ETV Bharat / entertainment

ರಣಬೀರ್​- ರಶ್ಮಿಕಾ ಅಭಿನಯದ 'ಅನಿಮಲ್'​ ಚಿತ್ರಕ್ಕೆ ಎಸ್​ಎಸ್​ ರಾಜಮೌಳಿ, ಮಹೇಶ್​ ಬಾಬು ಸಾಥ್​​ - ಈಟಿವಿ ಭಾರತ್​ ಕನ್ನಡ

Rashmika Mandanna's film Animal: ಹೈದರಾಬಾದನಲ್ಲಿ ನಡೆಯಲಿರುವ ಸಿನಿಮಾದ ಪ್ರಚಾರ ಕಾರ್ಯಕ್ರಮದಲ್ಲಿ ಟಾಲಿವುಡ್​ ಸೂಪರ್​ಸ್ಟಾರ್​ಗಳು ಜೊತೆಯಾಗಲಿದ್ದಾರೆ.

SS Rajamouli and Mahesh Babu to grace pre-release event of Ranbir Kapoor, Rashmika Mandanna's film Animal

author img

By ETV Bharat Karnataka Team

Published : Nov 27, 2023, 4:29 PM IST

ಹೈದರಾಬಾದ್​: ಆ್ಯಕ್ಷನ್​ ಥ್ರಿಲ್ಲರ್​ 'ಅನಿಮಲ್'​ ಸಿನಿಮಾ ಬಿಡುಗಡೆಗೆ ಸಜ್ಜಾಗಿದ್ದು, ಚಿತ್ರತಂಡ ಬಿಡುವಿಲ್ಲದ ಪ್ರಚಾರ ಕಾರ್ಯದಲ್ಲಿ ನಿರಂತವಾಗಿದೆ. ಹೈದರಾಬಾದ್​ನಲ್ಲಿ ಇಂದು ಸಂಜೆ ಮುತ್ತಿನ ನಗರಿ ಹೈದರಾಬಾದ್​ನಲ್ಲಿ ತಂಡ ಪ್ರಚಾರ ಕಾರ್ಯಕ್ರಮ ನಡೆಸಲಿದೆ. ಈ ಕಾರ್ಯಕ್ರಮದ ಮೆರಗನ್ನು ಹೆಚ್ಚಿಸಲು ಟಾಲಿವುಡ್​ ಸ್ಟಾರ್​ ನಿರ್ದೇಶಕ ಮತ್ತು ನಟ ಕೂಡ ಮುಂದಾಗಿದ್ದಾರೆ. ಈ ಸಂಬಂಧ ಟೀ ಸೀರಿಸ್​ ಎಕ್ಸ್​ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದ್ದು, ನಿರ್ದೇಶಕ ರಾಜಮೌಳಿ ಮತ್ತು ಮಹೇಶ್​ ಬಾಬು ಅವರು ಪ್ರಿರಿಲೀಸ್​​ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಭಾಗಿಯಾಗಲಿದ್ದಾರೆ ಎಂದು ತಿಳಿಸಿದೆ.

ಆರ್​ಆರ್​ಆರ್​ ನಿರ್ದೇಶಕ ರಾಜಮೌಳಿಯನ್ನು ಹಾಡಿ ಹೊಗಳಿರುವ ಟಿ ಸೀರಿಸ್​ ಸಂಸ್ಥೆ, ಇನ್ಸ್​​​ಟಾಗ್ರಾಂನಲ್ಲಿ ಈ ಕುರಿತು ಫೋಟೋ ಹಂಚಿಕೊಂಡಿದೆ. ಕೆಲವರು ತಮ್ಮ ರಸ್ತೆ ಅಥವಾ ಕೆಲವು ನಿರ್ದಿಷ್ಟ ಪ್ರದೇಶದಲ್ಲಿ ಗರ್ಜಿಸುತ್ತಾರೆ. ಮತ್ತೆ ಕೆಲವರು ಹಲವು ಪ್ರದೇಶಗಳಲ್ಲಿ ಗರ್ಜಿಸುತ್ತಾರೆ. ಈ ವ್ಯಕ್ತಿ ತಮ್ಮ ಸಂಪೂರ್ಣ ತೇಜಸ್ಸಿನಿಂದ ಜಾಗತಿಕ ಮಟ್ಟದಲ್ಲಿ ಗರ್ಜಿಸುತ್ತಿದ್ದಾರೆ. ನಮ್ಮ ಆರ್​ಆರ್​ ರಾಜಮೌಳಿ ಕಾರ್ಯಕ್ರಮದ ಭಾಗವಾಗಲಿದ್ದಾರೆ ಎಂದು ತಿಳಿಸಲಾಗಿದೆ.

ಇನ್ನು, ಪ್ರಿನ್ಸ್​ ಮಹೇಶ್​ ಬಾಬು ಕೂಡ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಭಾಗಿಯಾಗುತ್ತಿದ್ದು, ಅವರನ್ನು ಪ್ರಶಂಸಿಸುವಲ್ಲಿ ಕೂಡ ತಂಡ ಹಿಂದೆ ಬಿದ್ದಿಲ್ಲ. ಪ್ರಾಣಿಗಳು ಅಳ್ವಿಕೆ ಮಾಡಲು ಮತ್ತು ಗರ್ಜಿಸಲು ಸಿದ್ಧವಾಗಿವೆ. ಸಾರ್ವಭೌಮ ಯಾವಾಗಲು ಉನ್ನತವಾಗಿ ಆಳುತ್ತಾನೆ. ಸೂಪರ್​ ಸ್ಟಾರ್​​ ಮಹೇಶ್​​ ಬಾಬು ಕಾರ್ಯಕ್ರಮದಲ್ಲಿ ಮೆರುಗು ಹೆಚ್ಚಿಸಲಿದ್ದಾರೆ. 'ಅನಿಮಲ್​' ಬಿಡುಗಡೆ ಪೂರ್ವ ಕಾರ್ಯಕ್ರಮದಲ್ಲಿ ಅವರು ಮುಖ್ಯ ಅತಿಥಿಯಾಗಲಿದ್ದಾರೆ ಎಂದು ಪೋಸ್ಟ್​ ಮಾಡಲಾಗಿದೆ.

