ETV Bharat / entertainment

'ಲಿಯೋ' ಪ್ರೀಮಿಯರ್​ಗೆ ತಮಿಳುನಾಡು ಸರ್ಕಾರ ಅಸ್ತು​; ದಳಪತಿ ವಿಜಯ್​ ಫ್ಯಾನ್ಸ್​ ಖುಷ್​! - etv bharat kannada

'ಲಿಯೋ' ಚಿತ್ರದ ಪ್ರೀಮಿಯರ್​ ಶೋಗೆ ಮೊದಲು ಅನುಮತಿ ನಿರಾಕರಿಸಿದ್ದ ತಮಿಳುನಾಡು ಸರ್ಕಾರ ಇದೀಗ ಪ್ರಥಮ ಪ್ರದರ್ಶನಕ್ಕೆ ಗ್ರೀನ್​ ಸಿಗ್ನಲ್​ ಕೊಟ್ಟಿದೆ.

Tamilnadu government grant permissions for leo movie premiere
'ಲಿಯೋ' ಪ್ರೀಮಿಯರ್​ಗೆ ತಮಿಳುನಾಡು ಸರ್ಕಾರ ಅಸ್ತು​; ದಳಪತಿ ವಿಜಯ್​ ಫ್ಯಾನ್ಸ್​ ಫುಲ್​ ಖುಷ್​!
author img

By ETV Bharat Karnataka Team

Published : Oct 12, 2023, 8:08 PM IST

ಕಾಲಿವುಡ್​ ಸೂಪರ್​ಸ್ಟಾರ್​ ದಳಪತಿ ವಿಜಯ್​ ನಟನೆಯ ಮುಂಬರುವ ಚಿತ್ರ 'ಲಿಯೋ'. ಲೋಕೇಶ್​ ಕನಕರಾಜ್​ ಆ್ಯಕ್ಷನ್​ ಕಟ್​ ಹೇಳಿರುವ ಈ ಸಿನಿಮಾ ಇದೇ ಅಕ್ಟೋಬರ್​ 19ರಂದು ಬಿಡುಗಡೆಯಾಗಲಿದೆ. ಈ ಚಿತ್ರದ ಪ್ರೀಮಿಯರ್​ ಶೋಗೆ ತಮಿಳುನಾಡು ಸರ್ಕಾರ ಆರಂಭದಲ್ಲಿ ಅನುಮತಿ ನಿರಾಕರಿಸಿತ್ತು. ಇದರಿಂದ ವಿಜಯ್​ ಅಭಿಮಾನಿಗಳು ತೀವ್ರ ಅಸಮಾಧಾನಗೊಂಡಿದ್ದರು. ಆದರೆ ಇದೀಗ ಸ್ಟಾಲಿನ್​ ಸರ್ಕಾರ 'ಲಿಯೋ' ಪ್ರಥಮ ಪ್ರದರ್ಶನಕ್ಕೆ ಒಪ್ಪಿಗೆ ಕೊಟ್ಟಿದೆ.

  • We've proudly crossed 40,000 ticket sales! As distributors, we're usually in talks with cinemas for more shows. But with #LEO, the tables have turned; exhibitors are actively coming to us, in hype mode, and increasing slots. Such is the power of the #Thalapathy effect. pic.twitter.com/elBbNdOrhd

    — Ahimsa Entertainment (@ahimsafilms) October 5, 2023 " class="align-text-top noRightClick twitterSection" data=" ">

ಈ ಮೊದಲು ತಮಿಳುನಾಡು ಸರ್ಕಾರ 'ಲಿಯೋ' ಸಿನಿಮಾದ ಪ್ರೀಮಿಯರ್​ಗೆ ಅನುಮತಿ ನೀಡುವುದಿಲ್ಲವೆಂದೇ ಹೇಳಿತ್ತು. ಈ ನಿರ್ಧಾರದ ವಿರುದ್ಧ ದಳಪತಿ ವಿಜಯ್​ ಅಭಿಮಾನಿಗಳು ಬೇಸರ ಹೊರಹಾಕಿದ್ದರು. ಆದರೆ ಇದೀಗ ಏಕಾಏಕಿ ಸರ್ಕಾರ ತನ್ನ ನಿರ್ಧಾರವನ್ನು ಬದಲಾಯಿಸಿದೆ. 'ಲಿಯೋ' ಪ್ರೀಮಿಯರ್​ಗೆ ಸ್ಟಾಲಿನ್​ ಸರ್ಕಾರ ಅನುಮತಿ ನೀಡಿದೆ. ಇದರಿಂದ ವಿಜಯ್​ ಅಭಿಮಾನಿಗಳು ಫುಲ್​ ಖುಷಿಯಾಗಿದ್ದಾರೆ.

