ETV Bharat / entertainment

ಸ್ಯಾಂಡಲ್​ವುಡ್ 2022:​​ ಸೂಪರ್ ಹಿಟ್ ಸಿನಿಮಾಗಳು - ನಿರೀಕ್ಷೆ ತಲುಪದ ಚಿತ್ರಗಳು!! - ಕಾಂತಾರ

2022 ಹಿನ್ನೋಟ - ಸ್ಯಾಂಡಲ್​ವುಡ್​ನಲ್ಲಿ ಸೂಪರ್ ಹಿಟ್ ಸಿನಿಮಾಗಳ ನಿರ್ಮಾಣ - ನಿರೀಕ್ಷೆ ಹುಸಿಯಾಗಿಸಿವೆ ಕೆಲ ಕನ್ನಡ ಚಿತ್ರಗಳು.

movies of sandalwood 2022
ಸೂಪರ್ ಹಿಟ್ ಸಿನಿಮಾಗಳು
author img

By

Published : Dec 28, 2022, 3:49 PM IST

2022ನೇ ಸಾಲು ಕನ್ನಡ ಚಿತ್ರರಂಗಕ್ಕೆ ಸುವರ್ಣ ಕಾಲ. ಸೂಪರ್ ಹಿಟ್ ಸಿನಿಮಾಗಳು ನಿರ್ಮಾಣವಾಗಿ ಇಡೀ ಭಾರತೀಯ ಚಿತ್ರರಂಗವೇ ಕನ್ನಡದತ್ತ ತಮ್ಮ ಗಮನ ಹರಿಸುವಂತಾಯ್ತು. ಹಾಗಂತ ನಿರ್ಮಾಣವಾದ ಸಿನಿಮಾಗಳೆಲ್ಲವೂ ತನ್ನ ಗುರಿ ತಲುಪಿಲ್ಲ. ನಿರೀಕ್ಷೆ ಹುಸಿ ಮಾಡಿದ ಸಿನಿಮಾಗಳೂ ಸಹ ಇವೆ. ಸೂಪರ್ ಹಿಟ್ ಸಿನಿಮಾಗಳ್ಯಾವುವು? ಪ್ರೇಕ್ಷಕರ ನಂಬಿಕೆ ಹುಸಿ ಮಾಡಿದ ಚಿತ್ರಗಳು ಯಾವುವು? ಇಲ್ಲಿದೆ ಕೆಲ ಮಾಹಿತಿ.

movies of sandalwood 2022
ಬನಾರಸ್ ಸಿನಿಮಾ

ಒಂಬತ್ತನೇ ದಿಕ್ಕು: 2022ನೇ ವರ್ಷದ ಆರಂಭದಲ್ಲೇ ಬಹಳ ಆತ್ಮ ವಿಶ್ವಾಸದಿಂದ ಚಿತ್ರಮಂದಿರಕ್ಕೆ ಬಂದ ಮೊದಲ ಸಿನಿಮಾ ಲೂಸ್ ಮಾದ ಯೋಗಿ ಅಭಿನಯದ ಒಂಬತ್ತನೇ ದಿಕ್ಕು. ನಿರ್ದೇಶಕ ದಯಾಳ್ ಪದ್ಮಾನಭನ್​​​​ ನಿರ್ದೇಶನದ ಒಂಬತ್ತನೇ ದಿಕ್ಕು ಚಿತ್ರ ಅಂದುಕೊಂಡಂತೆ ಪ್ರೇಕ್ಷಕರನ್ನು ರಂಜಿಸಲಿಲ್ಲ. ಈ ಮಧ್ಯೆ ಬಂದ ಹೊಸಬರ ಒಪ್ಪಂದ ಹಾಗೂ ಫೋರ್ ವಾಲ್ಸ್ ಚಿತ್ರ ಕೂಡ ಸಿನಿಮಾ ಪ್ರಿಯರನ್ನು ರಂಜಿಸುವಲ್ಲಿ ವಿಫಲವಾದವು.