ಚಿತ್ರದ ಹೆಸರಿನ ರಹಸ್ಯ: ನಿರ್ದೇಶಕ ಸಂದೀಪ್​ ವಂಗಾ ನಿರ್ದೇಶನದಲ್ಲಿ ಈ ಚಿತ್ರ ಮೂಡಿ ಬರುತ್ತಿದ್ದು, ರಣಬೀರ್​ ಕಪೂರ್​, ಅನಿಲ್​ ಕಪೂರ್​, ಬಾಬಿ ಡಿಯೋಲ್​ ಮತ್ತು ರಶ್ಮಿಕಾ ಮಂದಣ್ಣ ಪ್ರಮುಖ ಪಾತ್ರದಲ್ಲಿ ಮಿಂಚಿದ್ದಾರೆ. ಚೆನ್ನೈನಲ್ಲಿ ಇತ್ತೀಚಿಗೆ ನಡೆದ ಪ್ರೊಮೊಷನಲ್​ ಘಟನೆಯಲ್ಲಿ ಮಾತನಾಡಿದ ರಣಬೀರ್​​, ಸಂದೀಪ್​ ರೆಡ್ಡಿ ವಂಗಾ ಯಾಕೆ ಈ ಚಿತ್ರಕ್ಕೆ ಅನಿಮಲ್​ ಎಂದು ಹೆಸರಿಟ್ಟರು ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಒಮ್ಮೆ ಚಿತ್ರ ನೋಡಿದ ಬಳಿಕ ಈ ಬಗ್ಗೆ ಸ್ಪಷ್ಟತೆ ಸಿಗಲಿದೆ ಎಂದಿದ್ದಾರೆ.

ಪ್ರಾಣಿಗಳು ಪ್ರವೃತ್ತಿಯ ಮೇಲೆ ಕಾರ್ಯ ನಿರ್ವಹಿಸುತ್ತವೆ. ಅವು ತರ್ಕಬದ್ಧ ಯೋಚನೆ ಆಧರಿಸಿ ಕಾರ್ಯ ಮಾಡುವುದಿಲ್ಲ. ಚಿತ್ರದಲ್ಲಿ ನಾನು ಮಾಡಿರುವ ಪಾತ್ರ ಕೂಡ ಅದೇ ರೀತಿ ನಡೆದುಕೊಳ್ಳುತ್ತದೆ. ಕುಟುಂಬದ ರಕ್ಷಣೆಗೆ ಆತ ಯೋಚಿಸುವುದಿಲ್ಲ. ಆತ ಕೆಲಸ ಮಾಡುತ್ತಾನೆ ಅಷ್ಟೇ. ಅದೇ ಕಾರಣಕ್ಕೆ 'ಅನಿಮಲ್​'​ ಹೆಸರನ್ನು ಚಿತ್ರಕ್ಕೆ ಇಡಲಾಗಿದೆ ಎಂದು ವಿವರಣೆ ನೀಡಿದ್ದರು.

ಇತ್ತೀಚಿಗೆ 'ಅನಿಮಲ್'​ ಚಿತ್ರದ ಅಧಿಕೃತ ಟ್ರೈಲರ್​ ಬಿಡುಗಡೆಯಾಗಿದ್ದು, ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 3 ನಿಮಿಷ 32 ಸೆಂಕಡ್​ನ ಟ್ರೈಲರ್​ನಲ್ಲಿ ರಣಬೀರ್​​ ಅವರ ಪಾತ್ರದ ಪರಿಚಯ ಮಾಡಲಾಗಿದ್ದು, ಈ ಚಿತ್ರದಲ್ಲಿ ರೋಷಾವೇಶದಲ್ಲಿ ಅವರು ಕಾಣಿಸಿಕೊಂಡಿದ್ದಾರೆ. ತಂದೆಯ ಬಗ್ಗೆ ಅತೀವ ಕಾಳಜಿ ವಹಿಸುವ ಮಗನ ಪಾತ್ರದಲ್ಲಿ ಅವರು ಮಿಂಚಿದ್ದು, ಅವರ ರಕ್ಷಣೆಗೆ ಯಾರನ್ನಾದರೂ ಬೆದರಿಸಲು ಅವರು ಸಿದ್ಧ ಎಂದು ತೋರಿಸದ್ದಾರೆ. ಕನ್ನಡ, ತೆಲುಗು, ತಮಿಳು ಮತ್ತು ಮಲಯಾಳಂ ಭಾಷೆಯಲ್ಲಿ ಈ ಚಿತ್ರ ತೆರೆ ಕಾಣುತ್ತಿದ್ದು, ಇದೇ ಡಿಸೆಂಬರ್​ 1ಕ್ಕೆ ಚಿತ್ರ ಬಿಡುಗಡೆಯಾಗಲಿದೆ.

ಇದನ್ನೂ ಓದಿ: 'ಅನಿಮಲ್'​ ಚಿತ್ರದ ಟ್ರೈಲರ್​ ಬಿಡುಗಡೆ; ತಂದೆ ರಕ್ಷಣೆಗೆ ಯಾರನ್ನಾದರೂ ಕೊಲ್ಲಲು ಸಿದ್ಧ ಈ ಮಗ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.