ಸರ್ಕಾರದ ಆದೇಶದಂತೆ, 'ಲಿಯೋ' ಚಿತ್ರ ಬಿಡುಗಡೆ ದಿನ ತಮಿಳುನಾಡಿನಲ್ಲಿ ಬೆಳಗ್ಗೆ 7 ಗಂಟೆಗೆ ಪ್ರೀಮಿಯರ್​ ಶೋ ಆರಂಭವಾಗಲಿದೆ. ಅಕ್ಟೋಬರ್​ 19 ರಿಂದ 24ರವರೆಗೆ ದಿನಕ್ಕೆ ಐದು ಬಾರಿ ಚಿತ್ರ ಪ್ರದರ್ಶನ ಕಾಣಲಿದೆ. ಮತ್ತೊಂದೆಡೆ 'ಲಿಯೋ' ಚಿತ್ರ ಪ್ರದರ್ಶನವು ಯುಎಸ್​ನಲ್ಲಿ ಅಕ್ಟೋಬರ್​ 19ರಂದು ಬೆಳಗ್ಗೆ 4 ಗಂಟೆಗೆ ಇರಲಿದೆ.

ಚಿತ್ರದ ಟ್ರೇಲರ್​ ಬಿಡುಗಡೆಯಾಗುವುದಕ್ಕೂ ಮುನ್ನವೇ ಮುಂಗಡ ಬುಕ್ಕಿಂಗ್​ನಲ್ಲಿ 'ಲಿಯೋ' ದಾಖಲೆ ಸೃಷ್ಟಿಸಿದೆ. ಕಳೆದ ವಾರ ಈ ಸಿನಿಮಾದ ಸಾಗರೋತ್ತರ ಬುಕ್ಕಿಂಗ್​ ನೋಡಿದಾಗ 40 ಸಾವಿರಕ್ಕೂ ಹೆಚ್ಚು ಟಿಕೆಟ್​ಗಳು ಮಾರಾಟವಾಗಿದೆ. ಟ್ರೇಲರ್​ ನೋಡುವ ಮುನ್ನವೇ ಈ ರೇಂಜ್​ನಲ್ಲಿ ಟಿಕೆಟ್​ ಮಾರಾಟವಾದ ಚಿತ್ರ ಇದೇ ಮೊದಲು ಎಂದು ಯುಕೆ ಮೂಲದ ನಿರ್ಮಾಣ ಸಂಸ್ಥೆಯೊಂದು ತಿಳಿಸಿದೆ.

