ETV Bharat / entertainment

ಹಾಲಿವುಡ್​ನಂತೆ ಸಿದ್ಧಗೊಳ್ಳುತ್ತಿದೆ ಪ್ರಭಾಸ್ 'ಪ್ರಾಜೆಕ್ಟ್​ ಕೆ' ಸಿನಿಮಾ: ಕುತೂಹಲ ಕೆರಳಿಸುವ ವಿಡಿಯೋ ಔಟ್​​​ - ಈಟಿವಿ ಭಾರತ ಕನ್ನಡ

ಪ್ರಭಾಸ್ ಅಭಿನಯದ 'ಪ್ರಾಜೆಕ್ಟ್​ ಕೆ' ಸಿನಿಮಾದ ಮೇಕಿಂಗ್ ವಿಡಿಯೋದ ಸಣ್ಣ ತುಣುಕನ್ನು ಚಿತ್ರತಂಡ ಹಂಚಿಕೊಂಡಿದೆ.​ ಇದು ಅವರ ಅಭಿಮಾನಿಗಳಲ್ಲಿ ತೀವ್ರ ಕುತೂಹಲ ಕೆರಳಿಸಿದೆ.

Project K
'ಪ್ರಾಜೆಕ್ಟ್​ ಕೆ
author img

By

Published : Apr 10, 2023, 7:54 PM IST

ಪ್ಯಾನ್​ ಇಂಡಿಯಾ ಸೂಪರ್​ ಸ್ಟಾರ್​ ಪ್ರಭಾಸ್​ ಸದ್ಯ 'ಸಲಾರ್'​, 'ಆದಿಪುರುಷ್'​ ಮತ್ತು 'ಪ್ರಾಜೆಕ್ಟ್​ ಕೆ' ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಈ ಎಲ್ಲ ಚಿತ್ರಗಳ ಮೇಲೆ ಸಿನಿ ಪ್ರೇಕ್ಷಕರು ಅಪಾರ ನಿರೀಕ್ಷೆಯನ್ನು ಇಟ್ಟುಕೊಂಡಿದ್ದಾರೆ. ಇದೀಗ 'ಪ್ರಾಜೆಕ್ಟ್​ ಕೆ' ಚಿತ್ರತಂಡ ಹೊಸದೊಂದು ವಿಡಿಯೋ ಹಂಚಿಕೊಂಡಿದ್ದು, ಅಭಿಮಾನಿಗಳ ಕುತೂಹಲವನ್ನು ಮತ್ತಷ್ಟು ಹೆಚ್ಚಿಸುವ ಕೆಲಸ ಮಾಡಿದ್ದಾರೆ. ಈ ಸಿನಿಮಾದಲ್ಲಿ ಪ್ರತಿ ಪಾತ್ರದ ಕಾಸ್ಟ್ಯೂಮ್​ ಡಿಫರೆಂಟ್​ ಆಗಿರಲಿದೆ. ಅದನ್ನು ತೋರಿಸುವ ಸಲುವಾಗಿಯೇ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ಇದನ್ನು ನೋಡಿದ ಫ್ಯಾನ್ಸ್​ ವಾವ್​ ಅನ್ನುತ್ತಿದ್ದಾರೆ.

  • " class="align-text-top noRightClick twitterSection" data="">

'ಪ್ರಾಜೆಕ್ಟ್​ ಕೆ' ಸಿನಿಮಾದಲ್ಲಿ ಪ್ರಭಾಸ್​ ಜೊತೆಗೆ ದೀಪಿಕಾ ಪಡುಕೋಣೆ, ಅಮಿತಾಭ್​ ಬಚ್ಚನ್​ ಸೇರಿದಂತೆ ಅನೇಕ ಸೂಪರ್​ ಸ್ಟಾರ್​ ಕಲಾವಿದರು ನಟಿಸುತ್ತಿದ್ದಾರೆ. ಇದು ಸೈನ್ಸ್​ ಫಿಕ್ಷನ್​ ಸಿನಿಮಾ ಆಗಿದ್ದು, ಅದಕ್ಕೆ ತಕ್ಕಂತೆಯೇ ಪಾತ್ರಧಾರಿಗಳ ಕಾಸ್ಟ್ಯೂಮ್​ ಡಿಸೈನ್​ ಮಾಡಲಾಗಿದೆ. ಸಿನಿಮಾದಲ್ಲಿ ಬರುವ ರೈಡರ್ಸ್​​​ ಪಾತ್ರಗಳಿಗೆ ಯಾವ ರೀತಿಯಾಗಿ ವಸ್ತ್ರವನ್ನು ರೆಡಿ ಮಾಡಲಾಗಿದೆ ಎಂಬುದನ್ನು ಈ ವಿಡಿಯೋದಲ್ಲಿ ತೋರಿಸಲಾಗಿದೆ. ಅಲ್ಲದೇ ಸೈನ್ಸ್​ ಫಿಕ್ಷನ್​ ಸಿನಿಮಾಗಳನ್ನು ತಯಾರಿಸುವಲ್ಲಿ ಹಾಲಿವುಡ್​ ನವರು ಎಂದಿಗೂ ಮುಂದಿರುತ್ತಾರೆ. ಆದರೆ ಇದೀಗ 'ಪ್ರಾಜೆಕ್ಟ್​ ಕೆ' ಸಿನಿಮಾವು ಇಂಗ್ಲೀಷ್​ ಚಿತ್ರಗಳಿಗೂ ಪೈಪೋಟಿ ನೀಡುವ ರೀತಿಯಲ್ಲೇ ಸಜ್ಜಾದಂತೆ ಕಾಣುತ್ತಿದೆ.

