ETV Bharat / entertainment

ವಿಡಿಯೋ: ಸಲ್ಮಾನ್ ಖಾನ್ ​- ಅರಿಜಿತ್ ಸಿಂಗ್ ಮನಸ್ತಾಪ ಅಂತ್ಯ?; ನಟನ ಮನೆ ಬಳಿ ಕಾಣಿಸಿಕೊಂಡ ಗಾಯಕ! - Arijit Salman fight

Arijit Singh - Salman Khan: ಸೂಪರ್​ ಸ್ಟಾರ್ ಸಲ್ಮಾನ್​ ಖಾನ್​ ಮನೆ ಬಳಿಕ ಗಾಯಕ ಅರಿಜಿತ್ ಸಿಂಗ್ ಕಾಣಿಸಿಕೊಂಡಿದ್ದಾರೆ.

Arijit Singh Salman Khan
ಅರಿಜಿತ್ ಸಿಂಗ್ ಸಲ್ಮಾನ್ ಖಾನ್​​
author img

By ETV Bharat Karnataka Team

Published : Oct 5, 2023, 11:56 AM IST

Updated : Oct 5, 2023, 12:16 PM IST

ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಹಾಗೂ ಸ್ಟಾರ್ ಗಾಯಕ ಅರಿಜಿತ್ ಸಿಂಗ್ ನಡುವಿನ ಒಂಭತ್ತು ವರ್ಷಗಳ ಮನಸ್ತಾಪ ಅಂತ್ಯ ಕಾಣುವ ಹೊತ್ತು ಬಂದಂತೆ ತೋರುತ್ತಿದೆ. ಸಲ್ಮಾನ್ ಖಾನ್ ಮನೆ ಬಳಿ ಅರಿಜಿತ್ ಸಿಂಗ್ ಕಾಣಿಸಿಕೊಂಡಿದ್ದಾರೆ. ಸೋಷಿಯಲ್​ ಮೀಡಿಯಾದಲ್ಲಿ ವಿಡಿಯೋ ವೈರಲ್​ ಆಗುತ್ತಿದ್ದು, ಮನಸ್ತಾಪಕ್ಕೆ ಫುಲ್​ ಸ್ಟಾಪ್​ ಇಡುವ ಹೊತ್ತು ಬಂದಿದೆ ಎಂದು ಅಭಿಮಾನಿಗಳು ಅಂದಾಜಿಸುತ್ತಿದ್ದಾರೆ.

ಪ್ರೀತಿ ಗೆದ್ದಿದೆ... ಸಲ್ಮಾನ್​ ಖಾನ್​ ಸಿನಿಮಾ ಕ್ಷೇತ್ರದ ಸಾಧಕ. ಅರಿಜಿತ್​​ ಸಿಂಗ್​ ತಮ್ಮ ಮ್ಯಾಜಿಕಲ್​​ ವಾಯ್ಸ್ ಮೂಲಕವೇ ಅಭಿಮಾನಿಗಳ ಮನ ಸೆಳೆಯುವ ಸ್ಟಾರ್ ಸಿಂಗರ್​. ಇಬ್ಬರೂ ಮನರಂಜನಾ ಕ್ಷೇತ್ರದ ದಿಗ್ಗಜರೇ. ಆದರೆ 2014ರಲ್ಲಿ ಕೆಲ ವಿಷಯಗಳ ಹಿನ್ನೆಲೆ, ಸಲ್ಮಾನ್ ಮತ್ತು ಅರಿಜಿತ್ ನಡುವೆ ಮನಸ್ತಾಪ ಉಂಟಾಗಿದೆ ಎಂದು ವರದಿಗಳು ತಿಳಿಸಿತ್ತು. ಇದೀಗ ಮನಸ್ತಾಪ ಕೊನೆಗೊಂಡು ಪ್ರೀತಿ ಗೆದ್ದಿದೆ ಅಂತಾರೆ ಅಭಿಮಾನಿಗಳು.

