್ಯವಾಗಿ, ಚಲನಚಿತ್ರೋದ್ಯಮದಲ್ಲಿ ಹಿಂದೂ ಧರ್ಮ ಮತ್ತು ಮಹಾಕಾವ್ಯಗಳನ್ನು (ಆದಿಪುರುಷ್, ಕಾರ್ತಿಕೇಯ) ಆಧರಿಸಿದ ಚಲನಚಿತ್ರಗಳನ್ನು ಪ್ರೇಕ್ಷಕರು ಬೆಂಬಲಿಸುತ್ತಿದ್ದಾರೆ.
ಈ ಹಿನ್ನೆಲೆಯಲ್ಲಿ ಉತ್ತಮ ಗುಣಮಟ್ಟದ ವಿಎಫ್‌ಎಕ್ಸ್‌ನೊಂದಿಗೆ ಬಿಡುಗಡೆಯಾಗಿರುವ 'ಹನುಮಾನ್ ಟೀಸರ್'ಗೆ ನಿರೀಕ್ಷೆಗೂ ಮೀರಿದ ಪ್ರತಿಕ್ರಿಯೆ ಸಿಕ್ಕಿದ್ದು, ಬಾಲಿವುಡ್‌ನಲ್ಲಿಯೂ ಚರ್ಚೆಯಾಗುತ್ತಿದೆ. ಸ್ವಲ್ಪ ತಡವಾದರೂ ನಿರ್ದೇಶಕ ಪ್ರಶಾಂತ್ ಗುಣಮಟ್ಟದಲ್ಲಿ ರಾಜಿ ಮಾಡಿಕೊಳ್ಳದೇ ಚಿತ್ರೀಕರಣ ಮುಗಿಸಿದ್ದಾರಂತೆ. ಇದೀಗ ಟ್ರೇಲರ್ಗೂ ನಿರೀಕ್ಷೆಗೂ ಮೀರಿದ ರೆಸ್ಪಾನ್ಸ್ ಸಿಕ್ಕಿರುವುದು ಚಿತ್ರತಂಡಕ್ಕೆ ಮತ್ತಷ್ಟು ಸಂತಸ ತಂದಿದೆ.
ಚಿತ್ರತಂಡ: ಹನುಮಾನ್ ಚಿತ್ರದಲ್ಲಿ ತೇಜ ಸಜ್ಜ ಜೊತೆಗೆ ಅಮೃತಾ ಅಯ್ಯರ್ ಮತ್ತು ವರಲಕ್ಷ್ಮಿ ಶರತ್‌ಕುಮಾರ್ ಪ್ರಮುಖ ಪಾತ್ರಗಳನ್ನು ನಿರ್ವಹಿಸಿದ್ದಾರೆ. ವಿನಯ್ ರಾಯ್, ವೆನ್ನೆಲ ಕಿಶೋರ್, ರಾಜ್ ದೀಪಕ್ ಶೆಟ್ಟಿ, ಗೆಟಪ್ ಶ್ರೀನು ಮತ್ತು ಇತರರು ನಟಿಸಿದ್ದಾರೆ. ಪ್ರೈಮ್‌ಶೋ ಎಂಟರ್‌ಟೈನ್‌ಮೆಂಟ್ ಬ್ಯಾನರ್ ಅಡಿ ನಿರ್ಮಾಪಕ ನಿರಂಜನ್ ರೆಡ್ಡಿ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಗೌರಹರಿ, ಅನುದೀಪ್ ದೇವ್ ಮತ್ತು ಕೃಷ್ಣ ಸೌರಭ್ ಸಂಗೀತ ನೀಡಿದ್ದಾರೆ. ಚಿತ್ರವು ಜನವರಿ 12, 2024 ರಂದು ತೆಲುಗು, ಹಿಂದಿ, ತಮಿಳು, ಕನ್ನಡ ಮತ್ತು ಮಲಯಾಳಂ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ.
ಇದನ್ನೂ ಓದಿ: 'ಸಲಾರ್' ಸಿನಿಮಾ 'ಕೆಜಿಎಫ್'ಗೆ ಹೋಲಿಸಿದ ಫ್ಯಾನ್ಸ್: ನಿರ್ದೇಶಕ ಪ್ರಶಾಂತ್ ನೀಲ್ ಹೇಳಿದ್ದೇನು?