ETV Bharat / entertainment

ಶಾರುಖ್ ಮನ್ನತ್​ ಬಂಗಲೆಯೆದುರು ನಿಂತ Swiggy ಡೆಲಿವರಿ ಏಜೆಂಟ್ಸ್‌, ಯಾಕೆ ಗೊತ್ತಾ? - ​ ಎಸ್​ಆರ್​ಕೆ ಟ್ವಿಟರ್

ಬಾಲಿವುಡ್ ಕಿಂಗ್​ ಖಾನ್​ ಶಾರುಖ್ ಖಾನ್ ಸೋಮವಾರ ಟ್ವಿಟರ್​ನಲ್ಲಿ AskSRK ಸೆಷನ್‌ ನಡೆಸಿದ್ದರು.

swiggy surprise for shah rukh khan
ಶಾರುಖ್ ಮನ್ನತ್​ ಬಂಗಲೆಯೆದುರು ಸ್ವಿಗ್ಗಿ ಸಿಬ್ಬಂದಿ
author img

By

Published : Jun 13, 2023, 5:30 PM IST

ಬಾಲಿವುಡ್ ಸೂಪರ್‌ಸ್ಟಾರ್ ಶಾರುಖ್ ಖಾನ್ ಟ್ವಿಟರ್‌ನಲ್ಲಿ AskSRK ಸೆಷನ್‌ ನಡೆಸಿದ ನಂತರ ನಡೆದ ವಿದ್ಯಮಾನವೊಂದರಿಂದ ಆಶ್ಚರ್ಯಚಕಿತರಾದರು. ಅಭಿಮಾನಿಗಳೊಂದಿಗೆ ಸಂಪರ್ಕ ಸಾಧಿಸಲು ಶಾರುಖ್ ಖಾನ್ AskSRK ಸೆಷನ್​​ ನಡೆಸೋದು ನಿಮಗೆಲ್ಲರಿಗೂ ತಿಳಿದೇ ಇದೆ. ಇದರಲ್ಲಿ ಅಭಿಮಾನಿಗಳ ಬಹುತೇಕ ಪ್ರಶ್ನೆಗಳಿಗೆ ಅವರು ಉತ್ತರ ಕೊಡುತ್ತಾರೆ. ಅದರಂತೆ ಸೋಮವಾರ AskSRK ಸೆಷನ್​ ನಡೆಸಿದ್ದು, ಆಹಾರ ವಿತರಣಾ ಅಪ್ಲಿಕೇಶನ್ Swiggy ಇಂಡಿಯನ್​ ಸೂಪರ್​ ಸ್ಟಾರ್​ಗೆ ಸರ್​ಪ್ರೈಸ್​ ಕೊಟ್ಟಿದೆ.

ಟ್ವಿಟರ್​ ಪ್ರಶ್ನೋತ್ತರ ಅವಧಿಯಲ್ಲಿ, ಪ್ರಪಂಚಾದ್ಯಂತ ಅಭಿಮಾನಿಗಳು ಶಾರುಖ್​ ಖಾನ್​ ಅವರ ಚಲನಚಿತ್ರಗಳು, ಕುಟುಂಬ ಮತ್ತು ದೈನಂದಿನ ವಿಚಾರ ಸೇರಿದಂತೆ ವಿವಿಧ ವಿಷಯಗಳ ಮೇಲೆ ನಟನಿಗೆ ಪ್ರಶ್ನೆಗಳ ಮಳೆಗೈದರು. ಅಭಿಮಾನಿಗಳ ಪ್ರಶ್ನೆಗೆ ಉತ್ತರಿಸುವಾಗ ಎಸ್‌ಆರ್‌ಕೆ ಪ್ರಸಿದ್ಧ ಆಹಾರ ವಿತರಣಾ ಅಪ್ಲಿಕೇಶನ್ ಸ್ವಿಗ್ಗಿ ಬಗ್ಗೆ ಉಲ್ಲೇಖ ಮಾಡಿದ್ದಾರೆ.

ಅಭಿಮಾನಿಯೋರ್ವರು, 'ಊಟ ಆಯ್ತಾ ಅಣ್ಣ' ಎಂದು ಶಾರುಖ್​ ಅವರಲ್ಲಿ ಪ್ರಶ್ನೆ ಮಾಡಿದ್ದಾರೆ. ಬುದ್ಧಿವಂತಿಕೆ ಮತ್ತು ಹಾಸ್ಯಭರಿತ ಪ್ರತಿಕ್ರಿಯೆಗೆ ಹೆಸರಾದ ಎಸ್​ಆರ್​ಕೆ, ''ಏಕೆ, ನೀವು ಸ್ವಿಗ್ಗಿ ಅವರೇ, ನನಗೆ ಆಹಾರ ತಲುಪಿಸುತ್ತೀರಾ?'' ಎಂದು ಕೇಳಿದ್ದಾರೆ. ಆಹಾರ ವಿತರಣಾ ಅಪ್ಲಿಕೇಶನ್ ಸ್ವಿಗ್ಗಿ ನೇರವಾಗಿ ಸಂಭಾಷಣೆಗೆ ಧುಮುಕಿತು. ಶಾರುಖ್​ಗೆ ಏನು ಬೇಕು ಎಂದು ಆಫರ್​ ಕೂಡ ಇಟ್ಟಿತು. ಕೆಲವೇ ಗಂಟೆಗಳಲ್ಲಿ ಸ್ವಿಗ್ಗಿ ಸಿಬ್ಬಂದಿಯ ಗುಂಪು ಮನ್ನತ್‌ ಎದುರು ಕಾಣಿಸಿಕೊಂಡಿತು. 'ಅವರು ಭೋಜನದೊಂದಿಗೆ ಆಗಮಿಸಿದ್ದಾರೆ' ಎಂದು ಟ್ವಿಟರ್ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.

