ETV Bharat / entertainment

ಎಸ್​​ಆರ್​ಕೆ 'ಡಂಕಿ' ಟೀಸರ್​​ ರಿಲೀಸ್​​: ಸಿನಿಪ್ರಿಯರ ವಿಮರ್ಶೆ ಇಲ್ಲಿದೆ - Dunki latest news

Dunki teaser reactions: 2023ರ ಬಹುನಿರೀಕ್ಷಿತ ಚಿತ್ರ 'ಡಂಕಿ'ಯ ಟೀಸರ್ ಅನಾವರಣಗೊಂಡಿದ್ದು, ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

Dunki teaser reactions
ಡಂಕಿ ಟೀಸರ್ ಪ್ರತಿಕ್ರಿಯೆಗಳು
author img

By ETV Bharat Karnataka Team

Published : Nov 2, 2023, 2:39 PM IST

ವಿಶ್ವದ ಸುಪ್ರಸಿದ್ಧ ಮತ್ತು ಶ್ರೀಮಂತ ನಟರಲ್ಲಿ ಒಬ್ಬರಾದ ಶಾರುಖ್ ಖಾನ್ ಅವರಿಂದು 58ನೇ ಜನ್ಮದಿನ ಆಚರಿಸಿಕೊಳ್ಳುತ್ತಿದ್ದಾರೆ. ಈ ಹಿನ್ನೆಲೆ ಅವರ ಮುಂದಿನ ಬಹುನಿರೀಕ್ಷಿತ ಚಿತ್ರ 'ಡಂಕಿ'ಯ ಟೀಸರ್ ಅನಾವರಣಗೊಂಡಿದೆ. ಟೀಸರ್ ರಿಲೀಸ್​ ಆದ 1 ಗಂಟೆಯೊಳಗೆ ಯೂಟ್ಯೂಬ್‌ನಲ್ಲಿ 1 ಮಿಲಿಯನ್​ಗೂ ಹೆಚ್ಚು ವೀಕ್ಷಣೆಗಳನ್ನು ಪಡೆದಿದೆ. ಸೋಷಿಯಲ್​​ ಮೀಡಿಯಾದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಹೆಚ್ಚಿನ ಸಂಖ್ಯೆಯ ಅಭಿಮಾನಿಗಳು ನಟನ ನಟನೆಗೆ ಫುಲ್​ ಮಾರ್ಕ್ಸ್ ಕೊಟ್ಟಿದ್ದಾರೆ.

  • #DunkiTeaser first drop is too hilarious. 😂❤️🔥 A dream comes true for the dream collaboration of the universe - SRK x Rajkumar Hirani.

    Social message hai, comedy hai, subject bhi accha hai, casting bhi tagdi hai and that last doctor wala scene.🤣😂 #DunkiDrop1 #Dunki pic.twitter.com/iBclXreOJQ

    — Suryakant Dholakhandi (@maadalaadlahere) November 2, 2023 " class="align-text-top noRightClick twitterSection" data=" ">

ಡಂಕಿ ಟೀಸರ್ ಅನಾವರಣ: ಡಂಕಿ ಟೀಸರ್ (ಮೊದಲ ಟೀಸರ್​) ಲಂಡನ್ ತಲುಪಲು ಅನ್ವೇಷಣೆಯಲ್ಲಿ ತೊಡಗುವ ಸ್ನೇಹಿತರ ಭಾವನಾತ್ಮಕ ಪ್ರಯಾಣದ ಒಂದು ನೋಟವನ್ನು ಒದಗಿಸಿದೆ. ಮರುಭೂಮಿಯ ದೃಶ್ಯದೊಂದಿಗೆ ಟೀಸರ್​​ ಪ್ರಾರಂಭವಾಗಿದ್ದು, ಅಲ್ಲಿ ವ್ಯಕ್ತಿಯೊಬ್ಬ ಜನರನ್ನು ತನ್ನ ಬಂದೂಕಿಗೆ ಗುರಿಯಾಗಿಸಿದ್ದಾನೆ. ಬುಲೆಟ್​​ ಸಿಡಿದಿದ್ದು, ಯಾರ ಪ್ರಾಣ ಹೋಯಿತು ಎಂಬುದು ಇನ್ನೂ ನಿಗೂಢ. ಸೋನು ನಿಗಮ್ ಅವರ ಮಧುರ ಧ್ವನಿ ಟೀಸರ್​​ನ ಶ್ರೀಮಂತಿಕೆ ಹೆಚ್ಚಿಸಿದೆ. ಶಾರುಖ್ ಖಾನ್ ಅವರನ್ನು ಹಾರ್ಡಿ ಎಂದು ಪರಿಚಯಿಸಲಾಗಿದೆ. ತಾಪ್ಸಿ ಪನ್ನು ಅವರು ಮನು ಪಾತ್ರದಲ್ಲಿ ನಟಿಸಿದ್ದಾರೆ. ತಾರಾಗಣದಲ್ಲಿ ವಿಕ್ಕಿ ಕೌಶಲ್, ಬೊಮನ್ ಇರಾನಿ, ವಿಕ್ರಮ್ ಕೊಚ್ಚರ್ ಮತ್ತು ಅನಿಲ್ ಗ್ರೋವರ್ ಕೂಡ ಇದ್ದಾರೆ.

