ETV Bharat / entertainment

ಹೃದಯಾಘಾತದ ಬಳಿಕ ಮೊದಲ ಬಾರಿಗೆ ಮುಂಬೈನಲ್ಲಿ ಕಾಣಿಸಿಕೊಂಡ ಮಾಜಿ ವಿಶ್ವಸುಂದರಿ - Sushmita Sen heart attack

ಹೃದಯಾಘಾತದ ಬಳಿಕ ಮೊದಲ ಬಾರಿಗೆ ಸಾರ್ವಜನಿಕವಾಗಿ ಮುಂಬೈ ನಗರದಲ್ಲಿ ಕಾಣಿಸಿಕೊಂಡಿದ್ದಾರೆ ಮಾಜಿ ವಿಶ್ವಸುಂದರಿ ಸುಶ್ಮಿತಾ ಸೇನ್.

Sushmita Sen
ಸುಶ್ಮಿತಾ ಸೇನ್
author img

By

Published : Mar 24, 2023, 12:39 PM IST

ಬಾಲಿವುಡ್ ಬೆಡಗಿ ಸುಶ್ಮಿತಾ ಸೇನ್ ಇತ್ತೀಚಿಗೆ ಹೃದಯಾಘಾತಕ್ಕೆ ಒಳಗಾಗಿದ್ದರು. ಸೂಕ್ತ ಚಿಕಿತ್ಸೆ ಪಡೆದಿರುವ ಅವರು ಸದ್ಯ ಚೇತರಿಸಿಕೊಂಡಿದ್ದು, ಮತ್ತೆ ತಮ್ಮ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ. ನಟಿ ಮುಂಬೈನಲ್ಲಿ ಕಾಣಿಸಿಕೊಂಡಿದ್ದಾರೆ.

ಕೆಲವು ದಿನಗಳ ಹಿಂದಷ್ಟೇ ಹೃದಯಾಘಾತಕ್ಕೆ ಒಳಗಾಗಿ ಚಿಕಿತ್ಸೆ ಪಡೆದಿರುವ ಮಾಜಿ ವಿಶ್ವಸುಂದರಿ, ತಮ್ಮನ್ನು ಫಿಟ್ ಆಗಿಟ್ಟುಕೊಳ್ಳಲು ಪ್ರಯತ್ನಿಸುತ್ತಿರುವುದಾಗಿ ಅಭಿಮಾನಿಗಳಿಗೆ ತಿಳಿಸಿದ್ದರು. ಮನೆಯಲ್ಲಿ ಆರೈಕೆಯಲ್ಲಿದ್ದೇನೆ, ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದೇನೆ ಎಂದು ಹೇಳಿದ್ದರು. ಶೀಘ್ರವೇ ತಮ್ಮ ಕೆಲಸಗಳಿಗೆ ಮರಳುವುದಾಗಿಯೂ ತಿಳಿಸಿದ್ದ ಅವರೀಗ ಮುಂಬೈನಲ್ಲಿ ಕ್ಯಾಮರಾ ಕಣ್ಣಿಗೆ ಬಿದ್ದಿದ್ದಾರೆ.

ಸುಶ್ಮಿತಾ ಸೇನ್ ಮುಂಬರುವ ಚೊಚ್ಚಲ ವೆಬ್ ಸೀರಿಸ್​ 'ಆರ್ಯ' ಮತ್ತು 'ತಾಲಿ' ಸಲುವಾಗಿ ಸುದ್ದಿಯಲ್ಲಿದ್ದಾರೆ. ತಾಲಿ ಚಿತ್ರದಲ್ಲಿ ಮೊಟ್ಟ ಮೊದಲ ಬಾರಿಗೆ ತೃತೀಯಲಿಂಗಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಕುರಿತ ಅವರ ಲುಕ್ ಕೂಡ ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು.

