ನವದೆಹಲಿ: ಬಾಹುಬಲಿ ಖ್ಯಾತಿಯ ನಟ ಪ್ರಭಾಸ್ ನಟನೆಯ ಹಿಂದು ಧರ್ಮದ ಶ್ರೇಷ್ಠ ಮಹಾಕಾವ್ಯ ರಾಮಾಯಣ ಆಧಾರಿತ 'ಆದಿಪುರುಷ' ಸಿನಿಮಾದ ಸಂಭಾಷಣೆಗಳು ವಿವಾದಕ್ಕೀಡಾಗಿ ಟೀಕೆಗೆ ಗುರಿಯಾಗಿವೆ. ಹಿಂದು ದೇವರು ಅದರಲ್ಲೂ ಚಿರಂಜೀವಿ ಹನುಮಂತನನ್ನು ಅವಮಾನಿಸುವ ರೀತಿಯಲ್ಲಿ ಡೈಲಾಗ್ ಹೇಳಿಸಲಾಗಿದೆ. ಇದಕ್ಕೆ ಹಲವು ರಾಜಕಾರಣಿಗಳು, ನಟರು ಹಾಗೂ ಧಾರ್ಮಿಕ ಸಂಘಟನೆಗಳು ತೀವ್ರ ವಿರೋಧ ವ್ಯಕ್ತಪಡಿಸಿವೆ.
-
इस देश को दो ही लोगों से खतरा है...
— Sonu Nigam (@SonuNigamSingh) June 17, 2023 " class="align-text-top noRightClick twitterSection" data="
एक जात वालों से और दूसरा जमात वालों से।
ईश्वर सद्बुद्धि दे। https://t.co/IqHmVaom8Z
">इस देश को दो ही लोगों से खतरा है...
— Sonu Nigam (@SonuNigamSingh) June 17, 2023
एक जात वालों से और दूसरा जमात वालों से।
ईश्वर सद्बुद्धि दे। https://t.co/IqHmVaom8Zइस देश को दो ही लोगों से खतरा है...
— Sonu Nigam (@SonuNigamSingh) June 17, 2023
एक जात वालों से और दूसरा जमात वालों से।
ईश्वर सद्बुद्धि दे। https://t.co/IqHmVaom8Z
ರಾಮಾಯಣದಂತಹ ಪವಿತ್ರ ಮಹಾಕಾವ್ಯವನ್ನು ಆಧರಿಸಿದ ಚಿತ್ರಕ್ಕೆ ಹೊಂದಿಕೆಯಾಗದ ಟಪೋರಿ ಭಾಷೆಯನ್ನು ಬಳಸಲಾಗಿದೆ ಎಂಬ ಆರೋಪ ಕೇಳಿ ಬಂದಿದೆ. ಇದಕ್ಕೆ ಸ್ಪಷ್ಟನೆ ನೀಡಿರುವ ಚಿತ್ರತಂಡ, ಇದು ಹೊಸ ಯುಗದ ರಾಮಾಯಣವಾಗಿದೆ. ಆಡುಮಾತಿನ ಭಾಷೆಯನ್ನು ಬಳಸಲಾಗಿದೆ. ಇದರಿಂದ ಹೆಚ್ಚು ಜನರಿಗೆ ಅದು ತಲುಪಲಿದೆ. ರಾಮಾಯಣದ ಪುರಾಣವನ್ನು ಸುಲಭವಾಗಿ ತಿಳಿದುಕೊಳ್ಳಬಹುದು ಎಂದಿತ್ತು. ಇದೀಗ ಈ ವಿವಾದದಲ್ಲಿ ಖ್ಯಾತ ಗಾಯಕ ಸೋನು ನಿಗಮ್ ಕೂಡ ಎಂಟ್ರಿ ನೀಡಿದ್ದಾರೆ.
