ETV Bharat / entertainment

ಕುಶ್ ಎಸ್. ಸಿನ್ಹಾ ಅವರ ಚೊಚ್ಚಲ ಚಿತ್ರ 'ನಿಕಿತಾ ರಾಯ್​'ನಲ್ಲಿ ಸೋನಾಕ್ಷಿ ಹಾರರ್​ ಲುಕ್​ - ETV Bharat Kannada cinima news

'ನಿಕಿತಾ ರಾಯ್ ದಿ ಬುಕ್ ಆಫ್ ಡಾರ್ಕ್ನೆಸ್' ಚಿತ್ರದ ಪೋಸ್ಟರ್​ ಬಿಡುಗಡೆಯಾಗಿದ್ದು, ಈ ಚಿತ್ರವನ್ನು ಸೋನಾಕ್ಷಿ ಸಿನ್ಹಾ ಅವರ ಸಹೋದರ ಕುಶ್ ಎಸ್. ಸಿನ್ಹಾ ಅವರ ನಿರ್ದೇಶಿಸುತ್ತಿದ್ದಾರೆ. ಈ ಮೂಲಕ ಕುಶ್ ಎಸ್. ಸಿನ್ಹಾ ಮೊದಲ ಬಾರಿಗೆ ನಿರ್ದೇಶದ ಜವಾಬ್ದಾರಿ ನಿರ್ವಹಿಸಲಿದ್ದಾರೆ.

Nikita Roy and The Book of Darkness
ಕುಶ್ ಎಸ್. ಸಿನ್ಹಾ ಅವರ ಚೊಚ್ಚಲ ಚಿತ್ರ 'ನಿಕಿತಾ ರಾಯ್​'ನಲ್ಲಿ ಸೋನಾಕ್ಷಿ ಸಿನ್ಹಾ ಹಾರರ್​ ಲುಕ್​
author img

By

Published : Jul 27, 2022, 7:45 PM IST

ಮುಂಬೈ (ಮಹಾರಾಷ್ಟ್ರ): ನಟಿ ಸೋನಾಕ್ಷಿ ಸಿನ್ಹಾ ಅವರು ತಮ್ಮ ಕುಶ್ ಎಸ್ ಸಿನ್ಹಾ ಅವರ ಚೊಚ್ಚಲ ನಿರ್ದೇಶನದ ಸಿನಿಮಾದ ಪೋಸ್ಟರ್​ ಬಿಡುಗಡೆಯಾಗಿದೆ. ಈ ಸಿನಿಮಾದಲ್ಲಿನ ಸೋನಾಕ್ಷಿ ಸಿನ್ಹಾ ಅವರು ಪ್ರಮುಖ ಪಾತ್ರದಲ್ಲಿ ನಟಿಸಲಿದ್ದಾರೆ. ಅವರ ಲುಕ್​ ಪೋಸ್ಟರ್​ನಲ್ಲಿ ತಿಳಿಸಲಾಗಿದ್ದು, ಹಾರರ್​ ಚಿತ್ರದ ಹಿನ್ನೆಲೆಯಂತೆ ಕಾಣುತ್ತಿದೆ. ಚಿತ್ರಕ್ಕೆ 'ನಿಕಿತಾ ರಾಯ್ ದಿ ಬುಕ್ ಆಫ್ ಡಾರ್ಕ್ನೆಸ್‌' ಎಂದು ಹೆಸರಿಡಲಾಗಿದೆ.

ನಿರ್ಮಾಪಕರು ತಿಳಿಸಿರುವಂತೆ ಸಿನಿಮಾದಲ್ಲಿ ಹಿರಿಯ ನಟ ಪರೇಶ್ ರಾವಲ್ ಮತ್ತು ಸುಹೇಲ್ ನಯ್ಯರ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಈ ಸಿನಿಮಾವನ್ನು ಎನ್​ವಿಬಿ ಫಿಲ್ಮ್​ನಡಿಯಲ್ಲಿ ನಿಕಿ ಭಗ್ನಾನಿ, ವಿಕ್ಕಿ ಭಗ್ನಾನಿ ಮತ್ತು ಅಂಕುರ್ ತಕ್ರಾನಿ ನಿರ್ಮಿಸುತ್ತಿದ್ದಾರೆ. ಕುಶ್ ಅವರ ಕ್ರಾಟೋಸ್ ಎಂಟರ್‌ಟೈನ್‌ಮೆಂಟ್ ಮತ್ತು ನಿಕಿತಾ ಪೈ ಫಿಲ್ಮ್ಸ್‌ ಈ ಚಿತ್ರವನ್ನು ಪ್ರಸ್ತುತಪಡಿಸುತ್ತಿದೆ.

Nikita Roy and The Book of Darkness
ಕುಶ್ ಎಸ್. ಸಿನ್ಹಾ ಅವರ ಚೊಚ್ಚಲ ಚಿತ್ರ 'ನಿಕಿತಾ ರಾಯ್​'ನಲ್ಲಿ ಸೋನಾಕ್ಷಿ ಸಿನ್ಹಾ ಹಾರರ್​ ಲುಕ್​

ಈ ಬಗ್ಗೆ ಮಾತನಾಡಿರುವ ಸೋನಾಕ್ಷಿ ಸಿನ್ಹಾ, ಕುಶ್​ ಮತ್ತು ನಾನು ಬಹಳಾ ಸಮಯಗಳಿಂದ ಈ ಸಿನಿಮಾದ ಯೋಜನೆ ಮಾಡಿದ್ದೆವು. ಅಂತಿಮವಾಗಿ ಇಂದು ಈ ಸಿನಿಮಾ ಕನಸು ಈಡೇರಿದೆ ಎಂದಿದ್ದಾರೆ.

ಕುಶ್​ ಸಿನ್ಹಾ ಮಾತನಾಡಿ, ನಾನು ಮತ್ತು ಸೋನಾಕ್ಷಿ ತುಂಬಾ ದಿನಗಳಿಂದ ಈ ಸ್ಕ್ರಿಪ್ಟ್​ಗಾಗಿ ಕೆಲಸ ಮಾಡಿದ್ದೇವೆ. ನಿಕಿತಾ ರಾಯ್ ದಿ ಬುಕ್ ಆಫ್ ಡಾರ್ಕ್‌ನೆಸ್‌ನಲ್ಲಿ ಸ್ಕ್ರಿಪ್ಟ್​ನಲ್ಲಿ ಸೋನಾಕ್ಷಿ ಅವರು ಸಹಕಾರವೂ ಇದೆ. ಪರೇಶ್ ರಾವಲ್ ಜಿ, ಸೋನಾಕ್ಷಿ ಮತ್ತು ಸುಹೇಲ್ ನಯ್ಯರ್ ಅವರಂತಹ ಪ್ರತಿಭಾವಂತ ಕಲಾವಿದರೊಂದಿಗೆ ಕೆಲಸ ಮಾಡಲು ನಾನು ಎದುರು ನೋಡುತ್ತಿದ್ದೇನೆ ಎಂದರು.

ಇದನ್ನೂ ಓದಿ : ರಾಕೇಶ್​ ಬಾಪಟ್​ ಜತೆಗಿನ ಸಂಬಂಧಕ್ಕೆ ಅಂತ್ಯ ಹಾಡಿದ ಶಿಲ್ಪಾ ಶೆಟ್ಟಿ ತಂಗಿ ಶಮಿತಾ ಶೆಟ್ಟಿ!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.