ಗೋಲ್ಡನ್ ಸ್ಟಾರ್ ಗಣೇಶ್ ಹಾಗೂ ನಿರ್ದೇಶಕ ಯೋಗರಾಜ್ ಭಟ್ ಕಾಂಬಿನೇಷನ್ನಲ್ಲಿ ಬರ್ತಾ ಇರುವ ಬಹುನಿರೀಕ್ಷಿತ ಚಿತ್ರ ಗಾಳಿಪಟ 2. ಬಿಡುಗಡೆಗೆ ಒಂದು ವಾರ ಬಾಕಿ ಇರುವಾಗಲೇ ಸ್ಯಾಂಡಲ್ವುಡ್ ಅಲ್ಲದೇ ಸಿನಿಮಾಪ್ರಿಯರಲ್ಲಿ ಸಿನಿಮಾ ಕ್ರೇಜ್ ಹುಟ್ಟಿಸಿದೆ. ಸದ್ಯ ಹಾಡುಗಳು ಹಾಗೂ ಟ್ರೈಲರ್ನಿಂದಲೇ ಕುತೂಹಲ ಮೂಡಿಸಿರೋ ಚಿತ್ರದ ಪ್ರಾಯಶಃ ಹಾಡು ಕೇಳಿ ಕಿಚ್ಚ ಸುದೀಪ್ ಫಿದಾ ಆಗಿದ್ದಾರೆ.
ಈ ಹಾಡು ರಿಲೀಸ್ ಮಾಡಿ ಮಾತನಾಡಿದ ಸುದೀಪ್, ಯೋಗರಾಜ್ ಭಟ್ ಬರೆದಿರುವ ಸಾಕಷ್ಟು ಹಾಡುಗಳು ವಿಭಿನ್ನವಾಗಿರುತ್ತೆ. ಅದೇ ಸಾಲಿಗೆ ಈಗ ಗಾಳಿಪಟ 2 ಚಿತ್ರದ ಪ್ರಾಯಶಃ ಹಾಡು ಸೇರಿಕೊಂಡಿದೆ. ತುಂಬಾ ಕಷ್ಟವಾದ ಸಾಹಿತ್ಯವನ್ನು ಬಹಳ ಸರಳವಾಗಿ ಬರೆದಿರುವ ಭಟ್ಟರ ಜಾಣ್ಮೆ ಮೆಚ್ಚಬೇಕೆಂದರು.
ಗಣೇಶ್, ದಿಗಂತ್ ಹಾಗೂ ಪವನ್ ಕುಮಾರ್ ವೈಭವಿ ಶಾಂಡಿಲ್ಯ, ಶರ್ಮಿಳಾ ಮಾಂಡ್ರೆ, ಸಂಯುಕ್ತಾ ಮೆನನ್, ರಂಗಾಯಣ ರಘು, ಅನಂತ್ ನಾಗ್, ಸುಧಾ ಬೆಳವಾಡಿ, ಬುಲೆಟ್ ಪ್ರಕಾಶ್ ಸೇರಿದಂತೆ ಚಿತ್ರದಲ್ಲಿ ದೊಡ್ಡ ತಾರಾಗಣವಿದೆ.
ಇದನ್ನೂ ಓದಿ: ಕನ್ನಡ ರಾಜ್ಯೋತ್ಸವ ದಿನ: ಪುನೀತ್ ರಾಜ್ ಕುಮಾರ್ಗೆ ‘ಕರ್ನಾಟಕ ರತ್ನ’ ಪ್ರಶಸ್ತಿ ಪ್ರದಾನ!