ಸೋನು ನಿಗಮ್ ಟ್ವೀಟ್: ಆಜಾದ್ ಸೇನಾ ಅಧ್ಯಕ್ಷ ಅಭಿಷೇಕ್ ಶುಕ್ಲಾ ಅವರ ಟ್ವೀಟ್ ಅನ್ನು ಹಿನ್ನೆಲೆಯಲ್ಲಿ ಸೋನು ನಿಗಮ್ ರಿಟ್ವೀಟ್ ಮಾಡಿ, 'ಈ ದೇಶಕ್ಕೆ ಅಪಾಯ ಇರುವುದು ಇಬ್ಬರಿಂದ ಮಾತ್ರ.. ಒಬ್ಬರು ಜಾತಿವಾದಿಗಳು ಮತ್ತೊಬ್ಬರು ಜಮಾತ್ ಜನರು'. ದೇವರು ಅಂಥವರಿಗೆ ಬುದ್ಧಿ ಕೊಡಲಿ' ಎಂದು ಎಂದು ಬರೆದುಕೊಂಡಿದ್ದಾರೆ. ಈ ಟ್ವೀಟ್‌ನಲ್ಲಿ ಅಭಿಷೇಕ್ ಬರೆದುಕೊಂಡಿದ್ದಾರೆ.
ಆಜಾದ್ ಸೇನಾ ಅಧ್ಯಕ್ಷ ಅಭಿಷೇಕ್ ಶುಕ್ಲಾ ಅವರು ಆದಿಪುರುಷ ಸಿನಿಮಾವನ್ನು ಉಲ್ಲೇಖಿಸಿ, 'ನೀವೆಲ್ಲರೂ ಚಿತ್ರವನ್ನು ಸಾಧ್ಯವಾದಷ್ಟು ವಿರೋಧಿಸಿ ಅಥವಾ ಬೆಂಬಲಿಸಿ. ಅದು ನಿಮ್ಮ ಸ್ವಾತಂತ್ರ್ಯ. ಆದರೆ, ಬ್ರಾಹ್ಮಣ ಸಮಾಜದ ಉದಯೋನ್ಮುಖ ಮುಖವಾದ ಮನೋಜ್ ಮುಂತಾಶಿರ್ ಅವರನ್ನು ವಿರೋಧಿಸಿದಾಗ ಮಾತ್ರ ನಿಮಗೆ ತಕ್ಕ ಉತ್ತರ ಸಿಗುತ್ತದೆ' ಎಂದು ಬರೆದುಕೊಂಡಿದ್ದರು. ಇವರ ಜಾತಿ ಆಧರಿತ ಟೀಕೆಯನ್ನು ಸೋನು ನಿಗಮ್ ವಿರೋಧಿಸಿದ್ದಾರೆ.
ಆದಿಪುರುಷ್ ಸಿನಿಮಾಗೆ ಸಂಭಾಷಣೆ ಬರೆದಿರುವ ಮನೋಜ್ ಮುಂತಾಶಿರ್ ಅವರ ಪೂರ್ಣ ಹೆಸರು ಮನೋಜ್ ಮುಂತಾಶಿರ್ ಶುಕ್ಲಾ. ಅವರು ಬ್ರಾಹ್ಮಣ ಸಮಾಜಕ್ಕೆ ಸೇರಿದವರಾಗಿದ್ದಾರೆ. ಅವರು ಚಿತ್ರಕ್ಕೆ ಬರೆದ ಸಂಭಾಷಣೆಗಳು ತೀವ್ರ ವಿರೋಧಕ್ಕೆ ಕಾರಣವಾಗಿವೆ. ಕೆಲವರು ಈ ವಿವಾದವನ್ನು ಜಾತಿಗೆ ತಳುಕು ಹಾಕುತ್ತಿದ್ದಾರೆ. ಮನೋಜ್ ಬದಲಾಗಿ ಬ್ರಾಹ್ಮಣ ಸಮುದಾಯವನ್ನೇ ಇಲ್ಲಿ ಟಾರ್ಗೆಟ್ ಮಾಡಲಾಗುತ್ತಿದೆ ಎಂದು ಹೇಳಲಾಗಿದೆ. ಇದರ ಹಿನ್ನೆಲೆಯಲ್ಲಿ ಸೋನು ನಿಗಮ್ ಟ್ವೀಟ್ ಮೂಲಕ ತಮ್ಮ ಪ್ರತಿಭಟನೆಯನ್ನು ವ್ಯಕ್ತಪಡಿಸಿದ್ದಾರೆ.
