ETV Bharat / entertainment

ಬೆಂಗಳೂರಿನಲ್ಲಿ 'ದಿ ವ್ಯಾಕ್ಸಿನ್​ ವಾರ್​' ಸ್ಪೆಷಲ್​ ಸ್ಕ್ರೀನಿಂಗ್​​: ಭಾರತೀಯರೆನ್ನಲು ಹೆಮ್ಮೆಪಡಿ ಎಂದ ಸುಧಾ ಮೂರ್ತಿ

Sudha Murty praise The Vaccine War: 'ದಿ ವ್ಯಾಕ್ಸಿನ್​ ವಾರ್​' ಸಿನಿಮಾ ಸ್ಪೆಷಲ್​ ಸ್ಕ್ರೀನಿಂಗ್​ನಲ್ಲಿ ಸುಧಾ ಮೂರ್ತಿ ಭಾಗಿಯಾಗಿ, ಸ್ಫೂರ್ತಿದಾಯಕ ಮಾತುಗಳನ್ನಾಡಿದರು.

Sudha Murty on The Vaccine War
'ದಿ ವ್ಯಾಕ್ಸಿನ್​ ವಾರ್​' ಸ್ಪೆಷಲ್​ ಸ್ಕ್ರೀನಿಂಗ್​ನಲ್ಲಿ ಸುಧಾ ಮೂರ್ತಿ
author img

By ETV Bharat Karnataka Team

Published : Sep 19, 2023, 12:57 PM IST

Updated : Sep 19, 2023, 3:19 PM IST

ಹಿಂದಿ ಚಿತ್ರರಂಗದ ಖ್ಯಾತ ನಿರ್ದೇಶಕ ವಿವೇಕ್​ ರಂಜನ್​​ ಅಗ್ನಿಹೋತ್ರಿ ಅವರ ಮುಂದಿನ ಸಿನಿಮಾ 'ದಿ ವ್ಯಾಕ್ಸಿನ್​ ವಾರ್​'. ಚಿತ್ರ ತೆರೆಗೆ ಬರಲು ದಿನಗಣನೆ ಆರಂಭವಾಗಿದೆ. 'ದಿ ವ್ಯಾಕ್ಸಿನ್​ ವಾರ್​'ನ ವಿಶೇಷ ಪ್ರದರ್ಶನವನ್ನು ಚಿತ್ರತಂಡ ಬೆಂಗಳೂರಿನಲ್ಲಿ ಹಮ್ಮಿಕೊಂಡಿತ್ತು. ಇನ್ಫೋಸಿಸ್​ ಮುಖ್ಯಸ್ಥೆ ಸುಧಾ ಮೂರ್ತಿ ಕೂಡ ಭಾಗವಹಿಸಿದ್ದರು.

ಸ್ಪೂರ್ತಿದಾಯಕ ಮಾತುಗಳನ್ನಾಡಿದ್ದಕ್ಕೆ ಧನ್ಯವಾದಗಳು ಸುಧಾಮೂರ್ತಿ ಜಿ... ನಿರ್ದೇಶಕ ವಿವೇಕ್​ ಅಗ್ನಿಹೋತ್ರಿ, ತಾವು ಸುಧಾ ಮೂರ್ತಿ ಜೊತೆ ಮಾತನಾಡುತ್ತಿರುವ ಫೋಟೋವನ್ನು ಸೋಷಿಯಲ್​ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. 'ದಿ ವ್ಯಾಕ್ಸಿನ್​ ವಾರ್​'ನ ವಿಶೇಷ ಪ್ರದರ್ಶನದಲ್ಲಿ ಭಾಗಿಯಾಗಿದ್ದಕ್ಕೆ ಸುಧಾ ಮೂರ್ತಿ ಕೃತಜ್ಞತೆ ಸಲ್ಲಿಸಿ, ಸಂತೋಷ ವ್ಯಕ್ತಪಡಿಸಿದ್ದಾರೆ. ಪೋಸ್ಟ್​​ನಲ್ಲಿ, '' ದಿ ವ್ಯಾಕ್ಸಿನ್​ ವಾರ್ ಸ್ಪೆಷಲ್​ ಸ್ಕ್ರೀನಿಂಗ್​​ನಲ್ಲಿ ಸ್ಪೂರ್ತಿದಾಯಕ ಮಾತುಗಳನ್ನಾಡಿದ್ದಕ್ಕೆ ಧನ್ಯವಾದಗಳು ಸುಧಾಮೂರ್ತಿ ಜಿ'' ಎಂದು ಬರೆದಿದ್ದಾರೆ.

