ETV Bharat / entertainment

ಗ್ರ್ಯಾಮಿ ಪ್ರಶಸ್ತಿ ಸದಸ್ಯರಾಗಿ ಗಾಯಕ ಶ್ರೀರಾಮ್ ಅಯ್ಯರ್ ಆಯ್ಕೆ - Grammy Awards

"ದಿ ರೆಕಾರ್ಡಿಂಗ್ ಅಕಾಡೆಮಿ"ಗೆ ಮತದಾನದ ಸದಸ್ಯರಾಗಿ ಗಾಯಕ ಶ್ರೀರಾಮ್ ಅಯ್ಯರ್ ಆಯ್ಕೆಯಾಗಿದ್ದಾರೆ.

Singer Sriram Iyer
ಗಾಯಕ ಶ್ರೀರಾಮ್ ಅಯ್ಯರ್
author img

By

Published : Jul 21, 2023, 1:21 PM IST

ಮನರಂಜನಾ ಕ್ಷೇತ್ರ ಜನರ ಜೀವನದಲ್ಲಿ ಪ್ರಮುಖ ಪಾತ್ರ ವಹಿಸಿದೆ. ವಿಭಿನ್ನ ರೂಪದಲ್ಲಿ ಜನರನ್ನು ರಂಜಿಸುವ, ಪ್ರೇಕ್ಷಕರ ಮನಮುಟ್ಟುವ ಕೆಲಸವನ್ನು ಈ ಕ್ಷೇತ್ರ ಮಾಡುತ್ತಾ ಬಂದಿದೆ. ಆ ಪೈಕಿ ಸಂಗೀತ ವಲಯ ತನ್ನದೇ ಆದ ಮಹತ್ವದ ಸ್ಥಾನ ಹೊಂದಿದೆ. ಸಂಗೀತ ವಲಯದಲ್ಲಿ ಅತ್ಯುತ್ತಮ ಪ್ರದರ್ಶನಕ್ಕಾಗಿ ನೀಡುವ ಅತ್ಯುನ್ನತ ಪ್ರಶಸ್ತಿಗಳ ಪೈಕಿ ಗ್ರ್ಯಾಮಿ ಆವಾರ್ಡ್ಸ್ ಕೂಡ ಒಂದು.

ಗ್ರ್ಯಾಮಿ - ಸಂಗೀತ ಉದ್ಯಮದ ಪ್ರತಿಷ್ಠಿತ ಪ್ರಶಸ್ತಿ: ಗ್ರ್ಯಾಮಿ ಪ್ರಶಸ್ತಿ ಅಥವಾ ಸರಳವಾಗಿ ಗ್ರ್ಯಾಮಿಸ್ ಎಂದು ಕರೆಯಲ್ಪಡುವ ಈ ಗೌರವ ಸಂಗೀತೋದ್ಯಮದ ಸಾಧಕರಿಗೆ ಸಿಗುವ ಪ್ರತಿಷ್ಟಿತ ಪುರಸ್ಕಾರ. ಪ್ರತಿಭೆಗಳ ಅತ್ಯುತ್ತಮ ಸಾಧನೆಗಳನ್ನು ಗುರುತಿಸುವ ಸಲುವಾಗಿ ಯುನೈಟೆಡ್ ಸ್ಟೇಟ್ಸ್​ನ ರೆಕಾರ್ಡಿಂಗ್ ಅಕಾಡೆಮಿಯು ಕೊಡಮಾಡುವ ಪ್ರಶಸ್ತಿ ಇದು. ಗ್ಯಾಮಿಯನ್ನು ಸಂಗೀತ ಉದ್ಯಮದಲ್ಲಿ ಅತ್ಯಂತ ಪ್ರತಿಷ್ಠಿತ ಮತ್ತು ಮಹತ್ವದ ಪ್ರಶಸ್ತಿ ಎಂದೇ ಪರಿಗಣಿಸಲಾಗಿದೆ.

