ETV Bharat / entertainment

BiggBoss OTT Season 1.. ಬಿಗ್​ಬಾಸ್ ಮನೆಗೆ ಕಿಚ್ಚ ಸುದೀಪ್ ಎಂಟ್ರಿ- ವಿಡಿಯೋ - Bigg Boss Season 9

ಬಿಗ್ ಬಾಸ್ ಒಟಿಟಿ ಶೋ ಇಂದು ಸಂಜೆ 7 ಗಂಟೆಗೆ ಆರಂಭಗೊಳ್ಳಲಿದ್ದು, ಈಗಾಗಲೇ ಬಿಗ್ ಬಾಸ್ ಮನೆಗೆ ಕಿಚ್ಚ ಸುದೀಪ್ ಎಂಟ್ರಿ ಕೊಟ್ಟಿದ್ದಾರೆ.

Sudeep entry to Bigg Boss house
ಬಿಗ್ ಬಾಸ್ ಮನೆಗೆ ಕಿಚ್ಚ ಸುದೀಪ್ ಎಂಟ್ರಿ
author img

By

Published : Aug 6, 2022, 3:17 PM IST

Updated : Aug 6, 2022, 4:14 PM IST

ಕನ್ನಡದ ಜನಪ್ರಿಯ ರಿಯಾಲಿಟಿ ಶೋ, ಬಹುನಿರೀಕ್ಷಿತ ಬಿಗ್ ಬಾಸ್ ಒಟಿಟಿ (OTT) ಇಂದು ಸಂಜೆ 7 ಗಂಟೆಗೆ ಆರಂಭಗೊಳ್ಳಲಿದ್ದು, ಕ್ಷಣಗಣನೆ ಆರಂಭವಾಗಿದೆ. ಈಗಾಗಲೇ ಎಂಟು ಸೀಸನ್‌ಗಳ ಯಶಸ್ವಿ ಪಯಣ ಮುಗಿಸಲಾಗಿದೆ. ಇನ್ನೇನು ಬಿಗ್ ಬಾಸ್ ಸೀಸನ್ 9 ಶುರುವಾಗಬೇಕೆನ್ನುವಷ್ಟರಲ್ಲೇ ವೂಟ್ ಓಟಿಟಿ ವೇದಿಕೆಯಲ್ಲಿ, ಬಿಗ್ ಬಾಸ್ ಕನ್ನಡ ಓಟಿಟಿ ಸೀಸನ್ 1 ಆರಂಭವಾಗುತ್ತಿದೆ.

ಸಹಜವಾಗಿ ಕಲರ್ಸ್​ ಕನ್ನಡ ಚಾನಲ್​ನಲ್ಲಿ ಬಿಗ್ ಬಾಸ್ ಶೋ ಆರಂಭ ಆಗುತ್ತಿದೆ ಅಂದಾಗ ರಾಜ್ಯದ ಒಂದಷ್ಟು ವರ್ಗದ ಜನರು ಈ ಶೋ ಬಗ್ಗೆ ಹಾಗು ಬಿಗ್ ಬಾಸ್ ಮನೆಗೆ ಯಾರೆಲ್ಲಾ ಹೋಗುತ್ತಾರೆ ಎಂಬುದರ ಕುರಿತು ಒಂದಿಷ್ಟು ಚರ್ಚೆಗಳು ನಡೆಯುತ್ತವೆ. ಅದೇ ರೀತಿ ಹೈಪ್ ಕ್ರಿಯೇಟ್ ಮಾಡಲು ಓಟಿಟಿ ಬಿಗ್ ಬಾಸ್ ಕನ್ನಡ‌ ಸೀಸನ್ 1 ಭರ್ಜರಿ ತಯಾರಿ ಮಾಡಿಕೊಂಡಂತೆ ಕಾಣುತ್ತದೆ. ಸದ್ಯ ಓಟಿಟಿ ಬಿಗ್ ಬಾಸ್ ಮನೆಗೆ ಎಲ್ಲರ ಅಚ್ಚುಮೆಚ್ಚಿನ ನಟ ಕಿಚ್ಚ ಸುದೀಪ್ ಎಂಟ್ರಿ ಕೊಟ್ಟಿದ್ದಾರೆ.

ವೂಟ್​ನಲ್ಲಿ ಪ್ರಚಾರ ಆಗುವ ಬಿಗ್ ಬಾಸ್ ಮನೆಯ ಅಂಗಳ ಹೇಗಿದೆ ಅನ್ನೋ ಕುತೂಹಲ ಕೂಡ ಎಲ್ಲರಲ್ಲಿರುತ್ತದೆ. ‌ವಾಹಿನಿಯಲ್ಲಿ ಪ್ರಸಾರ ಆಗುವ ಬಿಗ್ ಬಾಸ್ ಮನೆಯ ರೀತಿಯೇ ಈ ಮನೆಯೂ ಕಲರ್​ಫುಲ್ ಆಗಿದೆ ನೋಡಿ. ಕಿಚ್ಚ ಸುದೀಪ್, ಗಾಯಕ ವಾಸುಕಿ ವೈಭವ್ ಜೊತೆಗೆ ಮಾತನಾಡುತ್ತ ದೊಡ್ಮನೆಯ ಗೃಹಪ್ರವೇಶ ಮಾಡಿದ್ದಾರೆ.

ಬಿಗ್ ಬಾಸ್ ಮನೆಗೆ ಕಿಚ್ಚ ಸುದೀಪ್ ಎಂಟ್ರಿ

ಇದನ್ನೂ ಓದಿ: ಕನ್ನಡದ ಬಿಗ್ ಬಾಸ್ ಮನೆಯೊಳಗೆ ಹೋಗುವ ಸಂಭಾವ್ಯ ಸ್ಪರ್ಧಿಗಳು ಇವರೇ ನೋಡಿ!

ಇಂದು ಸಂಜೆ 7 ಗಂಟೆಯಿಂದ ಬಿಗ್ ಬಾಸ್ ಶೋ‌ ಪ್ರಸಾರವಾಗಲಿದೆ. ವೂಟ್‌ನಲ್ಲಿ 24/7 ಬಿಗ್ ಬಾಸ್ ಪ್ರಸಾರವಾಗಲಿದೆ. 6 ವಾರಗಳ ಕಾಲ ಈ ಕಾರ್ಯಕ್ರಮ ನಡೆಯಲಿದ್ದು, ಗ್ರ್ಯಾಂಡ್ ಫಿನಾಲೆಯಲ್ಲಿ ವಿಜೇತರನ್ನು ಘೋಷಣೆ ಮಾಡಲಾಗುತ್ತದೆ.

Last Updated : Aug 6, 2022, 4:14 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.