ಕನ್ನಡ ಚಿತ್ರರಂಗದಲ್ಲಿ ಸಂಗೀತ ನಿರ್ದೇಶಕನಾಗಿ, ಗಾಯಕನಾಗಿ, ರ‍್ಯಾಪರ್ ಆಗಿ ಗುರುತಿಸಿಕೊಂಡಿರುವ ಚಂದನ್ ಶೆಟ್ಟಿ ಸದ್ಯ ಸಿನಿಮಾಗಳ ನಾಯಕ ನಟನಾಗಿ ಅದೃಷ್ಟ ಪರೀಕ್ಷೆಗೆ ಇಳಿದಿರೋದು ನಿಮಗೆಲ್ಲರಿಗೂ ತಿಳಿದಿರುವ ಸಂಗತಿ. ರ‍್ಯಾಪ್ ಹಾಡುಗಳ ಮೂಲಕ ಜನಪ್ರಿಯತೆ ಸಂಪಾದಿಸಿರುವ, ಸ್ಯಾಂಡಲ್ವುಡ್ನಲ್ಲಿ ತಮ್ಮದೇ ಬೇಡಿಕೆ ಹೊಂದಿರುವ ಚಂದನ್ ಶೆಟ್ಟಿ ನಾಯಕ ನಟನಾಗಿ ಹೊರ ಹೊಮ್ಮಲು ಸಜ್ಜಾಗಿದ್ದಾರೆ.
'ಸೂತ್ರಧಾರಿ' ಡಬ್ಬಿಂಗ್: ಸದ್ಯ ಸೂತ್ರಧಾರಿ ಸಿನಿಮಾದ ಜಪ ಮಾಡುತ್ತಿರುವ ಚಂದನ್ ಶೆಟ್ಟಿ ಅವರು ಸೈಲೆಂಟ್ ಆಗಿ ಚಿತ್ರೀಕರಣ ಪೂರ್ಣಗೊಳಿಸಿದ್ದಾರೆ. ಎರಡು ಹಾಡುಗಳ ಚಿತ್ರೀಕರಣ ಮಾತ್ರ ಬಾಕಿ ಇದೆ. ಇದರ ಬೆನ್ನಲ್ಲೇ ಸೂತ್ರಧಾರಿ ಚಿತ್ರತಂಡದಿಂದ ಲೂಪ್ ಸ್ಟುಡಿಯೋದಲ್ಲಿ ಮಾತಿನ ಜೋಡಣೆ ನಡೆಯುತ್ತಿದೆ. ಚಂದನ್ ಶೆಟ್ಟಿ ಈ ಚಿತ್ರದ ಸಂಗೀತ ನಿರ್ದೇಶಕರಾಗಿಯೂ ಕೆಲಸ ಮಾಡುತ್ತಿದ್ದಾರೆ. ಈಗಾಗಲೇ ಬಿಡುಗಡೆ ಆಗಿರುವ ಚಿತ್ರದ ಡ್ಯಾಶ್ ಸಾಂಗ್ ಅಧಿಕ ಸಂಖ್ಯೆಯಲ್ಲಿ ವೀಕ್ಷಣೆಯಾಗಿ, ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿದೆ.
ಚಂದನ್ ಶೆಟ್ಟಿ ಜೋಡಿಯಾಗಿ ಅಪೂರ್ವ ನಟಿಸಿದ್ದಾರೆ. ಜೊತೆಗೆ ಸಂಜನಾ ಆನಂದ್ ಸ್ಪೆಷಲ್ ಹಾಡೊಂದಕ್ಕೆ ಹೆಜ್ಜೆ ಹಾಕಿದ್ದಾರೆ. ತಬಲನಾಣಿ ಸೇರಿದಂತೆ ಮುಂತಾದವರು ಚಿತ್ರದ ತಾರಾಬಳಗದಲ್ಲಿದ್ದಾರೆ. ಕ್ರೈಮ್ ಥ್ರಿಲ್ಲರ್ ಕಥಾಹಂದರ ಹೊಂದಿರುವ ಈ ಚಿತ್ರವನ್ನು ಕಿರಣ್ ಕುಮಾರ್ ನಿರ್ದೇಶಿಸುತ್ತಿದ್ದಾರೆ. ಪಿ.ಕೆ.ಹೆಚ್ ದಾಸ್ ಛಾಯಾಗ್ರಹಣ, ಸತೀಶ್ ಚಂದ್ರಯ್ಯ ಸಂಕಲನ ಹಾಗೂ ಮೋಹನ್ ಅವರ ನೃತ್ಯ ನಿರ್ದೇಶನವಿದೆ.