ಸುಶ್ಮಿತಾ ತಾವು ಹೃದಯಾಘಾತದಿಂದ ಬಳಲಿದ ಬಗ್ಗೆ ಮಾರ್ಚ್ 2ರಂದು ಬಹಿರಂಗಪಡಿಸಿದ್ದರು. "ನನಗೆ ಹೃದಯಾಘಾತ ಸಂಭವಿಸಿತ್ತು. ವೈದ್ಯ ತಂಡದ ಸಲಹೆ ಮೇರೆಗೆ ಸೂಕ್ತ ಚಿಕಿತ್ಸೆ ಪಡೆದುಕೊಂಡಿದ್ದೇನೆ. ಆಂಜಿಯೋಪ್ಲಾಸ್ಟಿ ಮಾಡಲಾಗಿದೆ, ಸ್ಟೆಂಟ್ಸ್​ ಅಳವಡಿಸಲಾಗಿದೆ" ಎಂದು ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದ್ದರು. ಈ ಸುದ್ದಿ ತಿಳಿದ ಅವರ ದೊಡ್ಡ ಸಂಖ್ಯೆಯ ಅಭಿಮಾನಿಗಳು ಆಘಾತಕ್ಕೊಳಗಾಗಿದ್ದರು. ಅಭಿಮಾನಿಗಳು ಚಿಂತೆಯಲ್ಲಿರುವುದನ್ನರಿತ ನಟಿ ಮತ್ತೊಮ್ಮೆ ಸಾಮಾಜಿಕ ಜಾಲತಾಣದಲ್ಲಿ ಲೈವ್​ ಬಂದು ಅಭಿಮಾನಿಗಳಿಗೆ ಆರೋಗ್ಯದ ಅಪ್ಡೇಟ್ ನೀಡಿದ್ದರು.

ಲೈವ್​ ವಿಡಿಯೋದಲ್ಲಿ ಮಾಹಿತಿ ಹಂಚಿಕೊಂಡ ಸುಶ್ಮಿತಾ, ಈ ಕಠಿಣ ಪರಿಸ್ಥಿತಿಯಲ್ಲಿ ತಮಗೆ ಪ್ರೀತಿ ತೋರಿದ, ಚೇತರಿಕೆಗೆ ಪ್ರಾರ್ಥಿಸಿದ ಅಭಿಮಾನಿಗಳಿಗೆ ಕೃತಜ್ಞತೆ ಸಲ್ಲಿಸಿದ್ದರು. ಅಲ್ಲದೇ ಹೃದಯಾಘಾತ ಅದ ವೇಳೆ ಸೂಕ್ತ ನಿರ್ಧಾರ ತೆಗೆದುಕೊಳ್ಳಲು ಸಹಾಯ ಮಾಡಿದ ವೈದ್ಯರಿಗೂ ಧನ್ಯವಾದ ಹೇಳಿದ್ದರು. ಇದೀಗ ಚೇತರಿಸಿಕೊಳ್ಳುತ್ತಿದ್ದು, ಶೀರ್ಘದಲ್ಲೇ ವೈದ್ಯರ ಸಲಹೆ ಮೇರೆಗೆ ಚೀತ್ರೀಕರಣಕ್ಕೆ ಮರಳುತ್ತೇನೆಂದು ಮಾಹಿತಿ ನೀಡಿದ್ದರು. ಅದಾದ ಬಳಿಕ ಲ್ಯಾಕ್ಮೆ ಫ್ಯಾಶನ್ ವೀಕ್‌ನಲ್ಲಿ ಭಾಗಿಯಾಗಿದ್ದರು. ಫ್ಯಾಷನ್ ಗಾಲಾದಲ್ಲಿ ತಮ್ಮ ಸಿಗ್ನೇಚರ್ ಸ್ಟೈಲ್​ನೊಂದಿಗೆ ಹೆಜ್ಜೆ ಹಾಕಿ ಅಭಿಮಾನಿಗಳ ಚಿಂತೆ ದೂರ ಮಾಡಿದ್ದರು. ಇದೀಗ ಮುಂಬೈ ನಗರಿಯಲ್ಲಿ ದರ್ಶನ ನೀಡಿದ್ದು, ಸಂಪೂರ್ಣವಾಗಿ ಫಿಟ್ ಆಗಿರುವ ಲವಲವಿಕೆ ಅವರಲ್ಲಿ ಕಾಣುತ್ತಿದೆ.

