ETV Bharat / entertainment

'ಸಪ್ಲೈಯರ್‌ ಶಂಕರ' ಮೊದಲ ಹಾಡು ಬಿಡುಗಡೆ: ತಾಯಿ ಕಳೆದುಕೊಂಡ ಮಗನ ನೋವಿನ ಗೀತೆಯಿದು.. - ಈಟಿವಿ ಭಾರತ ಕನ್ನಡ

Supplier Shankara first song released: 'ಸಪ್ಲೈಯರ್ ಶಂಕರ' ಸಿನಿಮಾದ ಮೊದಲ ಹಾಡು ಬಿಡುಗಡೆಯಾಗಿದೆ.

supplier shankara
'ಸಪ್ಲೈಯರ್‌ ಶಂಕರ'
author img

By ETV Bharat Karnataka Team

Published : Aug 29, 2023, 12:15 PM IST

ಸ್ಯಾಂಡಲ್​ವುಡ್​ನಲ್ಲಿ 'ಗಂಟುಮೂಟೆ', 'ಟಾಮ್​ ಅಂಡ್​ ಜೆರ್ರಿ' ಸಿನಿಮಾಗಳ ಮೂಲಕ ಭರವಸೆ ಮೂಡಿಸಿರುವ ಯುವ ನಟ ನಿಶ್ಚಿತ್ ಕೊರೋಡಿ. ಸದ್ಯ 'ಸಪ್ಲೈಯರ್ ಶಂಕರ' ಸಿನಿಮಾ ವಿಚಾರವಾಗಿ ಬ್ಯುಸಿಯಾಗಿದ್ದಾರೆ. ಈ ಹಿಂದಿನ ಸಿನಿಮಾಗಳಲ್ಲಿ ಲವರ್​ ಬಾಯ್​ ಇಮೇಜಿನಿಂದ ಗುರುತಿಸಿಕೊಂಡಿದ್ದ ನಿಶ್ಚಿತ್​ ಈ ಚಿತ್ರದಲ್ಲಿ ರಗಡ್​ ಲುಕ್​ನಲ್ಲಿ ಕಾಣಿಸಿಕೊಂಡಿದ್ದಾರೆ. ಸದ್ದಿಲ್ಲದೇ ಚಿತ್ರದ ಶೂಟಿಂಗ್​ ಮುಕ್ತಾಯವಾಗಿದ್ದು, ಬಿಡುಗಡೆಗೆ ಸಜ್ಜಾಗಿದೆ. ಇದೀಗ 'ಸಪ್ಲೈಯರ್ ಶಂಕರ' ಸಿನಿಮಾದ ಮೊದಲ ಹಾಡು ಆನಂದ್​ ಆಡಿಯೋ ಯೂಟ್ಯೂಬ್​ ಚಾನೆಲ್​ನಲ್ಲಿ ಬಿಡುಗಡೆಯಾಗಿದೆ.

  • " class="align-text-top noRightClick twitterSection" data="">

ತಾಯಿ ಕಳೆದುಕೊಂಡ ಮಗನ ನೋವಿನ ಗೀತೆ.. ತಾಯಿ ಕಳೆದುಕೊಂಡ ಮಗನ ಆಕ್ರಂದನ, ತುಂಬಾ ಪ್ರೀತಿಸುವ ಜೀವ ದೂರವಾದಾಗ ಆಗುವ ನೋವನ್ನು 'ಅಯ್ಯೋ ದೈವವೇ' ಹಾಡಿನಲ್ಲಿ ಅದ್ಭುತವಾಗಿ ಅತ್ಯಂತ ಭಾವನಾತ್ಮಕವಾಗಿ ಕಟ್ಟಿಕೊಡಲಾಗಿದೆ. ಈ ಎಮೋಷನಲ್​ ಹಾಡಿಗೆ ನಿರ್ದೇಶಕ ರಂಜಿತ್​ ಸಿಂಗ್​ ರಜಪೂತ್​ ಸಾಹಿತ್ಯ ಬರೆದಿದ್ದಾರೆ. ಸುನಿಲ್​ ಕಶ್ಯಪ್​ ಧ್ವನಿಯಾಗಿದ್ದಾರೆ. ಆರ್​.ಬಿ ಭರತ್ ಟ್ಯೂನ್​ ಹಾಕಿದ್ದಾರೆ. ಕೇಳುಗರಿಗೆ ಬಹಳ ಕನೆಕ್ಟ್​ ಆಗುವ ಸೆಂಟಿಮೆಂಟ್​ ಹಾಡು ಇದಾಗಿದ್ದು, ಸಾಹಿತ್ಯ, ಸಂಗೀತ ಎಲ್ಲ ವಿಚಾರದಲ್ಲೂ ಗಮನ ಸೆಳೆಯುತ್ತಿದೆ.