movies of sandalwood 2022
ಲವ್ ಮಾಕ್ ಟೈಲ್ 2

ಲವ್ ಮಾಕ್ ಟೈಲ್ 2: ಫೆಬ್ರವರಿಯಲ್ಲಿ ತೆರೆಗೆ ಬಂದ ಲವ್ ಮಾಕ್ ಟೈಲ್ ಸೀಕ್ವೆಲ್​​​ ಯಶಸ್ವಿಯಾಯಿತು. ಡಾರ್ಲಿಂಗ್ ಕೃಷ್ಣ ನಟಿಸಿ, ನಿರ್ದೇಶನ ಮಾಡಿದ ಲವ್ ಮಾಕ್ ಟೈಲ್ 2 ಚಿತ್ರ ಪ್ರೇಕ್ಷಕರಿಗೆ ಇಷ್ಟ ಆಗುವ ಮೂಲಕ ಬಾಕ್ಸ್ ಆಫೀಸ್​​ನಲ್ಲಿ 15 ಕೋಟಿ ರೂಪಾಯಿ ಕಲೆಕ್ಷನ್ ಮಾಡಿ ಗೆಲುವಿನ ನಗೆ ಬೀರಿತ್ತು.

ಒಂದು ಮಟ್ಟಿನ ಯಶಸ್ಸು: ಈ ಸಿನಿಮಾ ಸಕ್ಸಸ್ ಬಳಿಕ ಒಂದು ಮಟ್ಟಿಗೆ ಯಶಸ್ಸು ಕಂಡ ಚಿತ್ರಗಳು ಅಂದ್ರೆ ಬೈ ಟು ಲವ್, ಏಕ್ ಲವ್ ಯಾ ಹಾಗು ಓಲ್ಡ್ ಮಾಂಕ್. ಹಾಕಿದ ಬಜೆಟ್​​ಗೆ ಮೋಸ ಆಗದ ರೀತಿ ಬಾಕ್ಸ್ ಆಫೀಸ್​ನಲ್ಲಿ ಗಳಿಕೆ ಕಂಡವು.

ಸೂಪರ್​ ಹಿಟ್ ಜೇಮ್ಸ್: ದಿವಗಂತ ಪುನೀತ್ ರಾಜ್ ಕುಮಾರ್ ಹುಟ್ಟುಹಬ್ಬದಂದು ಜೇಮ್ಸ್ ಸಿನಿಮಾ ವಿಶ್ವದಾದ್ಯಂತ ಬಿಡುಗಡೆ ಆಯಿತು. ಬಾಕ್ಸ್ ಆಫೀಸ್​ನಲ್ಲಿ ನಾಲ್ಕೇ ದಿನಕ್ಕೆ 100 ಕೋಟಿ ಕಲೆಕ್ಷನ್ ಮಾಡುವ ಮೂಲಕ ಈ ವರ್ಷದಲ್ಲಿ ನೂರು ಕೋಟಿ ಕ್ಲಬ್ ಸೇರಿದ ಮೊದಲ ಸಿನಿಮಾ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು.

ಹೋಮ್ ಮಿನಿಸ್ಟರ್‌: ಏಪ್ರಿಲ್ ತಿಂಗಳಲ್ಲಿ ತೆರೆಗೆ ಅಪ್ಪಳಿಸಿದ ಸ್ಟಾರ್ ನಟನ ಸಿನಿಮಾ ಅಂದ್ರೆ ಹೋಮ್ ಮಿನಿಸ್ಟರ್‌. ರಿಯಲ್​ ಸ್ಟಾರ್​​ ಉಪೇಂದ್ರ ಅವರು ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿರುವ ಹೋಮ್ ಮಿನಿಸ್ಟರ್ ಚಿತ್ರ ನಿರೀಕ್ಷೆ ಹುಸಿಯಾಗಿಸಿ ಸೈಲೆಂಟ್ ಆಗಿ ಸೈಡಿಗೆ ಸರಿಯಿತು.