Singer Sriram Iyer
ಗಾಯಕ ಶ್ರೀರಾಮ್ ಅಯ್ಯರ್

ದಿ ರೆಕಾರ್ಡಿಂಗ್ ಅಕಾಡೆಮಿ ಮತದಾನದ ಸದಸ್ಯತ್ವ: ಅಮೆರಿಕದ ಪ್ರತಿಷ್ಠಿತ ರೆಕಾರ್ಡಿಂಗ್ ಅಕಾಡೆಮಿ (ಗ್ರ್ಯಾಮಿ ಪ್ರಶಸ್ತಿ) ಅವರು ಪ್ರತಿ ಸಾಲಿನಂತೆ ಈ ವರ್ಷ ಕೂಡ ಆಯ್ದ ಸಂಗೀತಗಾರರನ್ನು "ದಿ ರೆಕಾರ್ಡಿಂಗ್ ಅಕಾಡೆಮಿ" ಗೆ ಮತದಾನದ ಸದಸ್ಯರಾಗಲು ಆಹ್ವಾನಿಸಿದ್ದರು. ಈ ಬಾರಿ ಆಸ್ಟ್ರೇಲಿಯಾದ ಮೆಲ್ಬೊರ್ನ್‌ ನಿವಾಸಿ, ಭಾರತೀಯ ಗಾಯಕ ಶ್ರೀರಾಮ್ ಅಯ್ಯರ್ ಅವರು ಮತದಾನದ ಸದಸ್ಯರಾಗಿ ಆಯ್ಕೆ ಆಗಿದ್ದಾರೆ.

ಶ್ರೀರಾಮ್ ಅಯ್ಯರ್ ಕುರಿತು...: ಕಳೆದ ಸುಮಾರು 23 ವರ್ಷಗಳಿಂದ ಸಂಗೀತ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ಶ್ರೀರಾಮ್ ಅಯ್ಯರ್ ಅವರು ರೆಕಾರ್ಡಿಂಗ್ ಅಕಾಡೆಮಿಗೆ ಮತದಾನದ ಸದಸ್ಯನಾಗಿ ಆಯ್ಕೆ ಆಗಿರುವುದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ. ಇವರ ಅಭಿಮಾನಿಗಳು ಸಹ ಖುಷಿ ಪಟ್ಟಿದ್ದಾರೆ.

ಇದನ್ನೂ ಓದಿ: Project K First Glimpse: 'ಕಲ್ಕಿ 2898 ಎಡಿ' ಟೈಟಲ್​ನೊಂದಿಗೆ ಪ್ರಾಜೆಕ್ಟ್ ಕೆ ಫಸ್ಟ್ ಗ್ಲಿಂಪ್ಸ್ ರಿಲೀಸ್‌

ಶ್ರೀರಾಮ್ ಅಯ್ಯರ್ ಮ್ಯೂಸಿಕ್​ ಜರ್ನಿ: 2007ರಲ್ಲಿ ಕಿ ವಿ - ಇಂಡಿಯನ್ ಸಂಸ್ಥೆ ಮೂಲಕ ನನ್ನ ಮೊದಲ ಆಲ್ಬಂ ಅನ್ನು ಭಾರತದಲ್ಲಿ ಬಿಡುಗಡೆ ಮಾಡಲಾಯಿತು. ಖ್ಯಾತ ಗಾಯಕರಾದ ಶಂಕರ್ ಮಹಾದೇವನ್, ಸಾಧನ ಸರಗಮ್, ಉದಿತ್ ನಾರಾಯಣ್ ಸೇರಿದಂತೆ ಮುಂತಾದವರು ಮುಖ್ಯ ಅತಿಥಿಗಳಾಗಿ ಆ ಕಾರ್ಯಕ್ರಮಕ್ಕೆ ಆಗಮಿಸಿದ್ದರು. ಅಲ್ಲಿಂದ ನನ್ನ ಸಂಗೀತ ಜರ್ನಿ ಆರಂಭವಾಯಿತು. ಈವರೆಗೂ ಆಸ್ಟ್ರೇಲಿಯಾ, ಭಾರತ ಸೇರಿದಂತೆ ಮುಂತಾದೆಡೆ ಸುಮಾರು 500ಕ್ಕೂ ಹೆಚ್ಚು ಲೈವ್ ಶೋಗಳನ್ನು ನೀಡಿದ್ದೇನೆ. ಗೀತ ರಚನೆಕಾರನಾಗಿಯೂ ಕಾರ್ಯನಿರ್ವಹಿಸಿದ್ದೇನೆ. ಸಂಗೀತ ಕ್ಷೇತ್ರದಲ್ಲೇ ಇನ್ನೂ ಹೆಚ್ಚಿನ ಸಾಧನೆ ಮಾಡುವ ಉದ್ದೇಶ ಹೊಂದಿರುವುದಾಗಿ ಗಾಯಕ ಶ್ರೀರಾಮ್ ಅಯ್ಯರ್ ಅವರು ತಿಳಿಸಿದ್ದಾರೆ.

ಇದನ್ನೂ ಓದಿ: Explained..1960ರ ಬಳಿಕ ಹಾಲಿವುಡ್ ಕಲಾವಿದರಿಂದ ಬೃಹತ್​ ಪ್ರತಿಭಟನೆ.. ಕಾರಣವೇನು ಗೊತ್ತಾ!?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.