ETV Bharat / entertainment

ಹೇರಾ ಫೆರಿ 3: 'ರಾಜು ಪಾತ್ರಕ್ಕೆ ಅಕ್ಷಯ್ ಸೂಕ್ತ, ಕಾರ್ತಿಕ್ ಹೊಸ ಸೇರ್ಪಡೆ' - ಸುನೀಲ್​ ಶೆಟ್ಟಿ - ಕಾರ್ತಿಕ್ ಆರ್ಯನ್ ಹೇರಾ ಫೆರಿ 3

ರಾಜು ಪಾತ್ರವನ್ನು ಅಕ್ಷಯ್​ ಕುಮಾರ್ ಮಾತ್ರವಲ್ಲದೇ ಬೇರೆ ಯಾರಿದಂದಲೂ ತುಂಬಲಾಗಲ್ಲ. ಕಾರ್ತಿಕ್ ಆರ್ಯನ್ ಅವರು ಹೇರಾ ಫೆರಿಗೆ ಹೊಸ ಸೇರ್ಪಡೆ ಎಂದು ಹೇರಾ ಫೆರಿ 3 ಚಿತ್ರದ ಸಹನಟ ಸುನೀಲ್ ಶೆಟ್ಟಿ ಹೇಳಿದ್ದಾರೆ.

Hera Pheri movie
ಹೇರಾ ಫೆರಿ 3 ಚಿತ್ರತಂಡ
author img

By

Published : Nov 18, 2022, 2:38 PM IST

'ಹೇರಾ ಫೇರಿ' ಬಾಲಿವುಡ್​ನ ಜನಪ್ರಿಯ ಕಾಮಿಡಿ ಸೂಪರ್​ಹಿಟ್​ ಸಿನಿಮಾಗಳಲ್ಲೊಂದು. 'ಹೇರಾ ಫೆರಿ'ಯ ಮೂರನೇ ಭಾಗಕ್ಕೆ ಕಾರ್ತಿಕ್ ಆರ್ಯನ್ ಸೇರಲಿದ್ದಾರೆ ಎಂಬ ವಿಷಯವನ್ನು ನಟ ಪರೇಶ್ ರಾವಲ್ ಘೋಷಿಸಿದ ನಂತರ ಸೂಪರ್​ಹಿಟ್​​ ಚಿತ್ರದ ಅಭಿಮಾನಿಗಳು ತಮ್ಮ ನಿರಾಶೆ ವ್ಯಕ್ತಪಡಿಸಿದ್ದರು. ಅಕ್ಷಯ್​ ಕುಮಾರ್​ ಪಾತ್ರಕ್ಕೆ ಬೇರೆ ನಟರನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದು ಅಭಿಮಾನಿಗಳು ತಿಳಿಸಿದ್ದರು.

ಇದೀಗ ಕಾರ್ತಿಕ್ ಆರ್ಯನ್ ಅವರು ಹೇರಾ ಫೆರಿಗೆ ಸೇರ್ಪಡೆಗೊಳ್ಳುವ ಬಗ್ಗೆ ಥ್ರಿಲ್ ಆಗಿದ್ದೇನೆ ಎಂದು ಚಿತ್ರದ ಸಹನಟ ಸುನೀಲ್ ಶೆಟ್ಟಿ ಹೇಳಿದ್ದಾರೆ. ಅಲ್ಲದೇ ಮುಂಬರುವ ಮೂರನೇ ಭಾಗದಲ್ಲಿ ತನ್ನ ಸಹ-ನಟ ಅಕ್ಷಯ್ ಕುಮಾರ್ ಅವರನ್ನು ಬದಲಾಯಿಸಿಲ್ಲ ಎಂಬುದನ್ನೂ ಸ್ಪಷ್ಟಪಡಿಸಿದ್ದಾರೆ.

ಜನಪ್ರಿಯ ಹಾಸ್ಯ ಚಲನಚಿತ್ರವು ರಾಜು (ಅಕ್ಷಯ್ ಕುಮಾರ್), ಶ್ಯಾಮ್ (ಸುನೀಲ್ ಶೆಟ್ಟಿ) ಮತ್ತು ಬಾಬು ಭಯ್ಯಾ (ಪರೇಶ್ ರಾವಲ್) ಎಂಬ ಮೂವರು ಪುರುಷರ ಸುತ್ತ ಸುತ್ತುತ್ತದೆ. ಅವರು ತ್ವರಿತವಾಗಿ ಹಣ ಗಳಿಸುವ ಸಿಲ್ಲಿ ಯೋಜನೆಗಳನ್ನು ರೂಪಿಸುತ್ತಾರೆ. ಇದು ಸಂಪೂರ್ಣ ಹಾಸ್ಯ ಚಿತ್ರವಾಗಿದ್ದು, ಮನೆಮಂದಿಯನ್ನೆಲ್ಲಾ ನಗುವಿನ ಕಡಲಲ್ಲಿ ತೇಲಿಸಲಿದೆ.