movies of sandalwood 2022
ಕೆಜಿಎಫ್‌ ಚಾಪ್ಟರ್ 2

ಕೆಜಿಎಫ್‌ ಚಾಪ್ಟರ್ 2: ರಾಕಿಂಗ್​​ ಸ್ಟಾರ್​​ ಯಶ್​​ ರಾಕಿಂಗ್​​ ಅಭಿನಯದಲ್ಲಿ ಬಂದ ಕೆಜಿಎಫ್‌ ಸೀಕ್ವೆಲ್ ಕೆಜಿಎಫ್‌ ಚಾಪ್ಟರ್ 2 ಏಪ್ರಿಲ್ 14ರಂದು ವಿಶ್ವದಾದ್ಯಂತ ತೆರೆಕಂಡು ಭಾರಿ ಸದ್ದು ಮಾಡಿತು. ಬಾಲಿವುಡ್​ ಚಿತ್ರರಂಗದಲ್ಲೂ ಧೂಳೆಬ್ಬಿಸಿತು. ಬಾಕ್ಸ್ ಆಫೀಸ್​ನಲ್ಲಿ ಬರೋಬ್ಬರಿ 1,300 ಕೋಟಿ ರೂಪಾಯಿ ಕಲೆಕ್ಷನ್ ಮಾಡುವ ಮೂಲಕ ಇಡೀ ಸೌತ್ ಸಿನಿಮಾ ಇಂಡಸ್ಟ್ರಿ ಮಾತನಾಡುವ ಹಾಗೆ ಮಾಡಿತು.

ನಿರೀಕ್ಷೆ ತಲುಪದ ಸಿನಿಮಾಗಳು: ಗಾಂಧಿನಗರದಲ್ಲಿ ನಿರೀಕ್ಷೆ ಮೂಡಿಸಿದ್ದ ಶರಣ್ ಅಭಿನಯದ ಅವತಾರ ಪುರುಷ, ಮನೋರಂಜನ್ ನಟನೆಯ ಪ್ರಾರಂಭ, ರಿಷಬ್ ಶೆಟ್ಟಿ ಅವರ ಹರಿಕಥೆ ಅಲ್ಲ ಗಿರಿಕಥೆ, ಗಜಾನನ & ಗ್ಯಾಂಗ್ ಮುಂತಾದ ಸಿನಿಮಾಗಳ ಬಗ್ಗೆ ಉತ್ತಮ ನಿರೀಕ್ಷೆ ಇತ್ತು. ಆದರೆ, ಆ ನಿರೀಕ್ಷೆಯನ್ನು ಈ ಸಿನಿಮಾಗಳು ತಲುಪಲಿಲ್ಲ. ಒಳ್ಳೆ ಕಂಟೆಟ್​ನಿಂದ ಶುಗರ್ ಲೆಸ್‌, ವೀಲ್ಸ್​​ ಚೇರ್‌ ರೋಮಿಯೋ ಚಿತ್ರಗಳು ಗಮನ ಸೆಳೆದವು. ಆದರೆ ಕಲೆಕ್ಷನ್​ ವಿಚಾರದಲ್ಲಿ ಹಿಂದೆ ಸರಿಯಿತು.

777 ಚಾರ್ಲಿ ಸಿನಿಮಾ: ಜೂನ್ 10ರಂದು ಪ್ಯಾನ್ ಇಂಡಿಯಾ ಮಟ್ಟದಲ್ಲಿ ರಕ್ಷಿತ್ ಶೆಟ್ಟಿ ಹಾಗೂ ಶ್ವಾನದ ಕತೆ ಆಧರಿಸಿ ಬಂದ 777 ಚಾರ್ಲಿ ಸಿನಿಮಾ ದೊಡ್ಡ ಗೆಲುವು ದಾಖಲಿಸಿತು. ಈ ಚಿತ್ರ ಅತ್ಯುತ್ತಮ ಪ್ರತಿಕ್ರಿಯೆ ಪಡೆದುಕೊಂಡಿತು. ಬಾಕ್ಸ್ ಆಫೀಸ್​ನಲ್ಲಿ 150 ಕೋಟಿ ರೂಪಾಯಿ ವ್ಯವಹಾರ ಮಾಡುವ ಮೂಲಕ ಈ ಸಿನಿಮಾ ದೊಡ್ಡ ಮಟ್ಟದ ಯಶಸ್ಸು ಕಂಡಿತ್ತು.

