ETV Bharat / entertainment

ಲೇಡಿ ಬಾಕ್ಸರ್​ ಆಗಿ ಕಾಣಿಸಿಕೊಳ್ಳುತ್ತಿರುವ ಮಿಲ್ಕಿ ಬ್ಯೂಟಿ ತಮನ್ನಾ ಭಾಟಿಯಾಗೆ ಇವರೇ ಸ್ಫೂರ್ತಿ! - Tamannaah Bhatia inspiration

ಬಾಹುಬಲಿ ಖ್ಯಾತಿಯ ತಮನ್ನಾ ಭಾಟಿಯಾ ದಿ ಕಪಿಲ್ ಶರ್ಮಾ ಶೋದಲ್ಲಿ ಕಾಣಿಸಿಕೊಂಡಿದ್ದು, ಕೆಲವು ತುಣುಕುಗಳು ಜಾಲತಾಣದಲ್ಲಿ ವೈರಲ್​ ಆಗಿವೆ.

Tamannaah took inspiration from her sister in law
ಮಿಲ್ಕಿ ಬ್ಯೂಟಿ ತಮನ್ನಾ ಭಾಟಿಯಾ
author img

By

Published : Sep 8, 2022, 5:24 PM IST

ಮುಂಬೈ: ನಟಿ ತಮನ್ನಾ ಭಾಟಿಯಾ ಬಬ್ಲಿ ಬೌನ್ಸರ್ ಚಿತ್ರದ ಪ್ರಚಾರದಲ್ಲಿ ತೊಡಗಿದ್ದಾರೆ. ಮೊದಲ ಬಾರಿಗೆ ಲೇಡಿ ಬಾಕ್ಸರ್​ ಆಗಿ ಕಾಣಿಸಿಕೊಳ್ಳುತ್ತಿರುವ ಮಿಲ್ಕಿ ಬ್ಯೂಟಿ ಚಿತ್ರದ ಬಗ್ಗೆ ಭಾರಿ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಹಾಸ್ಯನಟ ಕಪಿಲ್ ಶರ್ಮಾ ನಡೆಸಿಕೊಡುವ 'ದಿ ಕಪಿಲ್ ಶರ್ಮಾ ಶೋ'ದಲ್ಲಿ ಅವರು ಮುಂಬರುವ ಸೀಸನ್​ನಲ್ಲಿ ಕಾಣಿಸಿಕೊಳ್ಳಲಿದ್ದು, ಚಿತ್ರದ ಅನುಭವಗಳನ್ನು ಹಂಚಿಕೊಂಡಿದ್ದಾರೆ. ಚಿತ್ರದ ಬಗ್ಗೆ ನಿಮ್ಮ ತಯಾರಿ ಹೇಗಿತ್ತು? ಮತ್ತು ಈ ಪಾತ್ರದಲ್ಲಿ ಕಾಣಿಸಿಕಿಳ್ಳಲು ನಿಮಗೆ ಸ್ಫೂರ್ತಿ ಯಾರು? ಸದ್ಯ ನಿಮ್ಮ ಸಿನಿಮಾ ಪಯಣ ಹೇಗಿದೆ? ಎಂಬ ಹತ್ತಾರು ಪ್ರಶ್ನೆಗಳನ್ನು ಕೇಳಲಾಗಿದೆಯಂತೆ.

Tamannaah took inspiration from her sister in law
ಮಿಲ್ಕಿ ಬ್ಯೂಟಿ ತಮನ್ನಾ ಭಾಟಿಯಾ

ಮಿಲ್ಕಿ ಬ್ಯೂಟಿ ತಮನ್ನಾ ಭಾಟಿಯಾ, ತಮ್ಮ ಪಾತ್ರದ ಬಗ್ಗೆ ಮತ್ತು ಮಹಿಳಾ ಬೌನ್ಸರ್ ಪಾತ್ರಕ್ಕಾಗಿ ಹೇಗೆ ತಯಾರಿ ನಡೆಸಿದ್ದಾಳೆ ಎಂಬುದರ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರಂತೆ. 'ಬಬ್ಲಿ ಬೌನ್ಸರ್' ಒಂದು ಕಾಮಿಡಿ ಟಚ್ ಜೊತೆಗೆ ಒಂದು ಸ್ಫೂರ್ತಿದಾಯಕ ಸಿನಿಮಾ ಆಗಿದೆ. ಈ ಚಿತ್ರಕ್ಕಾಗಿಯೇ ನಾನು ಕಂಪ್ಲೀಟ್ ಬದಲಾಗಿರುವೆ. ಇದಕ್ಕೆಲ್ಲ ಕಾರಣ ನನ್ನ ಕುಟುಂಬ ಎಂದು ಅವರು ಹೇಳಿಕೊಂಡಿದ್ದಾರಂತೆ.

