ETV Bharat / entertainment

ಡಂಕಿ vs ಸಲಾರ್​: ಶಾರುಖ್​ ಸಿನಿಮಾ ಟೀಸರ್​​ ರಿಲೀಸ್​ ಬೆನ್ನಲ್ಲೇ ಫ್ಯಾನ್ಸ್ ವಾರ್​ ಶುರು - ಟ್ವೀಟ್​​ಗಳನ್ನೇನಿದೆ? - srk prabhas fans war

Dunki vs Salaar: ಡಂಕಿ ಟೀಸರ್​ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

Dunki vs Salaar
ಡಂಕಿ vs ಸಲಾರ್
author img

By ETV Bharat Karnataka Team

Published : Nov 2, 2023, 4:08 PM IST

2023ರ ಕ್ರಿಸ್‌ಮಸ್ ಸಂದರ್ಭ ಭಾರತೀಯ ಚಿತ್ರರಂಗದ ಇಬ್ಬರು ಸೂಪರ್‌ ಸ್ಟಾರ್‌ಗಳ ಬಹುನಿರೀಕ್ಷಿತ ಸಿನಿಮಾಗಳು ತೆರೆಗಪ್ಪಳಿಸಲಿದೆ. ಬಾಲಿವುಡ್​​ ಕಿಂಗ್ ಶಾರುಖ್ ಖಾನ್ ಹಾಗೂ ಪ್ಯಾನ್​ ಇಂಡಿಯಾ ಸ್ಟಾರ್ ಪ್ರಭಾಸ್ ಅವರ ಸಿನಿಮಾಗಳು ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಪೈಪೋಟಿ ನಡೆಸಲಿದೆ.

ಪ್ರಭಾಸ್ ಅವರ ಸಲಾರ್ ಮತ್ತು ಶಾರುಖ್ ಖಾನ್ ಅವರ ಡಂಕಿ ಡಿಸೆಂಬರ್ 22ರಂದು ಚಿತ್ರಮಂದಿರ ಪ್ರವೇಶಿಸಲಿದೆ. ಇಬ್ಬರು ಸೂಪರ್​ಸ್ಟಾರ್​ಗಳ ಅಭಿಮಾನಿಗಳು ಈ ದಿನಕ್ಕಾಗಿ ಬಹಳ ಕಾತರದಿಂದ ಕಾಯುತ್ತಿದ್ದಾರೆ. ಹೀಗಾಗಿಯೆ ಫ್ಯಾನ್ಸ್ ವಾರ್​ ಶುರುವಾಗಿದೆ. ಬಾಲಿವುಡ್​ ಕಿಂಗ್​​ ಶಾರುಖ್ ಖಾನ್ ಅವರ ಜನ್ಮದಿನ ಹಿನ್ನೆಲೆ ಮುಂದಿನ ಬಹುನಿರೀಕ್ಷಿತ ಸಿನಿಮಾ ಡಂಕಿಯ ಟೀಸರ್ ಅನ್ನು ಇಂದು ಅನಾವರಣಗೊಳಿಸಲಾಗಿದೆ. ಟೀಸರ್​ ಬಿಡುಗಡೆ ಆದ ಬೆನ್ನಲ್ಲೇ ಸಿನಿಪ್ರಿಯರು, ನೆಟ್ಟಿಗರು, ಅಭಿಮಾನಿಗಳು ಪ್ರತಿಕ್ರಿಯೆ ವ್ಯಕ್ತಪಡಿಸಲು ಶುರು ವಾಡಿದ್ದಾರೆ.

ಸಾಮಾಜಿಕ ಮಾಧ್ಯಮದಲ್ಲಿ ಶಾರುಖ್ - ಪ್ರಭಾಸ್ ಫ್ಯಾನ್ಸ್ ವಾರ್​ ಕೂಡ ನಡೆಯುತ್ತಿದೆ. ಡಂಕಿ ಸಿನಿಮಾದ ಟೀಸರ್ ನೋಡಿದ ಪ್ರಭಾಸ್ ಅಭಿಮಾನಿಗಳು ಶಾರುಖ್ ಖಾನ್ ಅವರ ಈ ಚಿತ್ರ ಸಲಾರ್ ಮುಂದೆ ಗೆಲ್ಲೋಲ್ಲ ಅಂತಿದ್ದಾರೆ. ಸೆಲೆಬ್ರಿಟಿಗಳು ಈ ವಿಚಾರದಲ್ಲಿಲ್ಲದಿದ್ದರೂ, ಅಭಿಮಾನಿಗಳು ತಮ್ಮ ಮೆಚ್ಚಿನ ನಟರ ಮೇಲಿನ ಅಭಿಮಾನ ವ್ಯಕ್ತಪಡಿಸುವ ಭರದಲ್ಲಿ ಚರ್ಚೆ ಜೋರಾಗೇ ನಡೆಯುತ್ತಿದೆ.

