ಬಾಲಿವುಡ್ನ ನವದಂಪತಿ ಸಿದ್ಧಾರ್ಥ್ ಮಲ್ಹೋತ್ರಾ ಮತ್ತು ಕಿಯಾರಾ ಅಡ್ವಾಣಿ ತಮ್ಮ ವಿವಾಹೋತ್ಸವದ ಸುಮಧುರ ಕ್ಷಣಗಳ ವಿಡಿಯೋ ಹಂಚಿಕೊಂಡಿದ್ದಾರೆ. ಇಬ್ಬರೂ ಮದುವೆಯ ಆಕರ್ಷಕ ಉಡುಗೆಯಲ್ಲಿ ಸುಂದರವಾಗಿ ಕಾಣಿಸಿಕೊಂಡಿದ್ದಾರೆ. ತಮ್ಮ ಬದುಕಿನ ವಿಶೇಷ ದಿನದಲ್ಲಿ ಕ್ಯೂಟ್ ಕಪಲ್ ಎಷ್ಟು ಖುಷಿಯಾಗಿದ್ದರು ಎಂಬುದನ್ನು ವಿಡಿಯೋ ನೋಡಿದರೆ ತಿಳಿಯುತ್ತದೆ. ಹೊಸ ಜೋಡಿಯ ಭಾವನೆಗಳನ್ನು ಛಾಯಾಗ್ರಾಹಕರು ಅದ್ಭುತವಾಗಿ ಸೆರೆ ಹಿಡಿದಿದ್ದಾರೆ.
ಮದುವೆಯ ದಿನ ಕೆಲವೇ ಕೆಲವು ಫೋಟೋಗಳನ್ನು ಹಂಚಿಕೊಂಡಿದ್ದ ಸಿದ್ಧಾರ್ಥ್ ಮಲ್ಹೋತ್ರಾ ಮತ್ತು ಕಿಯಾರಾ ಅಡ್ವಾಣಿ ಇದೀಗ ಆಕರ್ಷಕ ವಿಡಿಯೋವೊಂದನ್ನು ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ. ಆ ವಿಡಿಯೋಗೆ ನಮಸ್ತೆ ಮತ್ತು ಪ್ರೀತಿಯ ಸಿಂಬಲ್ನೊಂದಿಗೆ 7.02.2023 ಎಂದು ಕ್ಯಾಪ್ಷನ್ ಕೊಟ್ಟಿದ್ದಾರೆ.
- " class="align-text-top noRightClick twitterSection" data="
">
ವಧು ಕಿಯಾರಾ ಅಡ್ವಾಣಿ ಅವರ ಗ್ರ್ಯಾಂಡ್ ಎಂಟ್ರಿಯೊಂದಿಗೆ ವಿಡಿಯೋ ಪ್ರಾರಂಭವಾಗುತ್ತದೆ. ಮದುವೆ ಮಂಟಪದಲ್ಲಿ ಸಿದ್ಧಾರ್ಥ್ ಮಲ್ಹೋತ್ರಾ ತಮ್ಮ ಪ್ರೇಯಸಿಗಾಗಿ ಕಾಯುತ್ತಿರುತ್ತಾರೆ. ಬಳಿಕ ನೃತ್ಯ ಮಾಡಿಕೊಂಡು ಕಿಯಾರಾ ಅವರು ಸಿದ್ಧಾರ್ಥ್ ಸನಿಹವಾಗುತ್ತಾರೆ. ನಂತರ ಪರಸ್ಪರ ಚುಂಬಿಸಿ ತಮ್ಮ ಪ್ರೀತಿ ವ್ಯಕ್ತಪಡಿಸುತ್ತಾರೆ. ಈ ವೇಳೆ ವಧು ವರರ ಮೇಲೆ ಹೂವಿನ ಸುರಿಮಳೆ ಆಗುತ್ತದೆ. ಬಾಲಿವುಡ್ ತಾರಾ ದಂಪತಿಯ ಭಾವನೆಗಳನ್ನು ಕ್ಯಾಮರಾ ಮೂಲಕ ಅತ್ಯದ್ಭುತವಾಗಿ ಸೆರೆ ಹಿಡಿಯಲಾಗಿದೆ. ಈ ವಿಡಿಯೋಗೆ ಸಿದ್ಧಾರ್ಥ್ ಮತ್ತು ಕಿಯಾರಾ ಒಟ್ಟಿಗೆ ನಟಿಸಿರುವ ತಮ್ಮ ಮೊದಲ ಚಿತ್ರ 'ಶೇರ್ಷಾ'ದ ರಾಂಜಾ ಹಾಡನ್ನು ಬಳಸಿಕೊಳ್ಳಲಾಗಿದೆ. ವಿಡಿಯೋ ಹೊರಬರುತ್ತಿದ್ದಂತೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿದೆ. ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.
