ETV Bharat / entertainment

TAALI: 'ಚಪ್ಪಾಳೆ ಹೊಡೆಯಲ್ಲ, ಹೊಡೆಸಿಕೊಳ್ಳುತ್ತೇವೆ': ತೃತೀಯಲಿಂಗಿ ಪಾತ್ರದಲ್ಲಿ ಮಾಜಿ ವಿಶ್ವಸುಂದರಿ ಸುಶ್ಮಿತಾ ಸೇನ್ - TAALI

ಸುಶ್ಮಿತಾ ಸೇನ್ ಅವರ ತಾಲಿ ಚಿತ್ರದ ಮೋಷನ್​ ಪೋಸ್ಟರ್ ರಿಲೀಸ್ ಆಗಿದೆ.

TAALI series motion poster
ತಾಲಿ ಮೋಷನ್​ ಪೋಸ್ಟರ್
author img

By

Published : Jul 1, 2023, 10:42 AM IST

Updated : Jul 1, 2023, 11:59 AM IST

ಮಾಜಿ ವಿಶ್ವಸುಂದರಿ, ಹಿಂದಿ ಚಿತ್ರರಂಗದ ಜನಪ್ರಿಯ, ಹಿರಿಯ, ಬಹುಬೇಡಿಕೆ ನಟಿ ಸುಶ್ಮಿತಾ ಸೇನ್ ಅವರು ಕಳೆದ ಕೆಲ ಸಮಯದಿಂದ ಸುದ್ದಿಯಲ್ಲಿದ್ದಾರೆ. ಅನಾರೋಗ್ಯಕ್ಕೊಳಗಾಗಿದ್ದ ಅವರು ಚೇತರಿಸಿಕೊಂಡು ತಮ್ಮ ಪ್ರಾಜೆಕ್ಟ್​ಗಳಲ್ಲಿ ಬ್ಯುಸಿಯಾಗಿದ್ದಾರೆ. ಆರೋಗ್ಯ, ಫಿಟ್ನೆಸ್​​​ ಕಡೆಗೆ ಹೆಚ್ಚು ಗಮನ ಹರಿಸುವುದರ ಜೊತೆಗೆ ತಮ್ಮ ಮುಂದಿನ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.

ಟ್ರಾನ್ಸ್‌ಜೆಂಡರ್ ಕಾರ್ಯಕರ್ತೆಯಾಗಿ ಸುಶ್ಮಿತಾ: ಬಾಲಿವುಡ್ ಟಾಪ್​​ ನಟಿ ಸುಶ್ಮಿತಾ ಸೇನ್ ಅವರ ಮುಂಬರುವ ಬಹುನಿರೀಕ್ಷಿತ ಪ್ರೊಜೆಕ್ಟ್​​ 'ತಾಲಿ'. ಈ ಚಿತ್ರದಲ್ಲಿ ಟ್ರಾನ್ಸ್‌ಜೆಂಡರ್ ಕಾರ್ಯಕರ್ತೆ ಗೌರಿ ಸಾವಂತ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಸೀರಿಸ್​​ ತಯಾರಕರು ಶುಕ್ರವಾರದಂದು ಸರಣಿಯ ಮೋಷನ್ ಪೋಸ್ಟರ್ ಅನ್ನು ಬಿಡುಗಡೆ ಮಾಡಿದರು. ಇದರಲ್ಲಿ ಸುಶ್ಮಿತಾ ಸೇನ್​​ ಅವರನ್ನು ಹೊಸ ಅವತಾರದಲ್ಲಿ ತೋರಿಸಲಾಗಿದೆ.

'ಚಪ್ಪಾಳೆ ಹೊಡೆಯಲ್ಲ, ಹೊಡೆಸುತ್ತೇವೆ': ಜಿಯೋ ಸಿನಿಮಾ ತನ್ನ ಅಧಿಕೃತ ಇನ್‌ಸ್ಟಾಗ್ರಾಮ್‌ನಲ್ಲಿ ವಿಡಿಯೋವನ್ನು ಹಂಚಿಕೊಂಡಿದೆ. ವಿಡಿಯೋ ಗೌರಿ / ಸುಶ್ಮಿತಾ ಸೇನ್ ಅವರ ಆಸಕ್ತಿದಾಯಕ ನೋಟವನ್ನು ಒಳಗೊಂಡಿತ್ತು. ಟ್ರಾನ್ಸ್​ಜೆಂಡರ್​ ವ್ಯಕ್ತಿಯಾಗಿ ಅವರ ಪಾತ್ರ ಹೆಚ್ಚು ಹೆಮ್ಮೆ ಮತ್ತು ಶೌರ್ಯದಾಯಕವಾಗಿ ಇರಲಿದೆ. ಮೋಷನ್ ಪೋಸ್ಟರ್ ಹಂಚಿಕೊಂಡ ಸುಶ್ಮಿತಾ ಸೇನ್​​ 'ಚಪ್ಪಾಳೆ ಹೊಡೆಯಲ್ಲ, ಹೊಡೆಸಿಕೊಳ್ಳುತ್ತೇವೆ' ಎಂದು ಹೇಳಿದ್ದಾರೆ.

