ಮೈಸೂರು: ದಿ. ಪುನೀತ್ ರಾಜ್ಕುಮಾರ್ ಅವರ ನೆಚ್ಚಿನ ಸ್ಥಳವಾಗಿರುವ ಶಕ್ತಿಧಾಮಕ್ಕೆ ತಮಿಳು ನಟ ವಿಶಾಲ್ ಭೇಟಿ ನೀಡಿದ್ದಾರೆ..
ಮೈಸೂರು-ನಂಜನಗೂಡು ರಸ್ತೆಯಲ್ಲಿರುವ ಶಕ್ತಿಧಾಮಕ್ಕೆ ಇಂದು ಭೇಟಿ ನೀಡಿದ ನಟ ವಿಶಾಲ್ ಅವರನ್ನು ಟ್ರಸ್ಟ್ನವರು ಬರಮಾಡಿಕೊಂಡರು. ಪುನೀತ್ ಅವರ ಕಾರ್ಯಕ್ರಮದಲ್ಲಿ ಶಕ್ತಿಧಾಮಕ್ಕೆ ಸಹಾಯ ಮಾಡುತ್ತೇನೆ ಎಂದಿದ್ದ ವಿಶಾಲ್ ಅವರು ಘೋಷಿಸಿದ್ದರು. ಇದೀಗ ಶಕ್ತಿಧಾಮಕ್ಕೆ ಭೇಟಿ ನೀಡಿ ಮಕ್ಕಳೊಂದಿಗೆ ಮಾತುಕತೆ ನಡೆಸಿದ್ದಾರೆ.
ನಟ ಪುನೀತ್ ರಾಜ್ಕುಮಾರ್ ಅವರ ಸಾಮಾಜಿಕ ಕಳಕಳಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದ ವಿಶಾಲ್ ಅವರು ಪುನೀತ್ ಅವರಂತೆ ಸಮಾಜಕ್ಕೆ ಸಹಾಯ ಮಾಡಲು ಮುಂದಾಗುತ್ತೇನೆ ಎಂದು ಭರವಸೆ ನೀಡಿದ್ದರು.
ಇದನ್ನೂ ಓದಿ: ಎವರ್ಗ್ರೀನ್ ಹೀರೋ ರಮೇಶ್ ಅರವಿಂದ್ ಹುಟ್ಟುಹಬ್ಬ.. ಶಿವಾಜಿ ಸುರತ್ಕಲ್ 2 ಟೀಸರ್ ರಿಲೀಸ್