ಮುಂಬೈ: ಸೋನಮ್ ಕಪೂರ್ ಇತ್ತೀಚೆಗೆ ಗಂಡು ಮಗುವಿಗೆ ಜನ್ಮ ನೀಡಿದ್ದರು. ಇದೀಗ ಅವರು ಮತ್ತೆ ತಮ್ಮ ಕೆಲಸಕ್ಕೆ ಮರಳಲು ಉತ್ಸುಕರಾದಂತೆ ಕಾಣುತ್ತಿದೆ. ನಟಿ ಇತ್ತೀಚೆಗೆ ಇನ್ಸ್ಟಾಗ್ರಾಮ್ನಲ್ಲಿ ವಿಡಿಯೋವೊಂದನ್ನು ಅಪ್‌ಲೋಡ್ ಮಾಡಿದ್ದಾರೆ. ಅದರಲ್ಲಿ ಆಕೆ ವರ್ಕೌಟ್ ಮಾಡುವುದನ್ನು ಕಾಣಬಹುದಾಗಿದೆ. 60 ದಿನಗಳ ನಂತರ ವಾಯು ಎಂದು ಅವರು ಬರೆದುಕೊಂಡಿದ್ದಾರೆ.
ತಾಯಿಯಾದ ನಂತರ ಕೆಲಸ ಮಾಡುವುದು ಸ್ವಲ್ಪ ಕಷ್ಟವೇ. ಆದರೆ ಮಾಡುವ ಸಮಯದಲ್ಲಿ ಆನಂದ ಮತ್ತು ಉತ್ಸಾಹ ಉಂಟಾಗುತ್ತದೆ. ಬಳಿಕ ಅವರು ತಮ್ಮ ದೈನಂದಿನ ದಿನಚರಿ ಬಗ್ಗೆ ವಿಡಿಯೋದಲ್ಲಿ ಹೇಳುತ್ತಾರೆ.
ಗರ್ಭಿಣಿ ಆದಾಗ ನನ್ನ ಜೊತೆ ಇದ್ದಿದ್ದಕ್ಕೆ ಮತ್ತು ಈಗ ನನಗೆ ಸಹಾಯ ಮಾಡಿದ್ದಕ್ಕಾಗಿ ಧನ್ಯವಾದಗಳು #KeepitrealwithSonam @radhikabalancedbody (ರಾಧಿಕ ಕಾರ್ಲೆ) ಎಂದು ವಿಡಿಯೋಗೆ ಶೀರ್ಷಿಕೆ ನೀಡಿದ್ದಾರೆ. ಈ ವರ್ಷದ ಆಗಸ್ಟ್‌ನಲ್ಲಿ ಪುತ್ರ ವಾಯುನನ್ನು ಸೋನಮ್ ದಂಪತಿ ಸ್ವಾಗತಿಸಿದರು.
- " class="align-text-top noRightClick twitterSection" data="
">
ಇದನ್ನೂ ಓದಿ: ಪ್ರಭಾಸ್ ಬಿಲ್ಲಾ ರೀ ರಿಲೀಸ್.. ಅಭಿಮಾನಿಗಳು ಸಿಡಿಸಿದ ಪಟಾಕಿಯಿಂದ ಚಿತ್ರಮಂದಿರಕ್ಕೆ ಬೆಂಕಿ
ಒಂದು ತಿಂಗಳ ನಂತರ, ದಂಪತಿ ತಮ್ಮ ಮಗನೊಂದಿಗೆ ಮೊದಲ ಫೋಟೋವನ್ನು ಹಂಚಿಕೊಂಡಿದ್ದಾರೆ. ಮಗುವಿಗೆ ವಾಯು ಎಂದು ಹೆಸರಿಡುವುದಾಗಿ ಘೋಷಿಸಿದ್ದಾರೆ.