ಹೈದರಾಬಾದ್: ಗ್ಲಾಮರ್ ಮತ್ತು ಅಗಾಧ ಪ್ರತಿಭೆಯಿಂದಲೇ ಬಾಲಿವುಡ್ನ ಮಹಿಳಾ ಸೂಪರ್ಸ್ಟಾರ್ ಎಂದೇ ಖ್ಯಾತಿಗಳಿಸಿದ್ದ ದಿವಂಗತ ನಟಿ ಶ್ರೀದೇವಿ ಅವರ ಬಗ್ಗೆ ಪತಿ ಹಾಗೂ ನಿರ್ಮಾಪಕ ಬೋನಿ ಕಪೂರ್ ಕೆಲವೊಂದು ವಿಚಾರಗಳನ್ನು ಹಂಚಿಕೊಂಡಿದ್ದಾರೆ.
ಇತ್ತೀಚೆಗೆ ನಡೆದ ಸಂದರ್ಶನವೊಂದರಲ್ಲಿ ಶ್ರೀದೇವಿ ಸಾವಿನ ಬಗ್ಗೆ ಮಾತನಾಡಿದ್ದಾರೆ. ಸ್ಲಿಮ್ ಆಗಿ ಕಾಣಲು ಶ್ರೀದೇವಿ ಕಟ್ಟುನಿಟ್ಟಿನ ಆಹಾರ ಕ್ರಮವನ್ನು ಅನುಸರಿಸುತ್ತಿದ್ದರು. ಒಂದೊಮ್ಮೆ ಉಪ್ಪಿನಾಂಶ ಇಲ್ಲದ ಆಹಾರ ಸೇವನೆ ಮಾಡುವಂತೆ ವೈದ್ಯರು ಸೂಚಿಸಿದ್ದರು. ಅದರಂತೆ ತೆರೆಯ ಮೇಲೆ ಸುಂದರವಾಗಿ ಕಾಣಲು ಶ್ರೀದೇವಿ ಉಪ್ಪಿನಾಂಶ ಇಲ್ಲದ ಆಹಾರ ಸೇವಿಸುತ್ತಿದ್ದರು. ಇದರ ಬಗ್ಗೆ ಮದುವೆ ನಂತರವಷ್ಟೇ ನನಗೆ ತಿಳಿದು ಬಂದಿದೆ.
ನಿಯಮಿತ ಪ್ರಮಾಣದಲ್ಲೂ ಆಕೆ ಉಪ್ಪು ಸೇವನೆ ಮಾಡದೇ ತಲೆ ಸುತ್ತಿ ಬಿದ್ದಿರುವ ಅನೇಕ ಸಂದರ್ಭಗಳಿವೆ. ಕಡಿಮೆ ರಕ್ತದೊತ್ತಡ ಸಮಸ್ಯೆಯಿಂದ ಆಕೆ ಬಳಲುತ್ತಿದ್ದಳು. ಈ ಬಗ್ಗೆ ಎಚ್ಚರಿಕೆ ವಹಿಸುವಂತೆ ವೈದ್ಯರು ಅನೇಕ ಬಾರಿ ಆಕೆಗೆ ತಿಳಿಸಿದ್ದರೂ ಅದನ್ನು ಗಂಭೀರವಾಗಿ ತೆಗೆದುಕೊಂಡಿರಲಿಲ್ಲ. ಶ್ರೀದೇವಿ ಸಾವು ಅಸಹಜವಲ್ಲ ಅದು ಆಕಸ್ಮಿಕ. ಆಕೆ ಸಾವಿನ ಬಳಿಕ ನನ್ನ ವಿರುದ್ಧ ಒಂದಿಷ್ಟು ವದಂತಿ ಹಬ್ಬಲಾರಂಭಿಸಿದವು. ಈ ಹಿನ್ನೆಲೆ ಪೊಲೀಸರು 24 ಗಂಟೆಗಳ ಕಾಲ ನನ್ನ ವಿಚಾರಣೆ ನಡೆಸಿದ್ದರು. ಲೈ ಡಿಟೆಕ್ಟರ್ ಪರೀಕ್ಷೆ ಕೂಡ ಮಾಡಿದ್ದರು. ಎಲ್ಲ ಪರೀಕ್ಷೆಗಳ ಬಳಿಕ ಶ್ರೀದೇವಿ ಸಾವು ಆಕಸ್ಮಿಕ ಎಂಬುದು ಪೊಲೀಸರು ಪತ್ತೆ ಹಚ್ಚಿದ್ದರು ಎಂದು ಬೋನಿ ಕಪೂರ್ ಹೇಳಿದ್ದಾರೆ.