'ಆರ್ಯ ಸೀಸನ್ 3'ನಲ್ಲಿಯೂ ಕಾಣಿಸಿಕೊಳ್ಳಲಿದ್ದಾರೆ: 'ತಾಲಿ' ಸೀರಿಸ್​ ಟ್ರಾನ್ಸ್‌ಜೆಂಡರ್ ಕಾರ್ಯಕರ್ತೆ ಶ್ರೀ ಗೌರಿ ಸಾವಂತ್ ಅವರ ಜೀವನಚರಿತ್ರೆಯಾಗಿದ್ದು. ಇದರಲ್ಲಿ ಸುಶ್ಮಿತಾ ಅವರು ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಸರಣಿಯ ಅಧಿಕೃತ ಸ್ಟ್ರೀಮಿಂಗ್ ದಿನಾಂಕವನ್ನು ಇನ್ನೂ ಬಹಿರಂಗಪಡಿಸಿಲ್ಲ. ಅರ್ಜುನ್ ಸಿಂಗ್ ಬರನ್ ಮತ್ತು ಕಾರ್ತಿಕ್ ಡಿ. ನಿಶಾಂದರ್ ಅವರ ಈ ಬಯೋಪಿಕ್ ಅನ್ನು ರಾಷ್ಟ್ರೀಯ ಪ್ರಶಸ್ತಿ ವಿಜೇತ ನಿರ್ದೇಶಕ ರವಿ ಜಾಧವ್ ನಿರ್ದೇಶಿಸಿದ್ದಾರೆ. ಅರ್ಜುನ್ ಸಿಂಗ್ ಬರನ್, ಕಾರ್ತಿಕ್ ಡಿ. ನಿಶಾಂದರ್ ಮತ್ತು ಅಫೀಫಾ ನಾಡಿಯಾಡ್ವಾಲ್​ ನಿರ್ಮಿಸಿದ್ದಾರೆ. ಈ ಯೋಜನೆಯ ಹೊರತಾಗಿ, ಸುಶ್ಮಿತಾ ಡಿಸ್ನಿ+ಹಾಟ್‌ಸ್ಟಾರ್‌ನ 'ಆರ್ಯ ಸೀಸನ್ 3' ನಲ್ಲಿಯೂ ಕಾಣಿಸಿಕೊಳ್ಳಲಿದ್ದಾರೆ.

ಶೂಟಿಂಗ್​, ಡಬ್ಬಿಂಗ್​ ಕೆಲಸ ಪೂರ್ಣ: ಕೆಲ ದಿನಗಳ ಹಿಂದೆ ಅಂತಾರಾಷ್ಟ್ರೀಯ ತೃತೀಯಲಿಂಗಿಗಳ ದಿನ (international transgender day of visibility) ದಂದು​​ 'ತಾಲಿ' ಸೀರಿಸ್​ಗೆ ಸಂಬಂಧಿಸಿದ ವಿಡಿಯೋವೊಂದನ್ನು ನಟಿ ಸುಷ್ಮಿತಾ ಸೇನ್ ಶೇರ್ ಮಾಡಿದ್ದರು. ವಿಡಿಯೋ ಮೂಲಕ ಮಂಗಳಮುಖಿಯರಿಗೆ ಸಂದೇಶವೊಂದನ್ನು ನೀಡಿದ್ದರು. ಈ ಸೀರಿಸ್​ನ ಚಿತ್ರೀಕರಣ​​, ಡಬ್ಬಿಂಗ್​ ಕೆಲಸ ಮುಗಿಸಿದ್ದಾರೆ ಸುಶ್ಮಿತಾ ಸೇನ್.

ಇದನ್ನೂ ಓದಿ: ವಿಡಿಯೋ: ಅಮೃತ್​ಸರದ ಸಚ್‌ಖಂದ್​​ ಶ್ರೀ ಹರ್ಮಂದಿರ್ ಸಾಹಿಬ್‌ಗೆ ರಾಘವ್​ ಪರಿಣಿತಿ ಭೇಟಿ

ಶ್ರೀಗೌರಿ ಸಾವಂತ್ ಕಥೆ: ಪುಣೆಯಲ್ಲಿ ಹುಡುಗನಾಗಿ (ಗಣೇಶ್) ಹುಟ್ಟಿ ಬೆಳೆದ ಶ್ರೀಗೌರಿ ಸಾವಂತ್ (ಹುಡುಗಿಯಾಗಿ ಪರಿವರ್ತನೆ) ತೃತೀಯಲಿಂಗಿಗಳಿಗಾಗಿ ಹೋರಾಟ ನಡೆಸಿದ್ದಾರೆ. 2013ರ ಸಂದರ್ಭ ಸಲ್ಲಿಸಲಾಗಿದ್ದ ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರದ (NALSA) ಅರ್ಜಿದಾರರಲ್ಲಿ ಇವರು ಓರ್ವರಾಗಿದ್ದರು. 2014ರಲ್ಲಿ ಸುಪ್ರೀಂ ತೃತೀಯಲಿಂಗಿಗಳನ್ನು ಮೂರನೇ ಲಿಂಗ ಎಂದು ಪರಿಗಣಿಸಿ, ಅಂತಿಮ ತೀರ್ಪು ನೀಡಿತ್ತು. ಶ್ರೀಗೌರಿ ಸಾವಂತ್ ಹೋರಾಟದ, ಜೀವನದ, ಕಷ್ಟಸುಖಗಳ, ಅವರ ಅನುಭವಗಳ ಕುರಿತಾಗಿದೆ ಈ ತಾಲಿ ಸೀರಿಸ್​.

ಇದನ್ನೂ ಓದಿ: Janhvi Kapoor: ಮಿಂಚುವ ಉಡುಗೆಯಲ್ಲಿ ಮಿನುಗಿದ ಸೌಂದರ್ಯದ ಖನಿ ಜಾನ್ವಿ ಕಪೂರ್ PHOTOS

Last Updated : Jul 1, 2023, 11:59 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.