ETV Bharat / entertainment

ತನ್ನನ್ನು ತಾನೇ ಮೀರಿಸಿದ ಅಮೀರ್ ಖಾನ್: ಲಾಲ್​ ಸಿಂಗ್​ ಚಡ್ಡಾ ಸಿನಿಮಾ ಹೊಗಳಿದ ತಮಿಳು ನಟಿ - tamil actress varalakshmi sarathkumar praise to laal singh chaddha

ಬಾಯ್​ಕಾಟ್​ಗೆ ಗುರಿಯಾದ ಲಾಲ್​ ಸಿಂಗ್​ ಚಡ್ಡಾ. ಬಾಲಿವುಡ್​ ನಟ ಅಮೀರ್​ ಖಾನ್​ ಅವರ ಲಾಲ್​ ಸಿಂಗ್​ ಚಡ್ಡಾ ಸಿನಿಮಾವನ್ನು ಹೊಗಳಿದ ವರಲಕ್ಷ್ಮಿ

tamil-actress-varalakshmi-sarathkumar
ಲಾಲ್​ ಸಿಂಗ್​ ಚಡ್ಡಾ ಸಿನಿಮಾ ಹೊಗಳಿದ ತಮಿಳು ನಟಿ
author img

By

Published : Aug 11, 2022, 7:38 AM IST

ಚೆನ್ನೈ: ದೇಶದಲ್ಲಿ ಅಸಹಿಷ್ಣುತೆ ಇದೆ. ಶಿವಲಿಂಗಕ್ಕೆ ಹಾಲು ಎರೆಯುವುದು ವ್ಯರ್ಥ ಎಂದೆಲ್ಲ ವಿವಾದಾತ್ಮಕ ಹೇಳಿಕೆ ನೀಡಿದ್ದ ಬಾಲಿವುಡ್ ನಟ ಅಮೀರ್​ಖಾನ್​ರ ಲಾಲ್​ ಸಿಂಗ್​ ಚಡ್ಡಾ ಸಿನಿಮಾವನ್ನು ಬಾಯ್​ಕಾಟ್​ ಮಾಡಬೇಕು ಎಂದು ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಧ್ವನಿ ಕೇಳಿ ಬಂದಿದೆ. ಈ ಮಧ್ಯೆಯೇ ಸಿನಿಮಾ ತೆರೆಕಂಡಿದ್ದು, ತಮಿಳು ನಟಿ ವರಲಕ್ಷ್ಮಿ ಶರತ್​ಕುಮಾರ್​ ಸಿನಿಮಾದ ಬಗ್ಗೆ ಮೆಚ್ಚುಗೆಯ ಮಾತನ್ನಾಡಿದ್ದಾರೆ.

ಈ ಬಗ್ಗೆ ಇನ್​ಸ್ಟಾಗ್ರಾಮ್​ನಲ್ಲಿ ಬರೆದುಕೊಂಡಿರುವ ನಟಿ, ಚಿತ್ರದಲ್ಲಿ ನಟ ಅಮೀರ್​ ಖಾನ್​ ತನ್ನನ್ನು ತಾನು ಮೀರಿಸುವಂತೆ ಅಭಿನಯಿಸಿದ್ದಾರೆ. ಅವರೊಂದಿಗೆ ಕುಳಿತು ಸಿನಿಮಾ ವೀಕ್ಷಿಸಿರುವುದು ಸಂತೋಷ ಮತ್ತು ಗೌರವದ ವಿಷಯವಾಗಿದೆ ಎಂದು ಹೇಳಿದ್ದಾರೆ.

ನಿರ್ದೇಶಕ ಅದ್ವೈತ್ ಚಂದನ್ ಅವರು ಹಾಲಿವುಡ್​ ಸಿನಿಮಾ ಫಾರೆಸ್ಟ್ ಗಂಪ್ ಅನ್ನು ಲಾಲ್ ಸಿಂಗ್ ಚಡ್ಡಾ ಆಗಿ ತುಂಬಾ ಸುಂದರ, ಸರಳವಾಗಿ ಚಿತ್ರಿಸಿದ್ದಾರೆ. ಭಾರತೀಯ ಇತಿಹಾಸವನ್ನು ನೆನಪಿಟ್ಟುಕೊಳ್ಳುವ ರೀತಿ ಸಿನಿಮಾ ಮಾಡುತ್ತದೆ. ಅಮೀರ್ ಖಾನ್ ಎಂತಹ ಅದ್ಭುತ ನಟ ಎಂಬುದನ್ನು ಸಾಬೀತುಪಡಿಸಿದ್ದಾರೆ. ಪಾತ್ರವನ್ನು ತುಂಬಾ ಸಲೀಸಾಗಿ ಪೋಷಣೆ ಮಾಡಿದ್ದಾರೆ ಎಂದೆಲ್ಲಾ ಹೊಗಳಿದ್ದಾರೆ.

ಸಿನಿಮಾ ತಮಾಷೆ, ಭಾವನಾತ್ಮಕ, ಹೃದಯಸ್ಪರ್ಶಿಯಾಗಿದೆ. ಚಿತ್ರದ ತಯಾರಿಕೆಗಾಗಿ ಹಾಕಿದ ಶ್ರಮ ಪರದೆಯ ಮೇಲೆ ಕಾಣುತ್ತದೆ. ಪ್ರತಿ ದೃಶ್ಯವೂ ತುಂಬಾ ಭಾವನೆಯಿಂದ ತುಂಬಿದೆ ಎಂದು ಹೇಳಿದ್ದಾರೆ.

ಓದಿ: 'ಮಾನ್ಸೂನ್ ರಾಗ' ಪ್ರಮೋಷನಲ್ ಸಾಂಗ್​ಗೆ ಡಾಲಿ-ರಚಿತಾ ಮಸ್ತ್ ಡ್ಯಾನ್ಸ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.