ಅಭಿಮಾನಿಗಳಿಂದ ಮೆಚ್ಚುಗೆಯ ಸುರಿಮಳೆ: ಶಾರುಖ್ ಖಾನ್​ ಬರ್ತ್​​ಡೇ ಹಿನ್ನೆಲೆ ಅಭಿಮಾನಿಗಳಿಗಿದು ವಿಶೇಷ ದಿನ. ಅಪಾರ ಸಂಖ್ಯೆಯ ಅಭಿಮಾನಿಗಳು ಟೀಸರ್‌ಗೆ ತಮ್ಮ ಪ್ರೀತಿಯ ಪ್ರತಿಕ್ರಿಯೆ ವ್ಯಕ್ತಪಡಿಸಿಸುತ್ತಿದ್ದಾರೆ. ಸಾಮಾಜಿಕ ಜಾಲತಾಣ ಬಳಕೆದಾರರೊಬ್ಬರ ಪ್ರತಿಕ್ರಿಯಿಸಿ, "ವರ್ಷದ ಸೂಪರ್​ ಹಿಟ್ ಸಿನಿಮಾ ಮತ್ತು ಪ್ರಸಿದ್ಧ ನಟ - ನಿರ್ದೇಶಕ ಜೋಡಿಯ ಟೀಸರ್ ಇಲ್ಲಿದೆ. ಅಭಿಮಾನಿಗಳಿಗೆ ಅದ್ಭುತ ಟ್ರೀಟ್​​​. ಹ್ಯಾಪಿ ಬರ್ತ್​​ಡೇ ಎಸ್​ಆರ್​​ಕೆ'' ಎಂದು ಪ್ರತಿಕ್ರಿಯಿಸಿದ್ದಾರೆ.

ಮತ್ತೋರ್ವ ಸಾಮಾಜಿಕ ಜಾಲತಾಣ ಬಳಕೆದಾರರು ಪ್ರತಿಕ್ರಿಯಿಸಿ, ''ಡಂಕಿಯ ಮೊದಲ ಟೀಸರ್ ಬಹಳ ಉಲ್ಲಾಸಕರವಾಗಿದೆ. ಬ್ರಹ್ಮಾಂಡದ ಕನಸಾದ ಎಸ್​ಆರ್​​ಕೆ ಮತ್ತು ರಾಜ್​ಕುಮಾರ್​ ಹಿರಾನಿ ಕಾಂಬಿನೇಶನ್ ನನಸಾಗಿದೆ.​ ಸಾಮಾಜಿಕ ಸಂದೇಶವಿದೆ, ಹಾಸ್ಯವಿದೆ, ಕಥೆಯೂ ಉತ್ತಮವಾಗಿದೆ, ಕಾಸ್ಟಿಂಗ್ ಸಹ ಅತ್ಯುತ್ತಮ, ಕೊನೆಯ ಡಾಕ್ಟರ್​​ವಾಲಾ ಸೀನ್​ ಒಂತೂ ಸೂಪರ್​" ಎಂದು ತಿಳಿಸಿದ್ದಾರೆ.

