ETV Bharat / entertainment

ಪ್ರಾಣಿ ಸ್ನೇಹಿಯಾಗಿರುವಂತಹ ಫ್ಯಾಶನ್​ ನಿಮ್ಮದಾಗಿರಲಿ: ಸೋನಾಕ್ಷಿ ಸಿನ್ಹಾ - ಪೀಪಲ್ ಫಾರ್ ಎಥಿಕಲ್ ಟ್ರೀಟ್ಮೆಂಟ್ ಆಫ್ ಅನಿಮಲ್ಸ್

ಪೀಪಲ್ ಫಾರ್ ಎಥಿಕಲ್ ಟ್ರೀಟ್ಮೆಂಟ್ ಆಫ್ ಅನಿಮಲ್ಸ್ (ಪೆಟಾ) ಪರವಾಗಿ ​ನಟಿ ಸೋನಾಕ್ಷಿ ಸಿನ್ಹಾ ಹೊಸ ಅಭಿಯಾನ ಆರಂಭಿಸಿದ್ದಾರೆ.

Sonakshi Sinha campaigns for PETA against leather
ಪೆಟಾ ಇಂಡಿಯಾ ಕ್ಯಾಂಪೇನ್ ಆರಂಭಿಸಿದ ನಟಿ ಸೋನಾಕ್ಷಿ ಸಿನ್ಹಾ
author img

By

Published : Apr 28, 2022, 8:39 AM IST

ಮುಂಬೈ: ಪೀಪಲ್ ಫಾರ್ ಎಥಿಕಲ್ ಟ್ರೀಟ್ಮೆಂಟ್ ಆಫ್ ಅನಿಮಲ್ಸ್ (ಪೆಟಾ) ಪರವಾಗಿ ಹೊಸ ಅಭಿಯಾನ ಆರಂಭಿಸಿರುವ ಬಾಲಿವುಡ್​ ನಟಿ ಸೋನಾಕ್ಷಿ ಸಿನ್ಹಾ ಪ್ರಾಣಿಗಳ ರಕ್ಷಣೆಗೆ ಮುಂದಾಗುವಂತೆ ಸಂದೇಶ ರವಾನಿಸಿದ್ದಾರೆ.

ಪೆಟಾ ಇಂಡಿಯಾ ಕ್ಯಾಂಪೇನ್ ಆರಂಭಿಸಿದ ನಟಿ ಸೋನಾಕ್ಷಿ ಸಿನ್ಹಾ

ಪೆಟಾ ಇಂಡಿಯಾ ಕ್ಯಾಂಪೇನ್ ಆರಂಭಿಸಿರುವ ನಟಿ ಸೋನಾಕ್ಷಿ ಸಿನ್ಹಾ ತಮ್ಮ ಇನ್​ಸ್ಟಾಗ್ರಾಮ್​ನಲ್ಲಿ ಪೋಸ್ಟ್​ ಒಂದನ್ನು ಶೇರ್​ ಮಾಡಿದ್ದಾರೆ. ರಕ್ತದ ಕಲೆಯಂತೆ ಕಾಣುತ್ತಿರುವ ಲೆದರ್ ಬ್ಯಾಗ್​ ಹಿಡಿದು ನಟಿ ಪೋಸ್​ ನೀಡಿದ್ದಾರೆ. ನಿಮ್ಮ ಬ್ಯಾಗ್​ ರಕ್ತಸ್ರಾವವಾಗಿದೆಯೇ? ಎಂಬ ಕ್ಯಾಪ್ಷನ್ ಕೂಡ ನೀಡಿದ್ದಾರೆ. ಈ ಮೂಲಕ ಲೆದರ್​ ಬ್ಯಾಗ್ ಅನ್ನು (ಲೆದರ್​ನ ಯಾವುದೇ ವಸ್ತುಗಳು) ಮಿತಿಗೊಳಿಸಿ ಪರಿಸರ ಸ್ನೇಹಿ, ಪ್ರಾಣಿ ಸ್ನೇಹಿ ಬ್ಯಾಗ್ ಅನ್ನು ಉಪಯೋಗಿಸಿ ಎನ್ನುವ ಸಂದೇಶ ಕೊಟ್ಟಿದ್ದಾರೆ.

ಇದನ್ನೂ ಓದಿ: 'ಗೊಂದಲ ನಿವಾರಿಸಿದ್ದಕ್ಕೆ ಥ್ಯಾಂಕ್ಸ್​​​': ಸುದೀಪ್‌​ಗೆ ಧನ್ಯವಾದ ಹೇಳಿದ ಅಜಯ್ ದೇವಗನ್

ಫ್ಯಾಶನ್​ ಎನ್ನುವುದು ಫನ್​ ಆಗಿರಬೇಕು, ಆದರೆ ಕಠೋರವಾಗಿರಬಾರದು. ನನ್ನ ಪೆಟಾ ಇಂಡಿಯಾ ಅಭಿಯಾನ ಎಲ್ಲೆಡೆ ಉತ್ತಮ ಸಂದೇಶ ರವಾನಿಸುತ್ತದೆ ಎಂದು ನಾನು ನಂಬಿದ್ದೇನೆ. ಪ್ರಾಣಿ ಸ್ನೇಹಿಯಾಗಿರುವಂತಹ ಫ್ಯಾಶನ್​ ಅನ್ನು ಆಯ್ದುಕೊಳ್ಳಿ. ಇದು ಕೇವಲ ಮಾನವೀಯತೆಯ ವಿಷಯ ಮಾತ್ರವಲ್ಲ. ಇದು ಬಹಳ ಸರಳತೆಯನ್ನು ಸೂಚಿಸುತ್ತದೆ ಎಂದಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.