ಆರಂಭದಲ್ಲಿ ಈ ಚಿತ್ರದ ಕಥೆ ಕೇಳಿದಾಗ ನಮ್ಮ ಸುತ್ತಮುತ್ತಲಿನ ನಡೆದಿರುವ ಘಟನೆ ಅನಿಸಿತು. ನನ್ನ ಜೀವನಕ್ಕೂ ಸಹ ಬಹಳ ಹತ್ತಿರವೆನಿಸಿತು. ಹಲವರಿಗೆ ನನ್ನ ಭಾಭೀ (ಸಹೋದರ ಪತ್ನಿ ಅಥವಾ ಅತ್ತಿಗೆ) ಬಗ್ಗೆ ಗೊತ್ತಿಲ್ಲ. ಈ ಚಿತ್ರ ಒಪ್ಪಿಕೊಳ್ಳಲು ಮೂಲ ಕಾರಣ ಅವಳೆ. ನನ್ನ ಮನೆಯ ಸದಸ್ಯರ ಕಥೆಯನ್ನು ಈ ಚಿತ್ರದ ಮೂಲಕ ಹೇಳುತ್ತಿದ್ದೇನೆ ಎಂಬ ಭಾಸವಾಯಿತು.

ಕುಟುಂಬವೊಂದರಲ್ಲಿ ನಡೆಯುವ ಹಾಸ್ಯ ಮತ್ತು ಸ್ಫೂರ್ತಿದಾಯಕ ಘಟನೆಗಳನ್ನು ಹೇಳುವ ಚಿತ್ರವಾಗಿದ್ದರಿಂದ ಒಪ್ಪಿಕೊಳ್ಳಬೇಕಾಯಿತು. ಬೇರೆ ಕಥೆಯ ಸಿನಿಮಾಗಳಲ್ಲಿ ನಟಿಸಲು ಪಾತ್ರಕ್ಕಾಗಿ ಸಾಕಷ್ಟು ಸಂಶೋಧನೆ ಮತ್ತು ಸಿದ್ಧತೆ ಬೇಕಾಗುತ್ತದೆ. ಆದರೆ, ಇಲ್ಲಿ ಆ ಸಿದ್ಧತೆ ಬೇಕಾಗಿರಲಿಲ್ಲ. ಈ ದಿನದ ಸಾಧನೆ ಮತ್ತು ಸ್ಫೂರ್ತಿಗೆ ನನ್ನ ಭಾಭಿಯೇ ಕಾರಣ ಎಂದು ತಮ್ಮ ಸಿನಿಮಾ ಹಾದಿ ಬಗ್ಗೆ ಹೇಳಿಕೊಂಡಿದ್ದಾರೆ.

ಸೌರಭ್ ಶುಕ್ಲಾ, ಸುಪ್ರಿಯಾ ಶುಕ್ಲಾ ಮತ್ತು ನಿರ್ದೇಶಕ ಮಧುರ್ ಭಂಡಾರ್ಕರ್ ಸೇರಿದಂತೆ ಇಡೀ ತಾರಾಗಣವು ಕಪಿಲ್ ಶರ್ಮಾ ಶೋದಲ್ಲಿ ಹಾಜರಿತ್ತು. ಕಾರ್ಯಕ್ರಮದಲ್ಲಿ ಹಲವು ತಾರೆಯರು ಹಾಸ್ಯದ ಚಟಾಕಿಯೊಂದಿಗೆ ತಮ್ಮ ತಮ್ಮ ಅನುಭವ ಹಂಚಿಕೊಂಡಿದ್ದಾರೆ. ನಿರೂಪಕ ಕಪಿಲ್ ಶರ್ಮಾ 'ಬಾಹುಬಲಿ: ದಿ ಬಿಗಿನಿಂಗ್' ಚಿತ್ರದಲ್ಲಿನ ಕಟ್ಟಪ್ಪ ಬಾಹುಬಲಿಯನ್ನು ಏಕೆ ಕೊಂದ (ಕಟ್ಟಪ್ಪ ನೀ ಬಾಹುಬಲಿ ಕೊ ಕ್ಯೂನ್ ಮಾರಾ) ಎಂದು ತಮಾಷೆಯಾಗಿ ತಮನ್ನಾ ಭಾಟಿಯಾ ಅವರನ್ನು ಕೇಳುವ ಮೂಲಕ ನಗೆಗಡಲಲ್ಲಿ ತೇಲಿಸಲು ಮುಂದಾಗಿದ್ದು ಅದೊಂದು ರಹಷ್ಯ ಎಂದು ತಮನ್ನಾ ಉತ್ತರಿಸಿದ್ದಾರೆ.

ಈ ಎಲ್ಲ ಸಂಪೂರ್ಣ ದೃಶ್ಯಾವಳಿಯು ಸೆಪ್ಟೆಂಬರ್ 10 ರಿಂದ ಸೋನಿ ಎಂಟರ್‌ಟೈನ್‌ಮೆಂಟ್ ಟೆಲಿವಿಷನ್‌ನಲ್ಲಿ ಪ್ರಸಾರವಾಗಲಿದೆ.

ಇದನ್ನೂ ಓದಿ: ಬೆಂಗಳೂರು‌‌ ಮಳೆ‌‌ ಸಂತ್ರಸ್ತರ ಸಹಾಯಕ್ಕೆ ಬಂದ‌ ಕಿಚ್ಚ ಸುದೀಪ್ ಚಾರಿಟಬಲ್ ಸೊಸೈಟಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.