ಇದನ್ನೂ ಓದಿ: ಆರೋಗ್ಯದಲ್ಲಿ ಚೇತರಿಕೆ; ಪ್ರಾಜೆಕ್ಟ್ ಕೆ ಶೂಟಿಂಗ್​​ ಸೆಟ್​ಗೆ ಮರಳಿದ ಅಮಿತಾಭ್​ ಬಚ್ಚನ್

ಸದ್ಯಕ್ಕೆ ಚಿತ್ರತಂಡ ರಿಲೀಸ್​ ಮಾಡಿರುವುದು ಚಿಕ್ಕ ಮೇಕಿಂಗ್​ ವಿಡಿಯೋವಷ್ಟೇ. ಇನ್ನೂ ಹಲವು ಇಂತಹ ವಿಡಿಯೋಗಳು ಬಿಡುಗಡೆಯಾಗಲು ಬಾಕಿ ಇವೆ. ತೆಲುಗಿನ ಪ್ರತಿಷ್ಠಿತ ವೈಜಯಂತಿ ಮೂವೀಸ್​ ಮೂಲಕ ಪ್ರಾಜೆಕ್ಟ್​ ಸಿನಿಮಾ ನಿರ್ಮಾಣವಾಗುತ್ತಿದೆ. ಬಹು ಕೋಟಿ ರೂಪಾಯಿಗಳ ಬಂಡವಾಳ ಸುರಿದು ಈ ಚಿತ್ರವನ್ನು ತಯಾರಿಸಲಾಗುತ್ತಿದೆ. 'ಮಹಾನಟಿ' ಸಿನಿಮಾದಿಂದ ಭರ್ಜರಿ ಗೆಲುವನ್ನು ಕಂಡಿದ್ದ ರಾಷ್ಟ್ರೀಯ ಪ್ರಶಸ್ತಿ ನಿರ್ದೇಶಕ ಅಶ್ವಿನ್​ ಅವರು ಈ ಚಿತ್ರಕ್ಕೆ ಆ್ಯಕ್ಷನ್​ ಕಟ್​ ಹೇಳುತ್ತಿದ್ದಾರೆ. ಪ್ರಭಾಸ್​ ಅವರಿಗೂ ಈ ಸಿನಿಮಾ ದೊಡ್ಡ ಸಕ್ಸಸ್​ ನೀಡಲಿದೆ ಎಂಬುದು ವಿಡಿಯೋ ನೋಡಿದ ಅಭಿಮಾನಿಗಳ ಮಾತು.

ಇನ್ನು ಈ ಸಿನಿಮಾವನ್ನು 2024ರ ಜನವರಿ 12 ರಂದು ಬಿಡುಗಡೆಗೊಳಿಸಲು ಚಿಂತಿಸಲಾಗಿದೆ. ಕಳೆದ ತಿಂಗಳ ಆರಂಭದಲ್ಲಿ ಸೆಟ್​ನಲ್ಲಿ ಬಿಗ್​ ಬಿ ಅಮಿತಾಭ್​ ಬಚ್ಚನ್​ ಗಾಯಗೊಂಡಿದ್ದರಿಂದ ಚಿತ್ರದ ಶೂಟಿಂಗ್​ ನಿಲ್ಲಿಸಲಾಗಿತ್ತು. ಆದರೆ, ತೆಲುಗು ಮತ್ತು ಹಿಂದಿಯಲ್ಲಿ ಏಕಕಾಲಕ್ಕೆ ತಯಾರಾಗುತ್ತಿರುವ ಈ ಚಿತ್ರದ ಶೂಟಿಂಗ್​ ಅನ್ನು ನಿರ್ಮಾಪಕರು ಪುನಃ ಪ್ರಾರಂಭಿಸಿದ್ದಾರೆ. ಅಲ್ಲದೇ ಬಿಡುಗಡೆಗೆ ಇನ್ನೂ ಹಲವು ತಿಂಗಳುಗಳು ಬಾಕಿ ಇದ್ದರೂ ಸಹ ಚಿತ್ರತಂಡ ಈಗಲೇ ಪ್ರಚಾರ ಕಾರ್ಯದಲ್ಲಿ ತೊಡಗಿದೆ. ದೀಪಿಕಾ ಮತ್ತು ಪ್ರಭಾಸ್​ ಮೊದಲ ಬಾರಿಗೆ ಸ್ಕ್ರೀನ್​ ಶೇರ್​ ಮಾಡುತ್ತಿದ್ದು, ಸೂಪರ್​ಸ್ಟಾರ್​ ತಾರಾ ಬಳಗವೇ ಇರುವ ಈ ಚಿತ್ರದ ಮೇಲೆ ಪ್ರೇಕ್ಷಕರ ನಿರೀಕ್ಷೆ ಮುಗಿಲೆತ್ತರದಲ್ಲಿದೆ.

ಇದನ್ನೂ ಓದಿ: 'ಮಾಲ್ತಿ ಮೇರಿ ಮೊದಲ ಈಸ್ಟರ್​': ಮಗಳ ಜೊತೆಗಿನ ಫೋಟೋ ಹಂಚಿಕೊಂಡ ಪ್ರಿಯಾಂಕಾ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.