ಕಳೆದ ವಾರ ದೆಹಲಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಅಕ್ಷಯ್​ ಕುಮಾರ್ ಹೇರಾ ಫೆರಿ 3 ನಿಂದ ನಿರ್ಗಮಿಸುವುದರ ಕುರಿತು ಖಚಿತಪಡಿಸಿದ್ದರು. ಅದಕ್ಕೂ ಮೊದಲು, ಚಿತ್ರಕ್ಕೆ ಆರ್ಯನ್ ರಾಜು ಪಾತ್ರದ ಮೂಲಕ ಎಂಟ್ರಿ ಆಗುತ್ತಾರೆಂದು ಪರೇಶ್ ರಾವಲ್ ಹೇಳಿದ್ದರು. ಈ ಹಿನ್ನೆಲೆ, ಅಕ್ಷಯ್​ ಕುಮಾರ್​ ಅಭಿಮಾನಿಗಳು ಅಸಮಾಧಾನ ವ್ಯಕ್ತಪಡಿಸಿದ್ದರು.

ಚಿತ್ರದ ಮೂರನೇ ಭಾಗದಲ್ಲಿ ಆರ್ಯನ್‌ನ ಪ್ರವೇಶದ ಬಗ್ಗೆ ನಟ ಸುನೀಲ್ ಶೆಟ್ಟಿ ಮಾತನಾಡಿದ್ದಾರೆ. ರಾಜು ಪಾತ್ರವನ್ನು ಅಕ್ಷಯ್​ ಕುಮಾರ್ ಮಾತ್ರವಲ್ಲದೇ ಬೇರೆ ಯಾರಿದಂದಲೂ ತುಂಬಲಾಗಲ್ಲ. ಇನ್ನೂ ಕಾರ್ತಿಕ್ ಆರ್ಯನ್ ಅದ್ಭುತ ಆಯ್ಕೆ. ಆದರೆ ಅವರು ರಾಜು ಪಾತ್ರವನ್ನು ನಿರ್ವಹಿಸುತ್ತಿಲ್ಲ. ಕಾರ್ತಿಕ್ ಅವರದ್ದು ಸಂಪೂರ್ಣ ಹೊಸ ಪಾತ್ರ ಮತ್ತು ಅವರು ನಿರ್ವಹಿಸುವ ಪಾತ್ರಕ್ಕೆ ಅದ್ಭುತ ಶಕ್ತಿಯನ್ನು ತರುತ್ತಾರೆ. ರಾಜುವನ್ನು ಯಾರೂ ಬದಲಾಯಿಸಲು ಸಾಧ್ಯವಿಲ್ಲ. ಈಗ, ರಾಜು ಮತ್ತು ಫಿರೋಜ್ (ನಿರ್ಮಾಪಕ ) ಭಾಯ್ ಅವರು ಹೇರಾ ಫೇರಿ ಸಮಸ್ಯೆ ಅನ್ನು ಬಗೆಹರಿಸಬೇಕಾಗಿದೆ ಎಂದು ಸುನೀಲ್​​ ಶೆಟ್ಟಿ ಹೇಳಿದರು.

ಇದನ್ನೂ ಓದಿ: ಹೇರಾ ಫೇರಿ 3: ಅಕ್ಷಯ್​​ ಬದಲಿಗೆ ಕಾರ್ತಿಕ್​ ಆರ್ಯನ್-ಪ್ರೇಕ್ಷಕರು ಏನಂತಾರೆ?​​

ಪ್ರಿಯದರ್ಶನ್ ನಿರ್ದೇಶನದ 'ಹೇರಾ ಫೇರಿ' 2000ರಲ್ಲಿ ಬಿಡುಗಡೆಯಾಯಿತು. ಇದರಲ್ಲಿ ಅಕ್ಷಯ್ ಕುಮಾರ್, ಸುನೀಲ್ ಶೆಟ್ಟಿ, ಪರೇಶ್ ರಾವಲ್ ಮತ್ತು ಟಬು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು. 2006ರಲ್ಲಿ ಬಂದ ಎರಡನೇ ಭಾಗವನ್ನು ದಿವಂಗತ ನೀರಜ್ ವೋರಾ ನಿರ್ದೇಶಿಸಿದ್ದು, ಇದರಲ್ಲಿ ಅಕ್ಷಯ್ ಕುಮಾರ್, ಪರೇಶ್ ರಾವಲ್, ಸುನೀಲ್ ಶೆಟ್ಟಿ, ಬಿಪಾಶಾ ಬಸು, ರಾಜ್‌ಪಾಲ್ ಯಾದವ್ ಮತ್ತು ರಿಮಿ ಸೇನ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು. ಇದೀಗ ಮೂನೇ ಭಾಗಕ್ಕೆ ಕಾರ್ತಿಕ್​ ಆರ್ಯನ್​ ಹೊಸ ಸೇರ್ಪಡೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.