ETV Bharat / entertainment

ತೃತೀಯಲಿಂಗಿ ಪಾತ್ರದಲ್ಲಿ ಸುಶ್ಮಿತಾ ಸೇನ್ - 'ತಾಲಿ' ರಿಲೀಸ್​ ಡೇಟ್ ಅನೌನ್ಸ್ - ಸುಶ್ಮಿತಾ ಸೇನ್ ಲೇಟೆಸ್ಟ್ ನ್ಯೂಸ್

Taali Teaser: ತೃತೀಯಲಿಂಗಿ ಕಾರ್ಯಕರ್ತೆ ಶ್ರೀಗೌರಿ ಸಾವಂತ್ ಜೀವನಾಧಾರಿತ ವೆಬ್​ ಸೀರಿಸ್ 'ತಾಲಿ'ಯ ಟೀಸರ್​ ಅನಾವರಣಗೊಂಡಿದೆ.

Taali teaser
ತಾಲಿ ಟೀಸರ್​
author img

By

Published : Jul 29, 2023, 5:30 PM IST

ಮಾಜಿ ವಿಶ್ವಸುಂದರಿ, ಬಾಲಿವುಡ್ ನಟಿ ಸುಶ್ಮಿತಾ ಸೇನ್ ಅಭಿನಯದ 'ತಾಲಿ' ಬಹುನಿರೀಕ್ಷಿತ ವೆಬ್​ ಸೀರಿಸ್​. ನಿಜಜೀವನದ ಕಥೆಯನ್ನಾಧರಿಸಿರುವ 'ತಾಲಿ' ಬಿಡುಗಡೆಗೆ ಸಜ್ಜಾಗುತ್ತಿದೆ. 47ರ ಹರೆಯದ ಬಾಲಿವುಡ್​ ಬಹುಬೇಡಿಕೆ ನಟಿ ಸುಶ್ಮಿತಾ ಸೇನ್ ಅವರು ತೃತೀಯಲಿಂಗಿ ಕಾರ್ಯಕರ್ತೆ ಶ್ರೀಗೌರಿ ಸಾವಂತ್ ಅವರ ಪಾತ್ರಕ್ಕೆ ಜೀವ ತುಂಬಿದ್ದಾರೆ. ಇಂದು ಟೀಸರ್ ಅನಾವರಣಗೊಂಡಿದ್ದು, ತೃತೀಯಲಿಂಗಿಯರ ಪರಿಸ್ಥಿತಿಯನ್ನು ಚಿತ್ರಿಸಿದೆ.

ಸೀರೆ ಉಟ್ಟು, ಹಣೆಗೆ ದೊಡ್ಡ ಬಿಂದಿ ಇಟ್ಟು ನಟಿ ಸುಶ್ಮಿತಾ ಸೇನ್​ ಅವರು ಕನ್ನಡಿಯಲ್ಲಿ ತಮ್ಮನ್ನು ನೋಡಿಕೊಳ್ಳುವ ದೃಶ್ಯದೊಂದಿಗೆ ತಾಲಿ ಟೀಸರ್ ಆರಂಭಗೊಳ್ಳುತ್ತದೆ. ಪ್ರಸಿದ್ಧ ಗಾಯಕಿ ಉಷಾ ಉತುಪ್​ ಅವರ ಭಾವಚಿತ್ರ ಸುಶ್ಮಿತಾ ಅವರ ವಾರ್ಡ್ ರೋಬ್ ಮೇಲೆ ಅಂಟಿಸಿದ್ದು, ಪ್ರೇಕ್ಷಕರ ಗಮನ ಸೆಳೆದಿದೆ. ನಂತರ ತೃತೀಯಲಿಂಗಿ ಸಮುದಾಯದ ಸದಸ್ಯರು ಸುಶ್ಮಿತಾ ಅವರ ಪಾದಗಳನ್ನು ಮುಟ್ಟಿ ನಮಸ್ಕಾರ ಮಾಡುತ್ತಿರುವುದನ್ನು ವಿಡಿಯೋದಲ್ಲಿ ಕಾಣ ಬಹುದಾಗಿದೆ..