-
Biggest Opening Day Worldwide Collection for Bollywood films
— 𝗳𝗶𝗹𝗺𝘆𝗻𝗲𝘄𝘀𝗻𝗲𝘁𝘄𝗼𝗿𝗸 (@Filmynews11) June 17, 2023 " class="align-text-top noRightClick twitterSection" data="
1. #Adipurush - 140 cr
2. #Pathaan - 106 cr
3. #ThugsofHindostan - 79 cr
4. #Brahmastra - 75 cr pic.twitter.com/6ykxtXxp2n
">Biggest Opening Day Worldwide Collection for Bollywood films
— 𝗳𝗶𝗹𝗺𝘆𝗻𝗲𝘄𝘀𝗻𝗲𝘁𝘄𝗼𝗿𝗸 (@Filmynews11) June 17, 2023
1. #Adipurush - 140 cr
2. #Pathaan - 106 cr
3. #ThugsofHindostan - 79 cr
4. #Brahmastra - 75 cr pic.twitter.com/6ykxtXxp2nBiggest Opening Day Worldwide Collection for Bollywood films
— 𝗳𝗶𝗹𝗺𝘆𝗻𝗲𝘄𝘀𝗻𝗲𝘁𝘄𝗼𝗿𝗸 (@Filmynews11) June 17, 2023
1. #Adipurush - 140 cr
2. #Pathaan - 106 cr
3. #ThugsofHindostan - 79 cr
4. #Brahmastra - 75 cr pic.twitter.com/6ykxtXxp2n
ಸಿನಿಮಾ ಗಳಿಕೆ: ಈ ಎಲ್ಲ ವಿವಾದಗಳ ನಡುವೆಯೂ ಚಿತ್ರ ಬಂಪರ್ ಗಳಿಕೆ ಮುಂದುವರೆಸಿದೆ. ಪ್ರೊಡಕ್ಷನ್ ಬ್ಯಾನರ್ ಟಿ-ಸೀರೀಸ್ ಪ್ರಕಾರ, 'ಪ್ರಭಾಸ್ ಅಭಿನಯದ ಚಿತ್ರವು ಹಿಂದಿ ಸಿನಿಮಾವೊಂದು ಒಂದೇ ದಿನದಲ್ಲಿ ಗಲ್ಲಾಪೆಟ್ಟಿಗೆಯಲ್ಲಿ ಅತಿ ಹೆಚ್ಚು ಕಲೆಕ್ಷನ್ ಮಾಡಿದ ಸಿನಿಮಾವಾಗಿದೆ. ಬಾಕ್ಸ್ ಆಫೀಸ್ನಲ್ಲಿ ದೊಡ್ಡ ಯಶಸ್ಸು ಸಾಧಿಸುತ್ತಿದೆ ಎಂದು ಅದು ಹೇಳಿಕೆ ಬಿಡುಗಡೆ ಮಾಡಿದೆ. ಈವರೆಗೂ ಸಿನಿಮಾ ಜಾಗತಿಕವಾಗಿ 140 ಕೋಟಿ ರೂಪಾಯಿಗಳನ್ನು ಬಾಚಿಕೊಂಡಿದೆ.
ಜೂನ್ 16 ರಂದು 5 ಭಾಷೆಗಳಲ್ಲಿ ಜಾಗತಿಕವಾಗಿ ಬಿಡುಗಡೆಯಾದ 3ಡಿ ಚಿತ್ರ ಆದಿಪುರುಷನಲ್ಲಿ ಪ್ರಭಾಸ್ ರಾಘವನಾಗಿ, ಕೃತಿ ಸನೋನ್ ಜಾನಕಿಯಾಗಿ, ಸೈಫ್ ಅಲಿ ಖಾನ್ ಲಂಕೇಶನ ಪಾತ್ರದಲ್ಲಿ ನಟಿಸಿದ್ದಾರೆ. ಇದನ್ನು ಟಿ-ಸೀರೀಸ್‌ನ ಭೂಷಣ್ ಕುಮಾರ್ ನಿರ್ಮಿಸಿದ್ದಾರೆ. ಓಂ ರಾವುತ್ ಅವರು ನಿರ್ದೇಶಿಸಿದ್ದಾರೆ.
ಇದನ್ನೂ ಓದಿ: 'ಆದಿಪುರುಷ್' ಹನುಮಂತನ ಡೈಲಾಗ್ಸ್ ಟ್ರೋಲ್.. ಸಂಭಾಷಣೆ ಬರಹಗಾರರು ಹೇಳಿದ್ದೇನು?