2014ರಲ್ಲಿ ಮನಸ್ತಾಪ? ಕಾರ್ಯಕ್ರಮವೊಂದರಲ್ಲಿ ನಡೆದ ಮಾತಿನ ಚಕಮಕಿಯೇ ಮನಸ್ತಾಪಕ್ಕೆ ಕಾರಣ ಎನ್ನಲಾಗಿದೆ. 2014ರ ಬಳಿಕ ಸಲ್ಮಾನ್ ಖಾನ್ ಅವರ ಸಿನಿಮಾಗಳಲ್ಲಿ ಹಾಡುವ ಅವಕಾಶ ಅರಿಜಿತ್ ಸಿಂಗ್ ಅವರಿಗೆ ಸಿಕ್ಕಿಲ್ಲ. ಹೀಗೆ ವರ್ಷಗಳು ಕಳೆದಿದ್ದು, ಸದ್ಯ ಸಮಸ್ಯೆಗೆ ಫುಲ್​ ಸ್ಟಾಪ್​ ಇಡುವ ಹೊತ್ತು ಬಂದಿದೆ ಎಂದು ಅಭಿಮಾನಿಗಳು ತಿಳಿಸಿದ್ದಾರೆ.

ಅರಿಜಿತ್​ ಸಿಂಗ್​ ವಿಡಿಯೋ ವೈರಲ್​: ಅಭಿಮಾನಿಯೊಬ್ಬರು ಸೋಷಿಯಲ್​ ಮೀಡಿಯಾ ಪ್ಲಾಟ್​ಫಾರ್ಮ್ ಎಕ್ಸ್​ನಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ನಟ ಸಲ್ಮಾನ್​ ಖಾನ್​​ ಮನೆಯಿಂದ ಗಾಯಕ ಅರಿಜಿತ್​ ಸಿಂಗ್​ ಅವರು ಕಾರಿನಲ್ಲಿ ನಿರ್ಗಮಿಸುತ್ತಿರುವುದನ್ನು ನಾವು ಈ ವಿಡಿಯೋದಲ್ಲಿ ಕಾಣಬಹುದು. ವಿಡಿಯೋ ಹಂಚಿಕೊಂಡ ಸೋಷಿಯಲ್​ ಮೀಡಿಯಾ ಬಳಕೆದಾರ, ಸಲ್ಮಾನ್ ಖಾನ್ ಮನೆ ಬಳಿ ಅರಿಜಿತ್ ಸಿಂಗ್ ಕಾಣಿಸಿಕೊಂಡಿದ್ದಾರೆ, ಏನಾಗುತ್ತಿದೆ? ಎಂದು ಬರೆದುಕೊಂಡಿದ್ದಾರೆ. ಈ ವಿಡಿಯೋಗೆ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ. ಬಿಡುಗಡೆಗೆ ಸಜ್ಜಾಗಿರುವ ಬಹುನಿರೀಕ್ಷಿತ ಟೈಗರ್ 3ನಲ್ಲಿ ಇಬ್ಬರೂ ಒಟ್ಟಿಗೆ ಕೆಲಸ ಮಾಡಿದ್ದಾರಾ? ಎಂದು ಅಭಿಮಾನಿಗಳು ಪ್ರಶ್ನಿಸಿದ್ದಾರೆ.