ಎಸ್‌ಆರ್‌ಕೆ ಮತ್ತು ಹೆಸರಾಂತ ನಿರ್ದೇಶಕ ರಾಜ್‌ಕುಮಾರ್ ಹಿರಾನಿ ಮೊದಲ ಬಾರಿಗೆ ಸಿನಿಮಾವೊಂದರಲ್ಲಿ ಒಟ್ಟಿಗೆ ಕೆಲಸ ಮಾಡಿದ್ದು, ಚಿತ್ರದ ಯಶಸ್ಸಿನ ಮೇಲಿನ ನಿರೀಕ್ಷೆಗಳನ್ನು ಹೆಚ್ಚಿಸಿದೆ. "ಪ್ರಸಿದ್ಧ ನಟ ನಿರ್ದೇಶಕ ಕಾಂಬೋ ಡ್ರೀಮ್ ನಿಜವಾಗಿದೆ. ಡಂಕಿಯ ಮೊದಲ ಅಂಶ ಬಿಡುಗಡೆ ಆಗಿದೆ. ರಾಜ್​ಕುಮಾರ್​​ ಹಿರಾನಿ ಅವರ ಜಗತ್ತಿನಲ್ಲಿ ಎಸ್​ಆರ್​ಕೆ ಸೇರಿದಂತೆ ಅದ್ಭುತ ತಾರಾಗಣ. ಹಾರ್ಟ್ ಅಂಡ್​​ ಹ್ಯೂಮರ್​ನ ಪರಿಪೂರ್ಣ ಮಿಶ್ರಣ. ನಿಜ ಜೀವನದ ಅನುಭವಗಳು ಮತ್ತು ಕಥೆಗಳಿಂದ ಚಿತ್ರಿಸಲಾಗಿದೆ. ಡಂಕಿ ಪ್ರೀತಿ ಮತ್ತು ಸ್ನೇಹದ ಸಾಹಸಗಾಥೆ. ಈ ಕ್ರಿಸ್‌ಮಸ್ ಸಂದರ್ಭ ಚಿತ್ರ ಬಿಡುಗಡೆ ಆಗಲಿದೆ" ಎಂದು ಓರ್ವ ನೆಟ್ಟಿಗರು ಬರೆದಿದ್ದಾರೆ.

ಇದನ್ನೂ ಓದಿ: ಎಸ್​ಆರ್​ಕೆ ಬರ್ತ್​ಡೇ: ಅದ್ಭುತ ನಟನೆ, ಕಥೆಯ ಹೊರತಾಗಿಯೂ ಬಾಕ್ಸ್​​ ಆಫೀಸ್​ನಲ್ಲಿ ಮಂಕಾದ ಶಾರುಖ್​ ಸಿನಿಮಾಗಳಿವು!

ಅಭಿಮಾನಿಯೊಬ್ಬರು ಕಾಮೆಂಟ್​ ಮಾಡಿ, ''ಡಂಕಿ ಟೀಸರ್ ಮಂಜುಗಡ್ಡೆ ಮೇಲೆನ ಪ್ರಯಾಣ​, ರಾಜ್‌ಕುಮಾರ್ ಹಿರಾನಿ ಅವರ ಈ ಭಾವನಾತ್ಮಕ ಸವಾರಿಗೆ ನಾವು ಸಿದ್ಧರಿಲ್ಲ. ಅವರ ಪ್ರತಿ ಫ್ರೇಮ್‌ನಲ್ಲೂ ಕಥೆಯಿದೆ" ಎಂದು ಬರೆದಿದ್ದಾರೆ. "ಬ್ಲಾಕ್‌ಬಸ್ಟರ್ ಹಿಟ್​​" ಎಂದು ಮತ್ತೋರ್ವ ಅಭಿಮಾನಿ ಕಾಮೆಂಟ್​ ಮಾಡಿದ್ದಾರೆ.

ಇದನ್ನೂ ಓದಿ: ಕಾತರಕ್ಕೆ ಫುಲ್​ಸ್ಟಾಪ್​: ಶಾರುಖ್​ ಖಾನ್​​ ಜನ್ಮದಿನಕ್ಕೆ 'ಡಂಕಿ' ಟೀಸರ್ ಗಿಫ್ಟ್​​

''ದಿ ಮೋಸ್ಟ್ ಟ್ಯಾಲೆಂಟೆಡ್ ಫ್ರೇಮ್ ಎವರ್. ಡಂಕಿ ಫನ್​ ಆ್ಯಂಡ್​ ಎಮೋಶನಲ್​ ರೈಡ್​ ಆಗಲಿದೆ. ರಾಜ್‌ಕುಮಾರ್ ಹಿರಾನಿ ಅವರು ಕಥೆ ರವಾನಿಸುವ ಅದ್ಭುತ ಶೈಲಿಯಿಂದ ನಮ್ಮ ಮನ ಸ್ಪರ್ಶಿಸಲಿದ್ದಾರೆ'' ಎಂದು ಓರ್ವರು ಬರೆದಿದ್ದಾರೆ. ಹೀಗೆ ಚಿತ್ರಕ್ಕೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗುತ್ತಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.