ನಟಿ ಸೋನಾಕ್ಷಿ ಸಿನ್ಹಾ ಮತ್ತು ಹುಮಾ ಖುರೇಷಿ ಅಭಿನಯದ 'ಡಬಲ್ ಎಕ್ಸ್‌ಎಲ್' ಚಿತ್ರದ ಟೀಸರ್ ಇಂದು ಅನಾವರಣಗೊಂಡಿದೆ. 30 ಸೆಕೆಂಡುಗಳ ಟೀಸರ್ ಹೆಚ್ಚುವರಿ ತೂಕ ಹೊಂದಿದವರಿಗೆ ಸಂಬಂಧಿಸಿದ್ದಾಗಿದೆ.
ಚಿತ್ರದ ನಿರ್ಮಾಣ ಸಂಸ್ಥೆ ಟಿ-ಸೀರಿಸ್ ತಮ್ಮ ಅಧಿಕೃತ ಯೂಟ್ಯೂಬ್ ಚಾನಲ್‌ನಲ್ಲಿ 30-ಸೆಕೆಂಡ್‌ಗಳ ಕಿರು ಟೀಸರ್ ಅನ್ನು ಹಂಚಿಕೊಂಡಿದೆ. ಇದು ನಾಯಕಿರ ಒಂದು ನೋಟ ನೀಡಿದೆ. ಸೋನಾಕ್ಷಿ ಮತ್ತು ಹುಮಾ ಬೆಂಚ್ ಮೇಲೆ ಕುಳಿತು ಸಮಾಜವು ಸೌಂದರ್ಯ, ದೇಹದ ತೂಕವನ್ನು ಹೇಗೆಲ್ಲಾ ಅಳೆಯುತ್ತದೆ ಎಂಬುದರ ಬಗ್ಗೆ ಚರ್ಚೆ ನಡೆಸಿದ್ದಾರೆ. ಪ್ರೇಕ್ಷಕರು ಸಂಕ್ಷಿಪ್ತ ಫಸ್ಟ್ ಲುಕ್ ಅನ್ನು ಮೆಚ್ಚಿದ್ದಾರೆ. ಹೆಚ್ಚಿನದಕ್ಕಾಗಿ ಕುತೂಹಲದಿಂದ ಕಾಯುತ್ತಿದ್ದೇವೆ ಎಂದು ಅಭಿಮಾನಿಗಳು ತಿಳಿಸಿದ್ದಾರೆ.
- " class="align-text-top noRightClick twitterSection" data="">
ಇದೊಂದು ಹಾಸ್ಯಪ್ರಧಾನ ಚಿತ್ರವಾಗಿದ್ದು, ಹೆಚ್ಚು ತೂಕ ಹೊಂದಿದವರ ಜೀವನ ಕಥೆ ಹೇಳಲಿದೆ. ಚಿತ್ರಕ್ಕಾಗಿ ನಟಿ ಸೋನಾಕ್ಷಿ ಸಿನ್ಹಾ ಮತ್ತು ಹುಮಾ ಖುರೇಷಿ ತಮ್ಮ ತೂಕ ಹೆಚ್ಚಿಸಿಕೊಂಡಿದ್ದಾರೆ. ಭಾರತ ಮತ್ತು ಯುಕೆಯಲ್ಲಿ ಚಿತ್ರೀಕರಣ ನಡೆದಿದೆ.
ಇದನ್ನೂ ಓದಿ: ಸೂರ್ಯರಶ್ಮಿಯಲ್ಲಿ ಕಂಗೊಳಿಸಿದ ಶ್ವೇತಸುಂದರಿ.. ನೋಡಿ ಚೆಲುವೆಯ ಚೆಲುವಿನ ಫೋಟೋ
ಕಥೆಯನ್ನು ಮುದಸ್ಸರ್ ಅಜೀಜ್ ಬರೆದಿದ್ದಾರೆ ಮತ್ತು ಸತ್ರಮ್ ರಮಣಿ ನಿರ್ದೇಶಿಸಿದ್ದಾರೆ. ಭೂಷಣ್ ಕುಮಾರ್ ಮತ್ತು ಕ್ರಿಶನ್ ಕುಮಾರ್, ವಿಪುಲ್ ಡಿ ಶಾ, ರಾಜೇಶ್ ಬಹ್ಲ್ ಮತ್ತು ಅಶ್ವಿನ್ ವರ್ದೆ, ಸಾಕಿಬ್ ಸಲೀಮ್, ಹುಮಾ ಖುರೇಷಿ ಮತ್ತು ಮುದಸ್ಸರ್ ಅಜೀಜ್ ನಿರ್ಮಿಸಿರುವ 'ಡಬಲ್ ಎಕ್ಸ್‌ಎಲ್' ಅಕ್ಟೋಬರ್ 14 ರಂದು ಬಿಡುಗಡೆ ಆಗಲಿದೆ.