ಸಲ್ಮಾನ್-ಅರಿಜಿತ್ ವಿವಾದವೇನು? 2014 ರಲ್ಲಿ ಸಲ್ಮಾನ್ ಖಾನ್ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಸಿಕೊಟ್ಟಿದ್ದರು. ಈ ಕಾರ್ಯಕ್ರಮದಲ್ಲಿ ಉತ್ತಮ ಗಾಯನಕ್ಕಾಗಿ ಅರಿಜಿತ್ ಸಿಂಗ್ ಅವರಿಗೆ ಪ್ರಶಸ್ತಿ ಒದಗಿ ಬಂದಿತ್ತು. ಪ್ರಶಸ್ತಿ ಸ್ವೀಕರಿಸಲು ವೇದಿಕೆ ಮೇಲೆ ಬಂದಾಗ ಅರಿಜಿತ್ ಸಿಂಗ್ ಅವರಲ್ಲಿ ನೀವೇನಾ ವಿನ್ನರ್? ಎಂದು ಸಲ್ಮಾನ್ ಪ್ರಶ್ನಿಸಿದ್ದರು. ಎಂದಿನಂತೆ ಗಾಯಕ ಬಹಳ ಸರಳವಾಗಿ ಕಾಣಿಸಿಕೊಂಡ ಹಿನ್ನೆಲೆ ಸಲ್ಮಾನ್​ ಹೀಗೆ ಪ್ರಶ್ನಿಸಿದ್ದರು ಎಂದು ಪ್ರೇಕ್ಷಕರು ಅಂದಾಜಿಸಿದ್ದರು. ಸಲ್ಮಾನ್ ಅವರ ಪ್ರಶ್ನೆಗೆ, ಅರಿಜಿತ್ ಸಿಂಗ್ ಕೂಡ ವ್ಯಂಗ್ಯವಾಗೇ ಉತ್ತರಿಸಿದ್ದರು. ನೀವು (ನಿರೂಪಕರು) ನನ್ನನ್ನು ನಿದ್ದೆ ಮಾಡುವಂತೆ ಮಾಡಿಬಿಟ್ಟಿರಿ ಎಂದು ತಿಳಿಸಿದ್ದರು. ಅರಿಜಿತ್ ಸಿಂಗ್ ಅವರ ಪ್ರತಿಕ್ರಿಯೆ ಸಲ್ಮಾನ್ ಖಾನ್ ಅವರಿಗೆ ಕೋಪ ಹೆಚ್ಚಿಸಿತು.

ಇದನ್ನೂ ಓದಿ: ದಿ ಆರ್ಚೀಸ್: ವೆರೋನಿಕಾ ಪಾತ್ರದಲ್ಲಿ ಸುಹಾನಾ ಖಾನ್​​: ಶಾರುಖ್​ ಪುತ್ರಿಯ ಚೊಚ್ಚಲ ಚಿತ್ರದ ಅನುಭವ ಹೇಗಿತ್ತು?

ಸಲ್ಮಾನ್ ಅವರ ಚಿತ್ರಗಳಾದ ಭಜರಂಗಿ ಭಾಯಿಜಾನ್, ಸುಲ್ತಾನ್ ಸೇರಿದಂತೆ ಹಲವು ಚಿತ್ರಗಳಲ್ಲಿದ್ದ ಅರಿಜಿತ್​ ಸಿಂಗ್​ ಅವರ ಹಾಡುಗಳನ್ನು ಯೂಟ್ಯೂಬ್​​ನಿಂದ ತೆಗೆದುಹಾಕಲಾಯಿತು. ಬಳಿಕ ಅರಿಜಿತ್ ಅವರು ಸಲ್ಮಾನ್‌ ಬಳಿ ಅನೇಕ ಬಾರಿ ಸಾರ್ವಜನಿಕವಾಗಿ ಕ್ಷಮೆಯಾಚಿಸಿದ್ದಾರೆ. ಖಾನ್​ಗಾಗಿ ಹಾಡನ್ನು ಹಾಡಲು ಬಯಸುವುದಾಗಿಯೂ ತಿಳಿಸಿದ್ದರು. ಇದೀಗ ಸೂಪರ್ ಸ್ಟಾರ್ ಸಲ್ಮಾನ್​ ಖಾನ್​ ಅವರ ಮುಂದಿನ ಬಹುನಿರೀಕ್ಷಿತ ಟೈಗರ್​ 3 ಸಿನಿಮಾದಲ್ಲಿ ಗಾಯಕ ಅರಿಜಿತ್​ ಸಿಂಗ್​ ಅವರ ಹಾಡು ಇರಬಹುದುದೆಂದು ನೆಟ್ಟಿಗರು ಊಹಿಸುತ್ತಿದ್ದಾರೆ.

ಇದನ್ನೂ ಓದಿ: ಅಭಿಮಾನಿಗಳೊಂದಿಗೆ ಅಮೀರ್ ಖಾನ್​​.. ನೆಟ್ಟಿಗರ ಮನಗೆದ್ದ ಸೂಪರ್​ ಸ್ಟಾರ್​ ವಿಡಿಯೋ ನೋಡಿ

Last Updated : Oct 5, 2023, 12:16 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.