ಬೆಂಗಳೂರು: ಹೊಸದಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಡುವ ಕಲಾವಿದರು, ತಂತ್ರಜ್ಞರು ಹಾಗೂ ನಿರ್ಮಾಪಕರಿಗೆ ಅನುಕೂಲವಾಗಲು ಟೆಕ್ ಟು ಕ್ರಿಯೇಶನ್ ಸಂಸ್ಥೆ ಹೊಸದೊಂದು ಆ್ಯಪ್ ಕ್ರಿಯೇಟ್ ಮಾಡಿದೆ. ಈ ಬಗ್ಗೆ ಸಂಸ್ಥೆಯ ಮುಖ್ಯಸ್ಥ ಕಿರಣ್ ಕುಮಾರ್ ಮತ್ತು ರಾಜಕುಮಾರ್ ಇಂದು ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದರು.
ಟೇಕ್ 2 ಕ್ರಿಯೇಷನ್ಸ್ ಪ್ರೈವೇಟ್ ಲಿಮಿಟೆಡ್ (ಮಂಗಳೂರು ಮೂಲದ ಫಿಲ್ಮ್ ಇಂಡಸ್ಟ್ರಿ ಸ್ಟಾರ್ಟ್ ಅಪ್) ಆಂಡ್ರಾಯ್ಡ್ ಸ್ಮಾರ್ಟ್ ಫೋನ್ ಮತ್ತು ಐಫೋನ್‌ಗಳಿಗಾಗಿ ಟೆಕ್ 2 ಎಂಬ ಮೊಬೈಲ್ ಅಪ್ಲಿಕೇಶನ್ ಅನ್ನು ಬಿಡುಗಡೆ ಮಾಡಿದೆ. ಕಂಪನಿಯು ಭಾರತದ ಎಲ್ಲಾ ಚಲನಚಿತ್ರ ಉದ್ಯಮಗಳಿಗೆ ಸಾಮಾನ್ಯ ವೇದಿಕೆಯನ್ನು ರಚಿಸಲು ಉದ್ದೇಶಿಸಿದೆ.
ಈ ಆ್ಯಪ್ ಮೂಲಕ ನಟರು ನಿರ್ದೇಶಕರ ಜೊತೆಗೆ ಹಾಗೂ ನಿರ್ಮಾಪಕರು ಸಿಬ್ಬಂದಿ ಮತ್ತು ಹೂಡಿಕೆದಾರರೊಂದಿಗೆ ಸಂಪರ್ಕ ಸಾಧಿಸಬಹುದು. ಹೊಸಬರು ಚಿತ್ರರಂಗದಲ್ಲಿ ಸಂಪರ್ಕ ಹೊಂದಿರದ ಹೊರತು ಚಿತ್ರರಂಗಕ್ಕೆ ಬರುವುದು ಕಷ್ಟಸಾಧ್ಯ. ಅದರೆ ಟೆಕ್ 2 ಜನರಿಗೆ ಚಿತ್ರರಂಗದಲ್ಲಿ ವೃತ್ತಿಜೀವನ ಆರಂಭಿಸಲು ಸಹಾಯ ಮಾಡುತ್ತದೆ ಎಂದು ತಿಳಿಸಿದರು.
ಕೇವಲ ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ ಉಚಿತವಾಗಿ ಪ್ರೊಫೈಲ್ ಅನ್ನು ರಚಿಸಿ ನಟನೆಯ ಅವಕಾಶ ಗಳಿಸಬಹುದು. ಓರ್ವ ಮಹಿಳೆ ಆಡಿಷನ್‌ಗಾಗಿ ಯಾರನ್ನಾದರೂ ಸಂಪರ್ಕಿಸುವ ಮೊದಲು ಹತ್ತು ಬಾರಿ ಯೋಚಿಸಬೇಕಾಗುತ್ತದೆ. ಆದರೆ ಟೇಕ್ 2 ಮಹಿಳಾ ಸ್ನೇಹಿ ಆಪ್ಲಿಕೇಶನ್ ಆಗಿದೆ. ಪ್ರತಿಷ್ಠಿತ ನಿರ್ದೇಶಕರು ಮಾತ್ರ ನಟ ನಟಿಯರ ಪ್ರೊಫೈಲ್‌ಗಳನ್ನು ನೋಡಬಹುದು. ಅವರ ದೂರವಾಣಿ ಸಂಖ್ಯೆಗಳನ್ನು ಅಪ್ಲಿಕೇಶನ್ ಯಾರೊಂದಿಗೂ ಹಂಚಿಕೊಳ್ಳುವುದಿಲ್ಲ. ಸಂವಹನ ಅಪ್ಲಿಕೇಶನ್ ಮೂಲಕ ಮಾತ್ರ ನಡೆಯುತ್ತದೆ.
ಇದನ್ನೂ ಓದಿ: ನಟರ ಹೆಸರಿನಲ್ಲಿ ಅಭಿಮಾನಿಗಳ ಈ ರೀತಿಯ ವರ್ತನೆ ಆಘಾತಕಾರಿ: ನಟಿ ಮೇಘನಾ ರಾಜ್
ಕೆಲ ನಿರ್ಮಾಪಕರು ಸರಿಯಾದ ಪ್ಲಾನಿಂಗ್ ಇಲ್ಲದೇ ಯೋಜನೆಗಳನ್ನು ಪ್ರಾರಂಭಿಸುತ್ತಾರೆ ಅಥವಾ ಅವರ ಯೋಜನೆಗಳು ಬಜೆಟ್ ಮೀರಿ ಹೋಗುತ್ತದೆ. ನಿರ್ಮಾಪಕರು ಹೆಚ್ಚುವರಿ ಹಣವನ್ನು ವ್ಯವಸ್ಥೆ ಮಾಡಲು ವಿಫಲವಾಗುತ್ತಾರೆ. ಆದರೆ ಟೇಕ್ 2 ಚಲನ ಚಿತ್ರಗಳು ಮತ್ತು ವೆಬ್ ಸರಣಿಗಳಿಗಾಗಿ ಫಂಡಿಗ್ ವ್ಯವಸ್ಥೆ ಮಾಡಿಕೊಡುತ್ತದೆ. ಅಲ್ಲಿ ಪ್ರತಿಯೊಬ್ಬ ಹೂಡಿಕೆದಾರರು ಕೇವಲ 5 ಲಕ್ಷ ರೂ ಹೂಡಿಕೆ ಮಾಡುತ್ತಾರೆ ಮತ್ತು ಸಹ - ನಿರ್ಮಾಪಕರಾಗುತ್ತಾರೆ. ಟೆಕ್ 2 ಎಲ್ಲಾ ಪ್ರಾಜೆಕ್‌ಗಳನ್ನು ಸಮಯಕ್ಕೆ ಸರಿಯಾಗಿ ಪೂರ್ಣಗೊಳಿಸುವುದನ್ನು ಖಚಿತ ಪಡಿಸುತ್ತದೆ. ನಮ್ಮ ಕ್ರೌಡ್ ಫಂಡಿಂಗ್ ಪರಿಕಲ್ಪನೆಯ ಮೂಲಕ ನಾವು ಒಂದೇ ಯೋಜನೆಯಲ್ಲಿ ಅನೇಕ ಸಹ ನಿರ್ಮಾಪಕರನ್ನು ಹೊರ ತರುತ್ತೇವೆ ಎಂದು ಮಾಹಿತಿ ನೀಡಿದರು.