ETV Bharat / entertainment

'ಸೂರರೈ ಪೊಟ್ರು' ಹಿಂದಿ ರಿಮೇಕ್: ಅಕ್ಷಯ್ ಕುಮಾರ್​ ಜೊತೆ ನಟಿಸಿರುವ ಸೂರ್ಯ - ಅಕ್ಷಯ್ ಕುಮಾರ್

ನಟ ಸೂರ್ಯ ಅಭಿನಯಿಸಿ, ನಿರ್ಮಿಸಿದ್ದ 'ಸೂರರೈ ಪೊಟ್ರು' ಸಿನಿಮಾ 2020ರ ನವೆಂಬರ್‌ನಲ್ಲಿ ಓಟಿಟಿಯಲ್ಲಿ ರಿಲೀಸ್ ಆಗಿತ್ತು. ಈ ಚಿತ್ರವನ್ನ ಇದೀಗ ಹಿಂದಿಗೆ ರಿಮೇಕ್‌ ಮಾಡುತ್ತಿದ್ದು, ಸೂರ್ಯ ನಿಭಾಯಿಸಿದ್ದ ಪಾತ್ರವನ್ನು ಅಕ್ಷಯ್ ಕುಮಾರ್ ಮಾಡಲಿದ್ದಾರೆ. ಜೊತೆಗೆ ಅತಿಥಿ ಪಾತ್ರದಲ್ಲಿ ಸೂರ್ಯ ಸಹ ಕಾಣಿಸಿಕೊಳ್ಳಲಿದ್ದಾರೆ.

ಅಕ್ಷಯ್ ಕುಮಾರ್​ ಜೊತೆ ನಟ ಸೂರ್ಯ
ಅಕ್ಷಯ್ ಕುಮಾರ್​ ಜೊತೆ ನಟ ಸೂರ್ಯ
author img

By

Published : Jun 16, 2022, 12:56 PM IST

ಮುಂಬೈ : ತಮಿಳು ನಟ ಸೂರ್ಯ, ಅಪರ್ಣಾ ನಟನೆಯ 'ಸೂರರೈ ಪೊಟ್ರು' ಸಿನಿಮಾವನ್ನು ಹಿಂದಿಗೆ ರಿಮೇಕ್ ಮಾಡಲಾಗುತ್ತಿದೆ. ಓಟಿಟಿಯಲ್ಲಿ ರಿಲೀಸ್ ಆದ ಈ ಚಿತ್ರಕ್ಕೆ ಭಾರಿ ಜನಪ್ರಿಯತೆ ಸಿಕ್ಕಿತ್ತು. ಇದೀಗ ಅಭಿಮಾನಿಗಳಿಗೆ ಮತ್ತೊಂದು ಗುಡ್​ ನ್ಯೂಸ್​ ಸಿಕ್ಕಿದ್ದು, ಸೂರ್ಯ ನಿಭಾಯಿಸಿದ್ದ ಪಾತ್ರವನ್ನು ಹಿಂದಿ ರಿಮೇಕ್‌ನಲ್ಲಿ ಅಕ್ಷಯ್ ಕುಮಾರ್ ಮಾಡಲಿದ್ದಾರೆ. ಜೊತೆಗೆ ಸೌತ್ ಸ್ಟಾರ್ ಸೂರ್ಯ ಕೂಡ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಈ ಕುರಿತು ಟ್ವಿಟ್ಟರ್‌ನಲ್ಲಿನ ಅಕ್ಷಯ್ ಕುಮಾರ್ ಜೊತೆಗಿನ ಫೋಟೋವನ್ನ ಪೋಸ್ಟ್‌ ಮಾಡಿರುವ ಸೂರ್ಯ, 'ಸೂರರೈ ಪೊಟ್ರು' ಹಿಂದಿ ರಿಮೇಕ್‌ ಚಿತ್ರತಂಡದೊಂದಿಗೆ ಪ್ರತಿ ನಿಮಿಷವನ್ನು ಆನಂದಿಸಿದೆ. ಸುಧಾ ಕೊಂಗರಾ ಅವರು ನಮ್ಮ ಕಥೆಯನ್ನು ಸುಂದರವಾಗಿ ಮತ್ತೆ ಜೀವಂತವಾಗಿಡಲು ಮುಂದಾಗಿದ್ದಾರೆ.

ಅಂದಹಾಗೆ, 'ಸೂರರೈ ಪೊಟ್ರು' ಸಿನಿಮಾವನ್ನು ಕನ್ನಡಿಗ ಕ್ಯಾಪ್ಟನ್ ಜಿ.ಆರ್. ಗೋಪಿನಾಥ್ ಅವರ ಬದುಕನ್ನು ಆಧಾರಿಸಿ ನಿರ್ಮಿಸಲಾಗಿದೆ. ಜನಸಾಮಾನ್ಯರು ಕೂಡ ವಿಮಾನದಲ್ಲಿ ಓಡಾಡುವಂತೆ ಮಾಡುವುದು ಈ ಸಿನಿಮಾದ ಕಥಾನಾಯಕನ ಕನಸಾಗಿರುತ್ತದೆ. ಆ ಕನಸನ್ನು ನನಸು ಮಾಡುವಲ್ಲಿ ಆತನ ಹೋರಾಟ ಹೇಗಿರುತ್ತದೆ ಎಂಬುದೇ ಇಡೀ ಸಿನಿಮಾದ ಕಥೆಯಾಗಿದೆ.

ಇದನ್ನೂ ಓದಿ: 'ಘೂಮರ್' ಚಿತ್ರದ ಫಸ್ಟ್ ಲುಕ್ ಬಿಡುಗಡೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.