"ಶ್ರೀದೇವಿ ಸಾವಿನ ನಂತರ ನಟ ನಾಗಾರ್ಜುನ ನನ್ನನ್ನು ಭೇಟಿ ಮಾಡಿ ನನ್ನೊಂದಿಗೆ ಒಂದಿಷ್ಟು ವಿಷಯಗಳನ್ನು ಹಂಚಿಕೊಂಡಿದ್ದರು. ಒಮ್ಮೆ ಕ್ರ್ಯಾಶ್ ಡಯಟ್‌ನಿಂದಾಗಿ ಚಿತ್ರೀಕರಣದ ವೇಳೆ ಸೆಟ್‌ನಲ್ಲೇ ಕುಸಿದು ಬಿದ್ದು ಶ್ರೀದೇವಿ ಒಂದು ಹಲ್ಲನ್ನು ಮುರಿದುಕೊಂಡಿದ್ದರು" ಎಂಬುದು ನನಗೆ ತಿಳಿಸಿದ್ದರು ಎಂದು ಬೋನಿ ಹೇಳಿದರು.
ನಟಿ ಶ್ರೀದೇವಿ ಅವರು 2018ರಲ್ಲಿ ಸಂಬಂಧಿಕರೊಬ್ಬರ ಮದುವೆಗೆಂದು ದುಬೈಗೆ ತೆರಳಿದ್ದ ವೇಳೆ ಹೃದಯಾಘಾತವಾಗಿ ಬಾತ್ಟಬ್ನಲ್ಲಿ ಬಿದ್ದು ಸಾವನ್ನಪ್ಪಿದ್ದರು.
1967ರಲ್ಲಿ ಬಿಡುಗಡೆಯಾದ ಕಣ್ಣನ್ ಕರುಣೈ ಎಂಬ ಸಿನಿಮಾದ ಮೂಲಕ ಮೊದಲ ಬಾರಿಗೆ ನಟಿ ಶ್ರೀದೇವಿ ಬಾಲನಟಿಯಾಗಿ ಬೆಳ್ಳಿತೆರೆ ಮೇಲೆ ಕಾಣಿಸಿಕೊಂಡರು. ಬಳಿಕ ಕನ್ನಡ, ತೆಲುಗು, ತಮಿಳು, ಮಲಯಾಳಂ ಚಿತ್ರರಂಗದಿಂದ ಸಿನಿಮಾಗಳಲ್ಲಿ ನಟಿಸುವ ಅವಕಾಶಗಳನ್ನು ಗಿಟ್ಟಿಸಿಕೊಂಡರು. ಬಾಲನಟಿಯಾಗಿ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ ಇವರು ಏಕಕಾಲದಲ್ಲಿ ಬಹುಭಾಷೆಗಳಲ್ಲಿ ನಟಿಸಿ ನಂಬರ್ ಒನ್ ಚಲನಚಿತ್ರ ತಾರೆಯಾಗಿ ಮಿಂಚಿದರು. 80 ಮತ್ತು 90ರ ದಶಕದಲ್ಲಿ ತಮ್ಮ ನಟನಾ ಮತ್ತು ಸೌಂದರ್ಯದಿಂದ ಭಾರತದ ಸುಂದರ ಹೀರೋಯಿನ್ ಪಟ್ಟ ಅಲಂಕರಿಸಿಕೊಂಡರು. ಪದ್ಮಶ್ರೀ ಪ್ರಶಸ್ತಿ ಸೇರಿ ಹಲವಾರು ಪ್ರಶಸ್ತಿಗಳಿಗೆ ಭಾಜನರಾಗಿದ್ದರು.
ಇದನ್ನೂ ಓದಿ: ಸೂಪರ್ಸ್ಟಾರ್ ರಜನಿಕಾಂತ್ 170ನೇ ಸಿನಿಮಾಗೆ ಇವರೇ ನೋಡಿ ನಾಯಕಿಯರು...