ಇದನ್ನೂ ಓದಿ: ಹೃದಯಾಘಾತದಿಂದ ಚೇತರಿಕೆ: ಎಲ್‌ಎಫ್‌ಡಬ್ಲ್ಯೂ 2023ರಲ್ಲಿ ಸುಶ್ಮಿತಾ ಸೇನ್ ಭಾಗಿ

ಸುಶ್ಮಿತಾ ಆರ್ಯ ವೆಬ್ ಸರಣಿ, ತಾಲಿ ಸೀರಿಸ್​ನಲ್ಲಿ ಕೆಲಸ ಮಾಡುತ್ತಿದ್ದಾರೆ. 'ತಾಲಿ' ತೃತೀಯಲಿಂಗಿ ಕಾರ್ಯಕರ್ತೆ ಗೌರಿ ಸಾವಂತ್ ಅವರ ಕಥೆ. ಸುಶ್ಮಿತಾ ಸೇನ್​​ ಅವರು ಗೌರಿ ಪಾತ್ರಕ್ಕೆ ಜೀವ ತುಂಬಲಿದ್ದಾರೆ. ಗೌರಿ ಅವರ ವೈಯಕ್ತಿಕ ಜೀವನದ ಬಗ್ಗೆ ತಿಳಿದುಕೊಳ್ಳುವ ಅವಕಾಶ ಪ್ರೇಕ್ಷಕರಿಗೆ ಶೀಘ್ರದಲ್ಲೇ ಸಿಗಲಿದೆ. ಅರ್ಜುನ್ ಸಿಂಗ್ ಬರನ್ ಮತ್ತು ಕಾರ್ತಿಕ್ ಡಿ ನಿಶಾಂದರ್ 'ತಾಲಿ' ನಿರ್ಮಾಣದ ಜವಾಬ್ದಾರಿ ಹೊತ್ತುಕೊಂಡಿದ್ದಾರೆ. ಗ್ಲೋಬಲ್ ಸ್ಪೋರ್ಟ್ಸ್ ಎಂಟರ್‌ಟೈನ್‌ಮೆಂಟ್ ಮತ್ತು ಮೀಡಿಯಾ ಸೊಲ್ಯೂಷನ್ಸ್ ಬ್ಯಾನರ್ ಅಡಿ ಈ ವೆಬ್​ ಸೀರಿಸ್ ನಿರ್ಮಿಸಲಾಗುತ್ತಿದೆ.

ಇದನ್ನೂ ಓದಿ: 'ಚೇತರಿಸಿಕೊಳ್ಳುತ್ತಿದ್ದೇನೆ, ಯಾವುದೇ ತೊಂದರೆ ಇಲ್ಲ': ಅಭಿಮಾನಿಗಳ ಆತಂಕ ದೂರ ಮಾಡಿದ ಸುಶ್ಮಿತಾ ಸೇನ್

ಕಳೆದ ಅಕ್ಟೋಬರ್​ನಲ್ಲಿ ಸುಶ್ಮಿತಾ ಸೇನ್ ಅವರ ಫಸ್ಟ್ ಲುಕ್ ಅನಾವರಣಗೊಂಡು ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡಿತ್ತು. ಈ ಸೀರಿಸ್ ಮೇಲೆ ಪ್ರೇಕ್ಷಕರಲ್ಲಿ ಬಹಳ ಕುತೂಹಲ ಮೂಡುವಂತೆ ಮಾಡಿತ್ತು. ಕೆಂಪು - ಹಸಿರು ಸೀರೆ ಧರಿಸಿದ್ದ ಸುಶ್ಮಿತಾ ಅವರು ದೊಡ್ಡ ಬಿಂದಿ, ಕೆಂಪು ಲಿಪ್ ಸ್ಟಿಕ್ ಹಾಕಿದ್ದರು, ಸಖತ್​ ಬೋಲ್ಡ್​ ಲುಕ್ ನೀಡಿ ಚಪ್ಪಾಳೆ ತಟ್ಟುವ ಫೋಟೋ ಇದಾಗಿದೆ. ತೃತೀಯ ಲಿಂಗಿಗಳ ಹೋರಾಟ, ಕಷ್ಟಗಳನ್ನು ಈ ವೆಬ್​ ಸೀರಿಸ್​ ಹೇಳಲಿದೆ ಎಂದು ಕೂಡ ಸುಶ್ಮಿತಾರವರು ತಿಳಿಸಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.