ಶಾರುಖ್ ಅವರ ಬಂಗಲೆಯ ಹೊರಗಿನ ಚಿತ್ರವನ್ನು ಹಂಚಿಕೊಂಡ ಸ್ವಿಗ್ಗಿ ಸಂಸ್ಥೆ, "ನಾವು ಸ್ವಿಗ್ಗಿ ಜನರು ಮತ್ತು ನಾವು ರಾತ್ರಿಯ ಊಟದೊಂದಿಗೆ ಬಂದಿದ್ದೇವೆ" ಎಂದು ಬರೆದುಕೊಂಡಿದೆ.

ಆಸ್ಕ್ ಮಿ ಎನಿಥಿಂಗ್ ಸೆಷನ್‌ನಲ್ಲಿ ಎಸ್‌ಆರ್‌ಕೆ ಅವರ ಮುಂಬರುವ ಚಲನಚಿತ್ರಗಳು ಮತ್ತು ಅವರ ಮಗಳು ಸುಹಾನಾ ಖಾನ್ ಅವರ ಚೊಚ್ಚಲ ಚಿತ್ರ ದಿ ಆರ್ಚಿಸ್ ಬಗ್ಗೆ ಅಭಿಮಾನಿಗಳು ಪ್ರಶ್ನೆಗಳನ್ನು ಕೇಳಿದರು. "ಹೆಮ್ಮೆಯ ತಂದೆಯಾಗಿ ನಿಮಗೆ ಹೇಗೆ ಅನಿಸುತ್ತದೆ?" ಎಂದು ಅಭಿಮಾನಿಯೊಬ್ಬರು ಕೇಳಿದ್ದು, "ತಂದೆಯ ಪ್ರೀತಿ ಮತ್ತು ಉತ್ಸಾಹ ಯಾವಾಗಲೂ ಇರುತ್ತದೆ" ಎಂದು ಎಸ್‌ಆರ್‌ಕೆ ಪ್ರತಿಕ್ರಿಯಿಸಿದರು. ಆದರೆ ನಾನು ನಿಜವಾಗಿಯೂ ಜೋಯಾ ಅಖ್ತರ್ ಚಿತ್ರಕ್ಕಾಗಿ ಎದುರು ನೋಡುತ್ತಿದ್ದೇನೆ ಎಂದು ಸಹ ಹೇಳಿದರು.

ಇದನ್ನೂ ಓದಿ: Adipurush ಬಿಡುಗಡೆಗೆ ಎರಡೇ ದಿನ ಬಾಕಿ: ಮೊದಲ ದಿನದ ಕಲೆಕ್ಷನ್​ ಬಗ್ಗೆ ಈಗ್ಲೇ ಲೆಕ್ಕಾಚಾರ ಶುರು!

ಜವಾನ್‌ ಎಸ್‌ಆರ್‌ಕೆ ಅವರ ಮುಂದಿನ ಬಹುನಿರೀಕ್ಷಿತ ಸಿನಿಮಾ. ಈ ಕುರಿತ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿ, "ರೆಡಿ ಸ್ಟೆಡಿ ಪೋ!" ಎಂದು ಉತ್ತರಿಸಿದ್ದಾರೆ. ಅಟ್ಲೀ ಕುಮಾರ್ ನಿರ್ದೇಶನದ ಈ ಸಿನಿಮಾದಲ್ಲಿ ಶಾರುಖ್ ಖಾನ್ ಜೊತೆ ನಯನತಾರಾ, ವಿಜಯ್ ಸೇತುಪತಿ, ಸಾನ್ಯಾ ಮಲ್ಹೋತ್ರಾ ಮತ್ತು ಪ್ರಿಯಾಮಣಿ ಅಭಿನಯಿಸಿದ್ದಾರೆ. 2023ರ ಬಹುನಿರೀಕ್ಷಿತ ಸಿನಿಮಾಗಳಲ್ಲಿ ಒಂದಾದ 'ಜವಾನ್' ಸೆಪ್ಟೆಂಬರ್ 7ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಲಿದೆ.

ಇದನ್ನೂ ಓದಿ: Disha Patani Birthday: ಯುವಕರ ನಿದ್ದೆಗೆಡಿಸಿದ ಬಾಲಿವುಡ್​ ಬೆಡಗಿಯ ಗ್ಲಾಮರ್​ ಫೋಟೋಗಳಿವು!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.