ETV Bharat / entertainment

'ಪಿಕೆ'ಯಂತೆ 'ಡಂಕಿ' ಯಶಸ್ವಿಯಾಗುವ ನಂಬಿಕೆ ಹೊಂದಿದ್ದ ಶಾರುಖ್‌, ಅಭಿಮಾನಿಗಳು; ಆದರೆ! - Rajkumar Hirani

ಸಂದರ್ಶನವೊಂದರಲ್ಲಿ ಶಾರುಖ್​ ಖಾನ್​ ಅವರು 'ಪಿಕೆ' ಮತ್ತು 'ಡಂಕಿ' ಸಿನಿಮಾಗಳ ಕುರಿತು ಮಾತನಾಡಿದ್ದಾರೆ.

SRK believed that Dunki would reach like PK
'ಪಿಕೆ'ಯಂತೆ 'ಡಂಕಿ' ಯಶಸ್ವಿಯಾಗಲಿದೆಯೆಂದು ನಂಬಿದ್ದ ಎಸ್​ಆರ್​ಕೆ
author img

By ETV Bharat Karnataka Team

Published : Dec 24, 2023, 3:02 PM IST

ಬಾಲಿವುಡ್ ನಟ​​ ಶಾರುಖ್ ಖಾನ್ ಮತ್ತು ನಿರ್ದೇಶಕ ರಾಜ್‌ ಕುಮಾರ್ ಹಿರಾನಿ ಕಾಂಬೋದ 'ಡಂಕಿ' ಸಿನಿಮಾಗೆ ಮಿಶ್ರ ಪ್ರತಿಕ್ರಿಯೆ ಸಿಕ್ಕಿದೆ. ಬಾಕ್ಸ್​ ಆಫೀಸ್​​ ಅಂಕಿಅಂಶ ಉತ್ತಮವಾಗಿವೆ ನಿಜ. ಆದರೆ ಸಿನಿಮಾ ನಿರೀಕ್ಷೆ ತಲುಪುವಲ್ಲಿ ಕೊಂಚ ಹಿನ್ನಡೆ ಕಂಡಿದೆ.

ಈ ಹಿಂದೆ ರಾಜ್‌ ಕುಮಾರ್ ಹಿರಾನಿ ಮತ್ತು ಅಮೀರ್ ಖಾನ್ ಕಾಂಬಿನೇಶನ್​ನಲ್ಲಿ ಮೂಡಿ ಬಂದಿದ್ದ 'ಪಿಕೆ' ಗಲ್ಲಾಪೆಟ್ಟಿಗೆಯಲ್ಲಿ ಯಶಸ್ಸು ಸಾಧಿಸಿತ್ತು. ಅಂದು 'ಪಿಕೆ' ಪದ ಮನೆಮಾತಾಗಿತ್ತು. 'ಡಂಕಿ' ವಿಚಾರದಲ್ಲೂ ಇತಿಹಾಸ ಮರುಕಳಿಸಲಿದೆ ಎಂದು ಬಹುತೇಕರು ಭಾವಿಸಿದ್ದರು. ಆದರೆ ಈ ನಿರೀಕ್ಷೆ ಹುಸಿಯಾಗಿದೆ. ಇತ್ತೀಚೆಗೆ ಚಿತ್ರದ ನಾಯಕ ನಟ ಶಾರುಖ್ ಖಾನ್​ ಈ ಕುರಿತು ಮಾತನಾಡಿದ್ದಾರೆ.

''ನಾನು 'ಡಂಕಿ' ಆರಂಭಿಸಿದಾಗ ಹೆಚ್ಚು ಗೊತ್ತಿರಲಿಲ್ಲ. ಪರಿಕಲ್ಪನೆ ಹೊಸದಾಗಿತ್ತು. ನಿರ್ದೇಶಕ ರಾಜ್​ ಸರ್ ಮತ್ತು ನಾನು ಒಟ್ಟಿಗೆ ಕೆಲಸ ಮಾಡಲು ಬಯಸಿದ್ದೆವು. ಕಥೆಯನ್ನು ಸರಿಯಾಗಿ ವಿವರಿಸಲು ಸಾಧ್ಯವಾಗದಿದ್ದರೆ, ಅವರು ಮುಂದೆ ಬರುವುದಿಲ್ಲ. ಕೊನೆಗೆ ಸಿನಿಮಾ ಆರಂಭವಾಯಿತು. ನಿರ್ದೇಶಕರು ಡಂಕಿ ಎಂದು ಶೀರ್ಷಿಕೆ ಇಡಬೇಕೆಂದರು. ಆದರೆ ಜನರಿಗೆ ಡಂಕಿ ಶೀರ್ಷಿಕೆಯ ಅರ್ಥವೇನೆಂದು ತಿಳಿದಿಲ್ಲ. ನಾವೂ ಕೂಡ ಅದರ ಬಗ್ಗೆ ಹೆಚ್ಚು ಗಮನಹರಿಸಲಿಲ್ಲ. ಏಕೆಂದರೆ 'ಪಿಕೆ' ಸಿನಿಮಾ ಸಮಯದಲ್ಲೂ ಶೀರ್ಷಿಕೆಯ ಅರ್ಥ ಯಾರಿಗೂ ಗೊತ್ತಿರಲಿಲ್ಲ. ಸಿನಿಮಾ ರಿಲೀಸ್ ಆದ ಬಳಿಕವೇ ಎಲ್ಲರಿಗೂ ಆ ಬಗ್ಗೆ ಗೊತ್ತಾಯಿತು'' ಎಂದರು.