ಪೋಸ್ಟರ್​​ಗೆ ಉತ್ತಮ ರೆಸ್ಪಾನ್ಸ್​: ಇತ್ತೀಚೆಗೆ ರಿಲೀಸ್​ ಆದ 'ಸಪ್ಲೈಯರ್ ಶಂಕರ' ಮೋಷನ್​ ಪೋಸ್ಟರ್​ಗೆ ಉತ್ತಮ ರೆಸ್ಪಾನ್ಸ್​ ಸಿಕ್ಕಿತ್ತು. ಪೊಲೀಸ್​ ಸ್ಟೇಷನ್​ ದೃಶ್ಯದ ಮೂಲಕ ತೆರೆದುಕೊಳ್ಳುವ ಮೋಷನ್​ ಪೋಸ್ಟರ್​ ನಾನಾ ಕುತೂಹಲವನ್ನು ಹುಟ್ಟುಹಾಕಿದೆ. ರಕ್ತ ಮೆತ್ತಿದ ಅವತಾರದಲ್ಲಿ ಮಾಸ್​ ಲುಕ್​ನಲ್ಲಿ ನಟ ನಿಶ್ಚಿತ್ ಕೊರೋಡಿ ಕಾಣಿಸಿಕೊಂಡಿದ್ದಾರೆ. ಯುವ ಪ್ರತಿಭೆ ರಂಜಿತ್​ ಸಿಂಗ್​ ರಜಪೂತ್​ ಈ ಚಿತ್ರಕ್ಕೆ ಆ್ಯಕ್ಷನ್​ ಕಟ್​ ಹೇಳಿದ್ದಾರೆ. ನಿಶ್ಚಿತ್ ಕೊರೋಡಿಗೆ ಜೋಡಿಯಾಗಿ ಲಗೋರಿ ಸಿನಿಮಾ ಖ್ಯಾತಿಯ ದೀಪಿಕಾ ಆರಾಧ್ಯ ನಟಿಸಿದ್ದಾರೆ.

ಇದನ್ನೂ ಓದಿ: ಸಮಾಜದ ವ್ಯವಸ್ಥೆಯ ವಿರುದ್ಧ 'ಫೈಟರ್'​ ಆಗಿ ವಿನೋದ್​ ಪ್ರಭಾಕರ್​: ಚಿತ್ರದ ಟೀಸರ್​ ನೋಡಿ..

ಬಾರ್​ ಸಪ್ಲೈಯರ್​ ಕುರಿತ ಕಥೆ.. ಇವರಲ್ಲದೇ ಗೋಪಾಲ ಕೃಷ್ಣ ದೇಶಪಾಂಡೆ, ಜ್ಯೋತಿ ರೈ, ನವೀನ್​ ಡಿ ಪಡೀಲ್​ ಸೇರಿದಂತೆ ಒಂದಿಷ್ಟು ಹೊಸಬರು ಕೂಡ ಈ ಚಿತ್ರದಲ್ಲಿದ್ದಾರೆ. ಬೆಂಗಳೂರು ಸುತ್ತಮುತ್ತ ಚಿತ್ರೀಕರಣ ನಡೆಸಲಾಗಿದೆ. ಸಿನಿಮಾದ ಟೈಟಲ್​ ಹೇಳುವಂತೆ ಒಬ್ಬ ಬಾರ್​ ಸಪ್ಲೈಯರ್​ ಸುತ್ತ ಇಡೀ ಕಥೆ ಸುತ್ತುತ್ತದೆ. 'ಸಪ್ಲೈಯರ್ ಶಂಕರ' ಸಿನಿಮಾಗೆ ರಂಜಿತ್​ ಕಥೆ, ಚಿತ್ರಕಥೆ, ಸಂಭಾಷಣೆ ಜೊತೆಗೆ ಸಾಹಿತ್ಯದ ಜವಾಬ್ದಾರಿ ಹೊತ್ತುಕೊಂಡಿದ್ದಾರೆ.

ಚಿತ್ರತಂಡ ಹೀಗಿದೆ.. ಚಿತ್ರದ ಹಾಡುಗಳಿಗೆ ಕನ್ನಡದ ಖ್ಯಾತ ಗಾಯಕ ವಿಜಯ ಪ್ರಕಾಶ್​, ಅಮ್ಮಾ ನನ್ನೀ ಜನುಮ ಖ್ಯಾತಿಯ ಸುನಿಲ್​ ಕಶ್ಯಪ್​, ಮೋಹನ್​ ಬಿನ್ನಿಪೇಟೆ, ಸಂತೋಷ್​ ವೆಂಕಿ, ನಕುಲ್​ ಅಭಯ್ಯಂಕರ್​, ಐಶ್ವರ್ಯಾ ರಂಗರಾಜನ್​ ಧ್ವನಿಯಾಗಿದ್ದಾರೆ. ರವಿ ಬಸ್ರೂರ್​ ಬಳಿ ಕೆಲಸ ಮಾಡಿರುವ ಆರ್​.ಬಿ ಭರತ್​ ಸಂಗೀತ ನೀಡಿದ್ದಾರೆ. ಇನ್ನು 'ಸಪ್ಲೈಯರ್ ಶಂಕರ' ಚಿತ್ರಕ್ಕೆ ಸತೀಶ್​ ಚಂದ್ರಯ್ಯ ಸಂಕಲನ, ಸತೀಶ್​ ಕುಮಾರ್​ ಎ ಛಾಯಾಗ್ರಹಣ, ಬಾಲಾಜಿ ಕಲಾ ನಿರ್ದೇಶನವಿದೆ. ತ್ರಿನೇತ್ರ ಫಿಲಂಸ್​ ಸಂಸ್ಥೆಯಡಿ ಎಂ ಚಂದ್ರಶೇಖರ್​ ಹಾಗೂ ನಾಗೇಂದ್ರ ಸಿಂಗ್​ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ. ಅತೀ ಶೀಘ್ರದಲ್ಲೇ ಚಿತ್ರ ತೆರೆ ಕಾಣಲಿದೆ.

ಇದನ್ನೂ ಓದಿ: 'ಗಂಟುಮೂಟೆ' ಹೀರೋ ನಟನೆಯ ಹೊಸ ಚಿತ್ರದ ಶೂಟಿಂಗ್ ಕಂಪ್ಲೀಟ್: ಟೈಟಲ್ ಏನು ಗೊತ್ತಾ?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.