ಭಾರತೀಯರಾಗಿರುವುದಕ್ಕೆ ಹೆಮ್ಮೆ ಪಡಿ: ವಿವೇಕ್​ ಅಗ್ನಿಹೋತ್ರಿ ಹಂಚಿಕೊಂಡಿರುವ ವಿಡಿಯೋದಲ್ಲಿ ಪದ್ಮಭೂಷಣ ಪುರಸ್ಕೃತೆಯೂ ಆಗಿರುವ ಸುಧಾ ಮೂರ್ತಿ, ದಿ ವ್ಯಾಕ್ಸಿನ್​ ವಾರ್​ ಸಿನಿಮಾ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ಪ್ರಶಂಸೆ ವ್ಯಕ್ತಪಡಿಸಿರುವ ಅವರು, "ಸಾಮಾನ್ಯ ಜನರಿಗೆ ಕೋವ್ಯಾಕ್ಸಿನ್​ ಬಗ್ಗೆ ಹೆಚ್ಚು ತಿಳಿದಿರಲಿಕ್ಕಿಲ್ಲ ಅಥವಾ ಅರ್ಥವಾಗುವುದಿಲ್ಲ. ಆದ್ರೆ ಈ ಸಿನಿಮಾ ಕೋವ್ಯಾಕ್ಸಿನ್​ ಹಿಂದಿರುವ ಶ್ರಮವನ್ನು ಎತ್ತಿ ತೋರಿಸುತ್ತದೆ. ಇದು ಕೇವಲ ಕೆಲಸವಲ್ಲ. ವಿಜ್ಞಾನಿಗಳ ನಿಸ್ವಾರ್ಥ ಸೇವೆ. ವಿಜ್ಞಾನಿಗಳು ಈ ಕೆಲಸದಲ್ಲಿ ಹೆಚ್ಚು ತೊಡಗಿದ ಹಿನ್ನೆಲೆಯಲ್ಲಿ ಭಾರತವನ್ನು ಆರೋಗ್ಯಕರವಾಗಿ ನೋಡಬಹುದಾಗಿದೆ'' ಎಂದಿದ್ದಾರೆ. ಸುಧಾ ಮೂರ್ತಿ ತಮ್ಮ ಭಾಷಣ ಪೂರ್ಣಗೊಳಿಸುವ ವೇಳೆ, ''ನೈತಿಕವಾಗಿರಿ, ಶ್ರಮವಹಿಸಿ ಮತ್ತು ನೀವು ಭಾರತೀಯರಾಗಿರುವುದಕ್ಕೆ ಹೆಮ್ಮೆ ಪಡಿ'' ಎಂದು ತಿಳಿಸಿದರು.

  • Was fortunate enough to watch the screening today in Bengaluru. Wonderful movie that talks about how Bharat has arrived and how its Narishakti is leading the charge from the front. Dhanyawad Vivek ji and #PallaviJoshi ji for making a movie on this very important subject. 🙏🙏 https://t.co/JloWFV5Nrs

    — Yogesh (@sharmay) September 18, 2023 " class="align-text-top noRightClick twitterSection" data=" ">

ಇದನ್ನೂ ಓದಿ: ಪರಸ್ಪರ ಪ್ರೀತಿ ವ್ಯಕ್ತಪಡಿಸಿದ ತಮನ್ನಾ ಭಾಟಿಯಾ-ವಿಜಯ್​ ವರ್ಮಾ: ವಿಡಿಯೋ ನೋಡಿ

ವಿಜ್ಞಾನಿಗಳು ಮತ್ತು ವೈದ್ಯರಿಗೆ ಗೌರವ: 'ದಿ ವ್ಯಾಕ್ಸಿನ್​ ವಾರ್​' ಅನ್ನು ಸೆಪ್ಟೆಂಬರ್​​ 28 ರಂದು ಬಿಡುಗಡೆಗೊಳಿಸಲು ಚಿತ್ರತಂಡ ನಿರ್ಧರಿಸಿದೆ. ಈ ಚಿತ್ರವನ್ನು ಕೋವಿಡ್​ 19 ಸಾಂಕ್ರಾಮಿಕ ಉತ್ತುಂಗದಲ್ಲಿದ್ದ ಸಂದರ್ಭದಲ್ಲಿ ಜೀವ ಉಳಿಸುವ ಲಸಿಕೆಗಳಿಗಾಗಿ ದಣಿವರಿಯದೇ ಕೆಲಸ ಮಾಡಿದ ವಿಜ್ಞಾನಿಗಳು ಮತ್ತು ವೈದ್ಯರಿಗೆ ಅರ್ಪಿಸಲಾಗುತ್ತಿದೆ.

  • " class="align-text-top noRightClick twitterSection" data="">

ಇದನ್ನೂ ಓದಿ: ತೆರೆಕಂಡು 12 ದಿನ, ಉತ್ತಮ ಪ್ರದರ್ಶನ ಮುಂದುವರಿಸಿದ 'ಜವಾನ್': ಕಲೆಕ್ಷನ್​ ಎಷ್ಟು ಗೊತ್ತೇ?

ಕೋವಿಡ್​ 19 ಸಾಂಕ್ರಾಮಿಕ ಸಂಬಂಧ ಕಥೆ: 'ದಿ ವ್ಯಾಕ್ಸಿನ್​ ವಾರ್​' ಶೀರ್ಷಿಕೆ ಸುಳಿವು ಕೊಟ್ಟಂತೆ, ''ಕೋವಿಡ್​ 19 ಸಂದರ್ಭ, ಜಾಗತಿಕ ಆರೋಗ್ಯ ಬಿಕ್ಕಟ್ಟು, ಲಸಿಕೆ ಅಭಿವೃದ್ಧಿಪಡಿಸುವಲ್ಲಿ ವಿಜ್ಞಾನಿಗಳು, ತಜ್ಞರು, ವೈದ್ಯಕೀಯ ಸಮುದಾಯ ನಿರ್ವಹಿಸಿದ ನಿರ್ಣಾಯಕ ಪಾತ್ರಗಳ ಕುರಿತು ಒತ್ತಿ ಹೇಳಲಿದೆ. ಚಿತ್ರದ ಕುರಿತು ಸಿನಿಪ್ರಿಯರು ಸಾಕಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದಾರೆ.

Last Updated : Sep 19, 2023, 3:19 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.