ಸಾಮಾಜಿಕ ಜಾಲತಾಣ ಬಳಕೆದಾರರೊಬ್ಬರು ಸೋಷಿಯಲ್​ ಮೀಡಿಯಾ ಪ್ಲಾಟ್​ಫಾರ್ಮ್​​ ಎಕ್ಸ್​ನಲ್ಲಿ ಡಂಕಿ ಟೀಸರ್​ನ ಆರಂಭಿಕ ದೃಶ್ಯವನ್ನಷ್ಟೇ (ಶಾರುಖ್​ ಸೇರಿದಂತೆ ಹಲವರು ಮರುಭೂಮಿಯಲ್ಲಿ ನಡೆದುಕೊಂಡು ಹೋಗುತ್ತಿದ್ದು, ಓರ್ವ ವ್ಯಕ್ತಿ ಅವರ ಮೇಲೆ ಗುಂಡು ಹಾರಿಸಿರುವ ದೃಶ್ಯ) ಹಂಚಿಕೊಂಡು ಸಲಾರ್​ಗೆ ಈ ಸೀನ್​​ ಸಾಕು ಎಂದು ಬರೆದುಕೊಂಡಿದ್ದಾರೆ.

  • After watching #Dunki teaser 😂.

    It's confirm that 2018 scenario will repeat itself #Salaar will thrash #Dunki left right .

    2023 highest opening and gross film will be under Rebelstar foot 💥🦖.pic.twitter.com/wYNLxBl3tY

    — 𝐁𝐚𝐡𝐮𝐛𝐚𝐥𝐢 𝐕𝐢𝐫𝐚𝐭 ™ #𝐒𝐚𝐥𝐚𝐚𝐫 🗡️ (@Super_V_18) November 2, 2023 " class="align-text-top noRightClick twitterSection" data=" ">

ಮತ್ತೋರ್ವ ನೆಟ್ಟಿಗ ಕೂಡ ಇದೇ ಸೀನ್​ ಅನ್ನು ಹಂಚಿಕೊಂಡು, ''ಡಂಕಿ ಟೀಸರ್​ ವೀಕ್ಷಿಸಿದ ಬಳಿಕ ನನ್ನ ಪ್ರಾಮಾಣಿಕ ಪ್ರತಿಕ್ರಿಯೆ'' ಎಂದು ಬರೆದುಕೊಂಡಿದ್ದಾರೆ. ಡಂಕಿ ಟೀಸರ್​ಗೆ ಟೀಕೆ ವ್ಯಕ್ತಪಡಿಸಿರುವ ಹಲವರು ತಮ್ಮ ಪ್ರತಿಕ್ರಿಯೆಗೆ ಇದೇ ದೇಶ್ಯವನ್ನು ಬಳಸಿಕೊಳ್ಳುತ್ತಿದ್ದಾರೆ.

ಇದನ್ನೂ ಓದಿ: ಕಾತರಕ್ಕೆ ಫುಲ್​ಸ್ಟಾಪ್​: ಶಾರುಖ್​ ಖಾನ್​​ ಜನ್ಮದಿನಕ್ಕೆ 'ಡಂಕಿ' ಟೀಸರ್ ಗಿಫ್ಟ್​​

ನೆಟ್ಟಿಗರೊಬ್ಬರು ಸಲಾರ್​​ ಸಿನಿಮಾದ ತುಣುಕನ್ನು ಹಂಚಿಕೊಂಡು ಹೀಗೆ ಬರೆದಿದ್ದಾರೆ. ''ಡಂಕಿ ಟೀಸರ್​ ವೀಕ್ಷಿಸಿದ ಬಳಿಕ 2018ರ ಪರಿಸ್ಥಿತಿ ಮರುಕಳಿಸಲಿದೆ ಎಂಬುದು ಖಚಿತವಾಗಿದೆ. ಸಲಾರ್​ ಡಂಕಿಯನ್ನು ಹಿಂದಿಕ್ಕಲಿದೆ. ರೆಬೆಲ್​ ಸ್ಟಾರ್​​​ನೊಂದಿಗೆ 2023ರ ಸೂಪರ್​ ಹಿಟ್​ ಸಿನಿಮಾ ಇದೆ'' ಎಂದು ಬರೆದಿದ್ದಾರೆ. 2018ರ ಬಳಿಕ ನಾಲ್ಕು ವರ್ಷ ಶಾರುಖ್​ ಖಾನ್​ ಸಿನಿಮಾ ಮಾಡಿರಲಿಲ್ಲ. ಸೋಲಿನ ರುಚಿ ಕಂಡಿದ್ದರು.

ಇದನ್ನೂ ಓದಿ: ಎಸ್​​ಆರ್​ಕೆ 'ಡಂಕಿ' ಟೀಸರ್​​ ರಿಲೀಸ್​​: ಸಿನಿಪ್ರಿಯರ ವಿಮರ್ಶೆ ಇಲ್ಲಿದೆ

ಸೋಷಿಯಲ್ ಮೀಡಿಯಾ ಯೂಸರ್​ ಓರ್ವರು ಸಲಾರ್​ ಪೋಸ್ಟರ್ ಹಂಚಿಕೊಂಡು, ''ಈಗಷ್ಟೇ ಡಂಕಿ ಟೀಸರ್​ ವೀಕ್ಷಿಸಿದೆ. ಸಲಾರ್​ ಮುಂದೆ ಡಂಕಿ ಸರ್ವೈವ್​ ಆಗಲಿದೆ ಎಂದು ನಿಮಗೆ ನಿಜವಾಗಿಯೂ ಅನಿಸುತ್ತಿದೆಯೇ?. ನನಗೀಗ ಸಂಪೂರ್ಣ ನಂಬಿಕೆ ಬಂದಿದೆ. ಪ್ರಭಾಸ್ ಈಸ್ ಗೋಯಿಂಗ್ ಟು ರೂಲ್​''​​​ ಎಂದು ಬರೆದುಕೊಂಡಿದ್ದಾರೆ.​​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.