ಇನ್ನು ಜುಲೈ ರಿಂದ ಸೆಪ್ಟೆಂಬರ್ ತಿಂಗಳಲ್ಲಿ ಒಂದಷ್ಟು ಬಿಗ್ ಬಜೆಟ್ ಹಾಗೂ ಬಹುನಿರೀಕ್ಷಿತ ಸಿನಿಮಾಗಳು ತೆರೆಗೆ ಬಂದವು. ಶಿವರಾಜ್‌ಕುಮಾರ್ ಅವರ ಬೈರಾಗಿ ದೊಡ್ಡ ನಿರೀಕ್ಷೆ ಮೂಡಿಸಿತ್ತಾದರೂ, ದೊಡ್ಡ ಗೆಲುವು ಪಡೆಯಲಿಲ್ಲ. ರವಿಚಂದ್ರನ್ ಅಭಿನಯದ ರವಿ ಬೋಪಣ್ಣ, ಪೆಟ್ರೋಮ್ಯಾಕ್ಸ್, ಜಗ್ಗೇಶ್ ತೋತಾಪುರಿ, ಧನಂಜಯ್ ಮಾನ್ಸೂನ್ ರಾಗ ಮುಂತಾದ ಸಿನಿಮಾಗಳು ಅಂದುಕೊಂಡ ಮಟ್ಟಕ್ಕೆ ಗೆಲುವು ಪಡೆಯಲು ಸಾಧ್ಯವಾಗಲಿಲ್ಲ.

ವಿಕ್ರಾಂತ್ ರೋಣ: ಅಭಿನಯ ಚಕ್ರವರ್ತಿ ಸುದೀಪ್​​ ಅಭಿನಯದ ವಿಕ್ರಾಂತ್ ರೋಣ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆ ಆಗಿ ಸದ್ದು ಮಾಡಿತು. ಸಿನಿಮಾ ಸಕ್ಸಸ್ ಕಂಡು ಗಲ್ಲಾ ಪೆಟ್ಟಿಗೆಯಲ್ಲಿ 200 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತ್ತು.

ಗಾಳಿಪಟ 2 ಸಿನಿಮಾ: ಇದರ ಜೊತೆಗೆ ಗಣೇಶ್ ಮತ್ತು ನಿರ್ದೇಶಕ ಯೋಗರಾಜ್ ಭಟ್ ಕಾಂಬಿನೇಶನ್​ನಲ್ಲಿ ಬಂದ ಗಾಳಿಪಟ 2 ಸಿನಿಮಾ ಒಂದು ಮಟ್ಟಿಗೆ ಪ್ರೇಕ್ಷಕರಿಗೆ ಇಷ್ಟ ಆಗುವ ಮೂಲಕ ನಿರ್ಮಾಪಕರಿಗೆ ಲಾಭ ತಂದುಕೊಟ್ಟಿತು. ಆದರೆ, ಶರಣ್‌ ಅಭಿನಯದ ಗುರು ಶಿಷ್ಯರು ಹಾಗೂ ನಿರ್ದೇಶಕ ಶಶಾಂಕ್ ನಿರ್ದೇಶನದ ಲವ್ 360 ಡಿಗ್ರಿ ಚಿತ್ರದ ಕಥೆ ಚೆನ್ನಾಗಿದ್ದರೂ ಪ್ರೇಕ್ಷಕರು ಒಪ್ಪಿಕೊಳ್ಳಲಿಲ್ಲ.