"ಡಂಕಿ' ಅಂದ್ರೆ ಅಕ್ರಮ ಪ್ರಯಾಣ ಎಂದರ್ಥ. ದೇಶದ ಗಡಿಯುದ್ದಕ್ಕೂ ನಡೆಯುವ ಅಕ್ರಮ ಪ್ರಯಾಣವನ್ನು ಕತ್ತೆ ಪ್ರಯಾಣ ಎಂದು ಕೂಡಾ ಕರೆಯಲಾಗುತ್ತದೆ. ಪಂಜಾಬಿ ಗಾದೆಯಿಂದ ಈ ಹೆಸರು ಬಂದಿದೆ" ಎಂದು ಶಾರುಖ್ ತಿಳಿಸಿದ್ದಾರೆ.

ಇದನ್ನೂ ಓದಿ: 'ಸಲಾರ್'​ ಅಬ್ಬರದ ನಡುವೆಯೂ 'ಡಂಕಿ' ಗಳಿಕೆಯಲ್ಲಿ ಅಲ್ಪ ಏರಿಕೆ

2014ರ ಡಿಸೆಂಬರ್​ 19ರಂದು ತೆರೆಕಂಡ ಪಿಕೆಯಲ್ಲಿ ಅಮೀರ್​ ಖಾನ್​, ಅನುಷ್ಕಾ ಶರ್ಮಾ, ದಿ. ಸುಶಾಂತ್​ ಸಿಂಗ್​ ರಜ್​ಪೂತ್, ಸಂಜಯ್​ ದತ್, ಬೋಮನ್​ ಇರಾನಿ ಸೇರಿದಂತೆ ಹಲವರು ನಟಿಸಿದ್ದರು. 120 ಕೋಟಿ ರೂ ಬಜೆಟ್​ನಲ್ಲಿ ತಯಾರಾದ ಈ ಸಿನಿಮಾ 700 ಕೋಟಿ ರೂ.ಗೂ ಅಧಿಕ ಕಲೆಕ್ಷನ್​ ಮಾಡಿದೆ ಎಂದು ವರದಿಗಳಾಗಿವೆ. ಇದೇ ಸಿನಿಮಾದ ನಿರ್ದೇಶಕ ರಾಜ್‌ ಕುಮಾರ್ ಹಿರಾನಿ ಅವರು ಆ್ಯಕ್ಷನ್ ಕಟ್​ ಹೇಳಿದ್ದ ಹಿನ್ನೆಲೆಯಲ್ಲಿ 'ಡಂಕಿ' ಮೇಲೂ ಅಭಿಮಾನಿಗಳೂ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದರು.

ಇದನ್ನೂ ಓದಿ: ವಂಚನೆ ಆರೋಪ ಪ್ರಕರಣ: ನಿರ್ಮಾಪಕ ರಾಕ್​ಲೈನ್ ಪುತ್ರನಿಗೆ ಪೊಲೀಸರ ನೋಟಿಸ್​

ಡಿಸೆಂಬರ್ 21ರಂದು ಡಂಕಿ ಅದ್ಧೂರಿಯಾಗಿ ಬಿಡುಗಡೆಯಾಯಿತು. ಮೊದಲ ದಿನ ಭಾರತೀಯ ಬಾಕ್ಸ್ ಆಫೀಸ್​ನಲ್ಲಿ 29.2 ಕೋಟಿ ರೂ. ಕಲೆಕ್ಷನ್​ ಮಾಡಿತ್ತು. ಎರಡನೇ ದಿನ 20.12 ಕೋಟಿ ರೂ. ಹಾಗೂ ಮೂರನೇ ದಿನ 26 ಕೋಟಿ ರೂ. ಗಳಿಸಿದೆ. ಮೂರು ದಿನಗಳಲ್ಲಿ ದೇಶೀಯ ಗಲ್ಲಾಪೆಟ್ಟಿಗೆಯಲ್ಲಿ 75.32 ರೂ. ಬಾಚಿಕೊಂಡಿದೆ. ಈ ವರ್ಷ ಬಿಡುಗಡೆಯಾದ ಶಾರುಖ್ ಖಾನ್​​ ಅವರ ಪಠಾಣ್ ಮತ್ತು ಜವಾನ್ ಸಿನಿಮಾಗಳು ಸೂಪರ್ ಹಿಟ್ ಆಗಿದ್ದು, 1,000 ಕೋಟಿ ರೂ. ಕ್ಲಬ್​ ಸೇರುವಲ್ಲಿ ಯಶಸ್ಸು ಕಂಡಿವೆ. ಈ ಚಿತ್ರಗಳಿಗೆ ಹೋಲಿಸಿದರೆ ಡಂಕಿ ಕೊಂಚ ಹಿಂದೆ ಬಿದ್ದಿದೆ ಅನ್ನೋದು ಸಿನಿಮಾ ಪಂಡಿತರ ಮಾತು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.