ಇದನ್ನೂ ಓದಿ: ದಳಪತಿ ವಿಜಯ್​ ನಟನೆಯ ಬಹುನಿರೀಕ್ಷಿತ 'ಲಿಯೋ' ಚಿತ್ರದ ಟ್ರೇಲರ್​ ಬಿಡುಗಡೆ

ತಿರುಮಲ ದರ್ಶನ ಪಡೆದ ಲೋಕೇಶ್​ ಕನಕರಾಜ್​: 'ಲಿಯೋ' ಸಿನಿಮಾ ಬಿಡುಗಡೆಗೂ ಮುನ್ನ ನಿರ್ದೇಶಕ ಲೋಕೇಶ್​ ಕನಕರಾಜ್​ ತಮ್ಮ ತಂಡದೊಂದಿಗೆ ತಿರುಮಲ ದರ್ಶನ ಪಡೆದಿದ್ದಾರೆ. ತಮ್ಮ ಸಿನಿಮಾ ಭರ್ಜರಿ ಪ್ರದರ್ಶನ ಕಾಣಲಿ ಎಂದು ತಿರುಪತಿ ತಿಮ್ಮಪ್ಪನಲ್ಲಿ ಪ್ರಾರ್ಥನೆ ಸಲ್ಲಿಸಿದ್ದಾರೆ. ವೆಂಕಟೇಶ್ವರನ ದರುಶನಕ್ಕಾಗಿ ಕಾಲ್ನಡಿಗೆಯಲ್ಲೇ ತೆರಳಿದ್ದು, ಇದಕ್ಕೆ ಸಂಬಂಧಿಸಿದ ವಿಡಿಯೋಗಳು ಸೋಷಿಯಲ್​ ಮೀಡಿಯಾದಲ್ಲಿ ಹರಿದಾಡುತ್ತಿದೆ.

ವಿಜಯ್​ ಅಭಿನಯದ ಲಿಯೋ ಚಿತ್ರದ ಮೇಲೆ ಅವರ ಅಭಿಮಾನಿಗಳು ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. 'ಲಿಯೋ' ಸಿನಿಮಾವನ್ನು ಖೈದಿ, ಮಾಸ್ಟರ್​ ಮತ್ತು ವಿಕ್ರಮ್​ನಂತಹ ಮಾಸ್ಟರ್​ಪೀಸ್​ ಚಿತ್ರಗಳಿಗೆ ಆಕ್ಷನ್​ ಕಟ್​ ಹೇಳಿರುವ ಲೋಕೇಶ್​ ಕನಕರಾಜ್​ ನಿರ್ದೇಶಿಸುತ್ತಿದ್ದಾರೆ. 'ಮಾಸ್ಟರ್' ಚಿತ್ರದ ನಂತರ 'ಲಿಯೋ' ಮೂಲಕ ವಿಜಯ್​ ಮತ್ತು ಲೋಕೇಶ್​ ಕನಕರಾಜ್​ ಮತ್ತೆ ಒಂದಾಗಿದ್ದಾರೆ.

ಈ ಸಿನಿಮಾವು ಕಾಶ್ಮೀರದಲ್ಲಿ ಚಿತ್ರೀಕರಣಗೊಂಡಿದೆ. ಟ್ರೇಲರ್​ ಇತ್ತೀಚೆಗಷ್ಟೇ ರಿಲೀಸ್​ ಆಗಿದೆ. ಚಿತ್ರದಲ್ಲಿ ತ್ರಿಶಾ, ಸಂಜಯ್ ದತ್, ಅರ್ಜುನ್ ಸರ್ಜಾ, ಪ್ರಿಯಾ ಆನಂದ್, ಗೌತಮ್ ವಾಸುದೇವ್ ಮೆನನ್, ಮನ್ಸೂರ್ ಅಲಿ ಖಾನ್, ಸ್ಯಾಂಡಿ ಮತ್ತು ಮಿಸ್ಕಿನ್ ಪ್ರಮುಖ ಪಾತ್ರಗಳಲ್ಲಿದ್ದಾರೆ. ಸವೆನ್ ಸ್ಕ್ರೀನ್ ಸ್ಟುಡಿಯೋದ ಲಲಿತ್ ಕುಮಾರ್ ನಿರ್ಮಿಸಿರುವ 'ಲಿಯೋ' ಚಿತ್ರ ಅಕ್ಟೋಬರ್​ 19 ರಂದು ಬಿಡುಗಡೆಯಾಗಲಿದೆ.

ಇದನ್ನೂ ಓದಿ: ಲಿಯೋ ಚಿತ್ರದ ಟ್ರೈಲರ್ ವೀಕ್ಷಿಸಿದ ಖುಷಿಯಲ್ಲಿ ಚಿತ್ರಮಂದಿರ ಹಾನಿಗೊಳಿಸಿದ ನಟ ದಳಪತಿ ಅಭಿಮಾನಿಗಳು...

ETV Bharat Logo

Copyright © 2025 Ushodaya Enterprises Pvt. Ltd., All Rights Reserved.