movies of sandalwood 2022
ಕಾಂತಾರ

ಸ್ಯಾಂಡಲ್​ವುಡ್ ಸೂಪರ್​ ಹಿಟ್ ಕಾಂತಾರ: ಈ ವರ್ಷದಲ್ಲಿ ಯಾರೂ ಊಹಿಸಿಕೊಳ್ಳಲಾಗದ ರೀತಿಯಲ್ಲಿ ಸಕ್ಸಸ್ ಕಂಡ ಸಿನಿಮಾ ಎಂದರೆ ಅದು ಕಾಂತಾರ. ಸೆಪ್ಟೆಂಬರ್ 30ರಂದು ತೆರೆಕಂಡ ಕಾಂತಾರ ಚಿತ್ರದ ಬಗ್ಗೆ ಇಡೀ ಭಾರತೀಯ ಚಿತ್ರದ ದೊಡ್ಡ ದೊಡ್ಡ ಸೆಲೆಬ್ರಿಟಿಗಳು ಮಾತನಾಡುವ ಜೊತೆಗೆ ಬಾಕ್ಸ್ ಆಫೀಸ್​ನಲ್ಲಿ ಬರೋಬ್ಬರಿ 400 ಕೋಟಿ ಗೂ ಹೆಚ್ಚು ಕಲೆಕ್ಷನ್ ಮಾಡುವ ಮೂಲಕ ಹಲವು ದಾಖಲೆಗಳನ್ನು ಬರೆಯಿತು.

ಹೆಡ್ ಬುಷ್‌: ಅಕ್ಟೋಬರ್​ನಲ್ಲಿ ನಿರೀಕ್ಷೆ ಹುಟ್ಟಿಸಿದ ಸಿನಿಮಾ ಹೆಡ್ ಬುಷ್‌ ಹಿಟ್ ಆಗುವ ಬದಲು ವಿವಾದದಿಂದಲೇ ಹೆಚ್ಚು ಸದ್ದು ಮಾಡಿತು.

ಗಂಧದ ಗುಡಿ: ದಿ. ಪುನೀತ್ ರಾಜ್‌ಕುಮಾರ್ ಅವರ ಕೊನೆಯ ಚಿತ್ರ ಗಂಧದ ಗುಡಿ ಎಲ್ಲಾ ಚಿತ್ರಮಂದಿರಗಳಲ್ಲಿ ಹೌಸ್ ಫುಲ್ ಪ್ರದರ್ಶನ ಕಾಣುವ ಮೂಲಕ ಬಾಕ್ಸ್ ಆಫೀಸ್​ನಲ್ಲಿ ಬರೋಬ್ಬರಿ 25 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತು. ದೊಡ್ಡ ಮಟ್ಟದಲ್ಲಿ ಬಿಡುಗಡೆ ಆದ ಚಿತ್ರ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿತು.

movies of sandalwood 2022
ಬನಾರಸ್ ಸಿನಿಮಾ

ಬನಾರಸ್: ನವೆಂಬರ್‌ನಲ್ಲಿ ರಾಜಕಾರಣಿ ಜಮೀರ್​ ಪುತ್ರ ಝೈದ್ ಖಾನ್ ಹೀರೋ ಆಗಿದ್ದ ಮೊದಲ ಸಿನಿಮಾ ಬನಾರಸ್ ತೆರೆಕಂಡು ಮೆಚ್ಚುಗೆ ಪಡೆದುಕೊಂಡಿತು. ಕಂಬ್ಳಿಹುಳ, ಖಾಸಗಿ ಪುಟಗಳು, ಯೆಲ್ಲೋ ಗ್ಯಾಂಗ್ಸ್, ಧರಣಿ ಮಂಡಲ ಮಧ್ಯದೊಳಗೆ ಮುಂತಾದದ ಹೊಸಬರ ಸಿನಿಮಾಗಳು ಸಾಕಷ್ಟು ಸದ್ದು ಮಾಡಿದವು. ಆದರೆ, ಪ್ರೇಕ್ಷಕರು ಈ ಸಿನಿಮಾಗಳತ್ತ ಹೆಚ್ಚು ಮನಸ್ಸು ಮಾಡಲಿಲ್ಲ. ದಿಲ್ ಪಸಂದ್, ರಾಣ, ತ್ರಿಬಲ್ ರೈಡಿಂಗ್, ತಿಮ್ಮಯ್ಯ & ತಿಮ್ಮಯ್ಯ ಸಿನಿಮಾಗಳ ಮೇಲೆ ಪ್ರೇಕ್ಷಕರು ನಿರೀಕ್ಷೆ ಇಟ್ಟಿದ್ದರು. ಆದರೆ, ಈ ಸಿನಿಮಾಗಳು ದೊಡ್ಡ ಕಲೆಕ್ಷನ್ ಮಾಡಲಿಲ್ಲ.

