ಹೈದ್ರಾಬಾದ್: ನಟಿ ಅಲಯಾ ಎಫ್ ಅಭಿಯನದ ಮುಂದಿನ ಚಿತ್ರ 'ಶ್ರೀ' ಶೂಟಿಂಗ್ ಆರಂಭವಾಗಿದೆ. ವಿಕಲಚೇತನ ಕೈಗಾರಿಕೋದ್ಯಮಿ ಶ್ರೀಕಾಂತ್ ಬೊಲ್ಲಾ ಅವರ ಜೀವನಾಧಾರಿತ ಈ ಚಿತ್ರದಲ್ಲಿ ನಟ ರಾಜ್ಕುಮಾರ್ ರಾವ್ ಮುಖ್ಯ ಪಾತ್ರ ನಿರ್ವಹಿಸಲಿದ್ದಾರೆ.
ತಮ್ಮ ಚಿತ್ರತಂಡದ ಶೂಟಿಂಗ್ ಆರಂಭದ ಕುರಿತು ನಟಿ ಅಲಯಾ ತಮ್ಮ ಅಭಿಮಾನಿಗಳು ಮತ್ತು ಬೆಂಬಲಿಗರಿಗೆ ಸಾಮಾಜಿಕ ಜಾಲತಾಣದ ಮೂಲಕ ತಿಳಿಸಿದ್ದಾರೆ. ಅಲ್ಲದೇ, ತಮ್ಮ ಚಿತ್ರದ ಕ್ಲಾಪ್ ಬೋರ್ಡ್ ಜೊತೆ ಮೊದಲ ದಿನದ ಶೂಟಿಂಗ್ ಸೆಟ್ನ ಫೋಟೋಗಳನ್ನು ಕೂಡ ಅವರು ಹಂಚಿಕೊಂಡಿದ್ದಾರೆ.
- " class="align-text-top noRightClick twitterSection" data="
">
ಬ್ಯಾಕ್ ಆನ್ ಸೆಟ್. ಶ್ರೀಕಾಂತ್ ಬೊಲ್ಲಾ ಬಯೋಪಿಕ್ ಮೊದಲ ದಿನ ಚಿತ್ರೀಕರಣ, ಹೊಸ ಪ್ರಯಾಣದ ಆರಂಭಕ್ಕೆ ಖುಷಿಯಾಗಿದೆ ಎಂದು ತಿಳಿಸಿದ್ದಾರೆ. ಇದರ ಜೊತೆಗೆ ನಿರ್ದೇಶಕ ತುಶರ್ ಹಿರಾನಂದನಿ ಜೊತೆ ಕೂಡ ಫೋಟೋ ಶೇರ್ ಮಾಡಿದ್ದಾರೆ.
29 ವರ್ಷದ ಅಂದರಾಗಿದ್ದ ಶ್ರೀಕಾಂತ ಬೊಲ್ಲಾ ಮೆಸಾಚ್ಯೂಸೆಟ್ ಇನ್ಸಿಟಿಟ್ಯೂಟ್ ಆಫ್ ಟೆಕ್ನಾಲಾಜಿ ಪ್ರವೇಶಿಸಿದರು. ಬಳಿಕ ರತನ್ ಟಾಟಾ ಹೂಡಿಕೆಯ ಬೊಲಂಟ್ ಕೈಗಾರಿಕೆ ಆರಂಭಿಸಿದರು. ಆಂಧ್ರ ಪ್ರದೇಶದ ಮಚಲಿಪಟ್ಟಣದ ರೈತ ಕುಟುಂಬದಲ್ಲಿ ಬೊಲ್ಲಾ ಜನಿಸಿದರು. ಹತ್ತನೇ ತರಗತಿಯಾದ ಬಳಿಕ ವಿಜ್ಞಾನ ವಿಷಯವನ್ನು ಆಯ್ಕೆ ಮಾಡಿಕೊಳ್ಳಲು ಅನುಮತಿ ನೀಡದ ಹಿನ್ನೆಲೆ ಅವರು ರಾಜ್ಯ ಸರ್ಕಾರದ ವಿರುದ್ಧ ನ್ಯಾಯಾಲಯದಲ್ಲಿ ಹೋರಾಟ ನಡೆಸಿದರು.
- " class="align-text-top noRightClick twitterSection" data="
">
ಈ ಪ್ರಕರಣವನ್ನು ಗೆದ್ದ ಅವರು ಕ್ಲಾಸ್ 12 ಪರೀಕ್ಷೆಯಲ್ಲಿ ಟಾಪರ್ ಆಗಿ ಹೊರಹೊಮ್ಮಿದರು. ಐಐಟಿ ಕೋಚಿಂಗ್ ಕ್ಲಾಸ್ಗೆ ಸೇರಲು ಅಸಾಧ್ಯವಾದ ಇವರು ಎಂಐಟಿಗೆ ಸೇರಿದ ಮೊದಲ ಅಂದ ವಿದ್ಯಾರ್ಥಿಯಾದರು.
ಎಂಐಟಿಯಿಂದ ಹೊರಬಂದ ಅವರು, ಭಾರತ 2020 ಪ್ರಚಾರವನ್ನು ದಿ.ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಂ ಜೊತೆ ಉದ್ಘಾಟಿಸಿದರು. ವಿಕಲಚೇತನರ ಪುನರ್ವಸತಿಗಾಗಿ ಮತ್ತು ಸುಸ್ಥಿರ ಅಭಿವೃದ್ಧಿ ಗುರಿಗಳನ್ನು ಅನುಸರಿಸಲು ಸಂಸ್ಥೆಗಳನ್ನು ಸ್ಥಾಪಿಸಿದರು. ತ್ಯಾಜ್ಯ ವಸ್ತುಗಳಿಂದ ಮರುಬಳಕೆ ಮಾಡಬಹುದಾದ ಉತ್ಪನ್ನಗಳನ್ನು ತಯಾರಿಸುವ ಬೊಲ್ಲಂಟ್ ಇಂಡಸ್ಟ್ರೀಸ್ ಅನ್ನು ಸ್ಥಾಪಿಸಿದರು.
ಈ ಸಿನಿಮಾದ ಚಿತ್ರಕಥೆಯನ್ನು ಸುಮಿತ್ ಪುರೋಹಿತ್ ಮತ್ತು ಜಗದೀಪ್ ಸಿದ್ದು ಬರೆದಿದ್ದು, ಟಿ ಸೀರಿಸ್ ಫಿಲ್ಮ್ ಮತ್ತು ಚಲ್ಕ್ ಎನ್ ಚೀಸ್ ಫಿಲ್ಮ್ ಪದರೊಡಕ್ಷನ್ ಎಲ್ಎಲ್ಪಿ ನಿರ್ಮಾಣ ಮಾಡುತ್ತಿದೆ.
ಇದನ್ನೂ ಓದಿ: 'ಯಾವ ಹೊಸ ವ್ಯವಸ್ಥೆಯೂ 'ಥಿಯೇಟರ್'ಗಳ ಗುಣಮಟ್ಟ ಕಡಿಮೆ ಮಾಡಲು ಸಾಧ್ಯವಿಲ್ಲ'