ದಕ್ಷಿಣ ಭಾರತದಲ್ಲಿ ಮೈ ಮೂವೀ ಬಜಾರ್ ಮೂಲಕ ಸಾಕಷ್ಟು ಇವೆಂಟ್ಗಳನ್ನು ನಡೆಸುತ್ತಿರುವ ನವರಸನ್ ಅವರು ಈಗಲ್ ಮೀಡಿಯಾ ಕ್ರಿಯೇಷನ್ಸ್ ಮೂಲಕ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. "ಸೂತ್ರಧಾರಿ" ಇವರ ನಿರ್ಮಾಣದ ಐದನೇ ಚಿತ್ರ. ಸದ್ಯ ಡಬ್ಬಿಂಗ್ ಹಂತದಲ್ಲಿರೋ ಸೂತ್ರಧಾರಿ ಸಿನಿಮಾ ಸದ್ಯದಲ್ಲೇ ಟ್ರೇಲರ್ ಬಿಡುಗಡೆ ಮಾಡಿ ನಂತರ ಸಿನಿಮಾ ರಿಲೀಸ್ ಮಾಡುವ ಪ್ಲಾನ್ನಲ್ಲಿದೆ.
'ಎಲ್ಲರ ಕಾಲೆಳೆಯತ್ತೆ ಕಾಲ' ಸಿನಿಮಾ: 'ಎಲ್ರ ಕಾಲೆಳೆಯತ್ತೆ ಕಾಲ' ಚಂದನ್ ಶೆಟ್ಟಿ ಅಭಿನಯದ ಮತ್ತೊಂದು ಚಿತ್ರ. ನಟ, ನಿರ್ದೇಶಕ ಸುಜಯ್ ಶಾಸ್ತ್ರಿ ಆಕ್ಷನ್ ಕಟ್ ಹೇಳುತ್ತಿರುವ ಈ ಚಿತ್ರ ಬಹುತೇಕ ಶೂಟಿಂಗ್ ಪೂರ್ಣಗೊಳಿಸಿದ್ದು, ಬಿಡುಗಡೆ ಹೊಸ್ತಿಲಲ್ಲಿದೆ. ಪ್ರಚಾರದ ಭಾಗವಾಗಿ ಇತ್ತೀಚೆಗಷ್ಟೇ ಈ ಚಿತ್ರದ ಹಾಡೊಂದನ್ನು ಬಿಡುಗಡೆ ಮಾಡಲಾಗಿದೆ. ಟುನ್ ಟುನ್ ಎಂದು ಶುರುವಾಗುವ ಈ ಹಾಡಿನಲ್ಲಿ ಸ್ಯಾಂಡಲ್ವುಡ್ ತುಪ್ಪದ ಬೆಡಗಿ ಖ್ಯಾತಿಯ ರಾಗಿಣಿ ದ್ವಿವೇದಿ ಅವರು ಚಂದನ್ ಶೆಟ್ಟಿ ಜೊತೆ ಹೆಜ್ಜೆ ಹಾಕಿದ್ದಾರೆ.
ಇದನ್ನೂ ಓದಿ: 15 ಕೋಟಿ ರೂ. ಬಾಚಿಕೊಂಡ ಸಲ್ಮಾನ್ ಸಿನಿಮಾ: ಭಾಯ್ಜಾನ್ ಭೇಟಿಯಾಗುವ ಅವಕಾಶದಿಂದ ವಂಚಿತರಾಗಬೇಡಿ!
ಚಂದನ್ ಶೆಟ್ಟಿ ಕ್ರಶ್ ಯಾರು ಗೊತ್ತಾ?: ಸಂಗೀತ, ಬಿಗ್ ಬಾಸ್ ಶೋ ಮೂಲಕ ಅಭಿಮಾನಿಗಳನ್ನು ಸಂಪಾದಿಸಿರುವ ಚಂದನ್ ಶೆಟ್ಟಿ ಅವ್ರಿಗೆ ಕಾಲೇಜು ದಿನಗಳಲ್ಲಿ ನಟಿ ರಾಗಿಣಿ ದ್ವಿವೇದಿ ಮೇಲೆ ಕ್ರಶ್ ಆಗಿತ್ತಂತೆ. ಈ ವಿಷಯವನ್ನು ಇತ್ತೀಚೆಗೆ ತಮ್ಮ ಸಿನಿಮಾ ಈವೆಂಟ್ ಒಂದರಲ್ಲಿ ಬಹಿರಂಗಪಡಿಸಿದ್ದಾರೆ. ಕೆಂಪೇಗೌಡ ಚಿತ್ರ 'ಥರಾ ಥರಾ' ಹಾಡು ನೋಡಿ ನಟಿ ರಾಗಿಣಿ ಅವರ ಮೇಲೆ ಕ್ರಶ್ ಆಗಿತ್ತು ಎಂದು ಬಹಿರಂಗಪಡಿಸಿದ್ದರು. ಇದೀಗ ಅವರೊಂದಿಗೆ ಡ್ಯಾನ್ಸ್ ಮಾಡಿ ಗಮನ ಸೆಳೆದಿದ್ದಾರೆ ಚಂದನ್ ಶೆಟ್ಟಿ.
ಇದನ್ನೂ ಓದಿ: 'ತು ಚೀಸ್ ಬಡಿ ಹೈ ಮಸ್ಕ್ ಮಸ್ಕ್': ಎಲಾನ್ ಮಸ್ಕ್ಗೆ ಅಮಿತಾಭ್ ಬಚ್ಚನ್ ಧನ್ಯವಾದ