movies of sandalwood 2022
ವೇದ ಸಿನಿಮಾ

ವೇದ: ವಿಜಯಾನಂದ ಹಾಗು ಶಿವ ರಾಜ್​ಕುಮಾರ್ ಅಭಿನಯದ 125ನೇ ಸಿನಿಮಾ ವೇದ ಬಿಡುಗಡೆ ಆಗಿ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾದವು. ಅಂದುಕೊಂಡಂತೆ ಶಿವ ರಾಜ್​ಕುಮಾರ್ ಅವರ ವೇದ ಚಿತ್ರ ಈ ವರ್ಷದ ಹಿಟ್ ಸಿನಿಮಾಗಳಲ್ಲಿ ಸೇರಿಕೊಂಡಿದೆ.

ಇದನ್ನೂ ಓದಿ: 2022ರಲ್ಲಿ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ನಟ ನಟಿಯರು

ರಿಲೀಸ್​ ಆಗಲಿರುವ ಸಿನಿಮಾಗಳು: ಡಿಸೆಂಬರ್ 30ರಂದು ಧನಂಜಯ್ ಅವರ ಒನ್ಸ್ ಅಪಾನ್‌ ಎ ಟೈಮ್ ಇನ್ ಜಮಾಲಿಗುಡ್ಡ, ಯೋಗರಾಜ್ ಭಟ್ ನಿರ್ಮಾಣದ ಪದವಿಪೂರ್ವ, ಲೂಸ್ ಮಾದ ಯೋಗಿ ನಟನೆಯ ನಾನು ಅದು ಮತ್ತು ಸರೋಜಾ ಚಿತ್ರಗಳು ಬಿಡುಗಡೆ ಆಗಲಿವೆ. ಈ ಮೂರು ಚಿತ್ರಗಳಲ್ಲಿ ಯಾವ ಸಿನಿಮಾ ಪ್ರೇಕ್ಷಕರಿಗೆ ಇಷ್ಟ ಆಗಿ ಹಿಟ್ ಸಾಲಿನಲ್ಲಿ ಸೇರುತ್ತೇ ಅನ್ನೋದು ಕುತೂಹಲಕಾರಿ ವಿಷಯ.

ಇದನ್ನೂ ಓದಿ: 2022ರಲ್ಲಿ ಕನ್ನಡ ಚಿತ್ರರಂಗ:​ ಗೆದ್ದವರಾರು, ಬಿದ್ದವರಾರು?

ಇನ್ನು 2022ನೇ ವರ್ಷದಲ್ಲಿ ಅಮೆಜಾನ್ ಪ್ರೈಮ್​ ಒಟಿಟಿ ಪ್ಲಾಟ್​ಫಾರ್ಮ್​​​ನಲ್ಲಿ ಬರೋಬ್ಬರಿ 150ಕ್ಕೂ ಹೆಚ್ಚು ಚಿತ್ರಗಳು ಬಿಡುಗಡೆ ಆಗಿವೆ. ಇದರಲ್ಲಿ ಸೂಪರ್ ಹಿಟ್ ಜೊತೆಗೆ ಬಾಕ್ಸ್ ಆಫೀಸ್​ನಲ್ಲಿ ದಾಖಲೆ ಬರೆದ ಸಿನಿಮಾಗಳು ಅಂದ್ರೆ ಜೇಮ್ಸ್, ಕೆಜಿಎಫ್ ಚಾಪ್ಟರ್ 2, 777 ಚಾರ್ಲಿ, ವಿಕ್ರಾಂತ್ ರೋಣ ಹಾಗೂ ಕಾಂತಾರ ಸಿನಿಮಾಗಳು ಇವೆ ಅನ್ನೋದು ವಿಶೇಷ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.