  • " class="align-text-top noRightClick twitterSection" data="">

ಶ್ರೀಗೌರಿ ಅಥವಾ ಗೌರಿ ಸಾವಂತ್ ( ಶ್ರೀಗೌರಿ ಸಾವಂತ್) ಪುಣೆಯ ತೃತೀಯಲಿಂಗಿ ಕಾರ್ಯಕರ್ತೆ. ಪೊಲೀಸ್ ಅಧಿಕಾರಿಯಾಗಿದ್ದ ತಮ್ಮ ತಂದೆಗೆ ನಿರಾಶೆಯಾಗುವುದನ್ನು ತಪ್ಪಿಸಲು ಸಾವಂತ್ ತಮ್ಮ ಹದಿಹರೆಯದಲ್ಲಿ ಮನೆಯಿಂದ ಹೊರ ಬರುತ್ತಾರೆ. ನಂತರ ಸಖಿ ಚಾರ್ ಚೌಘಿ ಟ್ರಸ್ಟ್‌ ( Sakhi Char Chowghi Trust) ನ ನಿರ್ದೇಶಕರಾಗಿ ಕೆಲಸ ಮಾಡುತ್ತಾರೆ. ಇದು ತೃತೀಯಲಿಂಗಿ ಸಮುದಾಯಕ್ಕೆ ಕೌನ್ಸೆಲಿಂಗ್​​​ ಸೇವೆ ಒದಗಿಸುವ ಮತ್ತು ಸುರಕ್ಷಿತ ಲೈಂಗಿಕತೆ ಉತ್ತೇಜಿಸುವ ಎನ್​ಜಿಒ. ಟ್ರಾನ್ಸ್‌ಜೆಂಡರ್‌ಗಳ ಹಕ್ಕುಗಳನ್ನು ಬೆಂಬಲಿಸಿ 2014 ರಲ್ಲಿ ಸುಪ್ರೀಂಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ ಮೊದಲ ಟ್ರಾನ್ಸ್‌ಜೆಂಡರ್ ಕಾರ್ಯಕರ್ತೆ ಇವರು. ಸುಪ್ರೀಂ ಕೋರ್ಟ್ ಟ್ರಾನ್ಸ್‌ಜೆಂಡರ್ ಅನ್ನು ಸಮಾಜದ ತೃತೀಯ ಲಿಂಗ ಎಂದು ಘೋಷಿಸಿದ ಮಹತ್ವದ ಪ್ರಕರಣದಲ್ಲಿ ಶ್ರೀಗೌರಿ ಸಾವಂತ್ ಮೊದಲ ಮತ್ತು ಪ್ರಮುಖ ಅರ್ಜಿದಾರರಾಗಿದ್ದರು.

ಇದನ್ನೂ ಓದಿ: ಸಂಜಯ್​ ದತ್​ ಜನ್ಮದಿನ: ಬಿಗ್​ ಬುಲ್​ ಪೋಸ್ಟರ್ ಅನಾವರಣ - 'ಡಬಲ್ ಇಸ್ಮಾರ್ಟ್' ವಿಲನ್ ಇವ್ರು​

ನಿಜಜೀವನಾಧಾರಿತ ತಾಲಿ ಸರಣಿ ಭಾರತದಲ್ಲಿ ತೃತೀಯಲಿಂಗಿಗಳ ಕುರಿತಾಗಿ ಚಿತ್ರಿಸಲಿದೆ. ಟ್ರಾನ್ಸ್​ಜೆಂಡರ್​ ಸಮುದಾಯದ ರಕ್ಷಣೆಗೆ ತೃತೀಯಲಿಂಗಿ ಕಾರ್ಯಕರ್ತೆ ಶ್ರೀಗೌರಿ ಸಾವಂತ್ ಅವರ ನಿರಂತರ ಹೋರಾಟದ ಮೇಲೆ ಈ ಸೀರಿಸ್​ ಬೆಳಕು ಚೆಲ್ಲುತ್ತದೆ. ಈ ತಾಲಿ ವೆಬ್​​ ಸರಣಿಯನ್ನು ಕ್ಷಿತಿಜ್ ಪಟವರ್ಧನ್ ಬರೆದಿದ್ದಾರೆ. ಅರ್ಜುನ್ ಸಿಂಗ್ ಬರೆನ್ ಮತ್ತು ಕಾರ್ತಿಕ್ ಡಿ ನಿಶಾಂದರ್ ರಚಿಸಿದ್ದಾರೆ. ಇವರಿಬ್ಬರೂ ನಿರ್ಮಾಪಕ ಅಫೀಫಾ ನಾಡಿಯಾಡ್ವಾಲಾ ಅವರೊಂದಿಗೆ ಸಹ ನಿರ್ಮಾಪಕರಾಗಿಯೂ ಈ ಸೀರಿಸ್​ನಲ್ಲಿ ಕೆಲಸ ಮಾಡುತ್ತಿದ್ದಾರೆ.

ಇದನ್ನೂ ಓದಿ: ಜೈಲರ್​ ಆಡಿಯೋ ಲಾಂಚ್ ಈವೆಂಟ್​: ತಲೈವಾ ಎಂಟ್ರಿ ಅದ್ಭುತ! ವಿಡಿಯೋ ನೋಡಿ..

ಆಗಸ್ಟ್ 15 ರಂದು ಒಟಿಟಿ ವೇದಿಕೆ ಜಿಯೋ ಸಿನಿಮಾದಲ್ಲಿ ರವಿ ಜಾಧವ್​ ನಿರ್ದೇಶನದ 'ತಾಲಿ' ಸೀರಿಸ್ ಪ್ರಸಾರ ಪ್ರಾರಂಭಿಸಲಿದೆ. ಪ್ರಚಾರದ ಭಾಗವಾಗಿ, ಅಭಿಮಾನಿಗಳಲ್ಲಿ ಕುತೂಹಲ ಹುಟ್ಟಿಸುವ ನಿಟ್ಟಿನಲ್ಲಿ ಇಂದು ಟೀಸರ್​ ಅನಾವರಣಗೊಂಡಿದೆ. ಟೀಸರ್​ ವೀಕ್ಸಿಸಿದ ಪ್ರೇಕ್ಷಕರು ಸೀರಿಸ್​ ಬಗ್ಗೆ ಕುತೂಹಲ ವ್ಯಕ್ತಪಡಿಸಿದ್ದಾರೆ. ​

ETV Bharat Logo

Copyright © 2025 Ushodaya Enterprises Pvt. Ltd., All Rights Reserved.