ಬಾಲಿವುಡ್ನ ದೊಡ್ಡ ನಿರ್ಮಾಪಕ ಕರಣ್ ಜೋಹರ್ ನಡೆಸಿಕೊಡುತ್ತಿರುವ 'ಕಾಫಿ ವಿತ್ ಕರಣ್' ಶೋಗೆ ಸಂಬಂಧಿಸಿದ ಹಲವು ವಿಷಯಗಳು ಆಗಾಗ ಸಖತ್ ಸದ್ದು ಮಾಡುತ್ತವೆ. ಇದೀಗ ನಟ ಸಿದ್ಧಾರ್ಥ್ ಮಲ್ಹೋತ್ರಾ ಅವರ ವೈಯಕ್ತಿಕ ಜೀವನದ ಕುರಿತು ಚರ್ಚೆಗಳಾಗುತ್ತಿವೆ. ಕಾಫಿ ವಿತ್ ಕರಣ್ ಸೀಸನ್ 7ರ ಮುಂದಿನ ಸಂಚಿಕೆಯಲ್ಲಿ ನಟ ಸಿದ್ಧಾರ್ಥ್ ಮಲ್ಹೋತ್ರಾ, ನಟ ವಿಕ್ಕಿ ಕೌಶಲ್ ಕಾಣಿಸಿಕೊಳ್ಳಲಿದ್ದಾರೆ. ಶೋನ ಪ್ರೋಮೋ ರಿಲೀಸ್ ಆಗಿದ್ದು, ಸಿದ್ಧಾರ್ಥ್ - ಕಿಯಾರಾ ಅಡ್ವಾನಿ ಲವ್ ಲೈಫ್ ಬಗ್ಗೆ ಗುಸು ಗುಸು ಹುಟ್ಟುಹಾಕಿದೆ.
ಅಂದ ಹಾಗೆ ಸಿದ್ಧಾರ್ಥ್ ಮತ್ತು ಕಿಯಾರಾ ಜೋಡಿ ಬಾಲಿವುಡ್ನ ಲವ್ ಬರ್ಡ್ ಎಂದೇ ಕರೆಸಿಕೊಂಡಿದೆ. ಆದರೆ ಈ ಜೋಡಿ ಈವರೆಗೆ ಈ ಬಗ್ಗೆ ನೇರವಾಗಿ ಏನನ್ನೂ ಖಚಿತಪಡಿಸಿಲ್ಲ. ಈವರೆಗೂ ನಾವಿಬ್ಬರೂ ಉತ್ತಮ ಸ್ನೇಹಿತರೆಂದೇ ಹೇಳಿಕೊಂಡು ಬಂದಿದ್ದಾರೆ.
ಮುಂದಿನ ಸಂಚಿಕೆ ಪ್ರೋಮೋ ವಿಡಿಯೋ ನೋಡಿದ್ರೆ ಮತ್ತೊಂದು ಸೆಲೆಬ್ರಿಟಿ ಜೋಡಿ ಮದುವೆಗೆ ಸಜ್ಜಾಗುತ್ತಿದ್ದಂತೆ ಕಾಣುತ್ತಿದೆ. ಕಳೆದ ಸೀಸನ್ನಲ್ಲಿ ವಿಕ್ಕಿ ಮತ್ತು ಕತ್ರಿನಾ ಪ್ರತ್ಯೇಕವಾಗಿ ಕಾಣಿಸಿಕೊಂಡಾಗ, ಅವರ ಪ್ರೇಮದ ವಿಚಾರವಾಗಿಯೂ ಸುದ್ದಿಯಾಗಿತ್ತು.
- " class="align-text-top noRightClick twitterSection" data="">
ಇದನ್ನೂ ಓದಿ: ಸಡಿಲವಾದ ಉಡುಪಿನಲ್ಲಿ ಕಾಣಿಸಿಕೊಂಡ ಕತ್ರಿನಾ ಕೈಫ್.. ಮತ್ತೆ ಹರಡಿದ ಪ್ರೆಗ್ನೆನ್ಸಿ ವದಂತಿ
ಕರಣ್ ಅವರು ಸಿದ್ಧಾರ್ಥ್ ಅವರಿಗೆ ನೀವು ಈಗ ಕಿಯಾರಾ ಅಡ್ವಾಣಿಯೊಂದಿಗೆ ಡೇಟಿಂಗ್ ಮಾಡುತ್ತಿದ್ದೀರಿ, ಭವಿಷ್ಯದ ಯೋಜನೆಗಳೇನಾದರೂ ಇದೆಯಾ? ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ಸಿದ್ಧಾರ್ಥ್ ಮುಗುಳ್ನಗುತ್ತಾರೆ. ಬಳಿಕ ನಾನು ಇಂದು ಅದನ್ನು ವ್ಯಕ್ತಪಡಿಸುತ್ತೇನೆ, ಉಜ್ವಲ ಮತ್ತು ಸಂತಸದ ಭವಿಷ್ಯವನ್ನು ಸ್ಪಷ್ಟಪಡಿಸುತ್ತೇನೆ ಎಂದಿದ್ದಾರೆ. ಕರಣ್ ಜಾಣತನದಿಂದ ಹಾಗಾದ್ರೆ ನೀವು ಕಿಯಾರಾ ಅಡ್ವಾಣಿಯನ್ನು ಮದುವೆಯಾಗುತ್ತೀರಾ? ಎಂದು ಪ್ರಶ್ನಿಸಿರುವ ಈ ಪ್ರೋಮೋದ ವಿಡಿಯೋ ಈಗ ಸದ್ದು ಮಾಡುತ್ತಿದ್ದು, ಮುಂದಿನ ಸಂಪೂರ್ಣ ಸಂಚಿಕೆ ವೀಕ್ಷಣೆಗೆ ಅಭಿಮಾನಿಗಳು ಕುತೂಹಲದಿಂದ ಕಾಯುತ್ತಿದ್ದಾರೆ.