ಬಾಲಿವುಡ್ ಚಿತ್ರರಂಗದ ಖ್ಯಾತ ಡಿಸೈನರ್ ಮನೀಶ್ ಮಲ್ಹೋತ್ರಾ ವಿನ್ಯಾಸಗೊಳಿಸಿದ ಉಡುಗೆಯಲ್ಲಿ ಸಿದ್ಧಾರ್ಥ್ ಮತ್ತು ಕಿಯಾರಾ ಬಹಳ ಸುಂದರವಾಗಿ ಕಾಣಿಸಿಕೊಂಡಿದ್ದಾರೆ. ಈ ಶುಭ ದಿನಕ್ಕೆ ಮನೀಶ್ ಮಲ್ಹೋತ್ರಾ ವಿಶೇಷವಾಗಿ ವಸ್ತ್ರ ವಿನ್ಯಾಸ ಮಾಡಿದ್ದರು.
ಇದನ್ನೂ ಓದಿ: ನಟಿ ಶಿವಲೀಕಾ ಒಬೆರಾಯ್ ಕೈ ಹಿಡಿದ ದೃಶ್ಯಂ 2 ನಿರ್ದೇಶಕ ಅಭಿಷೇಕ್ ಪಾಠಕ್
ಇದೇ ಫೆಬ್ರವರಿ 7ರಂದು ರಾಜಸ್ಥಾನದ ಜೈಸಲ್ಮೇರ್‌ನ ಸೂರ್ಯಗಢ ಪ್ಯಾಲೆಸ್ ಹೋಟೆಲ್‌ನಲ್ಲಿ ಬಾಲಿವುಡ್ನ ಬಹುಬೇಡಿಕೆ ತಾರೆಗಳಾದ ಸಿದ್ಧಾರ್ಥ್ ಮಲ್ಹೋತ್ರಾ ಮತ್ತು ಕಿಯಾರಾ ಅಡ್ವಾಣಿ ದಾಂಪತ್ಯ ಜೀವನಕ್ಕೆ ಕಾಲಿರಿಸಿದರು. ಮದುವೆ ಶಾಸ್ತ್ರಗಳು ಪೂರ್ಣಗೊಳ್ಳುವವರೆಗೂ ತಮ್ಮ ಪ್ರೀತಿ ಬಗ್ಗೆ ಎಲ್ಲೂ ಮಾತನಾಡಿರದ ಈ ಜೋಡಿ, ಮದುವೆಯಾಗುತ್ತಿದ್ದಂತೆ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡು ತಮ್ಮ ಪ್ರೀತಿ ಬಗ್ಗೆ ಖಚಿತಪಡಿಸಿದರು. ಬಳಿಕ ಚಿತ್ರರಂಗ ಸೇರಿದಂತೆ ಅಭಿಮಾನಿಗಳಿಂದ ಶುಭಾಶಯಗಳ ಮಹಾಪೂರವೇ ಹರಿದುಬಂತು.
ಇದನ್ನೂ ಓದಿ: ಸಪ್ತಪದಿ ತುಳಿದ ಸಿದ್ಧಾರ್ಥ್-ಕಿಯಾರಾ: ಬಾಲಿವುಡ್ ತಾರಾ ಜೋಡಿ ಮದುವೆಯ ಸುಂದರ ಕ್ಷಣಗಳು ಇಲ್ಲಿವೆ
ಮೂರು ದಿನಗಳ ಕಾಲ ಸಿದ್ಧಾರ್ಥ್ ಮತ್ತು ಕಿಯಾರಾ ಅವರ ವಿವಾಹ ಶಾಸ್ತ್ರಗಳು, ಕಾರ್ಯಕ್ರಮಗಳು ಜೈಸಲ್ಮೇರ್‌ನ ಸೂರ್ಯಗಢ ಪ್ಯಾಲೇಸ್ ಹೋಟೆಲ್‌ನಲ್ಲಿ ನಡೆದಿವೆ. ಸಿದ್ಧಾರ್ಥ್ ಮತ್ತು ಕಿಯಾರಾ ತಮ್ಮ ಕುಟುಂಬ ಸದಸ್ಯರೊಂದಿಗೆ ಫೆಬ್ರವರಿ 4ರಂದು ರಾಜಸ್ಥಾನದ ಜೈಸಲ್ಮೇರ್‌ಗೆ ತಲುಪಿ ವಿವಾಹ ಕಾರ್ಯಗಳಲ್ಲಿ ತೊಡಗಿಕೊಂಡರು. ಫೆಬ್ರವರಿ 6 ರಂದು (ಸೋಮವಾರ) ಮೆಹೆಂದಿ ಮತ್ತು ಸಂಗೀತ ಸಂಜೆ ಸಂಜೆ ಕಾರ್ಯಕ್ರಮ ನಡೆಯಿತು. ಮಂಗಳವಾರ ಬೆಳಗ್ಗೆ ಹಳದಿ ಶಾಸ್ತ್ರ ನಡೆಯಿತು. ಸಂಜೆ ವಿವಾಹ ಶಾಸ್ತ್ರ ಬಹಳ ಅದ್ಧೂರಿಯಾಗಿ ನೆರವೇರಿತು.